Home
ಮೊಬೈಲ್

ಭಾರತದಲ್ಲಿ 'ರೆಡ್ ಮಿ ನೋಟ್ 6 ಪ್ರೊ' ಲಾಂಚ್ ಡೇಟ್ ಫಿಕ್ಸ್!..ಬೆಲೆ ಎಷ್ಟು ಗೊತ್ತಾ?

ರೆಡ್ ಮಿ ನೋಟ್ 5 ಪ್ರೊ ಯಶಸ್ಸಿನಲ್ಲಿ ತೇಲಾಡುತ್ತಿರುವ ಶಿಯೋಮಿ ಇದೀಗ 'ರೆಡ್ ಮಿ ನೋಟ್ 6 ಪ್ರೊ' ಸ್ಮಾರ್ಟ್‌ಪೋನ್ ಅನ್ನು ಭಾರತದಲ್ಲಿ ಲಾಂಚ್ ಮಾಡಲು ಸಿದ್ದಮಾಡಿಕೊಂಡಿದೆ. ಕಳೆದ ತಿಂಗಳು ಥೈಲ್ಯಾಂಡ್‌ನಲ್ಲಿ ಮೊಟ್ಟ ಮೊದಲ ಬಾರಿಗೆ ಬಿಡುಗಡೆಯಾಗಿರುವ ಶಿಯೋಮಿ ರೆಡ್‌ಮಿ ನೋಟ್ 5 ಭಾರತಕ್ಕೆ ಶೀಘ್ರವೇ ಕಾಲಿಡುವುದನ್ನು ವರದಿಗಳು ಖಚಿತಪಡಿಸಿವೆ.

ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಇನ್ನಿಲ್ಲದಂತೆ ಮೋಡಿ ಮಾಡುತ್ತಿರುವ ಚೀನಾದ ಮೊಬೈಲ್ ಕಂಪೆನಿ ಶಿಯೋಮಿ ಇದೀಗ 'ರೆಡ್ ಮಿ ನೋಟ್ 6 ಪ್ರೊ' ಹೊತ್ತು ಮಾರುಕಟ್ಟೆಗೆ ಎಂಟ್ರಿ ನೀಡಿದ್ದು, ಈ ಬಾರಿಯೂ ಶಿಯೋಮಿಯ ಈ ಸ್ಮಾರ್ಟ್‌ಪೋನ್ ಒಂದು ಅತ್ಯಂತ ಕಡಿಮೆ ಬೆಲೆಗೆ ಅತ್ಯದ್ಬುತ ಫೀಚರ್ಸ್ ಹೊಂದಿರುವ ಏಕೈಕ ಸ್ಮಾರ್ಟ್‌ಪೋನ್ ಆಗಿ ಹೊರಹೊಮ್ಮಿದೆ.

ಭಾರತದಲ್ಲಿ 'ರೆಡ್ ಮಿ ನೋಟ್ 6 ಪ್ರೊ' ಲಾಂಚ್ ಡೇಟ್ ಫಿಕ್ಸ್!..ಬೆಲೆ ಎಷ್ಟು ಗೊತ್ತಾ?

ಹಾಗಾದರೆ, ನಾಲ್ಕು ಕ್ಯಾಮೆರಾಗಳು, ಸ್ನ್ಯಾಪ್‌ಡ್ರಾಗನ್ 636 ಪ್ರೊಸೆಸರ್, 6.26-ಇಂಚಿನ ಪೂರ್ಣ ಹೆಚ್‌ಡಿ+ ಐಪಿಎಸ್ ಎಲ್ಸಿಡಿ ಡಿಸ್‌ಪ್ಲೇ ಯಂತಹ ಫೀಚರ್ಸ್ ಹೊತ್ತಿ ಬಂದಿರುವ 'ರೆಡ್ ಮಿ ನೋಟ್ 6 ಪ್ರೊ' ಸ್ಮಾರ್ಟ್‌ಪೋನ್ ಫೀಚರ್ಸ್ ಯಾವುವು? ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಪೋನ್ ಬಿಡುಗಡೆ ಯಾವಾಗ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಸ್ಮಾರ್ಟ್‌ಪೋನ್ ವಿನ್ಯಾಸ ಹೇಗಿದೆ?

ಸ್ಮಾರ್ಟ್‌ಪೋನ್ ವಿನ್ಯಾಸ ಹೇಗಿದೆ?

