Subscribe to Gizbot

ಶಿಯೋಮಿಯಿಂದ ಮತ್ತೊಂದು ಪವರ್ ಫುಲ್ ಸ್ಮಾರ್ಟ್‌ಫೋನ್: ವಿಶೇಷತೆಗಳು ಭರ್ಜರಿಯಾಗಿದೆ..!!

Written By:

ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಶಿಯೋಮಿ ಮತ್ತೊಂದು ಪವರ್ ಫುಲ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ಸದ್ದಿಲ್ಲದೇ ತಯಾರಿಯನ್ನು ನಡೆಸಿದ್ದು, ಈ ಫೋನಿನ ಕುರಿತು ಮಾಹಿತಿಗಳು ಲೀಕ್ ಆಗಿದೆ. ಈ ಹೊಸ ಫೋನಿನ ಕುರಿತ ಮಾಹಿತಿ ಇಲ್ಲಿದೆ.

ಶಿಯೋಮಿಯಿಂದ ಮತ್ತೊಂದು ಪವರ್ ಫುಲ್ ಸ್ಮಾರ್ಟ್‌ಫೋನ್: ವಿಶೇಷತೆಗಳು ಭರ್ಜರಿಯಾಗಿದೆ

ಓದಿರಿ: ಜಿಯೋ ವಿರುದ್ಧ ಜಿದ್ದಿಗೆ ಬಿದ್ದ ಏರ್‌ಟೆಲ್ ಬೆಸ್ಟ್ ಯಾಕೆ..? ಉತ್ತರ ಇಲ್ಲಿದೆ

ಸದ್ಯ ಶಿಯೋಮಿಯ ರೆಡ್‌ಮಿ ನೋಟ್ 4 ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿರುವ ಬೆನ್ನಹಿಂದೆಯೇ ರೆಡ್‌ಮಿ ನೋಟ್ 5 ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎನ್ನಲಾಗಿದೆ. ರೆಡ್‌ಮಿ ನೋಟ್ 5 ವಿಶೇಷತೆಗಳು ಮತ್ತು ಈ ಫೋನ್ ಬಿಡುಗಡೆಯ ಕುರಿತ ಮಾಹಿತಿಯೂ ಇಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೆಡ್‌ಮಿ ನೋಟ್ 5ನಲ್ಲಿ ಆಂಡ್ರಾಯ್ಡ್ 7.1:

ರೆಡ್‌ಮಿ ನೋಟ್ 5ನಲ್ಲಿ ಆಂಡ್ರಾಯ್ಡ್ 7.1:

ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 7.1 ಮತ್ತು MIUI 9ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಇದು ಟಾಪ್ ಆಂಡ್ರಾಯ್ಡ್ ಮತ್ತು MIUI ಆವೃತ್ತಿಯಾಗಿದೆ. ಈ ವರ್ಷದ ಅಂತ್ಯದ ವೇಳೆಗೆ ಲಾಂಚ್ ಆಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

5.5 ಇಂಚಿನ ಡಿಸ್‌ಪ್ಲೇ ಇದರಲ್ಲಿದೆ:

5.5 ಇಂಚಿನ ಡಿಸ್‌ಪ್ಲೇ ಇದರಲ್ಲಿದೆ:

ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನಿನಲ್ಲಿ 5.5 ಇಂಚಿನ FHD ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದಲ್ಲದೇ ವೇಗದ ಕಾರ್ಯಚರಣೆಗಾಗಿ ಇದರಲ್ಲಿ ಸ್ಯಾಪ್ ಡ್ರಾಗನ್ 630 ಪ್ರೋಸೆಸರ್ ಅಳವಡಿಸಲಾಗಿದೆ. ಇದರೊಂದಿಗೆ ಆಡ್ರಿನೋ 508 GPU ಸಹ ಇರಲಿದ್ದು, ಗ್ರಾಫಿಕ್ಸ್ ಗೇಮ್ ಆಡಲು ಸಹಾಯ ಮಾಡಲಿದೆ.

16 MP/13 MP ಕ್ಯಾಮೆರಾ:

16 MP/13 MP ಕ್ಯಾಮೆರಾ:

ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ 16 MP ಕ್ಯಾಮೆರಾವನ್ನು ಹಾಗೆಯೇ ಮುಂಭಾಗದಲ್ಲಿ 13 MP ಕ್ಯಾಮೆರಾವನ್ನು ಕಾಣಬಹುದಾಗಿದೆ. ಇದಲ್ಲದೇ ವೇಗವಾಗಿ ಚಾರ್ಜ್ ಆಗಲು ಕ್ವೀಕ್ ಚಾರ್ಜರ್ 4.0 ಹಾಗೂ USB 3.1 ಅನ್ನು ನೀಡಲಾಗಿದೆ.

ಎರಡು ಆವೃತ್ತಿಯಲ್ಲಿ ಲಭ್ಯ:

ಎರಡು ಆವೃತ್ತಿಯಲ್ಲಿ ಲಭ್ಯ:

ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನು ಎರಡು ಆವೃತ್ತಿಯಲ್ಲಿ ದೊರೆಯಲಿದ್ದು, 3GB RAM/ 32GB ಇಂಟರ್ನಲ್ ಮೆಮೊರಿಯೊಂದಿಗೆ ಒಂದು ಮಾದರಿ, 4GB RAM/ 64GB ಇಂಟರ್ನಲ್ ಮೆಮೊರಿಯೊಂದಿಗೆ ಇನ್ನೊಂದು ಮಾದರಿಯೂ ದೊರೆಯಲಿದೆ. ಸದ್ಯ ದೊರೆತಿರುವ ಮಾಹಿತಿಯ ಪ್ರಕಾರ ಬೆಲೆ ರೂ. 10,999 ಮತ್ತು ರೂ. 11,999 ಅಸುಪಾಸಿನಲ್ಲಿರಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Xiaomi Redmi Note 5 is the next smartphone from company, and the first major details about the phone have been leaked online. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot