Home
ಮೊಬೈಲ್

ಶಿಯೋಮಿ ರೆಡ್ಮಿ ನೋಟ್ 7 ಪ್ರೋ: ಖರೀದಿಸುವ ಮುನ್ನ ನೀವು ತಿಳಿದುಕೊಳ್ಳಬೇಕಾಗಿರುವ 5 ಅಂಶಗಳು

By Gizbot Bureau

ಶಿಯೋಮಿ ರೆಡ್ಮಿ ನೋಟ್ 7 ಪ್ರೋ ಇದೀಗ ಭಾರತದಲ್ಲಿ ಲಭ್ಯವಿದೆ. ರೆಡ್ಮಿ ನೋಟ್ 6 ಪ್ರೋ ಫೋನಿನ ಯಶಸ್ಸಿನ ಅವತರಣಿಕೆಗೆ ಶಿಯೋಮಿ ಸಂಸ್ಥೆ ಧನಾತ್ಮಕ ಪ್ರತಿಕ್ರಿಯೆಯನ್ನು ಪಡೆದಿದೆ. ಸೋನಿಯ IMX586 ಸೆನ್ಸರ್ ಗೆ 48-ಮೆಗಾಪಿಕ್ಸಲ್ ರೆಸಲ್ಯೂಷನ್ನಿನ ಗ್ರೇಡಿಯಂಟ್ ಡಿಸೈನಿನ ಜೊತೆಗೆ ರೆಡ್ಮಿ ನೋಟ್ 7 ಪ್ರೋ ಹೈ-ಎಂಡ್ ಫೀಚರ್ ಗಳನ್ನು ಹೊಂದಿದೆ.

ರೆಡ್ಮಿ ನೋಟ್ 7 ಪ್ರೋ: ಖರೀದಿಸುವ ಮುನ್ನ ನೀವು ತಿಳಿದುಕೊಳ್ಳಬೇಕಾಗಿರುವ 5 ಅಂಶಗಳು

ಶಿಯೋಮಿ ರೆಡ್ಮಿ ನೋಟ್ 7 ಪ್ರೋ ಮಾರ್ಚ್ 13 ರಿಂದ ಮಾರಾಟ ಪ್ರಕ್ರಿಯೆ ಆರಂಭವಾಗುತ್ತದೆ. ಈ ಸ್ಮಾರ್ಟ್ ಫೋನ್ ಎರಡು ವೇರಿಯಂಟ್ ನಲ್ಲಿ ಲಭ್ಯವಿದೆ. 4GB+64GB ಮತ್ತು 6GB+128GB, ಇದರ ಬೆಲೆ ಕ್ರಮವಾಗಿ Rs 13,999 ಮತ್ತು Rs 16,999.ಹೊಸದಾಗಿ ನೀವು ರೆಡ್ಮಿ ನೋಟ್ 7 ಪ್ರೋ ಖರೀದಿಸಬೇಕು ಎಂದು ಅಂದುಕೊಳ್ಳುತ್ತಿದ್ದರೆ ಖರೀದಿಯ ಮುನ್ನ ಈ ಅಂಶಗಳನ್ನು ತಿಳಿದುಕೊಳ್ಳಿ.

48-ಮೆಗಾಪಿಕ್ಸಲ್ ಕ್ಯಾಮರಾ

48-ಮೆಗಾಪಿಕ್ಸಲ್ ಕ್ಯಾಮರಾ

ರೆಡ್ಮಿ ನೋಟ್ 7 ಪ್ರೊ ದಲ್ಲಿರುವ 48 ಮೆಗಾಪಿಕ್ಸಲ್ ಕ್ಯಾಮರಾ ಬಗ್ಗೆ ಪ್ರತಿಯೊಬ್ಬರೂ ಕೂಡ ಮಾತನಾಡುತ್ತಿದ್ದಾರೆ. ಫೋನ್ ಡೀಫಾಲ್ಟ್ ಆಗಿ 12 ಮೆಗಾಪಿಕ್ಸಲ್ ರೆಸಲ್ಯೂಷನ್ ಗೆ ಸೆಟ್ ಆಗಿರುತ್ತದೆ. ಕ್ಯಾಮರಾ ರೆಸಲ್ಯೂಷನ್ ಹೆಚ್ಚಿಸಿಕೊಳ್ಳುವುದಕ್ಕೆ ಕ್ಯಾಮರಾ ಆಪ್ ನಲ್ಲಿರುವ ಮೆನು ಬಟನ್ ನ್ನು ಟ್ಯಾಪ್ ಮಾಡಿ ಮತ್ತು ನಂತರ 48 ಮೆಗಾಪಿಕ್ಸಲ್ ಕ್ಯಾಮರಾವನ್ನು ಟ್ಯಾಪ್ ಮಾಡಬೇಕು.

