ಶಯೋಮಿ ರೆಡ್ಮೀ ನೋಟ್ ಫ್ಯಾಬ್ಲೆಟ್ ವೀಡಿಯೊ ವಿಮರ್ಶೆ

Written By:

2011 ರಲ್ಲಿ ತನ್ನ ಕಾರ್ಯಾಚರಣೆಗಳನ್ನು ಆರಂಭಿಸಿದ ಶಯೋಮಿ, ತನ್ನ ಸ್ಥಳೀಯ ಮಾರುಕಟ್ಟೆಯಲ್ಲಿ ರೆಡ್ಮೀ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದ ಕ್ಷಣದಿಂದ ಈ ಚೀನಾದ ಆಪಲ್ ಮಾರುಕಟ್ಟೆಯಲ್ಲಿ ತನ್ನ ಕಮಾಲನ್ನು ತೋರಿಸುತ್ತಿದೆ.

ರೆಡ್ಮೀ ಫೋನ್‌ನ ನಿಜವಾದ ಯಶಸ್ವಿ ಹರಿಕಾರ ಎಂದೇ ಪ್ರಸಿದ್ಧಿಯನ್ನು ಪಡೆದಿರುವ ರೆಡ್ಮೀ ಫೋನ್‌ನೊಂದಿಗೆ ಮಾರುಕಟ್ಟೆಯಲ್ಲಿ ಏರುವಿಕೆಯ ಮೆಟ್ಟಿಲನ್ನು ಹತ್ತುತ್ತಿದೆ. ರೆಡ್ಮೀ ನೋಟ್ ಎಂಬ 5.5 ಇಂಚಿನ 720p HD ಸ್ಮಾರ್ಟ್‌ಫೋನ್ ಅನ್ನು ಕಂಪೆನಿ ಲಾಂಚ್ ಮಾಡಿದ್ದು ನಿಜಕ್ಕೂ ಇದು ಫೋನ್ ಮಾರುಕಟ್ಟೆಯಲ್ಲೇ ಒಂದು ಪ್ರಳಯವನ್ನು ಎಬ್ಬಿಸಲಿದೆ.

ಶಯೋಮಿ ರೆಡ್ಮೀ ನೋಟ್ ಆಕರ್ಷಕ ಫ್ಯಾಬ್ಲೆಟ್

ಈ 5.5 ಇಂಚಿನ ಸ್ಮಾರ್ಟ್‌ಫೋನ್ ರೆಸಲ್ಯೂಶನ್ 1280 x 720 ಪಿಕ್ಸೆಲ್‌ಗಳಾಗಿದ್ದು ಇದರ ಸ್ಕ್ರೀನ್ ಪ್ಯಾನಲ್ ಅನ್ನು OGS ತಂತ್ರಜ್ಞಾನದೊಂದಿಗೆ ತಯಾರಿಸಲಾಗಿದೆ ಮತ್ತು ಇದು 178 ಅಗಲವಾದ ಆಂಗಲ್‌ಗಳನ್ನು ಹೊಂದಿದೆ.

ಈ ದೊಡ್ಡ ಪರದೆಯುಳ್ಳ ಹ್ಯಾಂಡ್‌ಸೆಟ್ ಓಕ್ಟಾ ಕೋರ್ ಪ್ರೊಸೆಸರ್ ಅನ್ನು ಹೊಂದಿದ್ದು ಮೀಡಿಯಾ ಟೆಕ್ ಪವರ್ ಅನ್ನು ಹೊಂದಿದೆ. ಈ ಡಿವೈಸ್ ಎರಡು ಆವೃತ್ತಿಗಳಲ್ಲಿ ಲಭ್ಯವಿದ್ದು 1.4GHz ಕ್ಲಾಕ್ ಸ್ಪೀಡ್ ಮತ್ತು 1.7GHz ಕ್ಲಾಕ್ ಸ್ಪೀಡ್‌ನಲ್ಲಿದೆ. 1.4 GHz ಆವೃತ್ತಿಯ RAM ಸಾಮರ್ಥ್ಯ 1GB ಯಾಗಿದ್ದು, 1.7GHz ಆವೃತ್ತಿಯು 2GB RAM ಅನ್ನು ಹೊಂದಿದೆ.

ರೆಡ್ಮೀ ನೋಟ್ ಫ್ಯಾಬ್ಲೆಟ್ ಡ್ಯುಯಲ್ ಸಿಮ್ ಬೆಂಬಲದೊಂದಿಗೆ TD-SCDMA/HSPA ಬೆಂಬಲವನ್ನು ಕೂಡ ಹೊಂದಿದೆ ಪ್ರಥಮ ಸಿಮ್ ಸ್ಲಾಟ್‌ನಲ್ಲಿ GSM/EDGE ಅನ್ನು ಹೊಂದಿದೆ. ಇನ್ನೂ ಹೆಚ್ಚಾಗಿ ಹೇಳಬೇಕೆಂದರೆ, 13 ಮೆಗಾಪಿಕ್ಸೆಲ್ ರಿಯರ್ ಫೇಸಿಂಗ್ ಕ್ಯಾಮೆರಾದೊಂದಿಗೆ 5 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾವನ್ನು ಡಿವೈಸ್ ಹೊಂದಿದೆ.

ಇನ್ನು ಸಂಪರ್ಕ ಅಂಶಗಳತ್ತ ಗಮನ ಹರಿಸುವುದಾದರೆ ಇದು 3 ಜಿ, ಡ್ಯುಯಲ್ ಸಿಮ್, ವೈ-ಫೈ, 8 ಜಿಬಿ ಸಂಗ್ರಹಣಾ ಸಾಮರ್ಥ್ಯ, ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್, ಬ್ಲ್ಯೂಟೂತ್, GPS ಮತ್ತು ಇನ್ನಷ್ಟನ್ನು ಒಳಗೊಂಡಿದೆ.

ಇದರಲ್ಲಿ ಆಂಡ್ರಾಯ್ಡ್ 4.2.2 ಜೆಲ್ಲಿಬೀನ್ ಇದ್ದು 3,200mAh ಬ್ಯಾಟರಿಯನ್ನು ಡಿವೈಸ್ ಒಳಗೊಂಡಿದೆ. 1.4 GHz ರೆಡ್ಮೀ ನೋಟ್‌ ಬೆಲೆ ರೂ 7859 ಆಗಿದ್ದು 1.7 GHz ಆವೃತ್ತಿಯ ಡಿವೈಸ್ ಬೆಲೆ ರೂ 999 ಆಗಿದೆ.

<center><iframe width="100%" height="390" src="//www.youtube.com/embed/xCyqPswuGV0" frameborder="0" allowfullscreen></iframe></center>

English summary
This article tells about Xiaomi Redmi Note 5.5 Inch Octa-Core Phablet video review.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot