Home
ಮೊಬೈಲ್

ಶಿಯೋಮಿ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭಾರೀ ಕಡಿತ: ಎಲ್ಲಿ ಲಭ್ಯ?

ಈಗಾಗಲೇ ಆನ್‌ಲೈನ್ ಶಾಪಿಂಗ್ ತಾಣಗಳಾದ ಅಮೆಜಾನ್, ಫ್ಲಿಪ್ ಕಾರ್ಟ್, ಟಾಟಾ ಸಿಲಿಕ್, ಪೇಟಿಎಂ ಮಾಲ್, ಮಿ.ಕಾಂ ಹಾಗೂ ಮಿ ಹೋಮ್ ಗಳಲ್ಲಿ ಆಫರ್ ಲಭ್ಯವಿದ್ದು, ವಿವಿಧ ಶಿಯೋಮಿ ಸ್ಮಾರ್ಟ್‌ಫೋನ್‌ಗಳ ಮೇಲೆ ಆಫರ್ ಅನ್ನು ಕಾಣಬಹುದಾಗಿದೆ.

By Srinidhi

ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಶಿಯೋಮಿ ಫೋನ್‌ಗಳು ಅತೀ ಹೆಚ್ಚು ಮಾರಾಟವಾಗುತ್ತಿರುವ ಸ್ಮಾರ್ಟ್‌ಫೋನ್ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿಯೇ ಕಾಣಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಶಿಯೋಮಿ ಮತ್ತಷ್ಟು ಜನರನ್ನು ತಲುಪುವ ಸಲುವಾಗಿ ತನ್ನ ಎಲ್ಲಾ ಸ್ಮಾರ್ಟ್‌ಫೋನ್‌ಗಳ ಮೇಲೆ ಆಫರ್ ಅನ್ನು ಘೋಷಣೆ ಮಾಡಿದೆ.

ಶಿಯೋಮಿ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭಾರೀ ಕಡಿತ: ಎಲ್ಲಿ ಲಭ್ಯ?

ಈಗಾಗಲೇ ಆನ್‌ಲೈನ್ ಶಾಪಿಂಗ್ ತಾಣಗಳಾದ ಅಮೆಜಾನ್, ಫ್ಲಿಪ್ ಕಾರ್ಟ್, ಟಾಟಾ ಸಿಲಿಕ್, ಪೇಟಿಎಂ ಮಾಲ್, ಮಿ.ಕಾಂ ಹಾಗೂ ಮಿ ಹೋಮ್ ಗಳಲ್ಲಿ ಆಫರ್ ಲಭ್ಯವಿದ್ದು, ವಿವಿಧ ಶಿಯೋಮಿ ಸ್ಮಾರ್ಟ್‌ಫೋನ್‌ಗಳ ಮೇಲೆ ಆಫರ್ ಅನ್ನು ಕಾಣಬಹುದಾಗಿದೆ. ಒಟ್ಟಿನಲ್ಲಿ ಶಿಯೋಮಿ ಕೊಂಡುಕೊಳ್ಳಬೇಕು ಎಂದವರಿಗೆ ಇದು ಸುಸಮಯವಾಗಿದೆ.

ರೆಡ್‌ಮಿ ನೋಟ್ 4

ರೆಡ್‌ಮಿ ನೋಟ್ 4

3GB RAM/32 GB ಇಂಟರ್ನಲ್ ಮೆಮೊರಿ ಹೊಂದಿರುವ ರೆಡ್‌ಮಿ ನೋಟ್ 4 ಬೆಲೆಯಲ್ಲಿ ರೂ 1,000 ಕಡಿತವಾಗಿದ್ದು, ಹಾಗೇ 4GB RAM/64 GB ಇಂಟರ್ನಲ್ ಮೆಮೊರಿ ಹೊಂದಿರುವ ರೆಡ್‌ಮಿ ನೋಟ್ 4 ಬೆಲೆಯಲ್ಲಿ ರೂ 2,000 ಕಡಿತವಾಗಿದೆ. ಕ್ರಮವಾಗಿ ಈ ಫೋನ್‌ಗಳು ರೂ 9,999 ಮತ್ತು ರೂ 10,999 ಗೆ ಲಭ್ಯವಾಗುತ್ತಿದೆ.

ರೆಡ್‌ಮಿ 4

ರೆಡ್‌ಮಿ 4

ರೆಡ್‌ಮಿ 4 ಎರಡು ಆವೃತ್ತಿಯ ಬೆಲೆ ಕಡಿಮೆಯಾಗಿದ್ದು, 3GB RAM/32 GB ಇಂಟರ್ನಲ್ ಮೆಮೊರಿ ಹೊಂದಿರುವ ರೆಡ್‌ಮಿ 4 ಬೆಲೆಯಲ್ಲಿ ರೂ 500 ಹಾಗೂ 4GB RAM/64 GB ಇಂಟರ್ನಲ್ ಮೆಮೊರಿ ಹೊಂದಿರುವ ರೆಡ್‌ಮಿ 4 ಬೆಲೆಯಲ್ಲಿ ರೂ 1,500ಗಳಸ್ಟು ಕಡಿತ ಕಾಣಬಹುದಾಗಿದೆ.ಈ ಫೋನ್‌ಗಳು 8,499 ಮತ್ತು ರೂ 9,499 ಗೆ ದೊರೆಯುತ್ತಿದೆ.

ಮಿ ಮ್ಯಾಕ್ಸ್ 2

ಮಿ ಮ್ಯಾಕ್ಸ್ 2

ಮಿ ಮ್ಯಾಕ್ಸ್ 2 ಫೋನ್ ಬೆಲೆಯಲ್ಲಿಯೂ ಕಡಿತವಾಗಿದ್ದು, 4GB RAM/32 GB ಇಂಟರ್ನಲ್ ಮೆಮೊರಿಯ ಫೋನ್ ಮೇಲೆ ಹಾಗೂ 4GB RAM/64 GB ಇಂಟರ್ನಲ್ ಮೆಮೊರಿಯ ಎರಡು ಆವೃತಿಗಳ ಮೇಲೆ ರೂ. 2,000 ಕಡಿತವಾಗಿದ್ದು, ಕ್ರಮವಾಗಿ ರೂ. 12,999 ಮತ್ತು 14,999ಕ್ಕೆ ಮಾರಾಟವಾಗುತ್ತಿದೆ.

Best Mobiles in India

English summary
Xiaomi is offering a suit of interesting discounts across Amazon India, Flipkart, Tata Cliq, Paytm mall, Mi.com, Mi Preferred Partner stores, Large Format Retailers and Mi Home stores ahead of festival season. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+