ದೇಶದ ಮೊಬೈಲ್ ಮಾರುಕಟ್ಟೆಗೆ ನಾಳೆ ಸಿಗುತ್ತಿದೆ ಬಿಗ್ ಸರ್‌ಪ್ರೈಸ್!

|

ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿರುವ 'ರೆಡ್ಮಿ ಕೆ 20 ಪ್ರೊ' ಮತ್ತು 'ರೆಡ್ಮಿ ಕೆ 20' ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ನಾಳೆ ಬಿಡುಗಡೆಯಾಗುತ್ತಿವೆ. ಭಾರತದಲ್ಲಿ ರೆಡ್ಮಿ ಕೆ 20 ಪ್ರೊ ಮತ್ತು ರೆಡ್ಮಿ ಕೆ 20 ಸ್ಮಾರ್ಟ್‌ಫೋನ್‌ಗಳ ಉಡಾವಣಾ ದಿನಾಂಕವನ್ನು ಶಿಯೋಮಿ ಈಗಾಗಲೇ ಪ್ರಕಟಿಸಿದ್ದು, ಇದೇ ಜುಲೈ 17 ರಂದು ಶಿಯೋಮಿ ರೆಡ್ಮಿ ಕೆ ಸರಣಿಯ ಎರಡು ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳು ದೇಶದ ಮಾರುಕಟ್ಟೆಗೆ ಪಾದಾರ್ಪಣೆಗೊಳ್ಳಲಿವೆ. ಜೊತೆಗೆ ಮತ್ತೊಂದು ಸರ್‌ಪ್ರೈಸ್ ಅನ್ನು ಸಹ ಹೊತ್ತು ತರುತ್ತಿವೆ.

ದೇಶದ ಮೊಬೈಲ್ ಮಾರುಕಟ್ಟೆಗೆ ನಾಳೆ ಸಿಗುತ್ತಿದೆ ಬಿಗ್ ಸರ್‌ಪ್ರೈಸ್!

ಹೌದು, ಭಾರತದಲ್ಲಿ ಶಿಯೋಮಿ ತನ್ನ ಐದನೇ ವಾರ್ಷಿಕೋತ್ಸವವನ್ನು ಆಚರಿಸಲು ಜುಲೈ 17 ರಂದು ಅಭಿಮಾನಿಗಳ ಕಾರ್ಯಕ್ರಮವನ್ನು ನಡೆಸುತ್ತಿದೆ. ಅದೇ ದಿನವೇ ರೆಡ್ಮಿ ಕೆ 20 ಪ್ರೊ ಮತ್ತು ರೆಡ್ಮಿ ಕೆ 20 ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗುತ್ತಿವೆ. ರೆಡ್ಮಿ ಕೆ 20 ಸರಣಿಯನ್ನು 'ಫ್ಲ್ಯಾಗ್‌ಶಿಪ್ ಕಿಲ್ಲರ್ 2.0' ಫೋನ್‌ಗಳಾಗಿ ಪ್ರಚಾರ ಮಾಡುವ ಮೂಲಕ ಒನ್‌ಪ್ಲಸ್ ಅನ್ನು ಎದುರಿಸುವ ಗುರಿಯನ್ನು ಶಿಯೋಮಿ ಹೊಂದಿದ್ದು, ಹಾಗಾಗಿಯೇ ರೆಡ್‌ಮಿ ಕೆ20 ಸರಣಿ ಫೋನ್ ಬೆಲೆಗಳು 20,000 ರೂ.ದಿಂದ ಪ್ರಾರಂಭವಾಗುವ ಸರ್‌ಪ್ರೈಸ್ ನೀಡಲಿದೆ.

ಆಕ್ಟಾ-ಕೋರ್ ರ್ಸ್ನ್ಯಾಪ್‌ಡ್ರಾಗನ್ 855 SoC ಪ್ರೊಸೆಸರ್ ಮತ್ತು 8GB RAM ಹೊಂದಿರುವ ಈ ಸ್ಮಾರ್ಟ್‌ಫೋನ್ ಒನ್‌ಪ್ಲಸ್ 7 ಮತ್ತು ಒನ್‌ಪ್ಲಸ್ 7 ಸ್ಮಾರ್ಟ್‌ಫೋನಿನ ವಿರುದ್ಧ ಸ್ಪರ್ಧಿಸುತ್ತಿದೆ. ಪಾಪ್-ಅಪ್ ಸೆಲ್ಫಿ ಕ್ಯಾಮೆರಾ ಮತ್ತು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್‌ನೊಂದಿಗೆ ಮೊಬೈಲ್ ಪ್ರಿಯರಿಗೆ ಸರ್‌ಪ್ರೈಸ್ ನೀಡಲು ಶಿಯೋಮಿ ತಯಾರಾಗಿದೆ. ಹಾಗಾದರೆ, ಇತ್ತೀಚಿಗಷ್ಟೆ ಕಾಲಿಟ್ಟಿರುವ ' ಕೆ20 ಪ್ರೊ' ಫೋನ್ ಹೇಗಿದೆ?, ಬೆಲೆ ಎಷ್ಟು?, ಮತ್ತು ಇತರೆ ಫೀಚರ್ಸ್ ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

6.39-ಇಂಚಿನ AMOLED ಡಿಸ್‌ಪ್ಲೇ

6.39-ಇಂಚಿನ AMOLED ಡಿಸ್‌ಪ್ಲೇ

ರೆಡ್‌ಮಿ ಕೆ20 ಪ್ರೊ ಸ್ಮಾರ್ಟ್‌ಫೋನ್ 19.5:9 ಆಕಾರ ಅನುಪಾತದೊಂದಿಗೆ 6.39-ಇಂಚಿನ AMOLED ಪ್ರದರ್ಶನವನ್ನು ಹೊಂದಿದೆ. 2340 x 1080 ಪಿಕ್ಸೆಲ್‌ಗಳ ಎಫ್‌ಹೆಚ್‌ಡಿ + ರೆಸೊಲ್ಯೂಷನ್ ಸಾಮರ್ಥ್ಯದಲ್ಲಿ ಬಂದಿರುವ ಡಿಸ್ಪ್ಲೇಯು ಮಲ್ಟಿಮೀಡಿಯಾ ಪ್ರಿಯರಿಗೆ ಹೇಳಿ ಮಾಡಿಸಿದಂತಿದೆ. ಇನ್ನು 7ನೇ ಪೀಳಿಗೆಯ ಇನ್ ಡಿಸ್‌ಪ್ಲೇ ಫಿಂಗರ್ಪ್ರಿಂಟ್ ಸಂವೇದಕದಿಂದ ಸಂಯೋಜಿಸಲ್ಪಟ್ಟಿದೆ.

ಸ್ನಾಪ್ಡ್ರಾಗನ್ 855 SoC ಪ್ರೊಸೆಸರ್

ಸ್ನಾಪ್ಡ್ರಾಗನ್ 855 SoC ಪ್ರೊಸೆಸರ್

ರೆಡ್‌ಮಿ ಕೆ20 ಪ್ರೊ ರೂಪಾಂತದ ಸ್ಮಾರ್ಟ್‌ಫೋನ್ 8GB RAM ನೋಂದಿಗೆ ಸ್ನಾಪ್ಡ್ರಾಗನ್ 855 SoC ಪ್ರೊಸೆಸರ್ ಅನ್ನು ಹೊಂದಿದೆ. 256GB ವರೆಗಿನ ಆಂತರಿಕ ಸಂಗ್ರಹಣೆ ಸಾಮರ್ಥ್ಯ ಹೊಂದಿರುವ ಸ್ಮಾರ್ಟ್‌ಪೋನ್ ಮೆಮೊರಿ ವಿಸ್ತರಣೆಗೆ ಯಾವುದೇ ಅವಕಾಶವನ್ನು ಹೊಂದಿರುವುದಿಲ್ಲ. ಇನ್ನು ಇತ್ತೀಚಿನ MIUI 10 ಆಂಡ್ರಾಯ್ಡ್ 9 ಪೈ ರೊಂದಿಗೆ ಫೋನ್ ರನ್ ಆಗಲಿದೆ.

4,000mAh ಬ್ಯಾಟರಿ

4,000mAh ಬ್ಯಾಟರಿ

ರೆಡ್‌ಮಿ ಕೆ20 ಪ್ರೊ ಸ್ಮಾರ್ಟ್‌ಫೋನ್ 4,000mAhನಷ್ಟು ಬಲಿಷ್ಟ ಬ್ಯಾಟರಿ ಶಕ್ತಿಯನ್ನು ಇದು ಹೊಂದಿದೆ. ಡಿವೈಸ್ 27W ಫಾಸ್ಟ್ ಚಾರ್ಜಿಂಗ್ ಗೆ ಬೆಂಬಲ ನೀಡಲಿದೆ. ಈ ಪೋನಿನಲ್ಲಿ ದೀರ್ಘಾವಧಿಯ 2 ದಿನದ ಬ್ಯಾಟರಿ ಅವಧಿಯನ್ನು ವಿಸ್ತರಿಸುವ ತಂತ್ರಜ್ಞಾನವನ್ನು ಪರಿಚಯಿಸುತ್ತಿರುವುದಾಗಿ ಕಂಪೆನಿ ಹೇಳಿಕೊಂಡಿದ್ದು, ಪ್ರೀಮಿಯಂ ಬ್ಯಾಟರಿ ತಂತ್ರಜ್ಞಾನ ಇದಾಗಿದೆ.

ಪಾಪ್‌ಅಪ್ ಸೆಲ್ಫೀ ಕ್ಯಾಮೆರಾ!

ಪಾಪ್‌ಅಪ್ ಸೆಲ್ಫೀ ಕ್ಯಾಮೆರಾ!

ರೆಡ್ಮಿ ಕೆ20 ಪ್ರೊನಲ್ಲಿ (ಪೊಕೊ ಫೋನ್ 2 ) 32 ಎಂಪಿ ಪಾಪ್-ಅಪ್ ಸೆಲ್ಫೀ ಕ್ಯಾಮರಾ ವ್ಯವಸ್ಥೆ ಇರುವ ವದಂತಿಗಳು ಖಚಿತವಾಗಿದೆ. ಫೋನಿನಲ್ಲಿ ಟ್ರಿಪಲ್ ಲೆನ್ಸ್ ಸೆಟಪ್ ಹಿಂಭಾಗದಲ್ಲಿದ್ದು 48ಎಂಪಿ ಪ್ರೈಮರಿ ಸೆನ್ಸರ್, 8ಎಂಪಿ ಡೆಪ್ತ್ ಸೆನ್ಸರ್ ಹಾಗೂ ವೈಡ್ ಆಂಗಲ್‌ಗೆ ಸಹಕಾರಿಯಾಗುವಂತಹ ಕ್ಯಾಮೆರಾ ಅಳವಡಿಸಲಾಗಿದೆ. ಸುಧಾರಿತ ಕ್ಯಾಮೆರಾ ತಂತ್ರಜ್ಞಾನಗಳು ಇರಲಿವೆ.

ಇತರೆ ಎಲ್ಲಾ ಫೀಚರ್ಸ್

ಇತರೆ ಎಲ್ಲಾ ಫೀಚರ್ಸ್

ರೆಡ್ಮಿ ಕೆ20 ಪ್ರೊ ಫೋನಿನಲ್ಲಿ ಡ್ಯುಯಲ್-ಎಲ್ಇಡಿ ಫ್ಲ್ಯಾಷ್, AI ದೃಶ್ಯ ಗುರುತಿಸುವಿಕೆ, ಸೂಪರ್ ನೈಟ್ ಇಮೇಜ್ ಮೋಡ್ ಮತ್ತು 960fps ನಿಧಾನ-ಚಲನೆಯ ವೀಡಿಯೊ ರೆಕಾರ್ಡಿಂಗ್ ತಂತ್ರಜ್ಞಾನಗಳನ್ನು ಪರಿಚಯಿಸಲಾಗಿದೆ. ಇನ್ನು ಬ್ಲೂಟೂತ್ 5.0, ಎನ್ಎಫ್ಸಿ, ಯುಎಸ್ಬಿ ಟೈಪ್-ಸಿ ಪೋರ್ಟ್ ಮತ್ತು 3.5 ಎಂಎಂ ಹೆಡ್ಫೋನ್ ಜ್ಯಾಕ್ ಆಯ್ಕೆಗಳನ್ನು ನಾವು ನೋಡಬಹುದು.

ಬೆಲೆಗಳು ಎಷ್ಟು?

ಬೆಲೆಗಳು ಎಷ್ಟು?

ಚೀನಾದಲ್ಲಿ ರೆಡ್‌ಮಿ ಕೆ ಪ್ರೊ ಮೂರು ಮಾದರಿಗಳಲ್ಲಿ ಲಭ್ಯವಿದ್ದು, 6 ಜಿಬಿ RAM + 128 ಜಿಬಿ ಮೆಮೊರಿ- 2,599 ಯುವಾನ್ (ಅಂದಾಜು ರೂ. 26,000), 8 ಜಿಬಿ RAM + 128 ಜಿಬಿ ಮೆಮೊರಿ- 2,799 ಯುವಾನ್ (ಅಂದಾಜು ರೂ. ರೂ. 28,000), ಹಾಗೂ 8 ಜಿಬಿ RAM + 256 ಜಿಬಿ ಮೆಮೊರಿ- 2,999 ಯುವಾನ್ (ಸುಮಾರು ರೂ 30,000) ರೂ.ಗಳಾಗಿವೆ.

Best Mobiles in India

English summary
Xiaomi Redmi K20, Redmi K20 Pro is launching tomorrow, may be priced around Rs 20,000. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X