ಒನ್‌ಪ್ಲಸ್ 6ಗೆ ಸೆಡ್ಡುಹೊಡೆಯಲು ಬರುತ್ತಿರುವ 'ರೆಡ್ ಮಿ ಎಸ್2' ಫೋನ್ ಬೆಲೆ ಕೇವಲ 10 ಸಾವಿರ!!
ಮೇ ತಿಂಗಳ 10 ನೇ ತಾರೀಖಿನಂದು ಚೀನಾದಲ್ಲಿ ಬಿಡುಗಡೆಯಾಗಿ ಭಾರೀ ಸದ್ದು ಮಾಡಿದ 'ರೆಡ್ ಮಿ ಎಸ್2' ಸ್ಮಾರ್ಟ್‌ಫೋನ್ ಇದೀಗ ಭಾರತದ ಮೊಬೈಲ್ ಮಾರುಕಟ್ಟೆಗೆ ಬರಲು ತಯಾರಾಗಿದೆ. ಮುಂದಿನ ತಿಂಗಳು ಅಂದರೆ ಜೂನ್ 7 ರಂದು ಶಿಯೋಮಿ 'ರೆಡ್ ಮಿ ಎಸ್2' ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆಯಾಗುವುದನ್ನು ಶಿಯೋಮಿ ಕಂಪೆನಿ ಖಚಿತಪಡಿಸಿದೆ.
ಭಾರತಕ್ಕೆ ಎಂಟ್ರಿ ನೀಡುತ್ತಿರುವ ಶಿಯೋಮಿ 'ರೆಡ್ ಮಿ ಎಸ್2' ಸ್ಮಾರ್ಟ್‌ಫೋನ್ ಬೆಲೆ 10 ಸಾವಿರ ರೂಪಾಯಿಗಳ ಆಸುಪಾಸಿನಲ್ಲಿರಲಿದೆ ಎಂದು ತಿಳಿದುಬಂದಿದೆ. ಹಾಗಾಗಿ, ಅತ್ಯಂತ ಕಡಿಮೆ ಬೆಲೆಗೆ ಹೆಚ್ಚು ಫೀಚರ್ಸ್ ಹೊತ್ತು ಬರುತ್ತಿರುವ ಶಿಯೋಮಿಯ ಮತ್ತೊಂದು ಬಜೆಟ್ ಸ್ಮಾರ್ಟ್‌ಪೋನ್ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಧೂಳೆಬ್ಬಿಸುವುದು ಪಕ್ಕಾ ಆಗಿದೆ.!

ಹಾಗಾದರೆ, ಭಾರತದಲ್ಲಿ ಶಿಯೋಮಿ ಬಿಡುಗಡೆ ಮಾಡಲು ಮುಂದಾಗಿರುವ ಶಿಯೋಮಿ 'ರೆಡ್ ಮಿ ಎಸ್2' ಸ್ಮಾರ್ಟ್‌ಫೋನಿನ ಫೀಚರ್ಸ್ ಯಾವುವು? ಬಜೆಟ್ ಬೆಲೆಗೆ ಹೈ ಎಂಡ್ ಫೀಚರ್ಸ್ ಹೊಂದಿರುವ ಸ್ಮಾರ್ಟ್‌ಪೋನ್ ಇದಾಗಿರಲಿದೆಯೇ? ಖರೀದಿಸಲು ಏನೆಲ್ಲಾ ಕಾರಣಗಳು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ. !

ರೆಡ್ ಮಿ ಎಸ್2 ಡಿಸ್‌ಪ್ಲೆ ಮತ್ತು ವಿನ್ಯಾಸ!!
ಶಿಯೋಮಿ 'ರೆಡ್ ಮಿ ಎಸ್2' 1440 x 720 ಪಿಕ್ಸೆಲ್ ರೆಸಲ್ಯೂಶನ್ನಿನಲ್ಲಿ 5,99 ಇಂಚಿನ ಐಪಿಎಸ್ ಎಲ್‌ಸಿಡಿ ಡಿಸ್ಪ್ಲೇಯನ್ನು ಹೊಂದಿದೆ. ಬಜೆಟ್ ಸ್ಮಾರ್ಟ್‌ಫೋನುಗಳಿಗೆ ರೂಢಿಯಾಗಿರುವ 18:9 ಅನುಪಾತದಲ್ಲಿ ಹೆಚ್‌ಡಿ ಪ್ಲಸ್ ಎಲ್‌ಸಿಡಿ ಡಿಸ್‌ಪ್ಲೇ ಲಭ್ಯವಿದೆ. ಹಿಂಬಾಗದಲ್ಲಿ ಫಿಂಗರ್‌ಪ್ರಿಂಟ್ ಫೀಚರ್ ಹಾಗೂ ಎರಡು ರಿಯರ್ ಕ್ಯಾಮೆರಾಗಳನ್ನು ಸ್ಮಾರ್ಟ್‌ಫೊನಿನಲ್ಲಿ ಅಳವಡಿಸಲಾಗಿದೆ.

ರೆಡ್ ಮಿ ಎಸ್2 ಪ್ರೊಸೆಸರ್ ಯಾವುದು?
ಬಜೆಟ್ ಬೆಲೆಗೆ ಹೈ ಎಂಡ್ ಸ್ಮಾರ್ಟ್‌ಫೋನ್ ತಯಾರಿಸುವ ನಿಟ್ಟಿನಲ್ಲಿ ಶಿಯೋಮಿ ಬಾರೀ ಪ್ರಯತ್ನ ನಡೆಸುತ್ತಿದೆ. ಹಾಗಾಗಿ, ಶಿಯೋಮಿಯ ಇನ್ನಿತರ ರೆಡ್ ಮಿ ನೋಟ್ 5 ಮತ್ತು ಎಂಐ ಎ1 ಸ್ಮಾರ್ಟ್‌ಫೋನ್‌ಗಳಂತೆ ಶಿಯೋಮಿ ರೆಡ್ ಮಿ ಎಸ್2' ಸ್ಮಾರ್ಟ್‌ಫೋನಿನಲ್ಲಿಯೂ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 625 ಪ್ರೊಸೆಸರ್ ಅನ್ನು ಅಳವಡಿಸಿದೆ.

ರೆಡ್ ಮಿ ಎಸ್2 ಕ್ಯಾಮೆರಾ ಹೇಗಿದೆ?
ಶಿಯೋಮಿ ರೆಡ್ ಮಿ ಎಸ್2' ಸ್ಮಾರ್ಟ್‌ಫೋನಿನಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾವನ್ನು ನೀಡಲಾಗಿದೆ. 12 ಮೆಗಾಪಿಕ್ಸೆಲ್ ಸೋನಿ IMX486 ಸೆನ್ಸಾರ್ ಮತ್ತು 5 ಮೆಗಾಪಿಕ್ಸೆಲ್ ಓಮ್ನಿ ವಿಷನ್ ಒವಿ 12ಎ 10 ಸೆನ್ಸಾರ್‌ಗಳುಳ್ಳ ಎರಡು ರಿಯರ್ ಕ್ಯಾಮೆರಾಗಳು ಹಾಗೂ 16-ಮೆಗಾಪಿಕ್ಸೆಲ್ ಸ್ಯಾಮ್ಸಂಗ್ S5K5E8 ಸೆನ್ಸಾರ್ ಸೆಲ್ಫಿ ಕ್ಯಾಮೆರಾವನ್ನು ಸ್ಮಾರ್ಟ್‌ಫೋನ್ ಹೊಂದಿದೆ.

ಫೇಸ್ ಅನ್‌ಲಾಕ್ ಫೀಚರ್!!
ಶಿಯೋಮಿ 'ರೆಡ್ ಮಿ ಎಸ್2' ಸ್ಮಾರ್ಟ್‌ಫೋನಿನಲ್ಲಿ ಹೈ ಎಂಡ್ ಸ್ಮಾರ್ಟ್‌ಫೋನ್ ಫೀಚರ್ಸ್ ತರುವ ನಿಟ್ಟಿನಲ್ಲಿ ಶಿಯೋಮಿ ಫೇಸ್ ಅನ್‌ಲಾಕ್ ಫೀಚರ್ ಅನ್ನು ಸ್ಮಾರ್ಟ್‌ಫೋನಿನಲ್ಲಿ ತಂದಿದೆ. ಇತ್ತೀಚಿನ ಎಲ್ಲಾ ಸ್ಮಾರ್ಟ್‌ಪೋನ್‌ಗಳು ಫೇಸ್ ಅನ್‌ಲಾಕ್ ಫೀಚರ್ಸ್ ಹೊತ್ತು ಬರುತ್ತಿರುವುದರಿಂದ ಶಿಯೋಮಿ ಕೂಡ ಫೇಸ್ ಅನ್‌ಲಾಕ್ ಫೀಚರ್ಸ್ ಅನ್ನು 'ರೆಡ್ ಮಿ ಎಸ್2' ಸ್ಮಾರ್ಟ್‌ಫೋನಿನಲ್ಲಿ ತರಲೇಬೇಕಿತ್ತು.

ಇತರೆ ಫೀಚರ್ಸ್ ಮತ್ತು ಬೆಲೆ?
3080mAh ಬ್ಯಾಟರಿ, ಆಂಡ್ರಾಯ್ಡ್ ಓರಿಯೊ ಸಪೋರ್ಟ್, ಯುಎಸ್‌ಬಿ ಟೈಪ್ ಸಿ, ಫಾಸ್ಟ್ ಚಾರ್ಜಿಂಗ್ 3.0 ನಂತಹ ಅತ್ಯುತ್ತಮ ಫೀಚರ್ಸ್‌ಗಳನ್ನು ಶಿಯೋಮಿ 'ರೆಡ್ ಮಿ ಎಸ್2' ಸ್ಮಾರ್ಟ್‌ಫೋನಿನಲ್ಲಿ ನೀಡಲಾಗುತ್ತದೆ ಎನ್ನಲಾಗಿದೆ. ಇಷ್ಟೆಲ್ಲಾ ಫಿಚರ್ಸ್ ಹೊಂದಿರುವ ಈ ಸ್ಮಾರ್ಟ್‌ಫೋನ್ ಬೆಲೆ ಬಾರತದಲ್ಲಿ 10,000 ರೂ.ಗಳ ಆಸುಪಾಸಿನಲ್ಲಿ ಬಿಡುಗಡೆಯಾಗಲಿದೆ.


Click it and Unblock the Notifications