Home
ಮೊಬೈಲ್

16MP ಸೆಲ್ಫಿ ಕ್ಯಾಮೆರಾದ 'ಶಿಯೋಮಿ' ಫೋನ್ 8,999 ರೂ.ಗೆ ಬಿಡುಗಡೆ!..ಒಪ್ಪೊ, ವಿವೊಗೆ ಶಾಕ್!!

ಇದೇ ಮೊದಲ ಭಾರಿಗೆ ಸೆಲ್ಫಿಗೆ ಹೆಚ್ಚು ಪ್ರಾಮುಖ್ಯತೆ ನೀಡಿರುವ ಸ್ಮಾರ್ಟ್‌ಫೋನ್‌ಗಳನ್ನು ಶಿಯೋಮಿ ಬಿಡುಗಡೆ ಮಾಡಿದ್ದು, ಒಪ್ಪೊ ಮತ್ತು ವಿವೊ ಕಂಪೆನಿಗಳಿಗೆ ಶಾಕ್ ನೀಡಿದೆ.

By Bhaskar N J
Xiaomi Redmi Y1 : ಶಿಯೋಮಿಯ ಮೊದಲ ಸೆಲ್ಪಿ ಫೋನ್ ರೆಡ್‌ಮಿ Y1

ಭಾರತದಲ್ಲಿಯೇ ಅತಿ ಹೆಚ್ಚು ಬಜೆಟ್ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುತ್ತಿರುವ ಶಿಯೋಮಿ ಮೊಬೈಲ್ ಕಂಪೆನಿ ಇಂದು 'ಶಿಯೋಮಿ ವೈ' ಸೀರಿಸ್ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿದೆ. ಇದೇ ಮೊದಲ ಭಾರಿಗೆ ಸೆಲ್ಫಿಗೆ ಹೆಚ್ಚು ಪ್ರಾಮುಖ್ಯತೆ ನೀಡಿರುವ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದ್ದು, ಒಪ್ಪೊ ಮತ್ತು ವಿವೊ ಕಂಪೆನಿಗಳಿಗೆ ಶಾಕ್ ನೀಡಿದೆ.

ಅತ್ಯುತ್ತಮ ಕ್ಯಾಮೆರಾ ಹೊಂದಿರುವ ಹಾಗೂ ಅತ್ಯುತ್ತಮ ಫೀಚರ್ಸ್ ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಅತ್ಯಂತ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು, "ರೆಡ್‌ಮಿ ವೈ1" ಫೋನ್ ಬೆಲೆ ಕೇವಲ 8,999 ರೂಪಾಯಿಗಳಿಗೆ ಬಿಡುಗಡೆಯಾಗಿದೆ.!! ಹಾಗಾದರೆ, "ರೆಡ್‌ಮಿ ವೈ1" ಸ್ಮಾರ್ಟ್‌ಫೋನ್ ಏನೆಲ್ಲಾ ಫೀಚರ್ಸ್ ಹೊಂದಿವೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ವಿನ್ಯಾಸ ಮತ್ತು ಡಿಸ್‌ಪ್ಲೇ!!

ವಿನ್ಯಾಸ ಮತ್ತು ಡಿಸ್‌ಪ್ಲೇ!!

8,999 ರೂ.ಗೆ ಬಿಡುಗಡೆಯಾಗಿರುವ "ರೆಡ್‌ಮಿ ವೈ1 " ಸ್ಮಾರ್ಟ್‌ಫೋನ್ 5. ಇಂಚ್ ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು, ಕಾರ್ನಿಂಗ್ ಗೋರಿಲ್ಲ ಗ್ಲಾಸ್‌ನಿಂದ ರಕ್ಷಣೆ ಹೊಂದಿದೆ. 150 ಗ್ರಾಮ್ ತೂಕವಿರುವ ಈ ಫೋನ್ ಹಿಂಬಾಗದಲ್ಲಿ ಫಿಂಗರ್‌ಪ್ರಿಂಟ್ ಫೀಚರ್ ಹೊಂದಿದ್ದು, ಅತ್ಯುತ್ತಮ ಲುಕ್ ಹೊಂದಿದೆ.!!

16MP ಸೆಲ್ಫಿ ಕ್ಯಾಮೆರಾ!!

16MP ಸೆಲ್ಫಿ ಕ್ಯಾಮೆರಾ!!

