ಐಫೋನ್ X ಗಿಂತಲೂ ಬೆಸ್ಟ್: ರೆಡ್‌ಮಿ ನೋಟ್ 5ನಲ್ಲಿಯೇ ಫೇಸ್‌ಲಾಕ್, ಬಳಸುವುದು ಹೇಗೆ..?
ಭಾರತೀಯ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್ ಅನ್ನು ಹಿಂದಿಕ್ಕಿ ನಂಬರ್ ಒನ್ ಸ್ಮಾರ್ಟ್ ಫೋನ್ ಮಾರಾಟ ಮಾಡುವ ಕಂಪನಿ ಎನ್ನುವ ಖ್ಯಾತಿಗೆ ಪಾತ್ರವಾಗಿರುವ ಚೀನಾ ಮೂಲದ ಶಿಯೋಮಿಗೆ ಈ ಸ್ಥಾನವನ್ನು ಅಲಂಕರಿಸಲು ಸಹಾಯ ಮಾಡಿದ್ದು ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನ್ ಎಂದರೆ ತಪ್ಪಾಗುವುದಿಲ್ಲ. ಕಾರಣ ರೆಡ್‌ಮಿ ನೋಟ್ 5 ಮತ್ತು ರೆಡ್‌ಮಿ ನೋಟ್ 5 ಪ್ರೋ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಅತೀ ದೊಡ್ಡ ಪ್ರಮಾಣದ ಬೇಡಿಕೆಯನ್ನು ಸೃಷ್ಠಿಸಿಕೊಂಡಿದೆ.

ಮಧ್ಯಮ ಬೆಲೆಯಲ್ಲಿ ದೊರೆಯಲಿರುವ ಬೆಸ್ಟ್ ಸ್ಮಾರ್ಟ್‌ಫೋನ್ ಎನ್ನುವ ಕಾರಣಕ್ಕೆ ಬೇಡಿಕೆಯೂ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಶಿಯೋಮಿ ಈ ಎರಡು ಫೋನ್ ಗಳಿಗೆ ಹೊಸ ಹೊಸ ಆಪ್‌ಡೇಟ್ ಗಳನ್ನು ನೀಡುತ್ತಿದೆ. ಈಗಾಗಲೇ ಟಾಪ್ ಎಂಡ್ ಸ್ಮಾರ್ಟ್ ಫೋನ್‌ಗಳಲ್ಲಿ ಇರುವ ಆಯ್ಕೆಗಳನ್ನು ಈ ಸ್ಮಾರ್ಟ್‌ಫೋನ್‌ನಲ್ಲಿ ನೀಡಲು ಮುಂದಾಗಿದೆ. ಈಗ ಇದೇ ಮಾದರಿಯಲ್ಲಿ ಫೇಸ್ ಅನ್‌ಲಾಕ್ ಆಯ್ಕೆಯನ್ನು ನೀಡಿದ್ದು, ಇದರಿಂದಾಗಿ ಬಳಕೆದಾರರಿಗೆ ಸಾಕಷ್ಟು ದೊಡ್ಡ ಮಾದರಿಯಲ್ಲಿ ಅವಕಾಶಗಳನ್ನು ನೀಡಲಿದೆ.

ಈಗಾಗಲೇ ಶಿಯೋಮಿ ನೋಟ್ 5 ಪ್ರೋನಲ್ಲಿದೆ:
ಈಗಾಗಲೇ ಶಿಯೋಮಿ ನೋಟ್ 5 ಪ್ರೋ ಸ್ಮಾರ್ಟ್‌ಫೋನಿನಲ್ಲಿ ಫೇಸ್‌ಲಾಕ್ ಆಯ್ಕೆಯನ್ನು ನೀಡಲಾಗಿದೆ. ಇದು ಬಳಕೆದಾರರಿಗೆ ಐಪೋನ್ X ಮಾದರಿಯಲ್ಲಿ ಫೇಸ್‌ಲಾಕ್ ಮಾಡಲಿದೆ. ಇದರಿಂದಾಗಿ ಬಳಕೆದಾರರಿಗೆ ಪ್ರೀಮಿಯಮ್ ಫೋನ್ ಬಳಕೆಯ ಅನುಭವನ್ನು ನೀಡಲಿದೆ ಎನ್ನಲಾಗಿದೆ.

MIUI 10 ಬೀಟಾ ಆವೃತ್ತಿ:
ಈಗಾಗಲೇ ಶಿಯೋಮಿ ಮಾರುಕಟ್ಟೆಗೆ MIUI 10 ಬೀಟಾ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಈ ಆವೃತ್ತಿಯಲ್ಲಿ ಇನ್‌ಸ್ಟಾಲ್ ಮಾಡಿಕೊಂಡವರಿಗೆ ಫೇಸ್ ಅನ್‌ಲಾಕ್ ಆಯ್ಕೆಯೂ ಲಭ್ಯವಿದೆ. ಬೀಟಾ ಆಪ್‌ಡೇಟ್ 10.8.8.2 ನಲ್ಲಿ ಬಳಕೆದಾರರಿಗೆ ಈ ಹೊಸ ಆಯ್ಕೆಯೂ ದೊರೆಯಲಿದೆ. ನೀವು ಇನ್‌ಸ್ಟಾಲ್ ಮಾಡಿಕೊಂಡಿಲ್ಲ ಎಂದರೆ ಈಗಲೇ ಇನ್‌ಸ್ಟಾಲ್ ಮಾಡಿಕೊಳ್ಳಿ.

