Subscribe to Gizbot

ಭಾರತಕ್ಕಾಗಿಯೇ ಸೂಪರ್ ಬೆಲೆಗೆ ಬರುತ್ತಿದೆ ಅತ್ಯದ್ಬುತ 'ಶಿಯೋಮಿ ರೆಡ್ಮಿ ಎಸ್ 2' ಸ್ಮಾರ್ಟ್‌ಫೋನ್!!

Written By:

ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಧೂಳೆಬ್ಬಿಸುತ್ತಿರುವ ಚೀನಾದ ಮೊಬೈಲ್ ಕಂಪೆನಿ ಶಿಯೋಮಿ ಇದೀಗ ಮತ್ತೊಂದು ಬಜೆಟ್ ಸ್ಮಾರ್ಟ್‌ಪೋನ್ ಒಂದನ್ನು ಬಿಡುಗಡೆ ಮಾಡಲು ಮುಂದಾಗಿದೆ. ಫೇಸ್‌ಫೀಚರ್ಸ್, ಡ್ಯುಯಲ್ ಕ್ಯಾಮೆರಾದಂತಹ ಹೈ ಎಂಡ್ ಫೀಚರ್ಸ್ ಒಳಗೊಂಡಿರುವ ಶಿಯೋಮಿಯ ನೂತನ ಬಜೆಟ್ ಸ್ಮಾರ್ಟ್‌ಫೋನ್ ಭಾರತದಲ್ಲಿಯೇ ಮೊದಲು ಬಿಡುಗಡೆಯಾಗಲಿದೆ ಎನ್ನುವ ಮಾತು ಮೊಬೈಲ್ ಮಾರುಕಟ್ಟೆಯಲ್ಲಿ ಹರಿದಾಡುತ್ತಿದೆ.

ಇದೇ 19ನೇ ತಾರಿಖು ಶಿಯೋಮಿ ಕಂಪೆನಿ ತನ್ನ ಎಂಐ 6ಎಕ್ಸ್ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸುತ್ತಿರುವುದರ ಮೇಲೆ ಎಲ್ಲರ ಕಣ್ಣುಬಿದ್ದಿದ್ದರೆ, ಇದೀಗ ಶಿಯೋಮಿಯ ಮತ್ತೊಂದು ಸ್ಮಾರ್ಟ್‌ಪೋನ್ ಅತಿ ಶೀಘ್ರದಲ್ಲಿಯೇ ಭಾರತದಲ್ಲಿ ಬಿಡುಗಡೆಯಾಗಲಿದೆ ಎನ್ನುವ ಸುದ್ದಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಮೇ ತಿಂಗಳಾಂತ್ಯಕ್ಕೆ ಶಿಯೋಮಿ ಕಂಪೆನಿ 'ರೆಡ್‌ ಮಿ ಎಸ್‌2' ಹೆಸರಿನ ಸ್ಮಾರ್ಟ್‌ಫೋನ್ ಹೈ ಎಂಡ್ ಫೀಚರ್ಸ್ ಹೊತ್ತು ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎನ್ನಲಾಗಿದೆ.

ಭಾರತಕ್ಕಾಗಿಯೇ ಸೂಪರ್ ಬೆಲೆಗೆ ಬರುತ್ತಿದೆ ಅತ್ಯದ್ಬುತ ಶಿಯೋಮಿ ಸ್ಮಾರ್ಟ್‌ಫೋನ್!!

ಎಕ್ಸ್‌ಡಿಎ ಡೆವಲಪರ್ಸ್ ಬಿಡುಗಡೆ ಮಾಡಿರುವ ರಿಪೋರ್ಟ್ ಪ್ರಕಾರ ಶಿಯೋಮಿಯ 'ರೆಡ್‌ ಮಿ ಎಸ್‌2' ಸ್ಮಾರ್ಟ್‌ಪೋನ್ ಬಗೆಗಿನ ಮಾಹಿತಿಗಳೆಲ್ಲವೂ ಬಯಲಾಗಿವೆ. ಹಾಗಾದರೆ, ಶಿಯೋಮಿ ಬಿಡುಗಡೆ ಮಾಡಲು ಮುಂದಾಗಿರುವ ಶಿಯೋಮಿ 'ರೆಡ್‌ ಮಿ ಎಸ್‌2' ಸ್ಮಾರ್ಟ್‌ಫೋನಿನ ಫೀಚರ್ಸ್ ಯಾವುವು? ಬಜೆಟ್ ಬೆಲೆಗೆ ಹೈ ಎಂಡ್ ಫೀಚರ್ಸ್ ಹೊಂದಿರುವ ಸ್ಮಾರ್ಟ್‌ಪೋನ್ ಇದಾಗಿರಲಿದೆಯೇ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ. !

