ಶಿಯೋಮಿ 'ರೆಡ್‌ಮಿ ನೋಟ್ 4 'ಬಳಕೆದಾರರಿಗೆ ಬಂಪರ್ ಗಿಫ್ಟ್!!..ಈಗಲೇ ಫೋನ್ ಅಪ್‌ಡೇಟ್ ಮಾಡಿ!!

Written By:

ಅತ್ಯಂತ ಕಡಿಮೆ ಬೆಲೆಗೆ ಅತ್ಯುತ್ತಮ ಸ್ಮಾರ್ಟ್‌ಫೋನ್ ಎಂಬ ಪಟ್ಟ ಪಡೆದಿರುವ ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಶಿಯೋಮಿ ಮತ್ತೊಂದು ಸಿಹಿಸುದ್ದಿ ನೀಡಿದೆ.! ಭಾರತದಲ್ಲಿಯೇ ಅತ್ಯಂತ ಹೆಚ್ಚು ಸೇಲ್ ಆಗಿರುವ ನಂಬರ್ ಒನ್ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಹೊಸ ಅಪ್‌ಡೇಟ್ ಅನ್ನು ಶಿಯೋಮಿ ಬಿಡುಗಡೆ ಮಾಡಿದೆ.!!

ಶಿಯೋಮಿ ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್ ಸ್ಗನ್ಯಾಪ್‌ಡ್ರಾಗನ್ ವೆರಿಯಂಟ್‌ಗಾಗಿ "MIUI 9 ಗ್ಲೋಬಲ್ ಸ್ಟೇಬಲ್ ರಾಮ್ V9.2.1.0" ಅಪ್‌ಡೇಟ್ ಬಿಡುಗಡೆಯಾಗಿದೆ. ಈ ಅಪ್‌ಡೇಟ್ ಮೈ ಮೂವರ್ ಆಪ್ಲಿಕೇಷನ್ ಅನ್ನು ಸಹ ಬಿಡುಗಡೆಮಾಡಿದ್ದು, ಈ ಮೊದಲು ಫೋನಿನಲ್ಲಿದ್ದ ಹಲವಾರು ದೋಷಗಳನ್ನು ಈ ಅಪ್‌ಡೇಟ್ ಪರಿಹಾರ ಮಾಡಲಿದೆ.!!

ಶಿಯೋಮಿ 'ರೆಡ್‌ಮಿ ನೋಟ್ 4 'ಬಳಕೆದಾರರಿಗೆ ಬಂಪರ್ ಗಿಫ್ಟ್!!

ಮೊದಲು NRD90M ನಂಬರ್ ನಿರ್ಮಿತ ಅಪ್‌ಡೇಟ್ ಪಡೆದಿದ್ದ ರೆಡ್‌ಮಿ ನೋಟ್ 4 ಇದೀಗ NCFMIEK ನಂಬರ್ ನಿರ್ಮಿತ ಅಪ್‌ಡೇಟ್‌ಗೆ ಬದಲಾಗಿದ್ದು, ಹಾಗಾದರೆ, "MIUI 9 ಗ್ಲೋಬಲ್ ಸ್ಟೇಬಲ್ ರಾಮ್ V9.2.1.0" ಅಪ್‌ಡೇಟ್ ಪಡೆದರೆ ಗ್ರಾಹಕರಿಗೆ ಏನೆಲ್ಲಾ ಸೌಲಭ್ಯಗಳು ದೊರೆಯಲಿವೆ? ಮತ್ತು ಅವುಗಳ ವಿಶೇಷತೆ ಏನು ಎಂಬದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೆಡ್‌ಮಿ ನೋಟ್ 4 ನಲ್ಲಿರೋ ಈ ಫೀಚರ್ಸ್ ಯಾರೂ ಬಳಸುತ್ತಿಲ್ಲ.!!
ಬ್ಯಾಕಪ್‌ನಲ್ಲಿ ಹೊಸ ಆಯ್ಕೆ!!

ಬ್ಯಾಕಪ್‌ನಲ್ಲಿ ಹೊಸ ಆಯ್ಕೆ!!

ಹೊಸ ಅಪ್‌ಡೇಟ್‌ನಲ್ಲಿ ಮಿ ಮೂವರ್ಸ ಸಹಾಯದಿಂದ ನಿಮ್ಮ ಕಾಂಟ್ಯಾಕ್ಟ್‌ಗಳು, ಫೋಟೋಗಳು ಮತ್ತು ವೀಡಿಯೊಗಳನ್ನು ಆಪಲ್ ಐ ಕ್ಲೌಡ್‌ನಿಂದ ರೆಡ್‌ಮಿ ನೋಟ್ 4ಫೋನ್‌ಗಳಿಗೆ ಸರಾಗವಾಗಿ ಆಮದು ಮಾಡಲು ಸಾಧ್ಯವಾಗುವ ಆಯ್ಕೆಯನ್ನು ನೀಡಲಾಗಿದೆ.!!

 ಆಪ್‌ ಲಾಕ್ ಅಪ್‌ಡೇಟ್.!!

ಆಪ್‌ ಲಾಕ್ ಅಪ್‌ಡೇಟ್.!!

ಆಯ್ದ ಆಪ್‌ಗಳಿಂದ ಸಂದೇಶಗಳನ್ನು ಮರೆಮಾಡಲು ನೂತನ ಆಪ್‌ಡೇಟ್ ಅಪ್ಲಿಕೇಶನ್ ಲಾಕ್ ಬೆಂಬಲಿಸುತ್ತದೆ ಮತ್ತು ಆಪ್‌ಲಾಕ್ ಬಳಕೆಯಲ್ಲಿ ಹೆಚ್ಚಿನ ಸೆಕ್ಯುರಿಟಿ ಅಂಶಗಳನ್ನು ಸೇರತಿಸಲಾಗಿದೆ. ಇದರಿಂದ ರೆಡ್‌ಮಿ ನೋಟ್ ಬಳಕೆದಾರರು ಇದುವರೆಗೂ ಆಪ್‌ಲಾಕ್‌ನಲ್ಲಿ ಎದುರಿಸುತ್ತಿದ್ದ ಬಹುಮುಖ್ಯ ಸಮಸ್ಯೆಯೊಂದು ದೂರವಾಗಲಿದೆ.!

ಹೋಮ್ ಸ್ಕ್ರೀನ್ ಬದಲಾವಣೆ!!

ಹೋಮ್ ಸ್ಕ್ರೀನ್ ಬದಲಾವಣೆ!!

ರೆಡ್‌ಮಿ ನೋಟ್‌ 4 ನೂತನ ಅಪ್‌ಡೇಟ್ ಹಲವು ಕ್ಲಾಕ್ ವಿಡ್ಜೆಟ್‌ಗಳನ್ನು ಬೆಂಬಲಿಸುತ್ತದೆ. ಮತ್ತು ಆಪ್‌ಗಳನ್ನು ಫೋಲ್ಡರ್‌ಗಳಿಗೆ ಸುಲಭವಾಗಿ ಮೂವ್ ಮಾಡಬಹುದಾದ ಹಾಗೂ ಒಂದು ಟ್ಯಾಪ್‌ನಲ್ಲಿ ಖಾಲಿ ಜಾಗಕ್ಕೆ ವಿಡ್ಜೆಟ್‌ಗಳನ್ನು ಸೇರಿಸಬಹುದಾಗಿದೆ.!!

ಮೈ ಅಕೌಂಟ್‌ನಲ್ಲಿ ಬದಲಾವಣೆ!!

ಮೈ ಅಕೌಂಟ್‌ನಲ್ಲಿ ಬದಲಾವಣೆ!!

ಬಳಕೆದಾರರು ಮೈ ಅಕೌಂಟ್ ಸೈನ್ ಔಟ್ ಮಾಡಿದಾಗ ಹೆಚ್ಚು ತೊಂದರೆನೀಡುತ್ತಿದ್ದ ಪುಷ್ ನೋಟಿಫಿಕೇಷನ್‌ಗಳ ಸಂಖ್ಯೆ ಕಡಿಮೆಯಾಗಿದೆ. ಮತ್ತು ಹೊಸ ಫೋನ್ ಸಂಪರ್ಕಿಸುವಾಗ ಹಾಟ್‌ಸ್ಪಾಟ್ ಸಂಪರ್ಕವನ್ನು ಸ್ವಯಂಚಾಲಿತವಾಗಿ ರನ್ ಆಗುವಂತೆ ಮಾಡಲಾಗಿದೆ.!!

ಫಿಂಗರ್ಪ್ರಿಂಟ್ ಭಧ್ರತೆ!!

ಫಿಂಗರ್ಪ್ರಿಂಟ್ ಭಧ್ರತೆ!!

ಫಿಂಗರ್ಪ್ರಿಂಟ್ ಗುರುತಿನ ದೋಷದಿಂದ ಉಂಟಾದ ಫಿಂಗರ್ಪ್ರಿಂಟ್ ಮಾಡ್ಯೂಲ್ ಹಾನಿಯನ್ನು "MIUI 9 ಗ್ಲೋಬಲ್ ಸ್ಟೇಬಲ್ ರಾಮ್ V9.2.1.0" ಅಪ್‌ಡೇಟ್ ಪರಿಹರಿಸಿದೆ. ಅನವಶ್ಯಕ ಫಿಂಗರ್ಪ್ರಿಂಟ್ ಗುರುತಿನ ಟಚ್ ಅನ್ನು ತೆಡೆಯಲು ವಾಲ್ಯೂಮ್ ಬಟನ್‌ ಮೂಲಕ ಹೊಸ ಆಯ್ಕೆ ನೀಡಲಾಗಿದೆ.!!

 ಇತರೆ ಏನೆಲ್ಲಾ ಅಪ್‌ಡೇಟ್‌ಗಳು?

ಇತರೆ ಏನೆಲ್ಲಾ ಅಪ್‌ಡೇಟ್‌ಗಳು?

ಲಾಕ್ ಸ್ಕ್ರೀನ್, ಸ್ಥಿತಿ ಬಾರ್, ಅಧಿಸೂಚನೆ ಬಾರ್ ಅಧಿಸೂಚನೆಗಳನ್ನು ಟ್ಯಾಪ್ ಮಾಡಲು ಸಮಯ ನಿಗದಿಪಡಿಸಲಾಗಿದೆ. ಫೋನ್‌ನಲ್ಲಿ ಚಿತ್ರಗಳು ಅನೇಕ ಬಾರಿ ಸಂಕುಚಿತಗೊಂಡಿರಲಿವೆ., ಹಾಗೂ ಕ್ರ್ಯಾಕ್ ಡಬ್ಲ್ಯೂಪಿಎ 2 ಭದ್ರತಾ ದೋಷಗಳು ಮೊಬೈಲ್‌ನಿಂದ ದೂರಬಾಗಲಿವೆ.!!

ಓದಿರಿ:ಸ್ಮಾರ್ಟ್‌ಫೋನ್‌ ವೈರಸ್ ದಾಳಿಗೆ ತುತ್ತಾಗದಂತೆ ನೋಡಿಕೊಳ್ಳುವುದು ಹೇಗೆ?!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Xiaomi has released a new MIUI 9 Global Stable ROM update to the popular Xiaomi Redmi Note 4Snapdragon variant.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot