ನವೆಂಬರ್‌ 1ಕ್ಕೆ ರೆಡ್‌ಮಿ ನೋಟ್ 6 ಪ್ರೋ ಲಾಂಚ್‌..!

|

ಶಿಯೋಮಿ ಸಂಸ್ಥೆ ಹೊಸ ಫ್ಲಾಗ್ ಶಿಪ್ ಫೋನ್ ಶಿಯೋಮಿ ರೆಡ್ಮಿ ನೋಟ್6 ಪ್ರೋವನ್ನು ಭಾರತದಲ್ಲಿ ಬಿಡುಗಡೆಗೊಳಿಸುತ್ತಿದೆ.ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಕೆಲವು ತಿಂಗಳ ಮುಂಚೆಯೇ ರೆಡ್ಮಿ ನೋಟ್ 6 ಪ್ರೋ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

ನವೆಂಬರ್‌ 1ಕ್ಕೆ ರೆಡ್‌ಮಿ ನೋಟ್ 6 ಪ್ರೋ ಲಾಂಚ್‌..!

ಈಗಾಗಲೇ ಬಿಡುಗಡೆಗೊಂಡಿರುವ ಮಾಧ್ಯಮ ಆಮಂತ್ರಣದ ಪ್ರಕಾರ ಶಿಯೋಮಿ ರೆಡ್ಮಿ ನೋಟ್ 6 ಪ್ರೋ ನವೆಂಬರ್ 20 ರ ಒಳಗೆ ಮೂರು ವಿಭಿನ್ನ ಬಣ್ಣಗಳಲ್ಲಿ ಬಿಡುಗಡೆಗೊಳಿಸಲಾಗುತ್ತದೆ ಎಂದು ತಿಳಿಸಲಾಗಿದೆ.ಈ ಸ್ಮಾರ್ಟ್ ಫೋನ್ ನಲ್ಲಿ ಡುಯಲ್ ಕ್ಯಾಮರಾ ಸೆಟ್ ಅಪ್ ಇರಲಿದೆ ಎನ್ನಲಾಗಿದೆ.

ಡಿಸ್‌ಪ್ಲೇ

ಡಿಸ್‌ಪ್ಲೇ

ಶಿಯೋಮಿ ರೆಡ್ಮಿ ನೋಟ್ 6 ಪ್ರೋ 6.18- ಇಂಚಿನ IPS LCD ಸ್ಕ್ರೀನ್ ನ್ನು ಹೊಂದಿದೆ ಜೊತೆಗೆ FHD+ ರೆಸಲ್ಯೂಷನ್ ನ್ನು ಜೊತೆಗೆ ಮೇಲೆ ನಾಚ್ ನ್ನು ಕೂಡ ಹೊಂದಿದೆ.ಇದು ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 636 SoC ಜೊತೆಗೆ 4/6 GB RAM ಮತ್ತು 64 GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯನ್ನು ಹೊಂದಿದೆ. ಜೊತೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶವಿದೆ.

ಕ್ಯಾಮೆರಾ

ಕ್ಯಾಮೆರಾ

ಶಿಯೋಮಿ ರೆಡ್ಮಿ ನೋಟ್ 6 ಪ್ರೋ ನ ಪ್ರಮುಖ ಆಕರ್ಷಣೆ ಅಂದರೆ ಕ್ವಾಡ್ ಕ್ಯಾಮರಾ ಸೆಟ್ ಅಪ್. ಈ ಸ್ಮಾರ್ಟ್ ಫೋನ್ ನ ಹಿಂಭಾಗದಲ್ಲಿ 12 MP + 5 MP ಡುಯಲ್ ಕ್ಯಾಮರಾ ಸೆಟ್ ಅಪ್ ಇದೆ ಜೊತೆಗೆ ಮುಂಭಾಗದಲ್ಲಿ 20 MP + 2 MP ಡುಯಲ್ ಕ್ಯಾಮರಾ ಸೆಟ್ ಅಪ್ ಇದೆ. ಪೋಟ್ರೈಟ್ ಮೋಡ್, HDR, ಅನೋರಮಾ ಮತ್ತು 1080p ವೀಡಿಯೋ ರೆಕಾರ್ಡಿಂಗ್ ಸೌಲಭ್ಯವು ಕ್ಯಾಮರಾದಲ್ಲಿದೆ.