ಆಪಲ್ ಮಾದರಿಯ ಡಿಸ್‌ಪ್ಲೇ ನೋಚ್, ನಾಲ್ಕು ಕ್ಯಾಮೆರಾಗಳು ಹಾಗೂ ಹಿಂಬಾಗದಲ್ಲಿ ಫಿಂಗರ್‌ಪ್ರಿಂಟ್ ಆಯ್ಕೆಯನ್ನು ಹೊಂದಿರುವ ಸ್ಮಾರ್ಟ್‌ಪೋನ್ ವಿನ್ಯಾಸ ಹೈ ಎಂಡ್ ಸ್ಮಾರ್ಟ್‌ಪೋನ್‌ಗಳಿಗೆ ಸೆಡ್ಡು ಹೊಡೆಯುತ್ತದೆ. ಸ್ಮಾರ್ಟ್‌ಫೋನಿನ ನಾಲ್ಕು ಬದಿಗಳಲ್ಲಿ ರೌಂಡೆಡ್ ಕಾರ್ನರ್ ಎಡ್ಜ್ ವಿನ್ಯಾಸವಿರುವುದು ಸ್ಮಾರ್ಟ್‌ಫೋನಿನ ಅಂದವನ್ನು ಹೆಚ್ಚಿಸಿದೆ.

ಸ್ಮಾರ್ಟ್‌ಪೋನ್ ಡಿಸ್‌ಪ್ಲೇ!

ಸ್ಮಾರ್ಟ್‌ಪೋನ್ ಡಿಸ್‌ಪ್ಲೇ!

ಮೊದಲೇ ಹೇಳಿದಂತೆ, 6.26-ಇಂಚಿನ ಪೂರ್ಣ ಹೆಚ್‌ಡಿ+ ಐಪಿಎಸ್ ಎಲ್ಸಿಡಿ (1080*2280p) ಡಿಸ್‌ಪ್ಲೇಯನ್ನು 'ರೆಡ್ ಮಿ ನೋಟ್ 6 ಪ್ರೊ'ನಲ್ಲಿ ಅಳವಡಿಸಲಾಗಿದೆ. 86 ಪ್ರತಿಶತ ಸ್ಕ್ರೀನ್-ಟು-ಬಾಡಿ ಸಾಮರ್ಥ್ಯದ ಡಿಸ್‌ಪ್ಲೇ 19:9 ಆಕಾರ ಅನುಪಾತದಲ್ಲಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆಯನ್ನು ಹೊಂದಿದೆ. ಮಲ್ಟಿಮೀಡಿಯಾ ಪ್ರಿಯರಿಗೆ ಡಿಸ್‌ಪ್ಲೇ ಹೇಳಿ ಮಾಡಿಸಿದಂತಿದೆ.

ಪ್ರೊಸೆಸರ್ ಮತ್ತು RAM!

ಪ್ರೊಸೆಸರ್ ಮತ್ತು RAM!

ಈ ಬಾರಿ ಕ್ಯಾಮೆರಾಗೆ ಹೆಚ್ಚು ಒತ್ತು ನೀಡಿರುವ ಶಿಯೋಮಿ 'ರೆಡ್ ಮಿ ನೋಟ್ 6 ಪ್ರೊ' ಸ್ಮಾರ್ಟ್‌ಪೋನಿನಲ್ಲಿ 'ರೆಡ್ ಮಿ ನೋಟ್ 5 ಪ್ರೊ'ನಲ್ಲಿ ಅಳವಡಿಸಲಾಗಿದ್ದ ಸ್ನ್ಯಾಪ್‌ಡ್ರಾಗನ್ 636 ಪ್ರೊಸೆಸರ್ ಅನ್ನೇ ನೀಡಲಾಗಿದೆ. ಜೊತೆಗೆ ಅಡ್ರಿನೋ 509 ಜಿಪಿಯು ಮತ್ತು 4 ಜಿಬಿ RAM ಮತ್ತು 64GB ಆಂತರಿಕ ಮೆಮೊರಿ ವೆರಿಯಂಟ್‌ನಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡಿದೆ.

ಡ್ಯುಯಲ್ ಸೆಲ್ಫಿ ಕ್ಯಾಮೆರಾ!

ಡ್ಯುಯಲ್ ಸೆಲ್ಫಿ ಕ್ಯಾಮೆರಾ!

'ರೆಡ್ ಮಿ ನೋಟ್ 6 ಪ್ರೊ' ಸ್ಮಾರ್ಟ್‌ಪೋನಿನ ಪ್ರಮುಖ ಆಕರ್ಷಣೆಯೇ ನಾಲ್ಕು ಕ್ಯಾಮೆರಾಗಳಲಾಗಿದ್ದು, 2MP + 5MP ಹಿಂಬದಿಯ ಕ್ಯಾಮರಾ, 20MP + 2MP ಸೆಲ್ಫಿ ಕ್ಯಾಮರಾಗಳನ್ನು ನೀಡಲಾಗಿದೆ. ಡ್ಯುಯಲ್ ಪಿಕ್ಸೆಲ್ ಆಟೋಫೋಕಸ್, 1.4-ಮೈಕ್ರಾನ್ ಪಿಕ್ಸೆಲ್‌ಗಳು, ಎಐ ಭಾವಚಿತ್ರ 2.0 ಮತ್ತು ಎಐ ಡೈನಾಮಿಕ್ ಬೊಕೆ ವೈಶಿಷ್ಟ್ಯಗಳಂತಹ ವೈಶಿಷ್ಟ್ಯಗಳೊಂದಿಗೆ ಬಂದಿದೆ.

