Home
ಮೊಬೈಲ್

ಶಿಯೋಮಿ 'ರೆಡ್‌ಮಿ ಎಸ್‌2' ಸ್ಮಾರ್ಟ್‌ಫೋನ್ ಬಿಡುಗಡೆಗೆ ಮತ್ತೆ ಬೆಚ್ಚಿತು ಮೊಬೈಲ್ ಜಗತ್ತು!!

By Bhaskar N J

ಶಿಯೋಮಿ ಕಂಪೆನಿಯ ಮೊದಲ "ಎಸ್‌" ಸರಣಿಯ ಸ್ಮಾರ್ಟ್‌ಫೋನ್ ಚೀನಾದಲ್ಲಿಂದು ಬಿಡುಗಡೆಯಾಗಿದೆ. ಶಿಯೋಮಿಯ 'ಎಸ್' ಸರಣಿಯ ಮೊದಲ ಸ್ಮಾರ್ಟ್‌ಫೋನ್ 'ಶಿಯೋಮಿ ರೆಡ್‌ಮಿ ಎಸ್‌2' ಮೊಬೈಲ್ ಮಾರುಕಟ್ಟೆಯ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಶಿಯೋಮಿ ಕಂಪೆನಿ ಹೇಳಿಕೊಂಡಂತೆ ಶಿಯೋಮಿಯ ಅತ್ಯುತ್ತಮ ಸೆಲ್ಫಿ ಆಧಾರಿತ ಸ್ಮಾರ್ಟ್‌ಫೋನ್ ಇದಾಗಿದೆ.

2-ಮೈಕ್ರಾನ್ ಪಿಕ್ಸೆಲ್‌ಗಳೊಂದಿಗೆ 16-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ, ಡ್ಯುಯಲ್ ರಿಯರ್ ಕ್ಯಾಮೆರಾ, 18: 9 ಡಿಸ್‌ಪ್ಲೇ, ಐಫೋನ್-ಶೈಲಿಯ ಆಂಟೆನಾ ಲೈನ್ಸ್, ಕ್ಸಿಯಾ ಎಐ ಧ್ವನಿ ಸಹಾಯಕ, ಫೇಸ್ ಅನ್‌ಲಾಕ್ ವೈಶಿಷ್ಟ್ಯ, ಮತ್ತು ಸ್ನಾಪ್ಡ್ರಾಗನ್ 625 ಎಸ್‌ಒಸಿ ಫೀಚರ್ಸ್‌ಗಳೊಂದಿಗೆ 'ಶಿಯೋಮಿ ರೆಡ್‌ಮಿ ಎಸ್‌2' ಸ್ಮಾರ್ಟ್‌ಫೋನ್ ಅತ್ಯಂತ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಎಂಟ್ರಿ ನೀಡಿದೆ.!

'ರೆಡ್‌ಮಿ ಎಸ್‌2' ಸ್ಮಾರ್ಟ್‌ಫೋನ್ ಬಿಡುಗಡೆಗೆ ಮತ್ತೆ ಬೆಚ್ಚಿತು ಮೊಬೈಲ್ ಜಗತ್ತು!!

ಭಾರೀ ಫೀಚರ್ಸ್ ಹೊಂದಿರುವ 'ಶಿಯೋಮಿ ರೆಡ್‌ಮಿ ಎಸ್‌2' ಫೋನಿನ ಮೂಲ ಬೆಲೆ ಚೀನಾದಲ್ಲಿ ಕೇವಲ 999 ಸಿವೈನ್‌ಳಿಗೆ ಬಿಡುಗಡೆಯಾಗಿದ್ದು, ಭಾರತದ ರೂಪಾಯಿಗಳ ಲೆಕ್ಕದಲ್ಲಿ ಈ ಫೋನಿನ ಬೆಲೆ ಕೇವಲ 10,000 ರೂ.ಗಳಾಗಲಿದೆ. ಹಾಗಾದರೆ, ಶಿಯೋಮಿಯ ಅತ್ಯುತ್ತಮ ಸೆಲ್ಫಿ 'ಶಿಯೋಮಿ ಎಸ್‌2' ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್ ಯಾವುವು ಎಂಬುದನ್ನು ಮುಂದೆ ತಿಳಿಯಿರಿ.

'ಶಿಯೋಮಿ ರೆಡ್‌ಮಿ ಎಸ್‌2' ಬೆಲೆಗಳು!

'ಶಿಯೋಮಿ ರೆಡ್‌ಮಿ ಎಸ್‌2' ಬೆಲೆಗಳು!

'ಶಿಯೋಮಿ ರೆಡ್‌ಮಿ ಎಸ್‌2' 3ಜಿಬಿ RAM ಮತ್ತು 32 ಜಿಬಿ ಆಂತರಿಕ ಶೇಖರಣಾ ಮೆಮೊರಿ ವೆರಿಯಂಟ್ ಸ್ಮಾರ್ಟ್‌ಫೋನಿನ ಬೆಲೆ 999 ಸಿವೈನ್ (ಅಂದಾಜು ರೂ. 10,600) ಗಳಾಗಿವೆ. 4GB RAM ಮತ್ತು 64GB ಆಂತರಿಕ ಶೇಖರಣಾ ಮೆಮೊರಿ ವೆರಿಯಂಟ್ ಸ್ಮಾರ್ಟ್‌ಫೋನಿನ ಬೆಲೆ ಸಿಎನ್‌ವೈ 1,299 (ಸರಿಸುಮಾರು ರೂ 13,700) ರೂಪಾಯಿಗಳಾಗಿದೆ. ಷಾಂಪೇನ್ ಗೋಲ್ಡ್, ಪ್ಲಾಟಿನಮ್ ಸಿಲ್ವರ್, ಮತ್ತು ರೋಸ್ ಗೋಲ್ಡ್ ಬಣ್ಣದಲ್ಲಿ ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ.

