ಶ್ಯೋಮಿ ರೆಡ್ಮೀ ನೋಟ್ ಮತ್ತು ನೆಕ್ಸಸ್ 6 ಭಿನ್ನತೆ ಏನು?

Posted By:

ಸ್ವಲ್ಪ ದಿನಗಳ ಹಿಂದೆ, ಸ್ಮಾರ್ಟ್‌ಫೋನ್ ಎಂಬ ಪದದ ಅರ್ಥವೇ ಯಾರಿಗೂ ತಿಳಿದಿರಲಿಲ್ಲ. ಆ ಸಮಯದಲ್ಲಿ ನೋಕಿಯಾದಂತಹ ಫೀಚರ್ ಫೋನ್‌ಗಳು ಅಸಾಮಾನ್ಯ ಪರಿಣಾಮವನ್ನು ಗ್ರಾಹಕರ ಮೇಲೆ ಬೀರಿದ್ದವು. ಆದರೆ ಈಗ ಮಾರುಕಟ್ಟೆಗೆ ಭಿನ್ನ ಭಿನ್ನ ಬೆಲೆಯ ಫೋನ್‌ಗಳು ಅಡಿ ಇಡುತ್ತಿದ್ದು ಗ್ರಾಹಕರ ಮನಸ್ಸಿಗೆ ಈ ಫೋನ್‌ಗಳು ಮಾಡಿರುವ ಮೋಡಿ ಅದ್ಭುತವಾಗಿದೆ.

(ಇದನ್ನೂ ಓದಿ: ರೆಡ್ಮೀ ನೋಟ್ ಮುಂಗಡ ಕಾಯ್ದಿರಿಸಿ ಅದೃಷ್ಟಶಾಲಿಗಳು ನೀವಾಗಿ)

ಇನ್ನು ಮಾರುಕಟ್ಟೆಗೆ ಇದೀಗ ಅಡಿ ಇಟ್ಟಿರುವ ರೆಡ್ಮೀ ನೋಟ್ ಬಗ್ಗೆ ಮಾತನಾಡುವುದಾದರೆ ನಿಜಕ್ಕೂ ಇದು ಗ್ರಾಹಕರ ಮನಗೆಲ್ಲುವ ಎಲ್ಲಾ ಲಕ್ಷಣಗಳೊಂದಿಗೆ ಬಂದಿದೆ. ಮೋಟೋರೋಲಾದ ಗೂಗಲ್ ನೆಕ್ಸಸ್ 6 ಇನ್ನು ಮಾರುಕಟ್ಟೆಗೆ ಬರುತ್ತಿದ್ದು ಈ ಎರಡೂ ಡಿವೈಸ್‌ಗಳು ಅದರ ವಿಶೇಷತೆ ಮತ್ತು ಲಕ್ಷಣಗಳೊಂದಿಗೆ ಭಿನ್ನವಾಗಿ ನಿಂತಿವೆ.

ಹಾಗಿದ್ದರೆ ಇಂದಿನ ಲೇಖನದಲ್ಲಿ ಈ ಎರಡೂ ಫೋನ್‌ಗಳ ನಡುವಿನ ಭಿನ್ನತೆಯನ್ನು ಗಮನಿಸೋಣ. ಒಂದಕ್ಕಿಂತ ಒಂದು ಫೋನ್ ವಿಶೇಷವಾಗಿದ್ದು ನಿಜಕ್ಕೂ ಅತಿ ಕಮಾಲಿನದ್ದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಶ್ಯೋಮಿ ರೆಡ್ಮೀ ನೋಟ್ ಹಾಗೂ ಗೂಗಲ್ ನೆಕ್ಸಸ್ 6 : ಆಪರೇಟಿಂಗ್ ಸಿಸ್ಟಮ್

#1

ಈ ಎರಡೂ ಫೋನ್‌ಗಳು ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಚಾಲನೆಯಾಗುತ್ತಿವೆ. ರೆಡ್ಮೀ ನೋಟ್ ಆಂಡ್ರಾಯ್ಡ್ ಜೆಲ್ಲಿಬೀನ್ ಜೊತೆಗೆ ಬಂದಿದ್ದು, ಗೂಗಲ್ ನೆಕ್ಸಸ್ 6 ಅತ್ಯಾಧುನಿಕ ಆಂಡ್ರಾಯ್ಡ್ ಲಾಲಿಪಪ್ ಓಎಸ್‌ನೊಂದಿಗೆ ಬಂದಿದೆ. ಇನ್ನು ನೋಟ್‌ನ 4ಜಿ ಆವೃತ್ತಿ ಆಂಡ್ರಾಯ್ಡ್ ಕಿಟ್‌ಕ್ಯಾಟ್‌ನೊಂದಿಗೆ ಬರುತ್ತಿದೆ.

ಶ್ಯೋಮಿ ರೆಡ್ಮೀ ನೋಟ್ ಹಾಗೂ ಗೂಗಲ್ ನೆಕ್ಸಸ್ 6 : ಡಿಸ್‌ಪ್ಲೇ ಮತ್ತು ಡೈಮೆನ್ಶನ್

#2

ಶ್ಯೋಮಿ ರೆಡ್ಮೀ ನೋಟ್ 5.5 ಇಂಚಿನ ಐಪಿಎಸ್ ಎಲ್‌ಸಿಡಿ ಜೊತೆಗೆ ಬಂದಿದ್ದು ಕ್ಯಾಪಸಿಟೀವ್ ಟಚ್ ಸ್ಕ್ರೀನ್‌ನೊಂದಿಗೆ ಬಂದಿದೆ. 1280 x 720 ಪಿಕ್ಸೆಲ್‌ಗಳ ರೆಸಲ್ಯೂಶನ್ ಡಿವೈಸ್‌ನಲ್ಲಿದೆ. ಇನ್ನು ಫೋನ್‌ನ ಅಳತೆ 154 x 78.7 x 9.5 ವರೆಗೆ ಇದೆ ಮತ್ತು ಇದರ ತೂಕ 199 ಗ್ರಾಮ್ ಆಗಿದೆ.

ಶ್ಯೋಮಿ ರೆಡ್ಮೀ ನೋಟ್ ಹಾಗೂ ಗೂಗಲ್ ನೆಕ್ಸಸ್ 6: ಕ್ಯಾಮೆರಾ

#3

ಶ್ಯೋಮಿ ರೆಡ್ಮೀ ನೋಟ್ ಕ್ಯಾಮೆರಾದ ವಿಷಯದಲ್ಲಿ ಅತಿ ಮಜಬೂತಾಗಿದ್ದು ಇದು 4128 x 3096 ಪಿಕ್ಸೆಲ್‌ಗಳೊಂದಿಗೆ ಬಂದಿದೆ, ಆಟೋಫೋಕಸ್ ಮತ್ತು ಎಲ್‌ಇಡಿ ಫ್ಲ್ಯಾಶ್ ಅನ್ನು ಫೋನ್ ಒಳಗೊಂಡಿದೆ. ಇನ್ನು ಫೋನ್‌ನ ಮುಂಭಾಗದಲ್ಲಿ 2 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನಾವು ಕಾಣಬಹುದು.

ಶ್ಯೋಮಿ ರೆಡ್ಮೀ ನೋಟ್ ಹಾಗೂ ಗೂಗಲ್ ನೆಕ್ಸಸ್ 6: ಪ್ರೊಸೆಸರ್

#4

1.7GHZ ಓಕ್ಟಾ ಕೋರ್ ಕೋರ್ಟೆಕ್ಸ್ A - 7 ಪ್ರೊಸೆಸರ್ ಜೊತೆಗೆ ಬಂದಿದ್ದು, ನೆಕ್ಸಸ್ 6 2.7 GHZ ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 805 ಪ್ರೊಸೆಸರ್ ಜೊತೆಗೆ ಬಂದಿದೆ.

ಶ್ಯೋಮಿ ರೆಡ್ಮೀ ನೋಟ್ ಹಾಗೂ ಗೂಗಲ್ ನೆಕ್ಸಸ್ 6: ಸಂಗ್ರಹಣೆ ಮತ್ತು RAM

#5

ಶ್ಯೋಮಿ ರೆಡ್ಮೀ ನೋಟ್, 2 ಜಿಬಿ RAM ಜೊತೆಗೆ ಬಂದಿದೆ ಇದು 8ಜಿಬಿ ಸಂಗ್ರಹಣೆಯನ್ನು ಪಡೆದುಕೊಂಡಿದೆ. ಇದನ್ನು 32ಜಿಬಿಗೆ ವಿಸ್ತರಿಸಬಹುದಾಗಿದೆ.

ಶ್ಯೋಮಿ ರೆಡ್ಮೀ ನೋಟ್ ಹಾಗೂ ಗೂಗಲ್ ನೆಕ್ಸಸ್ 6: ಬ್ಯಾಟರಿ

#6

ಶ್ಯೋಮಿ ರೆಡ್ಮೀ ನೋಟ್ 3200 mAh ಬ್ಯಾಟರಿಯೊಂದಿಗೆ ಬಂದಿದ್ದು, ನೆಕ್ಸಸ್ 6 ಶಕ್ತಿಯುತವಾದ 3220 mAh ಬ್ಯಾಟರಿಯೊಂದಿಗೆ ಬಂದಿದೆ.

ಶ್ಯೋಮಿ ರೆಡ್ಮೀ ನೋಟ್ ಹಾಗೂ ಗೂಗಲ್ ನೆಕ್ಸಸ್ 6: ಬೆಲೆ

#7

ಶ್ಯೋಮಿ ರೆಡ್ಮೀ ನೋಟ್ 8,999 ನೊಂದಿಗೆ ಬಂದಿದ್ದು, ಗೂಗಲ್ ನೆಕ್ಸಸ್ 6 ಬೆಲೆ ರೂ 44,000 ಆಗಿದೆ. 32ಜಿಬಿ ಮತ್ತು 64ಜಿಬಿ ಸಂಗ್ರಹಣೆಯು 49,000 ನೊಂದಿಗೆ ಬಂದಿದೆ.

ಶ್ಯೋಮಿ ರೆಡ್ಮೀ ನೋಟ್ ಹಾಗೂ ಗೂಗಲ್ ನೆಕ್ಸಸ್ 6: ತುಲನೆ

#8

ಶ್ಯೋಮಿ ಫ್ಯಾಬ್ಲೆಟ್ ಮತ್ತು ನೆಕ್ಸಸ್ 6 ಅತ್ಯುತ್ತಮ ಫೋನ್‌ಗಳಾಗಿದ್ದು ಬೆಲೆಯ ವಿಷಯದಲ್ಲೂ ಇದು ಮನವನ್ನು ಕದಿಯುವಂತಿದೆ.ಸ್ಥಳೀಯ ಮಾರುಕಟ್ಟೆಯನ್ನು ಗಮನಿಸಿದಾಗ ಈ ಎರಡೂ ಡಿವೈಸ್‌ಗಳ ಬೆಲೆ ನಿಜಕ್ಕೂ ಉತ್ತಮ ಎಂದೆನಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Even a few years ago, nobody was associated with the term smartphones. At that time, feature phones ruled the roost with Nokia making most out of it. Since then, however, the market has evolved in a monster and now offers several different phones at different price tags.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot