''ರೆಡ್‌ಮಿ ನೋಟ್ 5 ಪ್ರೊ'' ರಿವ್ಯೂವ್!!..ಭಾರತದ ಬೆಸ್ಟ್ ಸ್ಮಾರ್ಟ್‌ಫೋನ್ ಎನ್ನಬಹುದೇ?

ಭಾರತದಲ್ಲಿ ಮತ್ತೆ ತಾನೇ ಸ್ಮಾರ್ಟ್‌ಫೋನ್ ದಿಗ್ಗಜ ಎಂದು ತೋರಿಸಿಕೊಳ್ಳುವ ಹಂಬಲದಲ್ಲಿರುವ ಶಿಯೋಮಿ ಕಂಪೆನಿ ಭಾರತದಲ್ಲಿ ರೆಡ್‌ಮಿ ನೋಟ್ 5 ಸರಣಿಯ ಎರಡು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ.!

|

ಭಾರತದಲ್ಲಿ ಮತ್ತೆ ತಾನೇ ಸ್ಮಾರ್ಟ್‌ಫೋನ್ ದಿಗ್ಗಜ ಎಂದು ತೋರಿಸಿಕೊಳ್ಳುವ ಹಂಬಲದಲ್ಲಿರುವ ಶಿಯೋಮಿ ಕಂಪೆನಿ ಭಾರತದಲ್ಲಿ ರೆಡ್‌ಮಿ ನೋಟ್ 5 ಸರಣಿಯ ಎರಡು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ.! ದೇಶದಲ್ಲಿಯೇ ಅತ್ಯಂತ ಹೆಚ್ಚು ಮಾರಾಟವಾದ ರೆಡ್‌ಮಿ ನೋಟ್ 4 ಯಶಸ್ಸನ್ನು ಶಿಯೋಮಿ ಮತ್ತೆ ಎದುರು ನೋಡುತ್ತಿದೆ. !!

Xiaomi Redmi Note 5 Pro ಮಾರಾಟದ ದಿನಾಂಕ ಫಿಕ್ಸ್!! ಫುಲ್ ಡೀಟೆಲ್ಸ್!!

ಎರಡು ದಿನಗಳ ಹಿಂದಷ್ಟೆ ಶಿಯೋಮಿ ಕಂಪೆನಿ ಆಯೋಜಿಸಿದ್ದ ಫಸ್ಟ್ ಸೇಲ್‌ನಲ್ಲಿ ಮೂರು ನಿಮಿಷಕ್ಕೆ 3 ಲಕ್ಷಕ್ಕೂ ಹೆಚ್ಚು ಜನರು ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನ್‌ಗಳನ್ನು ಬುಕ್ ಮಾಡಿದ್ದಾರೆ. ಇವರಲ್ಲಿ ಬುಕ್ ಮಾಡಿದ್ದ ಕೆಲವರಿಗೆ ಈಗಾಗಲೇ ರೆಡ್‌ಮಿ ನೋಟ್ 5 ಮತ್ತು ರೆಡ್‌ಮಿ ನೋಟ್ 5 ಪ್ರೊ ಸ್ಮಾರ್ಟ್‌ಫೋನುಗಳು ಕೈಗೆ ಸಿಕ್ಕಿವೆ.!!

''ರೆಡ್‌ಮಿ ನೋಟ್ 5 ಪ್ರೊ'' ರಿವ್ಯೂವ್!!

ಕಡಿಮೆ ಬೆಲೆಗೆ ಅತ್ಯಂತ ಹೆಚ್ಚು ಫೀಚರ್ಸ್ ಹೊಂದಿರುವ ರೆಡ್‌ಮಿ ನೋಟ್ 5 ಪ್ರೊ ಈಗಾಗಲೇ ಗ್ರಾಹಕರ ಮನಸ್ಸನ್ನು ಗೆದ್ದಿದೆ. ಹಾಗಾದರೆ, ರೆಡ್‌ಮಿ ನೋಟ್ 5 ಪ್ರೊ ಸ್ಮಾರ್ಟ್‌ಫೋನ್ ಹೇಗಿದೆ? ಖರೀದಸಲು ಇರುವ ಕಾರಣಗಳೇನು? ಭಾರತದಲ್ಲಿಯೇ ಬೆಸ್ಟ್ ಬಜೆಟ್ ಫೋನ್ ಇದಾಗಬಹುದೇ? ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ರೆಡ್‌ಮಿ ನೋಟ್ 5 ಪ್ರೊ ವಿನ್ಯಾಸ!!

ರೆಡ್‌ಮಿ ನೋಟ್ 5 ಪ್ರೊ ವಿನ್ಯಾಸ!!

ರೆಡ್‌ಮಿ ನೋಟ್ 5 ಪ್ರೊ ಪ್ರಿಮಿಯಮ್ ಡಿಸೈನ್ ಹೊಂದಿದ್ದು, ಹಿಂಭಾಗದಲ್ಲಿ ಐಫೋನ್ ‍‍X ಮಾದರಿಯಲ್ಲಿ ಕಾಣಿಸುವ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಕಾಣಬಹುದಾಗಿದೆ. 18:9 ಅನುಪಾತದಲ್ಲಿರುವ 5.99 ಇಂಚ್ ಡಿಸ್‌ಪ್ಲೇ ಮಲ್ಟಿಮೀಡಿಯಾ ಮತ್ತು ಗೇಮಿಂಗಾಗಿ ಸ್ಮಾರ್ಟ್‌ಫೋನ್ ಹೇಳಿ ಮಾಡಿಸಿದಂತಿದೆ.! ಸ್ಕ್ರೀನ್ ದೊಡ್ಡದಾಗಿರುವ ಕಾರಣ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹಿಂಬಾಗದಲ್ಲಿ ನೀಡಲಾಗಿದೆ.!!

ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 636!!

ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 636!!

ಅತ್ಯಂತ ಕಡಿಮೆ ಬೆಲೆಯಲ್ಲಿ ಕ್ವಾಡ್ ಕೋರ್ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 636 cpu ಪ್ರೋಸೆಸರ್, ಕರಿಯೋ 260 CPU ವಿಶೇಷತೆಗಳನ್ನು ಒಳಗೊಂಡಿರುವ ಮೊದಲ ಸ್ಮಾರ್ಟ್‌ಫೋನ್ ಇದಾಗಿದೆ.! ಅತ್ಯಂತ ವೇಗದ ಕಾರ್ಯಚರಣೆಯನ್ನು ಹೊಂದಿರುವ ಈ ಫೋನ್ ಒಂದೇ ಸಮಯದಲ್ಲಿ ಮಲ್ಟಿ ಟಾಸ್ಕ್ಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.!!

RAM ಮತ್ತು ಮೆಮೊರಿ!!

RAM ಮತ್ತು ಮೆಮೊರಿ!!

4GB ಮತ್ತು 6GB RAM ಇರುವ ಎರಡು ವೆರಿಯಂಟ್‌ಗಲ್ಲಿ ರೆಡ್‌ಮಿ ನೋಟ್ 5 ಪ್ರೊ ಸ್ಮಾರ್ಟ್‌ಪೋನ್ ಬಿಡುಗಡೆಯಾಗಿದೆ. ಎರಡೂ ವೆರಿಯಂಟ್‌ಗಳ ಸ್ಮಾರ್ಟ್‌ಫೋನ್‌ಗಳಲ್ಲಿಯೂ 64GB ಆಂತರಿಕ ಮೆಮೊರಿ ಯನ್ನು ನೀಡಲಾಗಿದೆ. ಎಸ್‌ಡಿ ಕಾರ್ಡ್ ಮೂಲಕ 128GB ವರೆಗೆ ಮೆಮೊರಿ ವಿಸ್ತರಣೆ ಮಾಡಿಕೊಳ್ಳಬಹುದಾ ಆಯ್ಕೆ ಎರಡೂ ಫೋನಿನಲ್ಲಿದೆ.!!

20MP ಸೆಲ್ಫಿ ಕ್ಯಾಮೆರಾ!!

20MP ಸೆಲ್ಫಿ ಕ್ಯಾಮೆರಾ!!

ಭಾರತೀಯರ ಸೆಲ್ಫಿ ಪ್ರೀತಿಯನ್ನು ನೋಡಿ ಶಿಯೋಮಿ 20MP ಸೆಲ್ಫಿ ಕ್ಯಾಮೆರಾವನ್ನು ರೆಡ್‌ಮಿ ನೋಟ್ 5 ಪ್ರೊ ಸ್ಮಾರ್ಟ್‌ಪೋನಿನಲ್ಲಿ ನೀಡಿದೆ. ಕೃತಕ ಬುದ್ದಿ ಮತ್ತೆಯ ಮೂಲಕ ಕಾರ್ಯನಿರ್ವಹಿಸಲಿರುವ ಈ ಸೆಲ್ಫಿ ಕ್ಯಾಮೆರಾ ಬ್ಯೂಟಿಫೈ 4.0 ಮೂಡ್ ಆಯ್ಕೆಯನ್ನು ಸಹ ಹೊಂದಿರುವುದರಿಂದ ಅತ್ಯುತ್ತಮ ಸೆಲ್ಫಿ ಚಿತ್ರಗಳಿಗೆ ಹೇಳಿಮಾಡಿಸಿದಂತಿದೆ.!!

ಬೆಸ್ಟ್ ಡ್ಯುಯಲ್ ರಿಯರ್ ಕ್ಯಾಮೆರಾ!!

ಬೆಸ್ಟ್ ಡ್ಯುಯಲ್ ರಿಯರ್ ಕ್ಯಾಮೆರಾ!!

12MP +5MP ಹಾರಿಜಂಟಲ್ ಕ್ಯಾಮೆರಾ ಸೆಟಪ್ ಅನ್ನು ರೆಡ್‌ಮಿ ನೋಟ್ 5 ಪ್ರೊ ಫೋನಿನಲ್ಲಿ ಕಾಣಹುದಾಗಿದೆ. AI (ಕೃತಕ ಬುದ್ದಿಮತ್ತೆ) ಮತ್ತು EIS ಟೆಕ್ನಾಲಜಿ ಸಹಾಯದಿಂದ ಕಾರ್ಯನಿರ್ವಹಿಸುವ ಈ ಫೋನಿನ ಕ್ಯಾಮೆರಾಗಳಿಂದ ಅತ್ಯುತ್ತಮ ಬೊಕ್ಕೆ ಚಿತ್ರಗಳನ್ನು ಸೆರೆಹಿಡಿಯುವ ವಿಶೇಷತಗಳಿವೆ ಎಂದು ಹೇಳಬಹುದು.!!

ಸ್ಮಾರ್ಟ್‌ಫೋನ್ ಮಿತಿಗಳೇನು?

ಸ್ಮಾರ್ಟ್‌ಫೋನ್ ಮಿತಿಗಳೇನು?

ರೆಡ್‌ಮಿ ನೋಟ್ 5 ಪ್ರೊ ಒಮ್ಮೊಮ್ಮೆ ಹಳೆಯ ಪುನರಾವರ್ತಿತ ವಿನ್ಯಾಸವನ್ನೇ ಹೊಂದಿದೆ ಎನಿಸುತ್ತದೆ. ಜತೆಗೆ ಮೀಸಲಾದ ಮೈಕ್ರೊ ಕಾರ್ಡ್ ಸ್ಲಾಟ್ ಇಲ್ಲ. ಇವೆಲ್ಲವಕ್ಕಿಂತ ಮುಖ್ಯವಾಗಿ ಆಂಡ್ರಾಯ್ಡ್ ಓರಿಯೊ ಅಪ್‌ಡೇಟ್ ಇಲ್ಲದೆ ರೆಡ್‌ಮಿ ನೋಟ್ 5 ಪ್ರೊ ಮಾರುಕಟ್ಟೆಗೆ ಬಿಡುಗಡೆಯಾಗಿರುವುದು ಸ್ಮಾರ್ಟ್‌ಫೋನಿನ ಮಿತಿಯಾಗಿದೆ.! ಆದರೂ. ಬಜೆಟ್ ಫೋನ್‌ಗಳಲ್ಲಿ ಇದು ಭಾರತದ ನಂಬರ್ ಒನ್ ಫೋನ್ ಎನ್ನಬಹುದು.!!

Best Mobiles in India

English summary
Xiaomi recently upgraded its Redmi Note series by launching two new smartphones in the Indian market. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X