ಇಂದು ರೆಡ್‌ಮಿ ನೋಟ್ 4 ಸೇಲ್..ಖರೀದಿಸಲು ತಯಾರಾಗಿ!!
ಈ ಬಾರಿಯ ಸೇಲ್‌ನಲ್ಲಿ 3GB RAM+32GB ಮತ್ತು 4GB RAM+64GB ಸೇರಿದಂತೆ ಮೂರು ವೆರಿಯಂಟ್ ಸ್ಮಾರ್ಟ್‌ಪೊನ್‌ಗಳು ಲಭ್ಯವಿವೆ.!
ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಸ್ಮಾರ್ಟ್‌ಫೋನ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್ ಇಂದು ಫ್ಲಾಶ್ಸೇಲ್‌ನಲ್ಲಿ ಲಭ್ಯವಿದೆ. ಹೌದು, ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್ ಮತ್ತು ಮೈ.ಡಾಟ್‌ಕಾಂ ಎರಡರಲ್ಲಿಯೂ ಈ ಬಾರಿ ಸೇಲ್ ಓಪನ್ ಆಗಿದೆ.!!
ಪ್ರಸ್ತುತ ಬೆಲೆಯಲ್ಲಿ ರೆಡ್‌ಮಿ ಸ್ಮಾರ್ಟ್‌ಫೊನ್‌ಗಳು ಅತ್ಯಂತ ಹೆಚ್ಚು ಫೀಚರ್ಸ್‌ಗಳನ್ನು ಹೊಂದಿದ್ದು, ಈ ಬಾರಿಯ ಸೇಲ್‌ನಲ್ಲಿ 3GB RAM+32GB ಮತ್ತು 4GB RAM+64GB ಸೇರಿದಂತೆ ಮೂರು ವೆರಿಯಂಟ್ ಸ್ಮಾರ್ಟ್‌ಪೊನ್‌ಗಳು ಲಭ್ಯವಿವೆ.! ಹಾಗಾಗಿ, ರೆಡ್‌ಮಿ ನೋಟ್ 4 ಏನೆಲ್ಲಾ ಫೀಚರ್ಸ್‌ಗಳನ್ನು ಹೊಂದಿವೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

5.5 ಇಂಚಿನ ಹೆಚ್ ಡಿಸ್‌ಪ್ಲೇ!
ರೆಡ್‌ಮಿ ನೋಟ್ 4 ಪೋನ್ 5.5 ಇಂಚಿನ 1920 x 1080p Full HD ಡಿಸ್‌ಪ್ಲೇ ಹೊಂದಿದೆ.ಜೊತೆಗೆ ಡಿಕಾ ಕೊರ್ ಮಿಡಿಯಾ ಟೆಕ್ ಹೆಲಿಯೊ X20 ಪ್ರೋಸೆಸರ್ ಅಳವಡಿಸಲಾಗಿದ್ದು, ಇದು ಉತ್ತಮ ಗುಣಮಟ್ಟದ ವಿಡಿಯೋ ಮತ್ತು ಗೇಮಿಂಗ್‌ಗೆ ಹೇಳಿ ಮಾಡಿಸಿದ್ದಾಗಿದೆ.

13MP ರಿಯರ್ 5MP ಸೆಲ್ಫಿ ಕ್ಯಾಮೆರಾ
ರೆಡ್‌ಮಿ ನೋಟ್ 4 ಪೋನಿನಲ್ಲಿ 13MP ಹಿಂಬದಿಯ ಕ್ಯಾಮೆರಾ ಜೊತೆ ಆಟೋ ಪೋಕಸ್, ಡುಯಲ್ ಫ್ಲಾಷ್ ಹೊಂದಿದ್ದು, ಮುಂಬದಿಯಲ್ಲಿ 5MP ಕ್ಯಾಮೆರಾ ಇದೆ.

ಆಂಡ್ರಾಯ್ಡ್ 6.0:
ರೆಡ್‌ಮಿ ನೋಟ್ 4 ಪೋನ್ 4ಆಂಡ್ರಾಯ್ಡ್ 6.0ನಲ್ಲಿ ಕಾರ್ಯಚರಣೆ ನಡೆಸಲಿದೆ. ಇದರೊಂದಿಗೆ MIUI8 ಸಹ ಇರಲಿದೆ. ಮೆಟಾಲಿಕ್ ಬಾಡಿ, ಬ್ಲೂಟೂತ್, GPS, USB ಪೋರ್ಟ್ ಸಹ ಹೊಂದಿದೆ.

ಪವರ್ ಫುಲ್ 4100mAH ಬ್ಯಾಟರಿ!!
ರೆಡ್‌ಮಿ ನೋಟ್ 4 ಶಕ್ತಿಶಾಲಿ ಬ್ಯಾಟರಿ ಹೊಂದಿದ್ದು, 4100mAH ಸಾಮಾರ್ಥ್ಯದ ಬ್ಯಾಟರಿ ದೀರ್ಘಕಾಲದ ಬ್ಯಾಕಪ್ ನೀಡುತ್ತದೆ. ನಿರಂತರವಾಗಿ 3 ದಿನಗಳ ಬ್ಯಾಟರಿ ಬ್ಯಾಕಪ್ ನೀಡುತ್ತದೆ.


Click it and Unblock the Notifications