TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ಸೃಷ್ಟಿಸಿದ ಶಿಯೋಮಿ ರೆಡ್‌ಮಿ ನೋಡ್ 5 ಸ್ಮಾರ್ಟ್‌ಪೋನ್ ಇನ್ಮುಂದೆ ಮರೆಯಾಗಲಿದೆ. ರೆಡ್ ಮಿ ನೋಟ್ 5 ಸ್ಮಾರ್ಟ್‌ಫೋನಿನ ಮುಂದಿನ ಆವೃತ್ತಿ ಸ್ಮಾರ್ಟ್‌ಫೋನ್ 'ರೆಡ್ ಮಿ ನೋಟ್ 6 'ಸ್ಮಾರ್ಟ್‌ಪೋನ್ ಶೀಘ್ರದಲ್ಲೇ ಮೊಬೈಲ್ ಮಾರುಕಟ್ಟೆಗೆ ಎಂಟ್ರಿ ನೀಡುವ ಸೂಚನೆ ಮಾರುಕಟ್ಟೆಗೆ ಸಿಕ್ಕಿದೆ.!
ಹೌದು, ರೆಡ್‌ಮಿ ನೋಡ್ 5 ಮತ್ತು ರೆಡ್‌ಮಿ ನೋಟ್ 5 ಪ್ರೊ ಸ್ಮಾರ್ಟ್‌ಪೋನ್‌ಗಳಿಗಿಂತಲೂ ಅತ್ಯುತ್ತಮ ಫೀಚರ್ಸ್ ಹೊತ್ತು ರೆಡ್ ಮಿ ನೋಟ್ 6 ಸ್ಮಾರ್ಟ್‌ಪೋನ್ ಬಿಡುಗಡೆಯಾಗಲಿರುವ ಸುದ್ದಿ ಇದೀಗ ಹೊರಬಿದ್ದಿದೆ. ಈಗಾಗಲೇ ಲೀಕ್ ಆಗಿರುವ ಮಾಹಿತಿಯಂತೆ, ರೆಡ್‌ಮಿ ನೋಟ್ 6 ಸ್ಮಾರ್ಟ್‌ಪೋನಿನ ಫೀಚರ್ಸ್ ಮತ್ತು ಬೆಲೆ ಮಾಹಿತಿ ಮೊಬೈಲ್ ಮಾರುಕಟ್ಟೆಯನ್ನು ಅಲುಗಾಡಿಸಿದೆ.
1080 × 2160 ಪಿಕ್ಸೆಲ್ ರೆಸಲ್ಯೂಶನ್ ಹೊಂದಿರುವ 6.28-ಇಂಚಿನ ಪೂರ್ಣ HD + ಸ್ಯಾಮ್ಸಂಗ್ AMOLED ಡಿಸ್‌ಪ್ಲೇ ಇರುವುದನ್ನು ಈ ಬಾರಿಯ 'ರೆಡ್ ಮಿ ನೋಟ್ 6 'ಸ್ಮಾರ್ಟ್‌ಪೋನಿನಲ್ಲಿ ಬಹುತೇಕ ಖಚಿತಪಡಿಸಲಾಗಿದೆ. ಹಾಗಾದರೆ, 'ರೆಡ್ ಮಿ ನೋಟ್ 6 'ಸ್ಮಾರ್ಟ್‌ಪೋನ್ ಹೊಂದಿರಬಹುದಾದ ಲೀಕ್ ಆಗಿರುವ ಫೀಚರ್ಸ್ ಮತ್ತು ಬೆಲೆ ಮಾಹಿತಿಯನ್ನು ಮುಂದೆ ತಿಳಿಯಿರಿ.
ಸ್ಯಾಮ್ಸಂಗ್ AMOLED ಡಿಸ್‌ಪ್ಲೇ!
ಶಿಯೋಮಿ ಕಂಪೆನಿ ತನ್ನ ಸ್ಮಾರ್ಟ್‌ಪೋನ್‌ಗಳಲ್ಲಿ ಎಷ್ಟೇ ಅತ್ಯುನ್ನತ ಫೀಚರ್ಸ್ ನಿಡಿದರೂ ಗುಣಮಟ್ಟದ ಡಿಸ್‌ಪ್ಲೇಗಳನ್ನು ಒದಗಿಸುವಲ್ಲಿ ಹಿಂದೆಬಿದ್ದಿತ್ತು. ಹಾಗಾಗಿ, ಈ ಸ್ಯಾಮ್ಸಂಗ್ ಕಂಪೆನಿಯ AMOLED ಡಿಸ್‌ಪ್ಲೇಯನ್ನು 'ರೆಡ್ ಮಿ ನೋಟ್ 6' ಸ್ಮಾರ್ಟ್‌ಪೋನಿನಲ್ಲಿ ಪರಿಚಯಿಸುತ್ತಿದೆ. ಇದರಿಂದ ಶಿಯೋಮಿ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಗುಣಮಟ್ಟ ಕೂಡ ಹೆಚ್ಚಾಗಲಿದೆ.
ಡಿಸ್‌ಪ್ಲೇ ಮತ್ತು ವಿನ್ಯಾಸ!