ಬಿಗ್ ಬ್ಯಾಟರಿ ಲಭ್ಯ.!

ಬಿಗ್ ಬ್ಯಾಟರಿ ಲಭ್ಯ.!

ಏಕೈಕ ಪೂರ್ಣ ಚಾರ್ಜರ್‌ನಲ್ಲಿ 2 ದಿನಗಳವರೆಗೆ ಚಾರ್ಜಿಂಗ್ ಉಳಿಯುವ ಸಾಮರ್ಥ್ಯದ 4,000 mAh ಬ್ಯಾಟರಿಯನ್ನು 'ರೆಡ್ ಮಿ ನೋಟ್ 6 ಪ್ರೊ' ಸ್ಮಾರ್ಟ್‌ಪೋನಿನಲ್ಲಿ ನೀಡಿರುವ ಬಗ್ಗೆ ಶಿಯೋಮಿ ಹೇಳಿದೆ. ಆದರೆ, ಕ್ವಿಕ್ ಚಾರ್ಜಿಂಗ್ ತಂತ್ರಜ್ಞಾನದ ಬಗ್ಗೆ ಶಿಯೋಮಿ ಈ ವರೆಗೂ ಯಾವುದೇ ಮಾಹಿತಿ ನೀಡಿಲ್ಲದಿರುವುದರಿಂದ, ನಾವು ಈ ಬಗ್ಗೆ ಎದುರುನೋಡುತ್ತಿದ್ದೇವೆ.

ಇತರೆ ಏನೆಲ್ಲಾ ಫೀಚರ್ಸ್?

ಇತರೆ ಏನೆಲ್ಲಾ ಫೀಚರ್ಸ್?

ಇಷ್ಟೆಲ್ಲಾ ಮುಖ್ಯ ಫೀಚರ್ಸ್‌ಗಳನ್ನು ಹೊಂದಿರುವ 'ರೆಡ್ ಮಿ ನೋಟ್ 6 ಪ್ರೊ' ಸ್ಮಾರ್ಟ್‌ಪೋನ್, 4-ಇನ್ -1 ಸೂಪರ್ ಪಿಕ್ಸೆಲ್ ಮತ್ತು ಎಐ ಫೇಸ್ ಅನ್ಲಾಕ್ ಸಾಮರ್ಥ್ಯಗಳನ್ನು ಹೊಂದಿರುವುದು ವಿಶೇಷತೆಯಾಗಿದೆ. ಈ ಸಾಧನವು ಶಿಯೋಮಿ MIUI 10 ಜೊತೆಗೆ ಆಂಡ್ರಾಯ್ಡ್ 8.1 (ಓರಿಯೋ) ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಣೆ ನೀಡಲಿದೆ.

ಬೆಲೆ ಮತ್ತು ಲಭ್ಯತೆ?

ಬೆಲೆ ಮತ್ತು ಲಭ್ಯತೆ?

ಕಳೆದ ಬಾರಿ ರೆಡ್‌ಮಿ ನೋಟ್ 5 ಪ್ರೋ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿ ಆಶ್ಚರ್ಯ ಮುಡಿಸಿದ್ದ ಶಿಯೋಮಿ, ಈ ಬಾರಿ 'ರೆಡ್ ಮಿ ನೋಟ್ 6 ಪ್ರೊ' ಸ್ಮಾರ್ಟ್‌ಫೋನ್ ಅನ್ನು ಥೈಲ್ಯಾಂಡ್‌ನಲ್ಲಿ ದೇಶದಲ್ಲಿ 6990THB ಬೆಲೆಗೆ ಬಿಡುಗಡೆ ಮಾಡಿದೆ. ಭಾರತದಲ್ಲಿ 15 ಸಾವಿರ ರೂಪಾಯಿಗಳಿಗೆ 'ರೆಡ್ ಮಿ ನೋಟ್ 6 ಪ್ರೊ' ಸ್ಮಾರ್ಟ್‌ಫೋನ್ ಈ ತಿಂಗಳ ಅಂತ್ಯದ (ಅಕ್ಟೋಬರ್ 27) ವೇಳೆಗೆ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.

Best Mobiles in India

English summary
Xiaomi Redmi Note 6 Pro India variants, colour options leaked; launch to happen soon.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+