ಎಚ್ಚರ..! ಆನ್ ಲೈನ್ ನಲ್ಲಿ ಶಿಯೋಮಿ ಫೋನ್ ಮಾರಾಟದ ಹೆಸರಿನಲ್ಲಿ ಉಂಡೆ ನಾಮ...!
ಇಂದಿನ ದಿನದಲ್ಲಿ ಆನ್ ಲೈನಿನಲ್ಲಿ ನಿಮ್ಮನ್ನು ವಂಚನೆ ಮಾಡುವವರು ಹೆಚ್ಚಿನ ಸಂಖ್ಯೆಯಲ್ಲಿ ದೊರೆಯುತ್ತಾರೆ. ಮಾರುಕಟ್ಟೆಯಲ್ಲಿ ಬೆಸ್ಟ್ ಎನ್ನಿಸಿಕೊಂಡಿರುವ ಫೋನ್ ಅನ್ನು ಅತೀ ಕಡಿಮೆ ಬೆಲೆಗೆ ನೀಡುವ ಆಮೀಷ ತೋರಿಸಿ ನಿಮ್ಮನ್ನು ವಂಚನೆ ಮಾಡುತ್ತಾರೆ. ಕಡಿಮೆ ಬೆಲೆಯ ಫೋನ್ ಕೋಳ್ಳವ ಆಸೆಗೆ ಬಿದ್ದರೆ ನಿಮ್ಮ ಬ್ಯಾಂಕ್ ನಲ್ಲಿರುವ ಹಣವನ್ನು ಖಾಲಿ ಮಾಡುತ್ತಾರೆ. ಈ ಹಿನ್ನಲೆಯಲ್ಲಿ ನೀವು ಎಚ್ಚರವಹಿಸುವಂತೆ ತಿಳಿಸುವ ಪ್ರಯತ್ನ ಇದಾಗಿದೆ.
ರೆಡ್ಮಿ ಮೊಬೈಲ್ಗಳಲ್ಲಿ ಭಾರೀ ಡಿಸ್ಕೌಂಟ್ ಹೆಸರಿನಲ್ಲಿ ರೂ. 499 ಕ್ಕೆ ಸ್ಮಾರ್ಟ್ಫೋನ್ ಎಂಬ ಆಫರ್ ವೊಂದು ಆನ್ಲೈನ್ ಮತ್ತು ವಾಟ್ಸ್ಆಪ್ ನಲ್ಲಿ ಹರಿದಾಡುತ್ತಿದೆ. ಇಂತಹದೊಂದು ಆಫರ್ ಕಂಡ ಕ್ಷಣವೇ ನೀವು ಫೋನ್ ಖರೀದಿಸುವ ಸಾಹಸಕ್ಕೆ ಮುಂದಾಗುತ್ತೀರಾ. ಆದರೆ ಇದು ನಿಮಗೆ ದುಬಾರಿಯಾಗುತ್ತದೆ. ಹ್ಯಾಕರ್ ಗಳು ನಿಮ್ಮನ್ನು ವಂಚನೆ ಮಾಡಲು ಬಳಕೆ ಮಾಡಿಕೊಳ್ಳುತ್ತಿರುವ ತಂತ್ರ ಇದಾಗಿದೆ. ಇದಕ್ಕೆ ಮರುಳಾದರೆ ನಿಮಗೆ ನಷ್ಟ ಖಂಡಿತ.

ವೈರಲ್ ಆಗಿದೆ:
ದೇಶಿಯ ಮಾರುಕಟ್ಟೆಯಲ್ಲಿ ಶಿಯೋಮಿ ಫೇಮಸ್ ಆಗಿರುವುದನ್ನು ಹ್ಯಾಕರ್ ತಮ್ಮ ಲಾಭಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದು, ರೂ.13899ಕ್ಕೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ರೆಡ್ಮಿ 6 ಪ್ರೋ ಸ್ಮಾರ್ಟ್ ಫೋನ್ ಅನ್ನು ರೂ.499ಕ್ಕೆ ಲಭ್ಯ ಎನ್ನುವ ಪೋಸ್ಟ್ ವೊಂದು ಫೇಸ್ ಬುಕ್ ನಲ್ಲಿ ವೈರಲ್ ಆಗುತ್ತಿದೆ. ಇದನ್ನು ನೋಡಿದ ಹಲವು ಮಂದಿ ವಂಚನೆಯ ಜಾಲಕ್ಕೆ ತಮಗೆ ತಿಳಿಯದಂತೆ ಸಿಲುಕುತ್ತಿದ್ದಾರೆ.