ಡಿಸ್‌ಪ್ಲೇ ಮತ್ತು ವಿನ್ಯಾಸ?

ಡಿಸ್‌ಪ್ಲೇ ಮತ್ತು ವಿನ್ಯಾಸ?

ಶೇ.70.8 ರಷ್ಟು ಎನ್‌ಟಿಎಸ್‌ಸಿ ಕಲರ್ ಗ್ಯಾಮಟ್‌ನೊಂದಿಗೆ 5.99-ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ (720x1440 ಪಿಕ್ಸೆಲ್‌ಗಳು)ಯೊಂದಿಗೆ 'ಶಿಯೋಮಿ ರೆಡ್‌ಮಿ ಎಸ್‌2' ಸ್ಮಾರ್ಟ್‌ಫೋನ್ ಹೊರಬಂದಿದೆ. ಫೇಸ್‌ಲಾಕ್ ಇದ್ದರೂ ಹಿಂಬಾಗದಲ್ಲಿ ಫಿಂಗರ್‌ಪ್ರಿಂಟ್ ಫೀಚರ್ ಹೊಂದಿರುವ ಈ ಸ್ಮಾರ್ಟ್‌ಫೋನಿನ ಅಂಚುಗಳು ಸ್ವಲ್ಪ ಭಾಗಿದಂತೆ ವಿನ್ಯಾಸಗೊಂಡಿವೆ.

ಪ್ರೊಸೆಸರ್ ಮತ್ತು RAM?

ಪ್ರೊಸೆಸರ್ ಮತ್ತು RAM?

'ಶಿಯೋಮಿ ರೆಡ್‌ಮಿ ಎಸ್‌2' ಸ್ಮಾರ್ಟ್‌ಫೋನಿನಲ್ಲಿ ಸ್ನ್ಯಾಪ್ಡ್ರಾಗನ್ 625 SoC ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ. ಇನ್ನು ಪ್ರೊಸೆಸರ್ ಮಾದರಿಗೆ ಅನುಗುಣವಾಗಿ 3GB ಮತ್ತು 4GB RAM ಅನ್ನು ಸ್ಮಾರ್ಟ್‌ಪೋನ್ ಹೊಂದಿದೆ. 3GB ವೆರಿಯಂಟ್ ಸ್ಮಾರ್ಟ್‌ಫೋನ್ 32GB ಮೆಮೊರಿಯನ್ನು ಹೊಂದಿದ್ದರೆ, 4GB ವೆರಿಯಂಟ್ ಸ್ಮಾರ್ಟ್‌ಫೋನ್ 64GB ಮೆಮೊರಿಯನ್ನು ಹೊಂದಿದೆ.

16-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ!!

16-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ!!

ಶಿಯೋಮಿ ಕಂಪೆನಿ ಈ ಮೊದಲೇ ಘೋಷಿಸಿಕೊಂಡಂತೆ 'ಶಿಯೋಮಿ ರೆಡ್‌ಮಿ ಎಸ್‌2' ಸ್ಮಾರ್ಟ್‌ಫೋನ್ ಸೆಲ್ಫಿ ಆಧಾರಿತ ಸ್ಮಾರ್ಟ್‌ಫೋನ್ ಆಗಿದೆ. 16-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಮತ್ತು 12ಮತ್ತು 5 ಮೆಗಾಪಿಕ್ಸೆಲ್ ಸಾಮರ್ಥ್ಯದ ರಿಯರ್ ಕ್ಯಾಮೆರಾಗಳನ್ನು ಹೊಂದಿದೆ. ಕ್ಯಾಮೆರಾ ತಂತ್ರಜ್ಞಾನ ಕೃತಕ ಬುದ್ದಿಮತ್ತೆ ಆಧಾರಿತವಾಗಿದೆ ಎಂದು ಶಿಯೋಮಿ ತಿಳಿಸಿದೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್!

ಬ್ಯಾಟರಿ ಮತ್ತು ಇತರೆ ಫೀಚರ್ಸ್!

'ಶಿಯೋಮಿ ರೆಡ್‌ಮಿ ಎಸ್‌2' ಸ್ಮಾರ್ಟ್‌ಫೋನಿನಲ್ಲಿ 3080mAh ಬ್ಯಾಟರಿಯನ್ನು ನೀಡಲಾಗಿದೆ. 4ಜಿ ವೋಲ್ಟ್, ವೈ-ಫೈ 802.11, ಬ್ಲೂಟೂತ್ ವಿ 4.2, ಜಿಪಿಎಸ್ / ಎ-ಜಿಪಿಎಸ್, 3.5 ಎಂಎಂ ಹೆಡ್ಫೋನ್ ಜ್ಯಾಕ್ ಮತ್ತು ಮೈಕ್ರೋ-ಯುಎಸ್ಬಿ ಪೋರ್ಟ್ ಮತ್ತು ಅಕ್ಸೆಲೆರೊಮೀಟರ್, ಆಂಬಿಯಂಟ್ ಲೈಟ್ ಸೆನ್ಸರ್, ಡಿಜಿಟಲ್ ದಿಕ್ಸೂಚಿ, ಇನ್ಫ್ರಾರೆಡ್ ಸೆನ್ಸಾರ್‌ಗಳು ಫೋನ್ ಅಂದವನ್ನು ಹೆಚ್ಚಿಸಿವೆ.

Best Mobiles in India

English summary
Xiaomi Redmi S2 With 16-Megapixel Selfie Camera, 18:9 Display Launched: Price, Specifications. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+