ಹೇಗೆ ಮಾಡಿಕೊಳ್ಳುವುದು:
ಶಿಯೋಮಿ ಸ್ಮಾರ್ಟ್‌ಫೋನ್ ನಲ್ಲಿ ಫೇಸ್‌ಅನ್‌ಲಾಕ್ ಆಯ್ಕೆಯನ್ನು ಬಳಕೆ ಮಾಡಿಕೊಳ್ಳಲು ಮೊದಲಿಗೆ ನೀವು MIUI ಗೋಬ್ಲಲ್ ಬೀಟಾ ಆವೃತ್ತಿ V 10.8.8.2 ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕಾಗಿದೆ. ಮಾಡಿಕೊಂಡ ನಂತರದಲ್ಲಿ ಸೆಟ್ಟಿಂಗ್ಸ್ ಒಪನ್ ಮಾಡಿರಿ. ಮಾಡಿದ ನಂತರದಲ್ಲಿ ಲಾಕ್ ಸ್ಕ್ರಿನ್ ಮತ್ತು ಪಾಸ್ ವರ್ಡ್ ಸೆಲೆಕ್ಟ್ ಮಾಡಿಕೊಳ್ಳಿ. ಅದರಲ್ಲಿ ಮ್ಯಾನೆಜ್ ಫೇಸ್ ಡೇಟಾ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಫೇಸ್ ಲಾಕ್ ಮಾಡಿಕೊಳ್ಳಿ.

ಐಫೋನ್ X ಮಾದರಿಯಲ್ಲಿ:
ಐಫೋನ್X ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಮಾದರಿಯಲ್ಲಿಯೇ ನೋಟ್ 5 ಸ್ಮಾರ್ಟ್‌ಫೋನಿನಲ್ಲಿಯೂ ಫೇಸ್‌ಲಾಕ್ ಅನ್ನು ಕಾಣಬಹುದಾಗಿದೆ. ಇದಲ್ಲದೇ ವೇಗವಾಗಿ ಫೇಸ್‌ಲಾಕ್ ಅನ್ನು ಓಪನ್ ಮಾಡಲಿದೆ. ಅಲ್ಲದೇ ಬಳಕೆದಾರರಿಗೆ ಇದು ಕಡಿಮೆ ಸಮಯದಲ್ಲಿ ಫೇಸ್‌ಲಾಕ್ ಅನ್ನು ಓಪನ್ ಮಾಡಲಿದೆ. ಟಾಪ್ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಈ ಮಾದರಿಯ ಆಯ್ಕೆಗಳಿಲ್ಲ.

ರೆಡ್‌ಮಿ ನೋಟ್ 5:
ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನಿನಲ್ಲಿ 5.99 ಇಂಚಿನ FHD ಡಿಸ್‌ಪ್ಲೇ, 5 MP ಸೆಲ್ಪಿ ಕ್ಯಾಮೆರಾ, 12 MP ಹಿಂಬದಿ ಕ್ಯಾಮೆರಾ, ವೇಗದ ಸ್ನ್ಯಾಪ್‌ಡ್ರಾಗನ್ 625 ಪ್ರೊಸೆಸರ್, ದೊಡ್ಡದಾದ 4000mAh ಬ್ಯಾಟರಿಯನ್ನು ಕಾಣಬಹುದಾಗಿದೆ. ಶಿಯೋಮಿ ರೆಡ್ ಮಿ ನೋಟ್ 5 ಸ್ಮಾರ್ಟ್‌ಫೋನ್ ಒಟ್ಟು ಎರಡು ಆವೃತ್ತಿಯಲ್ಲಿ ಕಾಣಿಸಿಕೊಂಡಿದೆ.

ಶಿಯೋಮಿ ನೋಟ್ 5 ಸ್ಮಾರ್ಟ್‌ಫೋನ್ ಎರಡು ಮಾದರಿ:
ಶಿಯೋಮಿ ರೆಡ್ ಮಿ ನೋಟ್ 5 ಸ್ಮಾರ್ಟ್‌ಫೋನ್ 3GB RAM ಮತ್ತು 32GB ಆವೃತ್ತಿಯೂ ರೂ. 9,999ಕ್ಕೆ ಮಾರಾಟವಾಗಲಿದ್ದು, ಇನ್ನೊಂದು ಮಾದರಿಯಲ್ಲಿ 4GB RAM ಮತ್ತು 64GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯುತ್ತಿದ್ದು, ರೂ. 11,999ಕ್ಕೆ ಮಾರಾಟವಾಗಲಿದೆ.


Click it and Unblock the Notifications



