ಭಾರತೀಯರಿಗೆ ಶಿಯೋಮಿಯಿಂದ ಮತ್ತೊಂದು ಸಿಹಿಸುದ್ದಿ!
ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿರುವ ಶಿಯೋಮಿ ರೆಡ್‌ಮಿ ಕೆ20 ಮತ್ತು ಕೆ20 ಪ್ರೊ ಸ್ಮಾರ್ಟ್‌ಫೋನ್‌ಗಳು ಭಾರತಕ್ಕೆ ಬರುವುದು ಖಚಿತಪಡಿಸಿದ ನಂತರ ಶಿಯೋಮಿ ಕಂಪೆನಿ ಮತ್ತೊಂದು ಸಿಹಿಸುದ್ದಿ ನೀಡಿದೆ. ಇದೇ ತಿಂಗಳ 17ನೇ ತಾರೀಖು ಭಾರತಕ್ಕೆ ರೆಡ್‌ಮಿ ಕೆ20 ಮತ್ತು ಕೆ20 ಪ್ರೊ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗುತ್ತಿದ್ದು, ಮೊದಲ ಸೇಲ್ ಅವಧಿಯಲ್ಲೇ ರೆಡ್‌ಮಿ ಕೆ20 ಸರಣಿ ಸ್ಮಾರ್ಟ್‌ಫೋನ್ ಖರೀದಿಸಬೇಕು ಎಂದುಕೊಂಡಿರುವವರಿಗೆ 'ಅಲ್ಫಾ ಸೇಲ್' ಅವಕಾಶ ಕಲ್ಪಿಸಿದೆ.

ಹೌದು, ಭಾರತದಲ್ಲಿ ಮಿ ರೆಡ್‌ಮಿ ಕೆ20 ಮತ್ತು ಕೆ20 ಪ್ರೊ ಸ್ಮಾರ್ಟ್‌ಫೋನ್‌ಗಳ ಬಿಡುಗಡೆಗೂ ಮುನ್ನವೇ ಶಿಯೋಮಿ ವಿಶೇಷ ಅಲ್ಫಾ ಸೇಲ್ ನಡೆಸುತ್ತಿದ್ದು, ರೆಡ್ಮಿ K20 ಮತ್ತು K20 ಪ್ರೊ ಮಾದರಿ ಸ್ಮಾರ್ಟ್‌ಪೋನ್‌ಗಳನ್ನು ಇಂದಿನಿಂದಲೇ ಬುಕ್ ಮಾಡಬಹುದಾಗಿದೆ. ಆಸಕ್ತರು ಶಿಯೋಮಿ ರೆಡ್ಮಿ K20 ಮತ್ತು K20 Pro ಬುಕ್ ಮಾಡುವುದಿದ್ದರೆ, 855 ರೂ. ಟೋಕನ್ ಅಡ್ವಾನ್ಸ್ ಪಾವತಿಸಿ ಪ್ರಿ ಬುಕ್ ಮಾಡಬಹುದು. ಹೀಗೆ ಬುಕ್ ಮಾಡಿದವರಿಗೆ ಮೊದಲು ರೆಡ್‌ಮಿ ಕೆ20 ಅಥವಾ ಕೆ20 ಪ್ರೊ ಸ್ಮಾರ್ಟ್‌ಫೋನ್ ಕೈಸೇರಲಿವೆ.
ಫ್ಲಿಪ್‌ಕಾರ್ಟ್ ಮತ್ತು ಎಂಐ ಡಾಟ್ ಕಾಮ್‌ನಲ್ಲಿ ಅಲ್ಫಾ ಸೇಲ್ ಆಯೋಜಿಸಲಾಗಿದ್ದು, ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಆರಂಭವಾಗಲಿದೆ. ಪ್ರಿ ಬುಕ್ ಮಾಡಿದವರಿಗೆ, ಫೋನ್ ಲಾಂಚ್ ಆದ ಬಳಿಕ ಫ್ಲ್ಯಾಶ್ ಸೇಲ್‌ನಲ್ಲಿ ಆದ್ಯತೆಯ ಮೇರೆಗೆ ಫೋನ್ ಖರೀದಿಸುವ ಅವಕಾಶ ದೊರೆಯುತ್ತದೆ. ಹಾಗಾದರೆ, ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಬಹುನಿರೀಕ್ಷೆಯಿಂದ ಕಾಯುತ್ತಿರುವ ಶಿಯೋಮಿ ರೆಡ್‌ಮಿ ಕೆ20 ಪ್ರೊ ಸ್ಮಾರ್ಟ್‌ಫೋನ್ ಹೇಗಿದೆ? ಫೀಚರ್ಸ್ ಯಾವುದು ಎಂಬುದನ್ನು ಮುಂದೆ ಓದಿ ತಿಳಿಯಿರಿ.

