ಮೊಟ್ಟ ಮೊದಲ 'ರೆಡ್‌ಮಿ ನೋಟ್ 7 ಪ್ರೊ' ಫ್ಲಾಶ್‌ಸೇಲ್ ಇಂದಿನಿಂದ ಆರಂಭ!!

|

ಭಾರತೀಯರ ಹೃದಯಬಡಿತವನ್ನು ಹೆಚ್ಚಿಸಿರುವ 'ಶಿಯೋಮಿ ರೆಡ್‌ಮಿ ನೋಟ್ 7 ಪ್ರೊ' ಸ್ಮಾರ್ಟ್‌ಪೋನಿನ ಮೊದಲ ಫ್ಲಾಶ್‌ಸೇಲ್ ಇಂದಿನಿಂದ ಆರಂಭವಾಗಲಿದೆ. ಚೀನಾ ಮೂಲದ ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಶಿಯೋಮಿ ಕಂಪೆನಿ ನೂತನವಾಗಿ ಪರಿಚಯಿಸಿರುವ ಶಿಯೋಮಿ ರೆಡ್ಮಿ ನೋಟ್ 7 ಮತ್ತು ಶಿಯೋಮಿ ರೆಡ್ಮಿ ನೋಟ್ 7 ಪ್ರೊ ಎರಡೂ ಮಾದರಿಗಳು ಬುಧವಾರ (13ನೇ ತಾರೀಖು) ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್, ಎಂಐ.ಹೋಮ್ ಮತ್ತು ಐಎಂ ಹೋಮ್ ಸ್ಟೋರ್ ಮೂಲಕ ದೊರೆಯಲಿವೆ.

ಕಳೆದ ವಾರ ಶಿಯೋಮಿ ರೆಡ್ಮಿ ನೋಟ್ 7 ಸ್ಮಾರ್ಟ್‌ಫೋನಿನ ಮೊದಲ ಫ್ಲ್ಯಾಶ್ ಸೇಲ್ ಆರಂಭವಾಗಿತ್ತು. ಇದೀಗ ಬುಧವಾರ ಮಧ್ಯಾಹ್ನ 12 ಗಂಟೆಗೆ ಶಿಯೋಮಿ ರೆಡ್ಮಿ ನೋಟ್ 7 ಪ್ರೊ ಜೊತೆಗೆ ಶಿಯೋಮಿ ರೆಡ್ಮಿ ನೋಟ್ 7 ಕೂಡ ಲಭ್ಯವಿದೆ. ಉಳಿದಂತೆ ಆರಂಭಿಕ ಕೊಡುಗೆಯಾಗಿ ಎಕ್ಸ್‌ಚೇಂಜ್ ಆಯ್ಕೆ, ಇಎಂಐ ಸೌಲಭ್ಯವೂ ಇದ್ದು, ಲಾಂಚ್ ಆಫರ್‌ಗಳಾಗಿ ಗ್ರಾಹಕರಿಗೆ 1120 GB Airtel 4G ಡಾಟಾ ಮತ್ತು ಉಚಿತ ಕರೆ ಆಫರ್ ದೊರೆಯಲಿದೆ. ಜತೆಗೆ ಆಕ್ಸಿಸ್ ಬ್ಯಾಂಕ್ ಗ್ರಾಹಕರು ಶೇ. 5 ದರಕಡಿತದ ಪ್ರಯೋಜನ ಪಡೆಯಬಹುದಾಗಿದೆ.

ಮೊಟ್ಟ ಮೊದಲ 'ರೆಡ್‌ಮಿ ನೋಟ್ 7 ಪ್ರೊ' ಫ್ಲಾಶ್‌ಸೇಲ್ ಇಂದಿನಿಂದ ಆರಂಭ!!