ಮೊದಲೇ ಹೇಳಿದಂತೆ ರೆಡ್‌ಮಿ ನೋಟ್ 6 ಸ್ಮಾರ್ಟ್‌ಪೋನಿನಲ್ಲಿ, 18:9ರ ಬದಲಿಗೆ 19: 9 ಆಕಾರ ಅನುಪಾತದಲ್ಲಿ 1080 × 2160 ಪಿಕ್ಸೆಲ್ ರೆಸಲ್ಯೂಶನ್ ಹೊಂದಿರುವ 6.28-ಇಂಚಿನ ಪೂರ್ಣ HD + ಸ್ಯಾಮ್ಸಂಗ್ AMOLED ಡಿಸ್‌ಪ್ಲೇ ಇರಲಿದೆ. ಇನ್ನು ಹಿಂಬಾಗದಲ್ಲಿ ಫಿಂಗರ್‌ಪ್ರಿಂಟ್ ಆಯ್ಕೆ , ಡ್ಯಯಲ್ ಕ್ಯಾಮೆರಾ ಹಾಗೂ ನೋಚ್ ಡಿಸ್‌ಪ್ಲೇ ವಿನ್ಯಾಸವನ್ನು ನಾವು ಕಾಣಬಹುದಾಗಿದೆ.
ನಾಲ್ಕು ಕ್ಯಾಮೆರಾಗಳು!
ಇದೇ ಮೊದಲ ಬಾರಿಗೆ ಶಿಯೋಮಿ ಡ್ಯುಯಲ್ ಹಿಂಭಾಗದ ಸೆಟಪ್ ಮತ್ತು ಡ್ಯುಯಲ್ ಫ್ರಂಟ್ ಸೆನ್ಸಾರ್ ಕಾನ್ಫಿಗರೇಶನ್ ಅನ್ನು ಸೂಚಿಸುತ್ತಿದೆ. ಲೀಕ್ ಆಗಿರುವ ಮಾಹಿತಿಯಂತೆ, 'ರೆಡ್ ಮಿ ನೋಟ್ 6' ಸ್ಮಾರ್ಟ್‌ಪೋನ್ ಕ್ರಮವಾಗಿ 12MP + 5MP ರಿಯರ್ ಕ್ಯಾಮೆರಾಗಳು ಹಾಗೂ 20MP + 2MP ಸೆಲ್ಫಿ ಕ್ಯಾಮೆರಾಗಳನ್ನು ಹೊಂದಿರಲಿದೆ ಎಂದು ಹೇಳಲಾಗಿದೆ.
4000mAh ಬ್ಯಾಟರಿ!
ರೆಡ್‌ಮಿ ನೋಟ್ 6 ಪ್ರೋ ಸ್ಮಾರ್ಟ್‌ಫೋನಿನಲ್ಲಿ ಅತ್ಯುತ್ತಮ ಬ್ಯಾಟರಿ ಬ್ಯಾಕಪ್ ಅನ್ನು ಮೊಬೈಲ್ ಮಾರುಕಟ್ಟೆ ನಿರಿಕ್ಷಿಸಬಹುದಾಗಿದೆ. ಇತರೆ ಶಿಯೋಮಿ ಸ್ಮಾರ್ಟ್‌ಪೋನ್‌ಗಳಂತೆಯೇ ರೆಡ್‌ಮಿ ನೋಟ್ 6 ಪ್ರೋ ಸ್ಮಾರ್ಟ್‌ಪೋನ್ 4000mAh ಬ್ಯಾಟರಿ ಶಕ್ತಿಯನ್ನು ಹೊಂದಿರಲಿದೆ. ಎರಡು ದಿನಗಳ ಕಾಲ ಬ್ಯಾಟರಿ ಚಾರ್ಜ್ ಮಾಡದೇ ಬಳಕೆ ಮಾಡಬಹುದು ಎನ್ನಲಾಗಿದೆ.
ಪ್ರೊಸೆಸರ್ ಮತ್ತು RAM!
ಲೀಕ್ ಆಗಿರುವ ಮಾಹಿತಿಯಂತೆ, 'ರೆಡ್ ಮಿ ನೋಟ್ 6' ಸ್ಮಾರ್ಟ್‌ಪೋನಿನಲ್ಲಿ ಸ್ನಾಪ್‌ಡ್ರಾಗನ್ 636 ಪ್ರೊಸೆಸರ್ ಅನ್ನು ತರಲಾಗುತ್ತದೆ ಎಂದು ಹೇಳಲಾಗಿದೆ. ಇನ್ನು ಮೂರು ವೆರಿಯಂಟ್‌ಗಳಲ್ಲಿ ಸ್ಮಾರ್ಟ್‌ಫೋನ್ ಬಿಡುಗಡೆಯಾಗಲಿದ್ದು, 3GB, 4GB ಮತ್ತು 6GB RAM ವೆರಿಯಂಟ್‌ಗಳಲ್ಲಿ ರೆಡ್ ಮಿ ನೋಟ್ 6' ಮಾರುಕಟ್ಟೆಗೆ ಎಂಟ್ರಿ ನೀಡಲಿದೆ.
ನೋಟ್ 6 ಪ್ರೋ ಬೆಲೆ ಎಷ್ಟು?
ಗ್ಲೋಬಲ್ ಆವೃತ್ತಿ ಎಂದು ಪಟ್ಟಿ ಮಾಡಲಾಗಿರುವ 'ರೆಡ್ ಮಿ ನೋಟ್ 6' ಸ್ಮಾರ್ಟ್‌ಪೋನ್ ಬೆಲೆಯನ್ನು 193.99 (ರೂ 14,120 ಅಂದಾಜು) ಮತ್ತು $ 214.99 (ರೂ 15,648 ಅಂದಾಜು.) ನಡುವೆ ನಿಗದಿಪಡಿಸಲಾಗಿದೆ. .ಹೆಡ್‌ಫೋನ್, ಮಿ ಬ್ಯಾಂಡ್‌ನಂತಹ ಇತರ ಶಿಯೋಮಿ ಉತ್ಪನ್ನಗಳ ಸಂಗ್ರಹವನ್ನು ಸ್ಮಾರ್ಟ್‌ಪೋನ್ ಜೊತೆಗೆ ನೀಡಿ ಬೆಲೆ ನಿಗದಿಪಡಿಸಲಾಗುತ್ತದೆ.