ಮೊಬೈಲ್ ಮಾರುಕಟ್ಟೆಯನ್ನು ಬೆಚ್ಚಿ ಬೀಳಿಸಿದೆ ಶಿಯೋಮಿ 'ರೆಡ್‌ಮಿ ನೋಟ್ 5' ಬೆಲೆ!!
ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್ ಸುಧಾರಿತ ಫೋನ್ ರೆಡ್‌ಮಿ ನೋಟ್ 5 ಮಾರುಕಟ್ಟೆಗೆ ಬರುವ ಮೊದಲೇ ಫೀಚರ್ಸ್‌ಗಳಿಂದ ಹೆಸರು ಮಾಡಿತ್ತು. ಆದರೆ, ಇದೀಗ ಶಿಯೋಮಿ ರೆಡ್‌ಮಿ ನೋಟ್ 5 ಬೆಲೆ ಮಾರುಕಟ್ಟೆಯನ್ನು ಬೆಚ್ಚಿ ಬೀಳಿಸಿದೆ.!!
ಕೇವಲ ಒಂದು ವರ್ಷದಲ್ಲಿಯೇ ಭಾರತದ ಮೊಬೈಲ್ ಕಂಪೆನಿಗಳಿಗೆಲ್ಲಾ ಶಾಕ್ ನೀಡಿದ ಶಿಯೋಮಿ ಇದೀಗ ರೆಡ್‌ಮಿ ನೋಟ್ 5 ಮೂಲಕ ಭಾರತದ ಮಾರುಕಟ್ಟೆಯನ್ನು ಬೆಚ್ಚಿಬೀಳಿಸಲು ಬರುತ್ತಿದೆ.! ಶಿಯೋಮಿ ರೆಡ್‌ಮಿ ನೋಟ್ 5 ಬಗ್ಗೆ ಮತ್ತೊಂದು ಸುದ್ದಿ ಹೊರಬಿದ್ದಿದ್ದು, ವಿಶ್ವ ಮೊಬೈಲ್ ಮಾರುಕಟ್ಟೆ ದಂಗಾಗಿದೆ.!!
ಈಗಾಗಲೇ ಭಾರತದ ಮೊಬೈಲ್ ಮಾರುಕಟ್ಟೆಯನ್ನು ನಡುಗಿಸಿದ ಶಿಯೋಮಿ ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್ ಸುಧಾರಿತ ಫೋನ್ ರೆಡ್‌ಮಿ ನೋಟ್ 5 ಮಾರುಕಟ್ಟೆಗೆ ಬರುವ ಮೊದಲೇ ಫೀಚರ್ಸ್‌ಗಳಿಂದ ಹೆಸರು ಮಾಡಿತ್ತು. ಆದರೆ, ಇದೀಗ ಶಿಯೋಮಿ ರೆಡ್‌ಮಿ ನೋಟ್ 5 ಬೆಲೆ ಮಾರುಕಟ್ಟೆಯನ್ನು ಬೆಚ್ಚಿ ಬೀಳಿಸಿದೆ.!!
ಹೌದು, ಚೀನಾದ ಪ್ರಮುಖ ವೆಬ್‌ಸೈಟ್ ಗಿಜ್ಮೊ ಚೈನಾ ವರದಿಯಂತೆ ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನ್ ಬೆಲೆ ಕೇವಲ 699ಯೆನ್‌ಗಳಂತೆ.!! ಅಂದರೆ ಭಾರತೀಯ ರೂಪಾಯಿಗಳ ಲೆಕ್ಕದಲ್ಲಿ 6,800 ರೂಪಾಯಿಗಳಿಗೆ ರೆಡ್‌ಮಿ ನೋಟ್ 5 ಮಾರುಕಟ್ಟೆಗೆ ಬರಲಿದೆಯಂತೆ.!! ಹಾಗಾದರೆ, 6,800 ರೂ.ಗೆ ಬಿಡುಗಡೆಯಾಗುತ್ತಿರುವ ನೋಟ್ 5 ಫೀಚರ್ಸ್‌ಗಳೇನು ಎಂಬುದನ್ನು ಮುಂದೆ ತಿಳಿಯಿರಿ.!!

ಡಿಸ್‌ಪ್ಲೇ ಮತ್ತು ವಿನ್ಯಾಸ!!
ರೆಡ್‌ಮಿ ನೋಟ್ 4 ಫೋನ್ ವಿನ್ಯಾಸದಲ್ಲಿ ಹೆಚ್ಚು ಬದಲಾವಣೆಯಾಗಿದ್ದು, ಚೀನಾದ ಮತ್ತೊಂದು ವೆಬ್‌ಸೈಟ್ 'ವಿಬೊ' ನೀಡಿರುವ ಮಾಹಿತಿಯಂತೆ ರೆಡ್‌ಮಿ ನೋಟ್ 1080 x 2160 ಪಿಕ್ಸೆಲ್ ರೆಸಲ್ಯೂಶನ್ ಹೈ ಹೆಚ್‌ಡಿ 5.5 ಇಂಚ್ ಡಿಸ್‌ಪ್ಲೇ ಹೊಂದಿರಲಿದೆ. 18:9 ರೆಷ್ಯೂ ಸ್ಕ್ರೀನ್ ಮೂಲಕ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಕಾಲಿಡಲಿದೆ.!!

ಕ್ಯಾಮೆರಾಗೆ ಹೆಚ್ಚು ಒತ್ತು!!
ರೆಡ್‌ಮಿ ನೋಟ್ 5 ಕ್ಯಾಮೆರಾದಲ್ಲಿ ಭಾರಿ ಬದಲಾವಣೆಯಾಗಿದ್ದು, 16 MP ಡ್ಯುಯಲ್ ರಿಯರ್ ಕ್ಯಾಮೆರಾ ಹಾಗೂ 13 MP ಸೆಲ್ಫಿ ಕ್ಯಾಮೆರಾಗಳು ಇರಲಿವೆ.!! ಇದು ರೆಡ್‌ಮಿ ನೋಟ್ 4ನಲ್ಲಿದ ನೂನ್ಯತೆಗಳನ್ನು ಸರಿಪಡಿಸಲಿದೆ ಎಂದು 'ವಿಬೊ' ವೆಬ್‌ಸೈಟ್ ಅಭಿಪ್ರಾಯ ವ್ಯಕ್ತಪಡಿಸಿದೆ!!

ಸ್ನ್ಯಾಪ್‌ಡ್ರಾಗನ್ 630 ಪ್ರೋಸೆಸರ್!!
ರೆಡ್‌ಮಿ ನೋಟ್ 5 ಕಾರ್ಯಚರಣೆಗಾಗಿ ರೆಡ್‌ಮಿ ನೋಟ್ 4ನಲ್ಲಿ ನೀಡಿದ್ದ 64 ಬಿಟ್ ಸ್ನ್ಯಾಪ್‌ಡ್ರಾಗನ್ 630 ಪ್ರೋಸೆಸರ್ ಅನ್ನೇ ತರಲಾಗಿದೆ. ಇದರೊಂದಿಗೆ ಆಡ್ರಿನೋ 508 GPU ಸಹ ಇರಲಿದ್ದು, ಗ್ರಾಫಿಕ್ಸ್ ಗೇಮ್ ಅನುಭವ ಮತ್ತಷ್ಟು ಹೆಚ್ಚಲಿದೆ ಎನ್ನುತ್ತಿದೆ ವರದಿ.!!

ಆಂಡ್ರಾಯ್ಡ್ 7.1.1 ಮತ್ತು MIUI 9 ಇರಲಿದೆ.!!
ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 7.1.1 ಮತ್ತು MIUI 9ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಇದು ಟಾಪ್ ಆಂಡ್ರಾಯ್ಡ್ ಮತ್ತು MIUI ಆವೃತ್ತಿಯಾಗಿದೆ. ಬಳಕೆದಾರಿಗೆ ಹೊಸ ಅನುಭವನ್ನು ನೀಡುವುದರ ಜೊತೆಗೆ ಆಂಡ್ರಾಯ್ಡ್ ಓರಿಯೋಗೆ ಅಪ್‌ಡೇಟ್ ಹೊಂದಬಹುದು ಎಂದು ಹೇಳಲಾಗಿದೆ.

ಬೇರೆ ಏನೆಲ್ಲಾ ಫೀಚರ್ಸ್?
ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನಿನಲ್ಲಿ ರೆಡ್‌ಮಿ ನೋಟ್ 4ನಲ್ಲಿ ನೀಡಿದ್ದ ಫೀಚರ್‌ಗಳೇ ಇರಲಿದೆ. ಕ್ಯಾಮೆರಾ ಮತ್ತು ವಿನ್ಯಾಸ ಬದಲಾಗಿರಬಹುದಾಗಿದ್ದು, ಕ್ವಿಕ್ ಚಾರ್ಜರ್ 4.0, 4G VoLTE ಹಾಗೂ USB 3.1, ಫಿಂಗರ್‌ಪ್ರಿಂಟ್ ಫೀಚರ್ ಎಲ್ಲವೂ ನೋಟ್ 5ನಲ್ಲಿ ಲಭ್ಯವಿರಲಿವೆ.!!
image source: 99 mobiles


Click it and Unblock the Notifications