ಮೊದಲ ನಾಲ್ಕು ಕ್ಯಾಮೆರಾ ಫೋನ್ ಲಾಂಚ್‌ಗೆ ಶಿಯೋಮಿ ರೆಡಿ...!
ಹೊಸ ಮಾದರಿಯ ಆಂಡ್ರಾಯ್ಡ್ ಅಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿರುವ ಸ್ಮಾರ್ಟ್‌ಫೋನ್ ಅನ್ನು ಚೀನಾ ಮೂಲದ ಶಿಯೋಮಿ ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಲು ಸಿದ್ದತೆ ನಡೆಸಿದೆ. ಈಗಾಗಲೇ ಬಜೆಟ್ ಬೆಲೆಯಲ್ಲಿ ರೆಡ್‌ಮಿ ನೋಟ್ ಸರಣಿಯಲ್ಲಿ ಮೂರು ಸಾಕಷ್ಟು ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿರುವ ಶಿಯೋಮಿ. ಈ ಬಾರಿ ಮತ್ತೊಂದು ರೆಡ್‌ಮಿ ನೋಟ್ 6 ಸರಣಿಯ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲು ಸಿದ್ಧತೆ ಮಾಡಿದೆ.

ರೆಡ್‌ಮಿ ನೋಟ್ 6 ಸರಣಿಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ಶಕೆಯನ್ನು ಆರಂಭಿಸಲಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನ್ ಹೆಚ್ಚಿನ ಸದ್ದು ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಮತ್ತೊಂದು ಬೊಂಬಾಟ್ ಸ್ಮಾರ್ಟ್‌ಫೋನ್ ಅನ್ನು ಬಜೆಟ್ ಬೆಲೆಯಲ್ಲಿ ಮಾರಾಟ ಮಾಡಲು ಶಿಯೋಮಿ ಸಿದ್ದತೆ ನಡೆಸುತ್ತಿದೆ. ಇದು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಹೆಚ್ಚಿನ ಆಯ್ಕೆಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್ ಬೇಕು ಎನ್ನುವವರಿಗೆ ಇದು ಉತ್ತಮ ಆಯ್ಕೆಯಾಗಲಿದೆ ಎನ್ನಲಾಗಿದೆ.
ಒಟ್ಟು ನಾಲ್ಕು ಕ್ಯಾಮೆರಾ:
ಸದ್ಯ ಲೀಕ್ ಆಗಿರುವ ಪೋಟೋಗಳು ಮಾರುಕಟ್ಟೆಯಲ್ಲಿ ಲಾಂಚ್ ಆಗಲಿರುವ ರೆಡ್‌ಮಿ ನೋಟ್ 6 ಸರಣಿಯ ರೆಡ್‌ಮಿ ನೋಟ್ 6 ಪ್ರೋ ಸ್ಮಾರ್ಟ್‌ಫೋನ್ ಒಟ್ಟು ನಾಲ್ಕು ಕ್ಯಾಮೆರಾವನ್ನು ಹೊಂದಿದೆ ಎಂಬುದನ್ನು ತೋರಿಸಿಕೊಡುತ್ತಿದೆ. ಮುಂಭಾಗದಲ್ಲಿ ಎರಡು ಮತ್ತು ಹಿಂಭಾಗದಲ್ಲಿ ಎರಡು ಕ್ಯಾಮೆರಾವನ್ನು ಕಾಣಬಹುದಾಗಿದೆ. ಇದು ಮಾರುಕಟ್ಟೆಯಲ್ಲಿ ನಾಲ್ಕು ಕ್ಯಾಮೆರಾ ಹೊಂದಿರುವ ಮೊದಲ ಶಿಯೋಮಿ ಫೋನ್ ಎನ್ನಲಾಗಿದೆ.

ಡ್ಯುಯಲ್ ಸೆಲ್ಫಿ ಕ್ಯಾಮೆರಾ:
ರೆಡ್‌ಮಿ ನೋಟ್ 6 ಪ್ರೋ ಸ್ಮಾರ್ಟ್‌ಫೋನ್ ಡ್ಯುಯಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ ಎನ್ನಲಾಗಿದೆ. 20 MP + 2 MP ಕ್ಯಾಮೆರಾವನ್ನು ಒದರಲ್ಲಿ ಕಾಣಬಹುದಾಗಿದೆ. ಇದು ಉತ್ತಮವಾದ ಚಿತ್ರಗಳನ್ನು ಸೆರೆಹಿಡಿಯಲು ಸಹಾಯವನ್ನು ಮಾಡಲಿದೆ. ಬಳಕೆದಾರರಿಗೆ ಹೊಸ ಅನುಭವನ್ನು ನೀಡಲಿದೆ.


ಡ್ಯುಯಲ್ ಹಿಂಬದಿ ಕ್ಯಾಮೆರಾ:
ರೆಡ್‌ಮಿ ನೋಟ್ 6 ಪ್ರೋ ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ ಹೊಸ ಮಾದರಿಯ ಡ್ಯುಯಲ್ ಕ್ಯಾಮೆರಾವನ್ನು ನೀಡಲಾಗಿದೆ. 12 MP + 2 MP ಕ್ಯಾಮೆರಾವನ್ನು ಇದರಲ್ಲಿ ಕಾಣಬಹುದಾಗಿದೆ. ಇದರಲ್ಲಿ ಡ್ಯುಯಲ್ ಪಿಕ್ಸಲ್ ಆಟೋ ಫೋಕಸ್ ಆಯ್ಕೆಯನ್ನು ಅಳವಡಿಸಲಾಗಿದೆ.

ದೊಡ್ಡ ಸ್ಕ್ರಿನ್:
ರೆಡ್‌ಮಿ ನೋಟ್ 6 ಪ್ರೋ ಸ್ಮಾರ್ಟ್‌ಫೋನಿನಲ್ಲಿ 6.29 ಇಂಚಿನ ಅತೀ ದೊಡ್ಡ ಡಿಸ್‌ಪ್ಲೇಯನ್ನು ನೀಡಲಾಗಿದೆ. ಅಲ್ಲದೇ ಇದು ಐಫೋನ್ X ಮಾದರಿಯ ನೋಚ್ ಡಿಸ್‌ಪ್ಲೇ ವಿನ್ಯಾಸದಿಂದ ಕೂಡಿರಲಿದೆ. ಅಲ್ಲದೇ ಇದರೊಂದಿಗೆ ಬಳಕೆದಾರರಿಗೆ 19:9 ಅನುಪಾತದ ಡಿಸ್‌ಪ್ಲೇಯನ್ನು ಬಳಕೆಗೆ ನೀಡಲಿದೆ.

ದೊಡ್ಡ ಬ್ಯಾಟರಿ :
ಇದಲ್ಲದೇ ರೆಡ್‌ಮಿ ನೋಟ್ 6 ಪ್ರೋ ಸ್ಮಾರ್ಟ್‌ಫೋನ್ ಉತ್ತಮ ಬ್ಯಾಟರಿ ಬ್ಯಾಕಪ್ ಹೊಂದಿದೆ. ಇದಕ್ಕಾಗಿಯೇ ಇದರಲ್ಲಿ 4000mAh ಬ್ಯಾಟರಿಯನ್ನು ಬಳಕೆ ನೀಡಲಾಗಿದೆ. ಇದರಿಂದಾಗಿ ಎರಡು ದಿನಗಳ ಕಾಲ ಬ್ಯಾಟರಿ ಚಾರ್ಜ್ ಮಾಡದೇ ಬಳಕೆ ಮಾಡಬಹುದಾಗಿದೆ.


Click it and Unblock the Notifications