ಒಪ್ಪೊ ಮತ್ತು ವಿವೊ ಮೊಬೈಲ್ ಕಂಪೆನಿಗಳಿಗೆ ಶಾಕ್ ನೀಡಿರುವ ಶಿಯೋಮಿ, 16MP ಸೆಲ್ಫಿ ಕ್ಯಾಮೆರಾ ಹೊಂದಿರುವ "ರೆಡ್‌ಮಿ ವೈ1" ಸ್ಮಾರ್ಟ್‌ಫೋನ್ ಅನ್ನು ಕೇವಲ 8,999 ರೂ.ಗೆ ಬಿಡುಗಡೆ ಮಾಡಿದೆ.!! ಸೆಲ್ಫಿಗಾಗಿಯೇ ರೂಪಿತವಾಗಿರುವ ಶಿಯೋಮಿ "ರೆಡ್‌ಮಿ ವೈ1" ಕ್ಯಾಮೆರಾ ಗುಣಮಟ್ಟ ಅತ್ಯದ್ಬುತವಾಗಿರಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.!!

RAM ಮತ್ತು ಮೆಮೊರಿ!!

RAM ಮತ್ತು ಮೆಮೊರಿ!!

ಶಿಯೋಮಿ "ರೆಡ್‌ಮಿ ವೈ1" ಸ್ಮಾರ್ಟ್‌ಫೋನ್ 3GB RAM ಮತ್ತು 32GB ಮೆಮೊರಿ ಹಾಗೂ 4G RAM ಮತ್ತು 64GB ಮೆಮೊರಿ ಹೊಂದಿರುವ ಎರಡು ವೆರಿಯಂಟ್‌ನಲ್ಲಿ ಬಿಡುಗಡೆಯಾಗಿದೆ. 3GB RAM ಮತ್ತು 32GB ವೆರಿಯಂಟ್ ಬೆಲೆ 8,999 ರೂ.ಆದರೆ, 4G RAM ಮತ್ತು 64GB ವೆರಿಯಂಟ್ ಫೋನ್ ಬೆಲೆ 10,999 ರೂಪಾಯಿಗಳಾಗಿವೆ.!!

"ರೆಡ್‌ಮಿ ವೈ1" ಪ್ರೊಸೆಸರ್ ಯಾವುದು?

ಸ್ನ್ಯಾಪ್‌ಡ್ರಾಗನ್ 435 ಆಕ್ಟಕೋರ್ ಪ್ರೊಸೆಸರ್ "ರೆಡ್‌ಮಿ ವೈ1" ಸ್ಮಾರ್ಟ್‌ಪೋನ್‌ನಲ್ಲಿದೆ. ಕ್ಯಾಮೆರಾ ಗುಣಮಟ್ಟ ಹೆಚ್ಚಿಸುವ ಸಲುವಾಗಿ 435 ಆಕ್ಟಕೋರ್ ಪ್ರೊಸೆಸರ್ ಬಳಕೆ ಮಾಡಲಾಗಿದೆ ಎನ್ನಬಹುದಾಗಿದ್ದು, ಬಜೆಟ್ ಬೆಲೆಯ ಫೋನ್ ಆಗಿರುವುದರಿಂದ ಕಾರ್ಯನಿರ್ವಹಣೆ ಉತ್ತಮವಾಗಿರಲಿದೆ.!!

ಡ್ಯುಯಲ್ ನ್ಯಾನೊ ಸಿಮ್!!

ಡ್ಯುಯಲ್ ನ್ಯಾನೊ ಸಿಮ್!!

"ರೆಡ್‌ಮಿ ವೈ1" ಸ್ಮಾರ್ಟ್‌ಪೋನ್‌ ಎರಡು ನ್ಯಾನೊ ಸಿಮ್‌ಗಳನ್ನು ಮತ್ತು ಒಂದು ಎಸ್‌ಡಿ ಕಾರ್ಡ್ ಅನ್ನು ಒಟ್ಟಿಗೆ ಹಾಕಬಹುದಾದ ಆಯ್ಕೆಯನ್ನು ಹೋಂದಿದೆ.!! ಹಾಗಾಗಿ, ಎಸ್‌ಡಿ ಕಾರ್ಡ್ ಬಳಕೆ ಮಾಡಲು ಒಂದು ಸಿಮ್ ಅನ್ನು ತೆಗೆದಿಡುವ ಅವಶ್ಯಕತೆ ಈ ಸ್ಮಾರ್ಟ್‌ಫೋನ್‌ನಲ್ಲಿಲ್ಲ.!!

Best Mobiles in India

English summary
‍Xioami resmi Y1, have a look at the specifications and price.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+