48 ಮೆಗಾಪಿಕ್ಸಲ್ ಕ್ಯಾಮರಾದಿಂದ ಏನಾದರೂ ಬದಲಾವಣೆ 9 ಎಂಬ ಪ್ರಶ್ನೆಗೆ ಉತ್ತರ ಹೌದು. ಆದರೆ ನಿಮ್ಮ ಫೋನ್ ಸ್ಕ್ರೀನಿನ ಕ್ವಾಲಿಟಿಯೂ ಕೂಡ ಅದರಲ್ಲಿ ಮ್ಯಾಟರ್ ಆಗುತ್ತದೆ ಎಂಬುದು ನಿಮಗೆ ತಿಳಿದಿರಲಿ. 48 ಮೆಗಾಪಿಕ್ಸಲ್ ನಲ್ಲಿ ತೆಗೆದ ಫೋಟೋ ಮತ್ತು 12 ಮೆಗಾಪಿಕ್ಸಲ್ ಕ್ಯಾಮರಾದಲ್ಲಿತೆಗೆದಿರುವ ಫೋಟೋ ವ್ಯತ್ಯಾಸವನ್ನು ಲ್ಯಾಪ್ ಟಾಪ್ ನಲ್ಲಿ ಫೋಟೋ ಗಮನಿಸುವಾಗ ಗೊತ್ತಾಗುತ್ತದೆ.

48 ಮೆಗಾಪಿಕ್ಸಲ್ ಕ್ಯಾಮರಾದಲ್ಲಿ ತೆಗೆದಿರುವ ಫೋಟೋ ದೊಡ್ಡ ಸೈಜ್ ನಲ್ಲೇನೂ ಇರುವುದಿಲ್ಲ. ಇದು 15-19ಎಂಬಿ ಸೈಜ್ ನಲ್ಲಿರುತ್ತದೆ. 12 ಮೆಗಾಪಿಕ್ಸಲ್ ನಲ್ಲಿ ತೆಗೆದ ಫೋಟೋ 6-8 ಎಂಬಿ ಸೈಜ್ ನಲ್ಲಿರುತ್ತದೆ.

ನೈಟ್-ಮೋಡ್

ನೈಟ್-ಮೋಡ್

48 ಮೆಗಾಪಿಕ್ಸಲ್ ನ ಕ್ಯಾಮರಾ ಶಿಯೋಮಿ ರೆಡ್ಮಿ ನೋಟ್ 7 ನ ಸ್ಟಾರ್ ಫೀಚರ್ ಆಗಿದ್ದರೂ ಕೂಡ ಸ್ಪೆಷಲ್ ಮೋಡ್ ಕೂಡ ಕಡಿಮೆ ಲೈಟಿನ ಫೋಟೋಗ್ರಫಿಗಾಗಿ ಇದರಲ್ಲಿ ಅಳವಡಿಸಲಾಗಿದೆ. ನೈಟ್ ಮೋಡ್ ಫೀಚರ್ ರಾತ್ರಿಯ ವೇಳೆಯಲ್ಲಿ ಅಥವಾ ಕಡಿಮೆ ಬೆಳಕಿನಲ್ಲಿ ಅತ್ಯುತ್ತಮ ಫೋಟೋ ಕ್ಲಿಕ್ಕಿಸುವುದಕ್ಕೆ ಸಹಾಯಕವಾಗಿದೆ.ಒನ್ ಪ್ಲಸ್ ಗಿಂತ ಇಮೇಜ್ ಪ್ರೊಸೆಸಿಂಗ್ ಇದರಲ್ಲಿ ವೇದವಾಗಿರುತ್ತದೆ.