ಮತ್ತೀತರ ಫೀಚರ್ಸ್‌

ಮತ್ತೀತರ ಫೀಚರ್ಸ್‌

ರೆಡ್ಮಿ ನೋಟ್ 6 ಪ್ರೋ ಡುಯಲ್ SIM ಕಾರ್ಡ್ ಸ್ಲಾಟ್ ನ್ನು ಹೊಂದಿದೆ ಜೊತೆಗೆ 4G LTE ಮತ್ತು VoLTE ನ್ನು ಎರಡೂ ಸ್ಲಾಟ್ ನ್ನೂ ಹೊಂದಿದೆ. ಬ್ಲೂಟೂತ್ 5.0 ಮತ್ತು ಡುಯಲ್ ಚಾನಲ್ ವೈ-ಫೈ ಸಪೋರ್ಟ್ ನ್ನು ಹೊಂದಿದೆ (2.4 GHz ಮತ್ತು 5.0 GHz). ಈ ಸ್ಮಾರ್ಟ್ ಫೋನ್ 4000 mAh ಬ್ಯಾಟರಿಯನ್ನು ಹೊಂದಿದ್ದು ಕ್ವಾಲ್ಕಂ ಕ್ವಿಕ್ ಚಾರ್ಜ್ 2.0 ಬೆಂಬಲವನ್ನು ಹೊಂದಿದೆ ಜೊತೆಗೆ ಮೈಕ್ರೋ ಯುಎಸ್ ಬಿ ಪೋರ್ಟ್ ಹೊಂದಿದೆ. ಶಿಯೋಮಿ ರೆಡ್ಮಿ ನೋಟ್ 6 ಪ್ರೋ ಭಾರತದಲ್ಲಿ ಬಿಡುಗಡೆ ಹೊಂದಲಿದ್ದು MIUI 10 ಆಧಾರಿತ ಆಂಡ್ರಾಯ್ಡ್ 8.1 ಓರಿಯೋ ಆಪರೇಟಿಂಗ್ ಸಿಸ್ಟಮ್ ನ್ನು ಹೊಂದಿದೆ. ಭವಿಷ್ಯದಲ್ಲಿ ಆಂಡ್ರಾಯ್ಡ್ 9 ಪೈ ಗೆ ಅಪ್ ಡೇಟ್ ಕೂಡ ಆಗಲಿದೆ.

ಬೆಲೆ

ಬೆಲೆ

ಶಿಯೋಮಿ ರೆಡ್ಮಿ ನೋಟ್ ಎರಡು ವಿಭಿನ್ನ ವೇರಿಯಂಟ್ ನಲ್ಲಿ ಭಾರತದಲ್ಲಿ ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ. 4 GB ಅಥವಾ 6 GB RAM ಜೊತೆಗೆ 64 GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯನ್ನು ಇದು ಹೊಂದಿರಲಿದೆ. 4 GB RAM ಮತ್ತು 64 GB ಸ್ಟೋರೇಜ್ ವ್ಯವಸ್ಥೆಯ ಫೋನ್ ಬೆಲೆ 14,999 ರೂಪಾಯಿಗಳು. 6 GB RAM ಮತ್ತು 64 GB ಸ್ಟೋರೇಜ್ ಫೋನಿನ ಬೆಲೆ 16,999 ರೂಪಾಯಿಗಳು.

Best Mobiles in India

English summary
Xiaomi Redmi Note 6 Pro confirmed to launch in India in November with dual selfie cameras. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X