ಮೊಬೈಲ್ ಖರೀದಿಸಲು ಸ್ವಲ್ಪ ಕಾಯಿರಿ!..ಬಿಡುಗಡೆಗೆ ಸಿದ್ದವಾಗಿದೆ 'ರೆಡ್‌ಮಿ ನೋಟ್ 5'!!
ಚೀನಾದ ಶಾಪಿಂಗ್ ಜಾಲತಾಣಗಳಲ್ಲಿ ರೆಡ್‌ಮಿ ನೋಟ್ 5 ಕಾಣಿಸಿಕೊಂಡಿದ್ದು, ಶೀಘ್ರದಲ್ಲಿಯೇ ಮಾರುಕಟ್ಟೆಗೆ ಬರಲು ಸನ್ನದ್ದವಾಗಿದೆ ಎನ್ನುತ್ತಿವೆ ವರದಿಗಳು.
ಭಾರತದಲ್ಲಿ 'ರೆಡ್‌ಮಿ ನೋಟ್ 4 'ಸ್ಮಾರ್ಟ್ಫೋನ್ ಯಶಸ್ಸಿನಿಂದ ಭಾರತದ ನಂಬರ್ ಒನ್ ಸ್ಮಾರ್ಟ್‌ಫೋನ್ ಬ್ರಾಂಡ್ ಎಂಬ ಗೌರವ ಪಡೆದುಕೊಂಡ ಶಿಯೋಮಿ ಮೊಬೈಲ್ ಕಂಪೆನಿ ಇದೀಗ ಇದೇ ಯಶಸ್ಸನ್ನು ಉಳಿಸಿಕೊಳ್ಳಲು 'ರೆಡ್‌ಮಿ ನೋಟ್ 5' ಸ್ಮಾರ್ಟ್‌ಫೋನ್ ಅನ್ನು ಶೀಘ್ರದಲ್ಲಿಯೇ ಪರಿಚಯಿಸುತ್ತಿದೆ.!!
ಹೌದು, ಈಗಾಗಲೆ ಚೀನಾದ ಶಾಪಿಂಗ್ ಜಾಲತಾಣಗಳಲ್ಲಿ ರೆಡ್‌ಮಿ ನೋಟ್ 5 ಕಾಣಿಸಿಕೊಂಡಿದ್ದು, ಶೀಘ್ರದಲ್ಲಿಯೇ ಮಾರುಕಟ್ಟೆಗೆ ಬರಲು ಸನ್ನದ್ದವಾಗಿದೆ ಎನ್ನುತ್ತಿವೆ ವರದಿಗಳು.! ಇನ್ನು ರೆಡ್ ಮಿ ನೋಟ್ 5 ಸ್ಮಾರ್ಟ್‌ಫೋನ್ ಫೀಚರ್‌ಗಳು ಸಹ ಲೀಕ್ ಆಗಿದ್ದು, ಹಾಗಾದರೆ, ರೆಡ್‌ಮಿ ನೋಟ್ 5 ಫೋನ್ ಏನೆಲ್ಲಾ ಫೀಚರ್ ಹೊಂದಿರಲಿದೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಡಿಸ್‌ಪ್ಲೇ ಮತ್ತು ವಿನ್ಯಾಸ!!
ರೆಡ್‌ಮಿ ನೋಟ್ 4 ಯಶಸ್ಸನ್ನು ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆ ರೆಡ್‌ಮಿ ನೋಟ್ 5 ಫೋನಿಗಿದೆ. ಹಾಗಾಗಿ, ಫೋನ್ ವಿನ್ಯಾಸದಲ್ಲಿ ಹೆಚ್ಚು ಬದಲಾವಣೆ ನಿರೀಕ್ಷಿಸಲಾಗಿದ್ದು, ಈಗ ಸಿಕ್ಕಿರುವ ಮಾಹಿತಿಯಂತೆ ರೆಡ್‌ಮಿ ನೋಟ್ 5 18:9 ರೆಷ್ಯೂ ಹೊಂದಿರುವ 5.5 ಇಂಚ್ ಸ್ಮಾರ್ಟ್‌ಫೋನ್ ಇದಾಗಿರಲಿದೆ.!!