ವೈಡ್ಲೈನ್ ಎಲ್1 ಸಪೋರ್ಟ್

ವೈಡ್ಲೈನ್ ಎಲ್1 ಸಪೋರ್ಟ್

ವೈಡ್ಲೈನ್ ಎಲ್ 1 ಸಪೋರ್ಟ್ ಇರುವುದರಿಂದಾಗಿ ನೆಟ್ ಫ್ಲಿಕ್ ಮತ್ತು ಅಮೇಜಾನ್ ಪ್ರೈಮ್ ವೀಡಿಯೋಗಳಲ್ಲಿ ಹೆಚ್ ಡಿ ಸ್ಟ್ರೀಮಿಂಗ್ ಗೆ ಅನುಕೂಲಕರವಾಗಿರುತ್ತದೆ. ಶಿಯೋಮಿ ಇತ್ತೀಚೆಗೆ ತನ್ನ ಪೋಕೋ ಎಸ್1 ಸ್ಮಾರ್ಟ್ ಫೋನ್ ನಲ್ಲಿ ಇದನ್ನು ಅಳವಡಿಸಿತ್ತು. ರೆಡ್ಮಿ ನೋಟ್ 7 ಪ್ರೋ ಕೂಡ ಈ ಫೀಚರ್ ನ್ನು ಹೊಂದಿದೆ. ಆದರೆ ನೆಟ್ ಫ್ಲಿಕ್ಸ್ ಮತ್ತು ಅಮೇಜಾನ್ ಪ್ರೈಮ್ ವೀಡಿಯೋಗಳು ಫೋನಿನಲ್ಲಿ ಇದುವರೆಗೂ ಹೆಚ್ ಡಿ ಸ್ಟ್ರೀಮಿಂಗ್ ಗೆ ಅವಕಾಶ ನೀಡುತ್ತಿಲ್ಲ. ಆದರೆ ಖಂಡಿತ ಮುಂದಿನ ದಿನಗಳಲ್ಲಿ ಇದು ಸಾಧ್ಯವಾಗಲಿದೆ ಎಂಬ ಭರವಸೆ ಇದೆ.

MIUI 10

MIUI 10

ಶಿಯೋಮಿ ರೆಡ್ಮಿ ನೋಟ್ 7 ಪ್ರೋ MIUI 10 ನಲ್ಲಿ ರನ್ ಆಗುತ್ತದೆ. ಶಿಯೋಮಿಯ ನೂತನ ಕಸ್ಟಮ್ ROM ನಿಂದಾಗಿ ಇದು ಫುಲ್ ಸ್ಕ್ರೀನ್ ಆಪ್ಟಿಮೈಸೇಷನ್ ಮತ್ತು ಮುಂದುವರಿದ ನೋಟಿಫಿಕೇಷನ್ ಪೆನಲ್ ನ್ನು ಹೊಂದಿದೆ.ನೂತನ ಸಾಫ್ಟ್ ವೇರ್ ಹಿಂದಿನ ಸಾಫ್ಟ್ ವೇರ್ ಗಿಂತಲೂ ಕಡಿಮೆ ತೂಕದ, ವೇಗದಿಂದ ಕೂಡಿದೆ. ಥರ್ಡ್ ಪಾರ್ಟಿ ಅಪ್ಲಿಕೇಷನ್ ಗೂ ಕೂಡ ಇದು ಆಪ್ಟಿಮೈಸೇಷನ್ ಹೊಂದಿದೆ ಎಂದು ಶಿಯೋಮಿ ತಿಳಿಸಿದೆ.

ವಾಟರ್-ರೆಸಿಸ್ಟೆಂಟ್

ವಾಟರ್-ರೆಸಿಸ್ಟೆಂಟ್

ಶಿಯೋಮಿ ರೆಡ್ಮಿ ನೋಟ್ 7 ಪ್ರೋ ಯಾವುದೇ ವಾಟರ್ ಮತ್ತು ಡಸ್ಟ್ ರೆಸ್ಟಿಸ್ಟೆಂಟ್ ಗಾಗಿ ಐಪಿ ಸರ್ಟಿಫಿಕೇಷನ್ ನ್ನು ಹೊಂದಿರುವುದಿಲ್ಲ.ಆದರೆ ಇದರಲ್ಲಿ P2i ನ್ಯಾನೋ ಕೋಟಿಂಗ್ ಇದೆ. ಇದು ಸ್ಪ್ಲಾಶ್ ಪ್ರೂಫ್ ಹೊಂದಿದೆ. ಇದು ಫೋನಿಗೆ ರಕ್ಷಣೆಯನ್ನು ನೀಡುತ್ತದೆ.

Best Mobiles in India

English summary
Xiaomi Redmi Note 7 Pro: 5 things you need to know before buying new phone
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+