6.39-ಇಂಚಿನ AMOLED ಡಿಸ್‌ಪ್ಲೇ
ರೆಡ್‌ಮಿ ಕೆ20 ಪ್ರೊ ಸ್ಮಾರ್ಟ್‌ಫೋನ್ 19.5:9 ಆಕಾರ ಅನುಪಾತದೊಂದಿಗೆ 6.39-ಇಂಚಿನ AMOLED ಪ್ರದರ್ಶನವನ್ನು ಹೊಂದಿದೆ. 2340 x 1080 ಪಿಕ್ಸೆಲ್‌ಗಳ ಎಫ್‌ಹೆಚ್‌ಡಿ + ರೆಸೊಲ್ಯೂಷನ್ ಸಾಮರ್ಥ್ಯದಲ್ಲಿ ಬಂದಿರುವ ಡಿಸ್ಪ್ಲೇಯು ಮಲ್ಟಿಮೀಡಿಯಾ ಪ್ರಿಯರಿಗೆ ಹೇಳಿ ಮಾಡಿಸಿದಂತಿದೆ. ಇನ್ನು 7ನೇ ಪೀಳಿಗೆಯ ಇನ್ ಡಿಸ್‌ಪ್ಲೇ ಫಿಂಗರ್ಪ್ರಿಂಟ್ ಸಂವೇದಕದಿಂದ ಸಂಯೋಜಿಸಲ್ಪಟ್ಟಿದೆ.

ಸ್ನಾಪ್ಡ್ರಾಗನ್ 855 SoC ಪ್ರೊಸೆಸರ್
ರೆಡ್‌ಮಿ ಕೆ20 ಪ್ರೊ ರೂಪಾಂತದ ಸ್ಮಾರ್ಟ್‌ಫೋನ್ 8GB RAM ನೋಂದಿಗೆ ಸ್ನಾಪ್ಡ್ರಾಗನ್ 855 SoC ಪ್ರೊಸೆಸರ್ ಅನ್ನು ಹೊಂದಿದೆ. 256GB ವರೆಗಿನ ಆಂತರಿಕ ಸಂಗ್ರಹಣೆ ಸಾಮರ್ಥ್ಯ ಹೊಂದಿರುವ ಸ್ಮಾರ್ಟ್‌ಪೋನ್ ಮೆಮೊರಿ ವಿಸ್ತರಣೆಗೆ ಯಾವುದೇ ಅವಕಾಶವನ್ನು ಹೊಂದಿರುವುದಿಲ್ಲ. ಇನ್ನು ಇತ್ತೀಚಿನ MIUI 10 ಆಂಡ್ರಾಯ್ಡ್ 9 ಪೈ ರೊಂದಿಗೆ ಫೋನ್ ರನ್ ಆಗಲಿದೆ.

4,000mAh ಬ್ಯಾಟರಿ
ರೆಡ್‌ಮಿ ಕೆ20 ಪ್ರೊ ಸ್ಮಾರ್ಟ್‌ಫೋನ್ 4,000mAhನಷ್ಟು ಬಲಿಷ್ಟ ಬ್ಯಾಟರಿ ಶಕ್ತಿಯನ್ನು ಇದು ಹೊಂದಿದೆ. ಡಿವೈಸ್ 27W ಫಾಸ್ಟ್ ಚಾರ್ಜಿಂಗ್ ಗೆ ಬೆಂಬಲ ನೀಡಲಿದೆ. ಈ ಪೋನಿನಲ್ಲಿ ದೀರ್ಘಾವಧಿಯ 2 ದಿನದ ಬ್ಯಾಟರಿ ಅವಧಿಯನ್ನು ವಿಸ್ತರಿಸುವ ತಂತ್ರಜ್ಞಾನವನ್ನು ಪರಿಚಯಿಸುತ್ತಿರುವುದಾಗಿ ಕಂಪೆನಿ ಹೇಳಿಕೊಂಡಿದ್ದು, ಪ್ರೀಮಿಯಂ ಬ್ಯಾಟರಿ ತಂತ್ರಜ್ಞಾನ ಇದಾಗಿದೆ.

ಪಾಪ್‌ಅಪ್ ಸೆಲ್ಫೀ ಕ್ಯಾಮೆರಾ!
ರೆಡ್ಮಿ ಕೆ20 ಪ್ರೊನಲ್ಲಿ 32 ಎಂಪಿ ಪಾಪ್-ಅಪ್ ಸೆಲ್ಫೀ ಕ್ಯಾಮರಾ ವ್ಯವಸ್ಥೆ ಇರುವ ವದಂತಿಗಳು ಖಚಿತವಾಗಿದೆ. ಫೋನಿನಲ್ಲಿ ಟ್ರಿಪಲ್ ಲೆನ್ಸ್ ಸೆಟಪ್ ಹಿಂಭಾಗದಲ್ಲಿದ್ದು 48ಎಂಪಿ ಪ್ರೈಮರಿ ಸೆನ್ಸರ್, 8ಎಂಪಿ ಡೆಪ್ತ್ ಸೆನ್ಸರ್ ಹಾಗೂ ವೈಡ್ ಆಂಗಲ್‌ಗೆ ಸಹಕಾರಿಯಾಗುವಂತಹ ಕ್ಯಾಮೆರಾ ಅಳವಡಿಸಲಾಗಿದೆ. ಸುಧಾರಿತ ಕ್ಯಾಮೆರಾ ತಂತ್ರಜ್ಞಾನಗಳು ಇರಲಿವೆ.

ಇತರೆ ಎಲ್ಲಾ ಫೀಚರ್ಸ್
ರೆಡ್ಮಿ ಕೆ20 ಪ್ರೊ ಫೋನಿನಲ್ಲಿ ಡ್ಯುಯಲ್-ಎಲ್ಇಡಿ ಫ್ಲ್ಯಾಷ್, AI ದೃಶ್ಯ ಗುರುತಿಸುವಿಕೆ, ಸೂಪರ್ ನೈಟ್ ಇಮೇಜ್ ಮೋಡ್ ಮತ್ತು 960fps ನಿಧಾನ-ಚಲನೆಯ ವೀಡಿಯೊ ರೆಕಾರ್ಡಿಂಗ್ ತಂತ್ರಜ್ಞಾನಗಳನ್ನು ಪರಿಚಯಿಸಲಾಗಿದೆ. ಇನ್ನು ಬ್ಲೂಟೂತ್ 5.0, ಎನ್ಎಫ್ಸಿ, ಯುಎಸ್ಬಿ ಟೈಪ್-ಸಿ ಪೋರ್ಟ್ ಮತ್ತು 3.5 ಎಂಎಂ ಹೆಡ್ಫೋನ್ ಜ್ಯಾಕ್ ಆಯ್ಕೆಗಳನ್ನು ನಾವು ನೋಡಬಹುದು.

ಬೆಲೆಗಳು ಎಷ್ಟು?
ರೆಡ್‌ಮಿ ಕೆ ಪ್ರೊ ಮೂರು ಮಾದರಿಗಳಲ್ಲಿ ಲಭ್ಯವಿದ್ದು, ಬೆಲೆಗಳು ಇಂತಿವೆ. 6 ಜಿಬಿ RAM + 128 ಜಿಬಿ ಮೆಮೊರಿ- 2,599 ಯುವಾನ್ (ಅಂದಾಜು ರೂ. 26,000), 8 ಜಿಬಿ RAM + 128 ಜಿಬಿ ಮೆಮೊರಿ- 2,799 ಯುವಾನ್ (ಅಂದಾಜು ರೂ. ರೂ. 28,000), ಹಾಗೂ 8 ಜಿಬಿ RAM + 256 ಜಿಬಿ ಮೆಮೊರಿ- 2,999 ಯುವಾನ್ (ಸುಮಾರು ರೂ 30,000) ರೂ.ಗಳಾಗಿವೆ.


Click it and Unblock the Notifications








