ಫ್ಲಿಪ್‌ಕಾರ್ಟ್‌ನಲ್ಲಿ 'ರೆಡ್‌ಮಿ ನೋಟ್ 5 ಪ್ರೊ' ಖರೀದಿಗೆ ಬಂಪರ್ ಆಫರ್!
ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಶಿಯೋಮಿ 'ರೆಡ್ಮಿ ನೋಟ್ 5 ಪ್ರೊ' ಸ್ಮಾರ್ಟ್‌ಫೋನ್ ಖರೀದಿಗೆ ಬಂಪರ್ ಆಫರ್ ಒಂದನ್ನು ಪ್ರಕಟಿಸಲಾಗಿದೆ. ಫ್ಲಿಪ್‌ಕಾರ್ಟ್ ಆರಂಭಿಸಿರುವ ನಾಲ್ಕು ದಿನಗಳ ಮೊಬೈಲ್ ಬೊನಾನ್ಜಾ ಸೇಲ್ ಮಾರಾಟ ಮೇಳದಲ್ಲಿ ಶಿಯೋಮಿ 'ರೆಡ್ಮಿ ನೋಟ್ 5 ಪ್ರೊ' ಸ್ಮಾರ್ಟ್‌ಫೋನ್ ಅನ್ನು ಕೇವಲ 999 ರೂ.ಗಳಿಗೆ ನಿಮ್ಮದಾಗಿಸಿಕೊಳ್ಳಬಹುದಾಗಿದೆ.
ಹೌದು, ಇತ್ತೀಚಿನ ಬೆಲೆ ಕಡಿತದೊಂದಿಗೆ ರೆಡ್‌ಮಿ ನೋಟ್ 5 ಪ್ರೊ ಫೋನ್ ಬೆಲೆ 12,999 ರೂ.ಗಳಿಗೆ ಇಳಿಕೆಯಾಗಿದ್ದು, ಇದರ ಜೊತೆಗೆ ಇದೀಗ 12,000 ರೂ.ಗಳ ವರೆಗೆ ಎಕ್ಸ್‌ಚೇಂಜ್ ಆಫರ್ ನೀಡಲಾಗಿದೆ. ಅಲ್ಲದೆ ಎಸ್‌ಬಿಐ ಕ್ರೆಡಿಟ್ ಡೆಬಿಟ್ ಕಾರ್ಡುದಾರರಿಗೆ ಹೆಚ್ಚುವರಿ ಶೇಕಡಾ 10ರಷ್ಟು ಇನ್‌ಸ್ಟಂಟ್ ಡಿಸ್ಕೌಂಟ್ ನೀಡಲಾಗಿರುವುದರಿಂದ ಫೋನ್ ಕೇವಲ 999 ರೂ.ಗೆ ದೊರೆಯುತ್ತಿದೆ.

ಗ್ರಾಹಕರು ತಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು 'ರೆಡ್‌ಮಿ ನೋಟ್ 5 ಪ್ರೊ' ಫೋನ್ ಖರೀದಿಗೆ ಎಕ್ಸ್‌ಚೇಂಜ್ ಮಾಡಿಕೊಳ್ಳುವ ಮೂಲಕ ಈ ಆಫರ್ ಅನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಹಾಗಾದರೆ, ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗಿರುವ ಶಿಯೋಮಿ 'ರೆಡ್ಮಿ ನೋಟ್ 5 ಪ್ರೊ' ಸ್ಮಾರ್ಟ್‌ಫೋನ್ ಖರಿದಿಸಲು ಏನೆಲ್ಲಾ ಕಾರಣಗಳಿವೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ರೆಡ್‌ಮಿ ನೋಟ್ 5 ಪ್ರೊ ಡಿಸೈನ್
ರೆಡ್‌ಮಿ ನೋಟ್ 5 ಪ್ರೊ ಪ್ರಿಮಿಯಮ್ ವಿನ್ಯಾಸ ಹೊಂದಿದ್ದು, ಹಿಂಭಾಗದಲ್ಲಿ ಐಫೋನ್ X ಮಾದರಿಯಲ್ಲಿ ಕಾಣಿಸುವ ಡ್ಯುಯಲ್ ಕ್ಯಾಮೆರಾ ಸೆಟಪ್ ಕಾಣಬಹುದಾಗಿದೆ. 18:9 ಅನುಪಾತದಲ್ಲಿರುವ 5.99 ಇಂಚ್ ಡಿಸ್‌ಪ್ಲೇ ಮಲ್ಟಿಮೀಡಿಯಾ ಮತ್ತು ಗೇಮಿಂಗ್‌ಗಾಗಿ ಹೇಳಿ ಮಾಡಿಸಿದಂತಿದೆ. ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹಿಂಬಾಗದಲ್ಲಿ ನೀಡಲಾಗಿದೆ.

ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 636 ಪ್ರೊಸೆಸರ್
ಅತ್ಯಂತ ಕಡಿಮೆ ಬೆಲೆಯಲ್ಲಿ ಕ್ವಾಡ್ ಕೋರ್ ಕ್ವಾಲ್‌ಕಮ್ ಸ್ನಾಪ್‌ಡ್ರಾಗನ್ 636 CPU ಪ್ರೊಸೆಸರ್, ರಿಯೋ 260 CPU ವಿಶೇಷತೆಗಳನ್ನು ಒಳಗೊಂಡಿರುವ ಸ್ಮಾರ್ಟ್‌ಫೋನ್ ಇದಾಗಿದೆ. ಅತ್ಯಂತ ವೇಗದ ಕಾರ್ಯಾಚರಣೆ ಹೊಂದಿರುವ ಈ ಫೋನ್ ಒಂದೇ ಸಮಯದಲ್ಲಿ ಮಲ್ಟಿ ಟಾಸ್ಕ್‌ಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ.

RAM ಮತ್ತು ಮೆಮೊರಿ
ಕ್ವಾಡ್ ಕೋರ್ ಕ್ವಾಲ್‌ಕಮ್ ಸ್ನಾಪ್‌ಡ್ರಾಗನ್ 636 ಜೊತೆಗೆ 4GB ಮತ್ತು 6GB RAM ಎರಡು ಆವೃತ್ತಿಗಳಲ್ಲಿ ರೆಡ್‌ಮಿ ನೋಟ್ 5 ಪ್ರೊ ಸ್ಮಾರ್ಟ್‌ಪೋನ್ ಬಿಡುಗಡೆಯಾಗಿದೆ. ಈ ಎರಡೂ ಆವೃತ್ತಿಯ ಸ್ಮಾರ್ಟ್‌ಫೋನ್‌ಗಳಲ್ಲಿ 64GB ಆಂತರಿಕ ಮೆಮೊರಿ ನೀಡಲಾಗಿದ್ದು, ಎಸ್‌ಡಿ ಕಾರ್ಡ್ ಮೂಲಕ ಮೊಬೈಲ್ ಮೆಮೊರಿಯನ್ನು 128GB ವರೆಗೆ ವಿಸ್ತರಿಸುವ ಅವಕಾಶವಿದೆ.

20MP ಸೆಲ್ಫಿ ಕ್ಯಾಮೆರಾ
ಭಾರತೀಯರು ಸೆಲ್ಫಿ ಪ್ರಿಯರು ಎಂದು ಅರಿತಿರುವ ಶಿಯೋಮಿ 20MP ಸೆಲ್ಫಿ ಕ್ಯಾಮೆರಾವನ್ನು ರೆಡ್‌ಮಿ ನೋಟ್ 5 ಪ್ರೊ ಸ್ಮಾರ್ಟ್‌ಪೋನಿನಲ್ಲಿ ನೀಡಿದೆ. ಕೃತಕ ಬುದ್ದಿ ಮತ್ತೆಯ ಮೂಲಕ ಕಾರ್ಯನಿರ್ವಹಿಸಲಿರುವ ಈ ಸೆಲ್ಫಿ ಕ್ಯಾಮೆರಾ ಬ್ಯೂಟಿಫೈ 4.0 ಮೂಡ್ ಆಯ್ಕೆಯನ್ನು ಸಹ ಹೊಂದಿರುವುದರಿಂದ ಅತ್ಯುತ್ತಮ ಸೆಲ್ಫಿ ಚಿತ್ರಗಳನ್ನು ನೀಡುತ್ತದೆ.

ಬೆಸ್ಟ್ ಡ್ಯುಯಲ್ ಕ್ಯಾಮೆರಾ
12MP+5MP ಕ್ಯಾಮೆರಾ ವ್ಯವಸ್ಥೆಯನ್ನು ರೆಡ್‌ಮಿ ನೋಟ್ 5 ಪ್ರೊ ಫೋನಿನಲ್ಲಿ ಕಾಣಹುದಾಗಿದೆ. AI (ಕೃತಕ ಬುದ್ದಿಮತ್ತೆ) ಮತ್ತು EIS ತಂತ್ರಜ್ಞಾನದ ಸಹಾಯದಿಂದ ಕಾರ್ಯನಿರ್ವಹಿಸುವ ಈ ಫೋನಿನ ಕ್ಯಾಮೆರಾದಿಂದ ಅತ್ಯುತ್ತಮ ಬೊಕ್ಕೆ ಚಿತ್ರಗಳನ್ನು ಸೆರೆಹಿಡಿಯುವ ವಿಶೇಷತೆ ಹೊಂದಿದೆ.


Click it and Unblock the Notifications








