ಭಾರತದಲ್ಲಿ 'ರೆಡ್‌ಮಿ ಗೋ' ರಿಲೀಸ್!..ಬೆಲೆ ಮತ್ತು ಫೀಚರ್ಸ್ ಕಂಪ್ಲೀಟ್ ಡೀಟೇಲ್ಸ್!

|

ಮೊಬೈಲ್ ಮಾರುಕಟ್ಟೆಯಲ್ಲಿ ಕಳೆದ ಕೆಲ ದಿನಗಳಿಂದಲೂ ಭಾರೀ ನಿರೀಕ್ಷೆ ಮೂಡಿಸಿದ್ದ ಶಿಯೋಮಿಯ ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ರೆಡ್‌ಮಿ ಗೋ ಭಾರತದಲ್ಲಿಂದು ಬಿಡುಗಡೆಯಾಗಿದೆ. ಇಂದು ನವದೆಹಲಿಯಲ್ಲಿ ಶಿಯೋಮಿ ಇಂಡಿಯಾ ಆಯೋಜಿಸಿದ್ದ ಮೊಬೈಲ್ ಬಿಡುಗಡೆ ಸಮಾರಂಭದಲ್ಲಿ, ಶಿಯೋಮಿ ರೆಡ್‌ಮಿ ಗೋ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ ನೀಡಿದೆ.

ಭಾರತದಲ್ಲಿ 'ರೆಡ್‌ಮಿ ಗೋ' ರಿಲೀಸ್!..ಬೆಲೆ ಮತ್ತು ಫೀಚರ್ಸ್ ಕಂಪ್ಲೀಟ್ ಡೀಟೇಲ್ಸ್!

ಕೆಲ ದಿನಗಳ ಹಿಂದಷ್ಟೇ ಶಿಯೋಮಿ ತಿಳಿಸಿದಂತೆ ಭಾರತದಲ್ಲಿ ಶಿಯೋಮಿಯ ಮೊದಲ 'ಆಂಡ್ರಾಯ್ಡ್ ಗೋ' ಎಡಿಷನ್ ಸ್ಮಾರ್ಟ್‌ಫೋನ್ ಇದೀಗ ಅತ್ಯಂತ ಕಡಿಮೆ ಬೆಲೆಗೆ ಬಿಡುಗಡೆಯಾಗಿದೆ. ಈ ಸ್ಮಾರ್ಟ್‌ಪೋನ್ ಭಾರತದಲ್ಲಿ 3,499ರೂ.ಗೆ ಬಿಡುಗಡೆಯಾಗುವ ನಿರೀಕ್ಷೆಯನ್ನು ಹೊಂದಲಾಗಿತ್ತಾದರೂ,ಗೂಗಲ್‌ನ ಮಹತ್ವಾಕಾಂಕ್ಷೆಯ ಕಡಿಮೆ ಬೆಲೆಯ ಆಂಡ್ರಾಯ್ಡ್ ಗೋ ಮಾದರಿಯ ಈ ಸ್ಮಾರ್ಟ್‌ಫೋನ್ ಬೆಲೆಯನ್ನು ಶಿಯೋಮಿ 4,499 ರೂ.ಗಳಿಗೆ ನಿಗದಿಪಡಿಸಿದೆ.

5 ಇಂಚಿನ ಹೆಚ್‌ಡಿ ಡಿಸ್‌ಪ್ಲೇ, ಸ್ನ್ಯಾಪ್‌ಡ್ರಾಗನ್ 425ಪ್ರೊಸೆಸರ್, 3000mAh ಬ್ಯಾಟರಿಯಂತಹ ಫೀಚರ್ಸ್‌ಗಳನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ ಶಿಯೋಮಿ ಫೋನ್‌ಗಳಲ್ಲೇ ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್‌ಪೋನ್ ಎಂಬ ಹೆಗ್ಗಳಿಕೆ ಪಡೆದಿದೆ. ಹಾಗಾದರೆ. ಭಾರತದಲ್ಲಿ ಇದೀಗ ಲಾಂಚ್ ಆಗಿರುವ ಶಿಯೋಮಿಯ 'ರೆಡ್‌ಮಿ ಗೋ' ಸ್ಮಾರ್ಟ್‌ಫೋನ್ ಹೇಗಿದೆ?, 'ರೆಡ್‌ಮಿ ಗೋ' ಸ್ಮಾರ್ಟ್‌ಫೋನಿನ ಫೀಚರ್ಸ್ ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಹೇಗಿದೆ ರೆಡ್‌ಮಿ ಗೋ?

ಹೇಗಿದೆ ರೆಡ್‌ಮಿ ಗೋ?

ಶಿಯೋಮಿಯ ಮೊದಲ ಆಂಡ್ರಾಯ್ಡ್ ಗೋ ಮಾದರಿಯ ರೆಡ್‌ಮಿ ಗೋ ಸ್ಮಾರ್ಟ್‌ಫೋನ್ ಬೇಸಿಕ್ ಸ್ಮಾರ್ಟ್‌ಫೋನ್‌ಗಳ ವಿನ್ಯಾಸವನ್ನು ಹೊಂದಿದೆ. ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್ ಇದಾಗಿರುವುದರಿಂದ ನಿರೀಕ್ಷೆಯಂತೆ ಫಿಂಗರ್‌ಪ್ರಿಂಟ್ ಸೆನ್ಸಾರ್ ಆಯ್ಕೆಯು ಇಲ್ಲ. ಇನ್ನು ಹಿಂಬಾಗದಲ್ಲಿ ಒಂದು ಕ್ಯಾಮೆರಾ ಹೊಂದಿರುವ ಪೋನ್ ಉತ್ತಮ ಬಾಡಿ ವಿನ್ಯಾಸವನ್ನು ಹೊಂದಿದೆ.

ರೆಡ್‌ಮಿ ಗೋ ಡಿಸ್‌ಪ್ಲೇ!

ರೆಡ್‌ಮಿ ಗೋ ಡಿಸ್‌ಪ್ಲೇ!

ಶಿಯೋಮಿ ರೆಡ್‌ಮಿ ಗೋ ಸ್ಮಾರ್ಟ್‌ಫೋನ್ 5 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. 16:9 ಆಕಾರ ಅನುಪಾತದಲ್ಲಿ ಬಂದಿರುವ ಡಿಸ್‌ಪ್ಲೇ 1280 x 720 ಪಿಕ್ಸೆಲ್‌ಗಳ ಸಾಮರ್ಥ್ಯದ್ದಾಗಿದೆ. 380 ನಿಟ್ಸ್ ಬ್ರೈಟ್‌ನೆಸ್, 72 ಶೇಕಡಾ ಎನ್ ಟಿ ಎಸ್ ಸಿ ಕಲರ್ ಗ್ಯಾಮಟ್ ಮತ್ತು 1000: 1 ಕಾಂಟ್ರಾಸ್ಟ್ ಅನುಪಾತವನ್ನು ಹೊಂದಿರುವ ಬಜೆಟ್ ಫೋನ್‌ಗಳ ಮಧ್ಯಮ ಡಿಸ್‌ಪ್ಲೇ ಇದಾಗಿದೆ.

ಪ್ರೊಸೆಸರ್ ಮತ್ತು RAM!

ಪ್ರೊಸೆಸರ್ ಮತ್ತು RAM!

ಶಿಯೋಮಿ ರೆಡ್‌ಮಿ ಗೋ ಸ್ಮಾರ್ಟ್‌ಫೋನ್ 1.4GHz ಕ್ವಾಲ್ಕಾಮ್ ಕ್ವಾಡ್-ಕೋರ್ ಸ್ನಾಪ್ಡ್ರಾಗನ್ 425 ಪ್ರೊಸೆಸರ್ ಅನ್ನು ಹೊಂದಿದೆ.ಅಡ್ರಿನೊ 308 ಜಿಪಿಯು ಜೊತೆಗೂಡಿ ಬಂದಿರುವುದು ಸ್ವಲ್ಪ ವಿಶೇಷತೆ ಎನ್ನಬಹುದು. ಇನ್ನು 1GB RAM ಮತ್ತು 8GB ಆಂತರಿಕ ಸಂಗ್ರಹದೊಂದಿಗೆ ಬಿಡುಗಡೆಯಾಗಿರುವ ಫೋನ್ ಮೆಮೊರಿಯನ್ನು SD ಕಾರ್ಡ್ ಮೂಲಕ 128GB ವಿಸ್ತರಿಸುವ ಆಯ್ಕೆ ಇದೆ.

ಕ್ಯಾಮೆರಾ ಹೇಗಿದೆ?

ಕ್ಯಾಮೆರಾ ಹೇಗಿದೆ?

ಎಫ್ / 2.0 ಅಪರ್ಚರ್, ಎಲ್ಇಡಿ ಫ್ಲ್ಯಾಶ್ ಮತ್ತು 1.12 ಎಮ್ಎಮ್ಪಿ ಪಿಕ್ಸೆಲ್ ಗಾತ್ರದೊಂದಿಗೆ 8 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮರಾ ಹಾಗೂ ಮುಂದೆ ಎಫ್ / 2.2 ಅಪರ್ಚರ್ ಮತ್ತು 1.12 ಎಮ್ಎಮ್ ಪಿಕ್ಸೆಲ್ ಗಾತ್ರದ 5 ಮೆಗಾಪಿಕ್ಸೆಲ್ ಸೆಲ್ಫೀ ಕ್ಯಾಮೆರಾಗಳನ್ನು ನೀಡಲಾಗಿದೆ. ಬಜೆಟ್ ಸ್ಮಾರ್ಟ್‌ಫೋನ್‌ಗಳಲ್ಲಿ ನೀಡಲಾಗುವ ಕ್ಯಾಮೆರಾಗಳ ವಿಶೇಷತೆಗಳು ಇದರಲ್ಲಿವೆ ಎನ್ನಬಹುದು.

ಇತರೆ ಫೀಚರ್ಸ್?

ಇತರೆ ಫೀಚರ್ಸ್?

4G VoLTE, ಬ್ಲೂಟೂತ್ 4.1, ವೈಫೈ 802.11 ಬೌ / ಗ್ರಾಂ / ಎನ್, ಜಿಪಿಎಸ್, 3.5 ಎಂಎಂ ಆಡಿಯೋ ಜಾಕ್, ಮೈಕ್ರೋ ಯುಎಸ್ಬಿ 2.0 ಬೆಂಬಲ ಒಳಗೊಂಡಿರುವ ಈ ಸ್ಮಾರ್ಟ್‌ಫೋನ್ 3000mAh ಬ್ಯಾಟರಿ ಶಕ್ತಿಯನ್ನು ಹೊಂದಿದೆ. ಆಂಡ್ರಾಯ್ಡ್ 8.1 (ಓರಿಯೊ ಗೋ ಆವೃತ್ತಿ) ಯಲ್ಲಿ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ಪೋನ್ ಡ್ಯುಯಲ್ ಸಿಮ್ ಬೆಂಬಲವನ್ನು ಹೊಂದಿದೆ.

Best Mobiles in India

English summary
Xiaomi Redmi Go launched in India for Rs. 4,499; Mi Pay to debut soon. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X