ಹ್ಯಾಕರ್ಸ್ ತವರು:
ಇಂತಹ ನಂಬಲದಾಗದ ಆಫರ್ ನೀಡುವ ವೆಬ್ಸೈಟ್ಗಳು ಗ್ರಾಹಕರ ಡೇಟಾಗಳನ್ನು ಕದಿಯುವ ಹ್ಯಾಕರ್ಸ್ ಗಳ ತವರು ಎನ್ನಲಾಗಿದೆ.ಈ ರೀತಿಯ ಸುಳ್ಳಿನ ಲಿಂಕ್ಗಳನ್ನು ಹರಿಬಿಡುವ ಹ್ಯಾಕರ್ಸ್, ಮೊಬೈಲ್ ಖರೀದಿಸಲು ಬರುವವರ ಹೆಸರು, ಪಾಸ್ವರ್ಡ್ಗಳು, ವೈಯುಕ್ತಿ ಮಾಹಿತಿ, ಕೆಡಿಟ್ ಕಾರ್ಡ್ ವಿವರಗಳು ಮತ್ತು ಸೂಕ್ಷ್ಮ ಮಾಹಿತಿಗಳನ್ನು ಖದಿಯುತ್ತಾರೆ. ನಿಮ್ಮ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಿ ಹಣ ಲಾಪಟಾಯಿಸುತ್ತಾರೆ.

ನಕಲಿ:
ಶಿಯೋಮಿಯ ಅಧಿಕೃತ ವೆಬ್ ಸೈಟ್ ಮಾದರಿಯಲ್ಲಿಯೇ ಕಾಣಿಸಿಕೊಳ್ಳೂವ ನಕಲಿ ವೆಬ್ ಸೈಟ್ ಗಳು ಅಧಿಕೃತ ಕಂಪನಿ ವೆಬ್ಸೈಟ್ಗಳ ರೀತಿಯಲ್ಲೇ ಲೊಗೊ ಕ್ರಿಯೆಟ್ ಮಾಡಿಕೊಂಡು ಭರ್ಜರಿ ಆಫರ್ ನೀಡುತ್ತವೆ. ಆದರೆ ಪರಿಶೀಲಿಸದೇ ಇಲ್ಲಿ ವಸ್ತುಗಳನ್ನು ಖರೀದಿಸಲು ಮುಂದಾದರೆ ನಿಮ್ಮ ಖಾತೆಗೆ ಕನ್ನ ಬೀಳುವುದು ಖಚಿತ, ನಕಲಿ ವೆಬ್ ಸೈಟಿನಲ್ಲಿ ನಿಮ್ಮ ಮಾಹಿತಿಯನ್ನು ದಾಖಲು ಮಾಡಿದರೆ ನಿವೇ ಹ್ಯಾಕರ್ ಗಳಿಗೆ ಆಹ್ವಾನ ನೀಡಿದಂತೆ.

ಸಾಧ್ಯವಿಲ್ಲ;
ಎಲ್ಲಿಯೂ ಸಹ ಇಷ್ಟು ಕಡಿಮೆ ಬೆಲೆಗೆ ಸ್ಮಾರ್ಟ್ ಫೋನ್ ಗಳನ್ನು ಮಾರಾಟ ಮಾಡಲು ಸಾಧ್ಯವಿಲ್ಲ. ಹಿನ್ನಲೆಯಲ್ಲಿ ನೀವು ಮೋಸದ ಜಾಲಕ್ಕೆ ಸಿಲುಕದೆ ಇದ್ದರೆ ಒಳ್ಳೆಯದು. ಸ್ಮಾರ್ಟ್ ಫೋನ್ ಖರೀದಿಸುವುದಾದರೆ ಅಮೆಜಾನ್ ಇಲ್ಲವೇ ಫ್ಲಿಪ್ ಕಾರ್ಟ್ ನಂತಹ ಅಧಿಕೃತ ತಾಣದಿಂದ ಖರೀದಿ ಮಾಡುವುದು ಉತ್ತಮ. ಇಲ್ಲವಾದರೆ ನಷ್ಟಕ್ಕೆ ಗುರಿಯಾಗಬೇಕಾಗುತ್ತದೆ


Click it and Unblock the Notifications








