Home
ಮೊಬೈಲ್

ಶಿಯೋಮಿ ರೆಡ್ಮಿ ನೋಟ್ 5 ಪ್ರೋ, ರೆಡ್ಮಿ ವೈ2 ಸೇರಿದಂತೆ 3 ಎಂಐ ಸ್ಮಾರ್ಟ್ ಫೋನ್ ಗಳ ಬೆಲೆಯಲ್ಲಿ ಇಳಿಕೆ

ಚೀನಾದ ಸ್ಮಾರ್ಟ್ ಫೋನ್ ತಯಾರಿಕಾ ಕಂಪೆನಿ ಶಿಯೋಮಿ ಶಾಶ್ವತವಾಗಿ ತನ್ನ 5 ಸ್ಮಾರ್ಟ್ ಫೋನ್ ಗಳ ಬೆಲೆಯನ್ನು ಇಳಿಕೆ ಮಾಡಿದೆ. ಹೊಸ ಬೆಲೆಯು ನವೆಂಬರ್ 16 ರಿಂದ ಎಲ್ಲಾ ಕಡೆಗಳಲ್ಲೂ ಜಾರಿಗೆ ಬರಲಿದೆ.

ಶಿಯೋಮಿ ರೆಡ್ಮಿ ನೋಟ್ 5 ಪ್ರೋ, ರೆಡ್ಮಿ ವೈ2 ಸೇರಿದಂತೆ 3 ಎಂಐ ಸ್ಮಾರ್ಟ್ ಫೋನ್ ಗಳ

ಬೆಲೆ ಇಳಿಕೆ ಕಂಡಿರುವ ಸ್ಮಾರ್ಟ್ ಫೋನ್ ಗಳ ಪಟ್ಟಿಯಲ್ಲಿ 4ಜಿಬಿ ಮತ್ತು 6ಜಿಬಿ ವೇರಿಯಂಟ್ ನ ರೆಡ್ಮಿ ನೋಟ್ 5 ಪ್ರೋ, ಶಿಯೋಮಿ ರೆಡ್ಮಿ ವೈ2 ಮತ್ತು 4ಜಿಬಿ,6ಜಿಬಿ ವೇರಿಯಂಟ್ ನ ಶಿಯೋಮಿ ಎಂಐ ಎ2 ಕೂಡ ಸೇರಿದೆ. ಎಲ್ಲಾ ಸ್ಮಾರ್ಟ್ ಫೋನ್ ಗಳ ಬೆಲೆಯೂ 1000 ರೂಪಾಯಿ ಇಳಿಕೆಯಾಗಿದೆ.

ಬೆಲೆ ಇಳಿಕೆ ಮಾಡಿದ ನಂತರ ಕಂಪೆನಿಯು ನಾವು 5ಶೇಕಡಾಕ್ಕಿಂತ ಹೆಚ್ಚು ಲಾಭವನ್ನು ಒಂದು ಮೊಬೈಲ್ ನಲ್ಲಿ ಪಡೆಯಲು ಇಚ್ಛಿಸುವುದಿಲ್ಲ. ಒಂದು ವೇಳೆ ನಾವು ಹೆಚ್ಚು ಲಾಭ ಗಳಿಸುತ್ತಿದ್ದೇವೆ ಎಂದು ಅನ್ನಿಸಿದರೆ ಅದನ್ನು ಎಂಐ ಅಭಿಮಾನಿಗಳಿಗಾಗಿ ನೀಡಲು ಇಚ್ಛಿಸುತ್ತೇವೆ. ಅದೇ ಲಾಭದ ಕಾರಣಕ್ಕಾಗಿ ಈ ಇಳಿಕೆ ಸಾಧ್ಯವಾಗಿದೆ ಎಂದು ತಿಳಿಸಿದೆ.

ಹೊಸ ಬೆಲೆಯ ಬಗ್ಗೆ ನೀವು ಹೆಚ್ಚು ಆಸಕ್ತರಾಗಿದ್ದಲ್ಲಿ ಅದರ ಸಂಪೂರ್ಣ ಪಟ್ಟಿ ಇಲ್ಲಿದೆ ನೋಡಿ.