19.5:9 ಆಸ್ಪೆಕ್ಟ್ ರೇಷ್ಯೊದಲ್ಲಿ ಎಫ್‌ಹೆಚ್‌ಡಿ ಪ್ಲಸ್ ರೆಸಲ್ಯೂಶನ್ ಸಾಮರ್ಥ್ಯದ 6.3 ಇಂಚಿನ ಎಲ್‌ಟಿಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ, ಎರಡೂ ಭಾಗಗಳಲ್ಲಿ 2.D ಕರ್ವಡ್ ಗ್ಲಾಸ್ ಡಿಸೈನ್, ಗೋರಿಲಾ ಗ್ಲಾಸ್ 5 ಪ್ರೊಟೆಕ್ಷನ್‌ನೊಂದಿಗೆ ಶಿಯೋಮಿ ರೆಡ್ಮಿ ನೋಟ್ 7 ಪ್ರೊ ಬಿಡುಗಡೆಯಾದ ಬಳಿಕ ಮೊದಲ ಸೇಲ್ ಇದಾಗಿದ್ದು, ಭಾರತದಲ್ಲಿ ದಾಖಲೆಯನ್ನು ನಿರ್ಮಿಸಲು ತಯಾರಾಗಿದೆ. ಹಾಗಾದರೆ, ವಿಶ್ವದಲ್ಲೇ ಮೊದಲ ಬಾರಿಗೆ ಭಾರತದಲ್ಲಿ ಲಾಂಚ್ ಆಗಿರುವ 'ರೆಡ್‌ಮಿ ನೋಟ್ 7 ಪ್ರೊ' ವಿಶೇಷತೆಗಳು ಮತ್ತು ಬೆಲೆಗಳನ್ನು ಮುಂದೆ ಓದಿ ತಿಳಿಯಿರಿ.

'ರೆಡ್‌ಮಿ ನೋಟ್ 7 ಪ್ರೊ' ಡಿಸೈನ್

'ರೆಡ್‌ಮಿ ನೋಟ್ 7 ಪ್ರೊ' ಡಿಸೈನ್

ಈಗಾಗಲೇ ವಿಶ್ವ ಮಾರುಕಟ್ಟೆಗೆ ಕಾಲಿಟ್ಟಿರುವ ರೆಡ್‌ಮಿ ನೋಟ್ 7 ಮಾದರಿಯಲ್ಲೇ 'ರೆಡ್‌ಮಿ ನೋಟ್ 7 ಪ್ರೊ' ಸ್ಮಾರ್ಟ್‌ಫೋನ್ ವಿನ್ಯಾಸವನ್ನು ಹೊಂದಿದೆ ಎಂದು ಹೇಳಬಹುದು. ಹಿಂಬಾಗದಲ್ಲಿ ಡ್ಯುಯಲ್ ಕ್ಯಾಮೆರಾ ಮತ್ತು ಫಿಂಗರ್‌ಪ್ರಿಂಟ್ ಆಯ್ಕೆಯ ಡಿಸೈನ್ ಹೊಂದಿರುವ ಸ್ಮಾರ್ಟ್‌ಪೋನ್ ಎರಡೂ ಭಾಗಗಳಲ್ಲಿ 2.D ಕರ್ವಡ್ ಗ್ಲಾಸ್ ಡಿಸೈನ್ ಹೊಂದಿರುವುದು ವಿಶೇಷ ಎನ್ನಬಹುದು.

'ರೆಡ್‌ಮಿ ನೋಟ್ 7 ಪ್ರೊ' ಡಿಸ್‌ಪ್ಲೇ.

'ರೆಡ್‌ಮಿ ನೋಟ್ 7 ಪ್ರೊ' ಡಿಸ್‌ಪ್ಲೇ.

'ರೆಡ್‌ಮಿ ನೋಟ್ 7 ಪ್ರೊ' ಸ್ಮಾರ್ಟ್‌ಫೋನ್ FHD + ರೆಸಲ್ಯೂಶನ್ ಮತ್ತು 19.5:9ರ ಆಕಾರ ಅನುಪಾತದೊಂದಿಗೆ 6.3-ಇಂಚಿನ LTPS ಎಲ್‌ಸಿಡಿ ಪ್ರದರ್ಶನದೊಂದಿಗೆ ಬಿಡುಗಡೆಯಾಗಿದೆ. ಕಣ್ಣಿನ ಒತ್ತಡವನ್ನು ತಪ್ಪಿಸಲು ಸನ್‌ಲೈಟ್ ಡಿಸ್‌ಪ್ಲೇ ಮತ್ತು ಓದುವಿಕೆ ವಿಶೇಷ ಮೋಡ್ ಅನ್ನು ಹೊಂದಿರುವ ಫೋನ್ ಭಾಗಶಃ ಪೂರ್ಣ ಪ್ರಮಾಣದ ಸ್ಕ್ರೀನ್ ಡಿಸ್‌ಪ್ಲೇಯಂತೆ ಹೊಂದಿದೆ.

'ರೆಡ್‌ಮಿ ನೋಟ್ 7 ಪ್ರೊ' ಪ್ರೊಸೆಸರ್ಆಕ್ಟಕೋರ್ ಸ್ನಾಪ್‌ಡ್ರಾಗನ್ 675 SoC ಪ್ರೊಸೆಸರ್ ಜೊತೆಗೆ 6GB LPDDR4X RAM ಮತ್ತು 128GB ಆಂತರಿಕ ಮೆಮೊರಿಯನ್ನು 'ರೆಡ್‌ಮಿ ನೋಟ್ 7 ಪ್ರೊ'ನಲ್ಲಿ ನೋಡಬಹುದು. ರೆಡ್‌ಮಿ ಫೋನಿನಲ್ಲಿ ಇದೇ ಮೊದಲ ಬಾರಿಗೆ 128GB ಮೆಮೊರಿಯನ್ನು ತರಲಾಗಿದ್ದು, ಅಡ್ರಿನೋ 612 ಜಿಪಿಯು ಜೊತೆಗೆ MIUI 10 ಟಾಪ್ ಆಂಡ್ರಾಯ್ಡ್ ಪೈನಲ್ಲಿ ಸ್ಮಾರ್ಟ್‌ ಕಾರ್ಯನಿರ್ವಹಣೆ ನೀಡಲಿದೆ.

'ರೆಡ್‌ಮಿ ನೋಟ್ 7 ಪ್ರೊ' ಪ್ರೊಸೆಸರ್ಆಕ್ಟಕೋರ್ ಸ್ನಾಪ್‌ಡ್ರಾಗನ್ 675 SoC ಪ್ರೊಸೆಸರ್ ಜೊತೆಗೆ 6GB LPDDR4X RAM ಮತ್ತು 128GB ಆಂತರಿಕ ಮೆಮೊರಿಯನ್ನು 'ರೆಡ್‌ಮಿ ನೋಟ್ 7 ಪ್ರೊ'ನಲ್ಲಿ ನೋಡಬಹುದು. ರೆಡ್‌ಮಿ ಫೋನಿನಲ್ಲಿ ಇದೇ ಮೊದಲ ಬಾರಿಗೆ 128GB ಮೆಮೊರಿಯನ್ನು ತರಲಾಗಿದ್ದು, ಅಡ್ರಿನೋ 612 ಜಿಪಿಯು ಜೊತೆಗೆ MIUI 10 ಟಾಪ್ ಆಂಡ್ರಾಯ್ಡ್ ಪೈನಲ್ಲಿ ಸ್ಮಾರ್ಟ್‌ ಕಾರ್ಯನಿರ್ವಹಣೆ ನೀಡಲಿದೆ.

ಆಕ್ಟಕೋರ್ ಸ್ನಾಪ್‌ಡ್ರಾಗನ್ 675 SoC ಪ್ರೊಸೆಸರ್ ಜೊತೆಗೆ 6GB LPDDR4X RAM ಮತ್ತು 128GB ಆಂತರಿಕ ಮೆಮೊರಿಯನ್ನು 'ರೆಡ್‌ಮಿ ನೋಟ್ 7 ಪ್ರೊ'ನಲ್ಲಿ ನೋಡಬಹುದು. ರೆಡ್‌ಮಿ ಫೋನಿನಲ್ಲಿ ಇದೇ ಮೊದಲ ಬಾರಿಗೆ 128GB ಮೆಮೊರಿಯನ್ನು ತರಲಾಗಿದ್ದು, ಅಡ್ರಿನೋ 612 ಜಿಪಿಯು ಜೊತೆಗೆ MIUI 10 ಟಾಪ್ ಆಂಡ್ರಾಯ್ಡ್ ಪೈನಲ್ಲಿ ಸ್ಮಾರ್ಟ್‌ ಕಾರ್ಯನಿರ್ವಹಣೆ ನೀಡಲಿದೆ.

'ರೆಡ್‌ಮಿ ನೋಟ್ 7 ಪ್ರೊ' ರಿಯರ್ ಕ್ಯಾಮೆರಾ

'ರೆಡ್‌ಮಿ ನೋಟ್ 7 ಪ್ರೊ' ರಿಯರ್ ಕ್ಯಾಮೆರಾ

ರೆಡ್‌ಮಿ ನೋಟ್ 7 ಪ್ರೊನಲ್ಲಿ 48MP ಪ್ರಾಥಮಿಕ ಸಂವೇದಕ ಮತ್ತು 5 MP ಸೆಕೆಂಡರಿ ಸಂವೇದಕಗಳನ್ನು ನೀಡಲಾಗಿದೆ. 48MP ಕ್ಯಾಮರಾವು ಸೋನಿ IMX586 ಸಂವೇದಕವನ್ನು ಬಳಸುತ್ತಿದ್ದು, ಇದು ಸ್ಮಾರ್ಟ್ಫೋನ್ಗಳಿಗಾಗಿ ಅತ್ಯುನ್ನತ ರೆಸಲ್ಯೂಶನ್ ಸಂವೇದಕವಾಗಿದ್ದು ಉತ್ತಮ ಫೋಟೋಗಳಿಗಾಗಿ 4x ಡೈನಾಮಿಕ್ ಶ್ರೇಣಿಯನ್ನು ಬೆಂಬಲಿಸಲಿದೆ.

'ರೆಡ್‌ಮಿ ನೋಟ್ 7 ಪ್ರೊ' ಕ್ಯಾಮೆರಾ ತಂತ್ರಜ್ಞಾನ!

'ರೆಡ್‌ಮಿ ನೋಟ್ 7 ಪ್ರೊ' ಕ್ಯಾಮೆರಾ ತಂತ್ರಜ್ಞಾನ!

ರೆಡ್‌ಮಿ ನೋಟ್ 7 ಪ್ರೊ ಸಂವೇದಕವು 4 ಪಿಕ್ಸೆಲ್‌ಗಳನ್ನು 1 ಸೂಪರ್ ಪಿಕ್ಸೆಲ್‌ಗೆ ವಿಲೀನಗೊಳಿಸುವ ಮೂಲ ಕಡಿಮೆ ಬೆಳಕಿನಲ್ಲೂ ಅತ್ಯುತ್ತಮ ಚಿತ್ರಗಳನ್ನು ಚಿತ್ರಿಸಲಿದೆ. ಕೃತಕ ಬುದ್ದಿಮತ್ತೆ ಸಹಾಯದಿಂದ ರಾತ್ರಿ ಸಮಯದಲ್ಲೂ ಛಾಯಾಗ್ರಹಣಕ್ಕೆ ಶಕ್ತವಾಗಿದೆ. AI ಪೋರ್ಟ್ರೇಟ್ 2.0 ಹೊಂದಿರುವ ಕ್ಯಾಮೆರಾ ಬೊಕೆ ಚಿತ್ರಗಳು, 4K ವೀಡಿಯೋ ರೆಕಾರ್ಡಿಂಗ್ ಫೀಚರ್ಸ್ ಹೊಂದಿದೆ

'ರೆಡ್‌ಮಿ ನೋಟ್ 7 ಪ್ರೊ' ಸೆಲ್ಫೀ ಕ್ಯಾಮೆರಾ!

'ರೆಡ್‌ಮಿ ನೋಟ್ 7 ಪ್ರೊ' ಸೆಲ್ಫೀ ಕ್ಯಾಮೆರಾ!

'ರೆಡ್‌ಮಿ ನೋಟ್ 7 ಪ್ರೊ' ಸ್ಮಾರ್ಟ್‌ಫೋನಿನಲ್ಲಿ 13 ಎಂಪಿ ಎಐ ಸೆಲ್ಫಿ ಕ್ಯಾಮರಾವನ್ನು ಹೊಂದಿದೆ. ಎಐ ಭಾವಚಿತ್ರ ಸೆಲ್ಫಿ, ಸ್ಟುಡಿಯೋ ಲೈಟಿಂಗ್ ಸೆಲ್ಫಿ, ಎಐ ಫೇಸ್ ಅನ್ಲಾಕ್, ಎಐ ಬ್ಯೂಟಿಗಳೊಂದಿಗೆ 13 ಎಂಪಿ ಎಐ ಸೆಲ್ಫ್ ಕ್ಯಾಮರಾ ಅದ್ಬುತವಾಗಿದೆ. ನಿರ್ದಿಷ್ಟ ಆಪ್ಟಿಮೈಸೇಶನ್ಗಳೊಂದಿಗೆ AI ದೃಶ್ಯ ಪತ್ತೆಹಚ್ಚುವಿಕೆ ತಂತ್ರಜ್ಞಾನ ಹೊಂದಿರುವುದು ಇದರ ವಿಶೇಷತೆ.