ಕ್ಯಾಮೆರಾ ಪ್ಲಸ್ ಪಾಯಿಂಟ್!!
ರೆಡ್‌ಮಿ ನೋಟ್ 5 ಫೋನ್ ಬಹುತೇಕ ರೆಡ್‌ಮಿ ನೋಟ್ 4 ಫೀಚರ್‌ಗಳನ್ನೇ ಹೊಂದಲಿದೆ. ಆದರೆ, 16 MP ಡ್ಯುಯಲ್ ರಿಯರ್ ಕ್ಯಾಮೆರಾ ಹಾಗೂ 13 MP ಸೆಲ್ಫಿ ಕ್ಯಾಮೆರಾಗಳು ನೋಟ್ 4 ನೂನ್ಯತೆಗಳನ್ನು ಹೋಗಲಾಡಿಸಿ, ರೆಡ್‌ಮಿ ನೋಟ್ 5 ಆರ್ಭಟಕ್ಕೆ ಹೆಚ್ಚು ಚಾಲನೆ ನೀಡಬಹುದು.!!

ಸ್ನ್ಯಾಪ್‌ಡ್ರಾಗನ್ 630 ಪ್ರೋಸೆಸರ್!!
ರೆಡ್‌ಮಿ ನೋಟ್ 5 ಕಾರ್ಯಚರಣೆಗಾಗಿ ರೆಡ್‌ಮಿ ನೋಟ್ 4ನಲ್ಲಿ ನೀಡಿದ್ದ 64 ಬಿಟ್ ಸ್ನ್ಯಾಪ್‌ಡ್ರಾಗನ್ 630 ಪ್ರೋಸೆಸರ್ ಅನ್ನೇ ತರಲಾಗಿದೆ. ಇದರೊಂದಿಗೆ ಆಡ್ರಿನೋ 508 GPU ಸಹ ಇರಲಿದ್ದು, ಗ್ರಾಫಿಕ್ಸ್ ಗೇಮ್ ಅನುಭವ ಮತ್ತಷ್ಟು ಹೆಚ್ಚಲಿದೆ ಎನ್ನುತ್ತಿವೆ ವರದಿಗಳು.!!

ಆಂಡ್ರಾಯ್ಡ್ 7.1.1 ಮತ್ತು MIUI 9 ಇರಲಿದೆ.!!
ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 7.1.1 ಮತ್ತು MIUI 9ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಇದು ಟಾಪ್ ಆಂಡ್ರಾಯ್ಡ್ ಮತ್ತು MIUI ಆವೃತ್ತಿಯಾಗಿದೆ. ಬಳಕೆದಾರಿಗೆ ಹೊಸ ಅನುಭವನ್ನು ನೀಡುವುದರ ಜೊತೆಗೆ ಆಂಡ್ರಾಯ್ಡ್ ಓರಿಯೋಗೆ ಅಪ್‌ಡೇಟ್ ಹೊಂದಬಹುದು ಎಂದು ಹೇಳಲಾಗಿದೆ.

ಬೇರೆ ಏನೆಲ್ಲಾ ಫೀಚರ್ಸ್?
ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನಿನಲ್ಲಿ ರೆಡ್‌ಮಿ ನೋಟ್ 4ನಲ್ಲಿ ನೀಡಿದ್ದ ಫೀಚರ್‌ಗಳೇ ಇರಲಿದೆ. ಕ್ಯಾಮೆರಾ ಮತ್ತು ವಿನ್ಯಾಸ ಬದಲಾಗಿರಬಹುದಾಗಿದ್ದು, ಕ್ವಿಕ್ ಚಾರ್ಜರ್ 4.0, 4G VoLTE ಹಾಗೂ USB 3.1, ಫಿಂಗರ್‌ಪ್ರಿಂಟ್ ಫೀಚರ್ ಎಲ್ಲವೂ ನೋಟ್ 5ನಲ್ಲಿ ಲಭ್ಯವಿರಲಿವೆ.!!
ಚಿತ್ರ ಕೃಪೆ: 91mobiles


Click it and Unblock the Notifications