ಶಿಯೋಮಿ ರೆಡ್ಮಿ ನೋಟ್ 5 ಪ್ರೋ (4ಜಿಬಿ+64ಜಿಬಿ)

ಶಿಯೋಮಿ ರೆಡ್ಮಿ ನೋಟ್ 5 ಪ್ರೋ (4ಜಿಬಿ+64ಜಿಬಿ)

1000 ರುಪಾಯಿಯ ಬೆಲೆ ಇಳಿಕೆಯ ನಂತರ 4ಜಿಬಿ ವೇರಿಯಂಟ್ ನ ಬೆಲೆ 14,999 ರ ಬದಲಾಗಿ 13,999 ರುಪಾಯಿಗಳಾಗಿದೆ.

ಶಿಯೋಮಿ ರೆಡ್ಮಿ ನೋಟ್ 5 ಪ್ರೋ(6ಜಿಬಿ+64ಜಿಬಿ)

ಹೊಸ ಸ್ಮಾರ್ಟ್ ಫೋನ್ ಬೆಲೆ 15,999 ರುಪಾಯಿಗಳು. 6ಜಿಬಿ ಮೆಮೊರಿ ಮತ್ತು 64 ಜಿಬಿ ಜೊತೆಗೆ ಹಿಗ್ಗಿಸಿಕೊಳ್ಳಬಹುದಾದ ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ ಇದರಲ್ಲಿದೆ.

ಶಿಯೋಮಿ ಎಂಐ ಎ2 (4ಜಿಬಿ+64ಜಿಬಿ)

ಶಿಯೋಮಿ ಎಂಐ ಎ2 (4ಜಿಬಿ+64ಜಿಬಿ)

ಶಿಯೋಮಿ ಎಂಐ ಎ2 ಬೆಲೆ ಇಳಿಕೆಯ ನಂತರ 15,999 ರುಪಾಯಿ ಬೆಲೆಗೆ ಖರೀದಿಸಬಹುದು. ಇದು ಕಂಪೆನಿಯ ಎರಡನೇ ಆಂಡ್ರಾಯ್ಡ್ ಒನ್ ಡಿವೈಸ್ ಆಗಿದ್ದು ಸ್ಟಾಕ್ ಆಂಡ್ರಾಯ್ಡ್ ನಲ್ಲಿ ರನ್ ಆಗುತ್ತದೆ.

ಶಿಯೋಮಿ ಎಂಐ ಎ2 (6ಜಿಬಿ+128ಜಿಬಿ)

128ಜಿಬಿ ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ ಇರುವ ಸ್ಮಾರ್ಟ್ ಫೋನ್ ಇದೀಗ 18,999 ರೂಪಾಯಿ ಬೆಲೆಗೆ ಮಾರಲಾಗುತ್ತಿದೆ. ಇದರ ಪ್ರಾರಂಭಿಕ ಬೆಲೆ 19,999 ರುಪಾಯಿಗಳಾಗಿತ್ತು.

ಶಿಯೋಮಿ ರೆಡ್ಮಿ ವೈ2

ಶಿಯೋಮಿ ರೆಡ್ಮಿ ವೈ2

ಸೆಲ್ಫೀ ಸೆಂಟ್ರಿಕ್ ಆಗಿರುವ ರೆಡ್ಮಿ ವೈ2 ಫೋನಿನ ಬೆಲೆ 11,999 ರುಪಾಯಿಗಳಾಗಿದ್ದು, ಇತರೆ ಎಲ್ಲಾ ಸ್ಮಾರ್ಟ್ ಫೋನ್ ಗಳಂತೆ ಇದು ಕೂಡ 1000 ರೂಪಾಯಿ ಬೆಲೆ ಇಳಿಕೆಯನ್ನು ಕಂಡಿದೆ.

ಇದರ ಜೊತೆಗೆ 5 ಪ್ರೊಡಕ್ಟ್ ಗಳಿಗೆ ಕಂಪೆನಿ ಬೆಲೆ ಏರಿಕೆಯನ್ನೂ ಕೂಡ ಮಾಡಿದೆ. ಅದುವೇ ರೆಡ್ಮಿ 6 ಮತ್ತು ರೆಡ್ಮಿ 6ಎ(2ಜಿಬಿ), ಎಂಐ LED ಟಿವಿ 4C ಪ್ರೋ ಮತ್ತು 4A ಪ್ರೋ, ಎಂಐ ಪವರ್ ಬ್ಯಾಂಕ್ 2.

Best Mobiles in India

English summary
Xiaomi Redmi Note 5 Pro, Redmi Y2 and three more Mi smartphones get price cuts
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+