'ರೆಡ್‌ಮಿ ನೋಟ್ 7 ಪ್ರೊ' ಬ್ಯಾಟರಿ

'ರೆಡ್‌ಮಿ ನೋಟ್ 7 ಪ್ರೊ' ಬ್ಯಾಟರಿ

'ರೆಡ್‌ಮಿ ನೋಟ್ 7 ಪ್ರೊ' ಸ್ಮಾರ್ಟ್‌ಪೋನಿನಲ್ಲಿ ಎರಡು ದಿನಗಳ ಬ್ಯಾಟರಿ ಬಾಳಿಕೆ ಬರುವಂತಹ 4000mAh ಸಾಮರ್ಥ್ಯದ ಬಿಗ್ ಬ್ಯಾಟರಿಯನ್ನು ನೀಡಲಾಗಿದೆ. ಇದು ವೇಗವಾಗಿ ಚಾರ್ಜಿಂಗ್ ಆಗಲು ಕ್ವಾಲ್ಕಾಮ್ ಕ್ವಿಕ್ ಚಾರ್ಜ್ 4.0 ಅನ್ನು ಬೆಂಬಲಿಸುತ್ತದೆ ಎಂದು ಶಿಯೋಮಿ ತಿಳಿಸಿದೆ. ಶಿಯೋಮಿ ರೆಡ್‌ಮಿ ನೋಟ್ 6 ನಲ್ಲಿ ಕ್ವಿಕ್ ಚಾರ್ಜ್ 3.0 ತಂದಿದನ್ನು ನಾವಿಲ್ಲಿ ನೋಡಬಹುದು.

'ರೆಡ್‌ಮಿ ನೋಟ್ 7 ಪ್ರೊ' ಇತರೆ ಫೀಚರ್ಸ್

'ರೆಡ್‌ಮಿ ನೋಟ್ 7 ಪ್ರೊ' ಇತರೆ ಫೀಚರ್ಸ್

ಅಂಟುಂಟು ಬೆಂಚ್‌ಮಾರ್ಕ್ನಲ್ಲಿ 180,808 ರಷ್ಟು ಸ್ಕೋರ್ ಮಾಡಿರುವ 'ರೆಡ್‌ಮಿ ನೋಟ್ 7 ಪ್ರೊ' ಡ್ಯುಯಲ್ ವೋಲ್ಟ್ ಸಿಮ್ ಸಪೋರ್ಟ್ ಮಾಡಲಿದೆ. ಇನ್ನುಳಿದಂತೆ 3.5mm ಜಾಕ್, ಫೇಸ್‌ಲಾಕ್, ಸ್ಟೂಡಿಯೋ ಲೈಟಿಂಗ್, 8 ಯುನಿಕ್ ಎಫೆಕ್ಟ್ ಕ್ಯಾಮೆರಾ ತಂತ್ರಜ್ಞಾನಗಳು, 4k ವಿಡಿಯೋ ರೆಕಾರ್ಡಿಂಗ್, ಹೆವಿ ಗೇಮಿಗ್‌ಗಾಗಿ ಅಡ್ರಿನೋ 612 ಜಿಪಿಯುಗಳನ್ನು ಹೊಂದಿದೆ.

'ರೆಡ್‌ಮಿ ನೋಟ್ 7 ಪ್ರೊ' ಬೆಲೆಗಳು

'ರೆಡ್‌ಮಿ ನೋಟ್ 7 ಪ್ರೊ' ಬೆಲೆಗಳು

'ರೆಡ್‌ಮಿ ನೋಟ್ 7 ಪ್ರೊ' ಸ್ಮಾರ್ಟ್‌ಫೋನ್ ಎರಡು ವೆರಿಯಂಟ್‌ಗಳಲ್ಲಿ ಮೊಬೈಲ್ ಮಾರುಕಟ್ಟೆಗೆ ಲಾಂಚ್ ಆಗಿದ್ದು, 4GB RAM ಮತ್ತು 64GB ಆಂತರಿಕ ಮೆಮೊರಿಯನ್ನು ಹೊಂದಿರುವ 'ರೆಡ್‌ಮಿ ನೋಟ್ 7 ಪ್ರೊ' ಫೋನಿನ ಬೆಲೆ 13,999 ರೂ.ಗಳಾಗಿವೆ. ಹಾಗೆಯೇ, 6GB RAM ಮತ್ತು 128GB ಆಂತರಿಕ ಮೆಮೊರಿಯ ನೋಟ್ 7 ಪ್ರೊ ಫೋನ್ ಬೆಲೆ 16,999 ರೂ.ಗಳಾಗಿವೆ.

Best Mobiles in India

English summary
Xiaomi Redmi Note 7 Pro first sale on Wednesday: Price in India, launch offers, and specifications. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X