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೆಡ್‌ ಮಿ ಎಸ್‌2 ಡಿಸ್‌ಪ್ಲೆ ಮತ್ತು ವಿನ್ಯಾಸ!!

ರೆಡ್‌ ಮಿ ಎಸ್‌2 ಡಿಸ್‌ಪ್ಲೆ ಮತ್ತು ವಿನ್ಯಾಸ!!

ನೂತನ 'ರೆಡ್‌ ಮಿ ಎಸ್‌2' ಸ್ಮಾರ್ಟ್‌ಫೋನನ್ನು ಭಾರತದ ಮೊಬೈಲ್ ಮಾರುಕಟ್ಟೆಗಾಗಿಯೇ ವಿಶೇಷವಾಗಿ ಬಿಡುಗಡೆಮಾಡಲು ಉದ್ದೇಶಿಸಿರುವ ಶಿಯೋಮಿ ಕಂಪೆನಿ, ಬಜೆಟ್ ಬೆಲೆಯಲ್ಲಿ ಅತ್ಯುತ್ತಮ ವಿನ್ಯಾಸದಲ್ಲಿ ಸ್ಮಾರ್ಟ್‌ಪೋನ್ ಅನ್ನು ಹೊರತರುತ್ತಿದೆ. 18:9 ಅನುಪಾತದಲ್ಲಿ ಹೆಚ್‌ಡಿ ಪ್ಲಸ್ ಎಲ್‌ಸಿಡಿ ಡಿಸ್‌ಪ್ಲೇ, ಹೊಂಬಾಗದಲ್ಲಿ ಫಿಂಗರ್‌ಪ್ರಿಂಟ್ ಪಿಚರ್ ಹಾಗೂ ಎರಡು ಕ್ಯಾಮೆರಾಗಳನ್ನು ಸ್ಮಾರ್ಟ್‌ಫೊನಿನಲ್ಲಿ ಅಳವಡಿಸಲಾಗಿದೆ.

ರೆಡ್‌ ಮಿ ಎಸ್‌2 ಪ್ರೊಸೆಸರ್ ಯಾವುದು?

ರೆಡ್‌ ಮಿ ಎಸ್‌2 ಪ್ರೊಸೆಸರ್ ಯಾವುದು?

ಬಜೆಟ್ ಬೆಲೆಗೆ ಹೈ ಎಂಡ್ ಸ್ಮಾರ್ಟ್‌ಫೋನ್ ತಯಾರಿಸುವ ನಿಟ್ಟಿನಲ್ಲಿ ಶಿಯೋಮಿ ಬಾರೀ ಪ್ರಯತ್ನ ನಡೆಸುತ್ತಿದೆ. ಹಾಗಾಗಿ, ಶಿಯೋಮಿಯ ಇನ್ನಿತರ ರೆಡ್‌ ಮಿ ನೋಟ್ 5 ಮತ್ತು ಎಂಐ ಎ1 ಸ್ಮಾರ್ಟ್‌ಫೋನ್‌ಗಳಂತೆ ಶಿಯೋಮಿ ರೆಡ್‌ ಮಿ ಎಸ್‌2' ಸ್ಮಾರ್ಟ್‌ಫೋನಿನಲ್ಲಿಯೂ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 625 ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ ಎಂದು ತಿಳಿದುಬಂದಿದೆ. ಆದರೆ, ಸ್ಮಾರ್ಟ್‌ಪೋನ್ RAM ಎಷ್ಟಿರಲಿದೆ ಎಂಬುದರ ಮಾಹಿತಿ ಸಿಕ್ಕಿಲ್ಲ.

ರೆಡ್‌ ಮಿ ಎಸ್‌2 ಕ್ಯಾಮೆರಾ ಹೇಗಿದೆ?

ರೆಡ್‌ ಮಿ ಎಸ್‌2 ಕ್ಯಾಮೆರಾ ಹೇಗಿದೆ?

ಶಿಯೋಮಿ ರೆಡ್‌ ಮಿ ಎಸ್‌2' ಸ್ಮಾರ್ಟ್‌ಫೋನಿನಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾವನ್ನು ತರಲಾಗುತ್ತಿದೆ ಎನ್ನಲಾಗಿದೆ. 12 ಮೆಗಾಪಿಕ್ಸೆಲ್ ಸೋನಿ IMX486 ಸೆನ್ಸಾರ್ ಅಥವಾ 12 ಮೆಗಾಪಿಕ್ಸೆಲ್ ಓಮ್ನಿ ವಿಷನ್ ಒವಿ 12ಎ 10 ಸೆನ್ಸಾರ್‌ಗಳುಳ್ಳ ಎರಡು ಕ್ಯಾಮೆರಾಗಳನ್ನು ಸ್ಮಾರ್ಟ್‌ಪೋನ್ ಹೊಂದಿರಲಿದೆ. ಇನ್ನು 5-ಮೆಗಾಪಿಕ್ಸೆಲ್ ಸ್ಯಾಮ್ಸಂಗ್ S5K5E8 ಸೆನ್ಸಾರ್ ಸೆಲ್ಫಿ ಕ್ಯಾಮೆರಾವನ್ನು ಸ್ಮಾರ್ಟ್‌ಪೋನಿನಲ್ಲಿ ಎದುರುನೋಡಬಹುದಾಗಿದೆ.

ಫೇಸ್‌ ಅನ್‌ಲಾಕ್ ಫೀಚರ್!!

ಫೇಸ್‌ ಅನ್‌ಲಾಕ್ ಫೀಚರ್!!

ಶಿಯೋಮಿ 'ರೆಡ್‌ ಮಿ ಎಸ್‌2' ಸ್ಮಾರ್ಟ್‌ಫೋನಿನಲ್ಲಿ ಹೈ ಎಂಡ್ ಸ್ಮಾರ್ಟ್‌ಫೋನ್ ಫೀಚರ್ಸ್ ತರುವ ನಿಟ್ಟಿನಲ್ಲಿ ಶಿಯೋಮಿ ಫೇಸ್‌ ಅನ್‌ಲಾಕ್ ಫೀಚರ್ ಅನ್ನು ಸ್ಮಾರ್ಟ್‌ಫೋನಿನಲ್ಲಿ ತರಲಿದೆ ಎಂದು ಹೇಳಲಾಗಿದೆ. ಇತ್ತೀಚಿನ ಎಲ್ಲಾ ಸ್ಮಾರ್ಟ್‌ಪೋನ್‌ಗಳು ಫೇಸ್‌ ಅನ್‌ಲಾಕ್ ಫೀಚರ್ಸ್ ಹೊತ್ತು ಬರುತ್ತಿರುವುದರಿಂದ ಶಿಯೋಮಿ ಕೂಡ ಫೇಸ್‌ ಅನ್‌ಲಾಕ್ ಫೀಚರ್ಸ್ ಅನ್ನು 'ರೆಡ್‌ ಮಿ ಎಸ್‌2' ಸ್ಮಾರ್ಟ್‌ಫೋನಿನಲ್ಲಿ ತರಲೇಬೇಕು ಎಂದು ನಿರ್ಶವಯಿಸಿದೆ.

Xiaomi Mi TV 4A ಹೇಗಿದೆ?..ಖರೀದಿಸಲು ಬೆಸ್ಟ್ ಟಿವಿ ಇದೇನಾ?
ಇತರೆ ಫೀಚರ್ಸ್ ಮತ್ತು ಬೆಲೆ?

ಇತರೆ ಫೀಚರ್ಸ್ ಮತ್ತು ಬೆಲೆ?

3080mAh ಬ್ಯಾಟರಿ, ಆಂಡ್ರಾಯ್ಡ್ ಓರಿಯೊ ಸಪೋರ್ಟ್, ಯುಎಸ್‌ಬಿ ಟೈಪ್ ಸಿ, ಫಾಸ್ಟ್ ಚಾರ್ಜಿಂಗ್ 3.0 ನಂತಹ ಅತ್ಯುತ್ತಮ ಫೀಚರ್ಸ್‌ಗಳನ್ನು ಶಿಯೋಮಿ 'ರೆಡ್‌ ಮಿ ಎಸ್‌2' ಸ್ಮಾರ್ಟ್‌ಫೋನಿನಲ್ಲಿ ನೀಡಲಾಗುತ್ತದೆ ಎನ್ನಲಾಗಿದೆ. ಇಷ್ಟೆಲ್ಲಾ ಫಿಚರ್ಸ್ ಹೊಂದಿರುವ ಈ ಸ್ಮಾರ್ಟ್‌ಫೋನ್ ಬೆಲೆ 12,000 ರೂ.ಗಳ ಆಸುಪಾಸಿನಲ್ಲಿರಲಿದೆ ಎಂದು ಹೇಳಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Phone may sport dual cameras with 12-megapixel + 5-megapixel sensors. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot