ಶಿಯೋಮಿ ರೆಡ್ ಮಿ ವೈ 2 ಲಾಂಚ್...9,999 ರೂ.ಗೆ ಇದಕ್ಕಿಂತ ಬೇರೆ ಮೊಬೈಲ್ ಇಲ್ಲ..!

By Avinash
|

ಇತ್ತೀಚಿಗಷ್ಟೇ ಮೇ.31ರಂದು ಮೆಗಾ ಇವೆಂಟ್ ಮಾಡಿ ರೆಡ್ ಮಿ 8 ಸ್ಮಾರ್ಟ್ ಪೋನ್ ಬಿಡುಗಡೆ ಮಾಡಿದ್ದ ಶಿಯೋಮಿ, ಜೂನ್ 12ಕ್ಕೆ ರೆಡ್ ಮಿ 6 ಬಿಡುಗಡೆ ಮಾಡಲು ನಿರ್ಧರಿಸಿದೆ. ಇವೆರಡರ ಮಧ್ಯೆಯೇ ಇಂದು ಭಾರತದಲ್ಲಿ ತನ್ನ ರೆಡ್ ಮಿ ವೈ 2 ಸ್ಮಾರ್ಟ್ ಪೋನ್ ಬಿಡುಗಡೆ ಮಾಡಿದ್ದು, ಸೆಲ್ಫಿ ಸೆಂಟ್ರಿಕ್ ಸ್ಮಾರ್ಟ್ ಪೋನ್ ಭಾರತೀಯ ಸ್ಮಾರ್ಟ್ ಪೋನ್ ಕ್ಷೇತ್ರದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.

ಶಿಯೋಮಿ ರೆಡ್ ಮಿ ವೈ 2 ಲಾಂಚ್...9,999 ರೂ.ಗೆ ಇದಕ್ಕಿಂತ ಬೇರೆ ಮೊಬೈಲ್ ಇಲ್ಲ..!

ಬಹು ನಿರೀಕ್ಷಿತ ರೆಡ್ ಮಿ ವೈ 2 Redmi Y2 ಇಂದು ನವದೆಹಲಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿಯೋಮಿಯ ಭಾರತದ ಮುಖ್ಯಸ್ಥ ಮನೋಜ್ ಕುಮಾರ್ ಜೈನ್ ಬಿಡುಗಡೆಗೊಳಿಸಿದ್ದು, ಅಮೆಜಾನ್ ಎಕ್ಸ್ ಕ್ಲೂಸಿವ್ ಸೇಲ್ ನಲ್ಲಿ ಲಭ್ಯವಿದೆ. ಚೀನಾದಲ್ಲಿ ವರ್ಷಾರಂಭದಲ್ಲಿ ಬಿಡುಗಡೆಗೊಂಡಿದ್ದ Redmi S2 ಸ್ಮಾರ್ಟ್ ಪೋನ್ ಅನ್ನು ರಿಬ್ರಾಂಡ್ ಮಾಡಲಾಗಿದ್ದು, ರೆಡ್ ಮಿ ವೈ 2 ಸ್ಮಾರ್ಟ್ ಪೋನ್ ಆಗಿ ಹೊರ ಬಂದಿದೆ. ಹೊಸ ಸ್ಮಾರ್ಟ್ ಪೋನ್ ಬಗ್ಗೆ ಗ್ರಾಹಕರು ಕುತೂಹಲ ವ್ಯಕ್ತಪಡಿಸಿದ್ದು, ಹೊಸ ಫೀಚರ್ ಗಳ ಬಳಕೆಗೆ ಉತ್ಸುಕರಾಗಿದ್ದಾರೆ. ಹೊಸ ರೆಡ್ ಮಿ ವೈ 2ನಲ್ಲಿ ಏನೆಲ್ಲ ವಿಶಿಷ್ಟ ಫೀಚರ್ಸ್ ಗಳಿವೆ, ಬೇರೆ ಸ್ಮಾರ್ಟ್ ಪೋನ್ ಗಳಿಗಿಂತ ಹೇಗೆ ಭಿನ್ನ ಎಂಬುದನ್ನು ನೋಡಿ.

How to Send Message to Multiple Contacts on WhatsApp - GIZBOT KANNADA

10 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿವೆ ಈ ಬೆಸ್ಟ್ ಡ್ಯುಯಲ್ ಕ್ಯಾಮೆರಾ ಫೋನ್‌ಗಳು!!10 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿವೆ ಈ ಬೆಸ್ಟ್ ಡ್ಯುಯಲ್ ಕ್ಯಾಮೆರಾ ಫೋನ್‌ಗಳು!!

ಸ್ಪೋರ್ಟ್ಸ್ 16MP AI ಕ್ಯಾಮೆರಾ

ಸ್ಪೋರ್ಟ್ಸ್ 16MP AI ಕ್ಯಾಮೆರಾ

ಹೊಸ ಶಿಯೋಮಿ ರೆಡ್ ಮಿ ವೈ 2 ಸೆಲ್ಫಿ ಸೆಂಟ್ರಿಕ್ ಸ್ಮಾರ್ಟ್ ಪೋನ್ ಆಗಿದ್ದು, ಸೆಲ್ಫಿ ಪ್ರಿಯರಿಗೆ ಹೇಳಿಮಾಡಿಸಿದಂತಿದೆ. 16MP AI ಕ್ಯಾಮೆರಾ ಹೊಂದಿದ್ದು, ಸೆನ್ಸಾರ್ f/2.0 ಅಪಾರ್ಚರ್, AI ಇಂಟಿಗ್ರೇಷನ್, ಸೆಲ್ಫಿ LED ಫ್ಲಾಶ್ ಲೈಟ್ ಹೊಂದಿದೆ. ಇದಲ್ಲದೇ Auto HDR, AI ಪೊರ್ಟರೆಟ್ ಸೆಲ್ಫಿ ಮತ್ತು ಬ್ಯುಟಿಪೈ ಮೊಡ್ ಹೊಂದಿದ್ದು, 10 ರೀತಿಯ ಪೋಟೋ ಎಡಿಟಿಂಗ್ ನಲ್ಲಿ ಬಳಕೆಯಾಗಲಿವೆ. ರೆಡ್ ಮಿ ವೈ 2 ಕ್ಯಾಮೆರಾ ಗುಣಮಟ್ಟ ವಿವೋ ವಿ9 ಮತ್ತು ಸ್ಯಾಮಸಂಗ್ ಗೆಲಾಕ್ಸಿ ಜೆ7 ಕ್ಯಾಮೆರಾ ಗುಣಮಟ್ಟಕ್ಕಿಂತ ಹೆಚ್ಚಿದೆಯಂತೆ. ಬ್ಯಾಕ್ ಡ್ಯುಯಲ್ ಕ್ಯಾಮೆರಾ ಹೊಂದಿದ್ದು, ಪ್ರೈಮರಿ ಕ್ಯಾಮೆರಾ 12MP ಮತ್ತು ಸೆಕೆಂಡರಿ ಕ್ಯಾಮೆರಾ 5MP ಸೆನ್ಸಾರ್ ಅನ್ನು ಹೊಂದಿದೆ.

ಡಿಸ್ ಪ್ಲೇ ಮತ್ತು ಕಾರ್ಯಾಚರಣೆ

ಡಿಸ್ ಪ್ಲೇ ಮತ್ತು ಕಾರ್ಯಾಚರಣೆ

ರೆಡ್ ಮಿ ವೈ 2 5.99 ಇಂಚ್ IPS LCD (720x1440 ಪಿಕ್ಸೆಲ್ಸ್) ಡಿಸ್ ಪ್ಲೇ ಹೊಂದಿದ್ದು, 18:9 ರೆಸಲೂಷನ್, 2.5 ಡಿ.ಕರ್ವ್ ಗ್ಲಾಸ್ ನಿಂದ ರಕ್ಷಿಸಲ್ಪಟ್ಟಿದೆ. Android 8 ಒರಿಯೋ ಆಧಾರಿತ MIUI 9.5, ಸ್ನಾಪ್ ಡ್ರಾಗನ್ 625, 2.0 GHz Octa Core ಪ್ರೊಸೆಸೆರ್ ನಿಂದ ಕಾರ್ಯನಿರ್ವಹಿಸಲಿದೆ. ರೆಡ್ ಮಿ ವೈ 1 ಸ್ಮಾರ್ಟ್ ಪೋನ್ ಗಿಂತ 37 % ಉತ್ತಮವಾಗಿ ಕಾರ್ಯನಿರ್ವಹಿಸಲಿದೆಯಂತೆ.

ಸ್ಮಾರ್ಟ್ ಪೋನ್ ಭದ್ರತೆಗಾಗಿ ಫೇಸ್ ಅನ್ ಲಾಕ್

ಸ್ಮಾರ್ಟ್ ಪೋನ್ ಭದ್ರತೆಗಾಗಿ ಫೇಸ್ ಅನ್ ಲಾಕ್

ರೆಡ್ ಮಿ ವೈ 2 AI ಆಧಾರಿತ ಫೇಸ್ ಅನ್ ಲಾಕ್ ಮತ್ತು ಫಿಂಗರ್ ಪ್ರಿಂಟ್ ಸೆನ್ಸಾರ್ ಅನ್ ಲಾಕ್ ವಿಶೇಷ ಹೊಂದಿರಲಿದೆ. ಫಿಂಗರ್ ಪ್ರಿಂಟ್ ಸೆನ್ಸಾರ್ ಅನ್ನು ಸೆಲ್ಫಿ ತೆಗೆದುಕೊಳ್ಳುವುದಕ್ಕೂ ಸಹ ಬಳಸಬಹುದಾಗಿದ್ದು, ಸೆಲ್ಫಿ ಪ್ರಿಯರಿಗೆ ಉತ್ತಮ ಸ್ಮಾರ್ಟ್ ಪೋನ್ ಆಗಿದೆ.

ಅಗ್ಗದ ಬೆಲೆಯಲ್ಲಿ ಉತ್ತಮ ಸೆಲ್ಫಿ ಸ್ಮಾರ್ಟ್ ಪೋನ್

ಅಗ್ಗದ ಬೆಲೆಯಲ್ಲಿ ಉತ್ತಮ ಸೆಲ್ಫಿ ಸ್ಮಾರ್ಟ್ ಪೋನ್

3GB RAM ಮತ್ತು 32GB ಮೆಮೊರಿ ಹೊಂದಿರುವ ರೆಡ್ ಮಿ ವೈ 2 9,999 ರೂ.ಗೆ ಲಭ್ಯವಿದ್ದರೆ, 4GB RAM ಮತ್ತು 64GB ಮೆಮೊರಿ ಹೊಂದಿರುವ ರೆಡ್ ಮಿ ವೈ 2ನ ಬೆಲೆ 12,999 ರೂ. ಇದ್ದು Amazon India, Mi.com ಮತ್ತು Mi Home Storeಗಳಲ್ಲಿ ಜೂನ್ 12ರಿಂದ ಲಭ್ಯವಿವೆ. ಸ್ಮಾರ್ಟ್ ಪೋನ್ ಡಾರ್ಕ್ ಗ್ರೇ, ಗೋಲ್ಡ್, ರೋಸ್ ಗೋಲ್ಡ್ ಬಣ್ಣಗಳ ಆಯ್ಕೆಯಿದೆ. ಮೈಕ್ರೋSD ಕಾರ್ಡ್ ಮೂಲಕ 256GB ವರೆಗೂ ಮೆಮೊರಿ ವಿಸ್ತರಿಸಬಹುದಾಗಿದೆ.

MIUI 10 ಹೊಂದಿದ ಸ್ಮಾರ್ಟ್ ಪೋನ್

MIUI 10 ಹೊಂದಿದ ಸ್ಮಾರ್ಟ್ ಪೋನ್

ಶಿಯೋಮಿಯ ಇತ್ತೀಚಿನ ಕಸ್ಟಮ್ ಆಂಡ್ರಾಯ್ಡ್ ಆವೃತ್ತಿ MIUI 10 ರೆಡ್ ಮಿ ವೈ2 ಸ್ಮಾರ್ಟ್ ಪೋನ್ ನಲ್ಲಿ ಬಳಕೆಯಾಗಿದ್ದು. ಆಂಡ್ರಾಯ್ಡ್ ಒರಿಯೋ ಆಧಾರದಲ್ಲಿ ಕಾರ್ಯನಿರ್ವಹಿಸಲಿದೆ. MIUI 10 ವೇಗ, ವಿನ್ಯಾಸ, ಗೆಸ್ಚರ್ಸ್ ಮತ್ತು ಶಬ್ಧವನ್ನು ಉತ್ತಮ ಗೊಳಿಸಿದ್ದು, ಬಹಳಷ್ಟು ಪ್ರೀಲೋಡೆಡ್ ವೆಬ್ ಆಪ್ ಗಳೊಂದಿಗೆ ಬರುತ್ತಿದೆ.

ICICI ಬ್ಯಾಂಕ್ ಮತ್ತು ಏರಟೆಲ್ ನಿಂದ ಆಫರ್

ICICI ಬ್ಯಾಂಕ್ ಮತ್ತು ಏರಟೆಲ್ ನಿಂದ ಆಫರ್

ICICI ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಗಳಿಂದ Redmi Y2 ಖರೀದಿಸಿದರೆ 500 ರೂ. ತ್ವರಿತ ರಿಯಾಯಿತಿ ನೀಡಿದ್ದು, ಏರ್ ಟೆಲ್ ಸಹ Redmi Y2 ಖರೀದಿಸಿದವರಿಗೆ 1,800 ರೂ. ತ್ವರಿತ ಕ್ಯಾಶ್ ಬ್ಯಾಕ್ ಮತ್ತು 240GBವರೆಗೆ ಡಾಟಾ ಉಚಿತವಾಗಿ ನೀಡುತ್ತಿದೆ.

ಮತ್ತೇನಿದೆ...

ಮತ್ತೇನಿದೆ...

ಡ್ಯುಯಲ್ ಸಿಮ್, 4G VoLTE, ವೈ-ಫೈ 802.11 b/g/n, ಬ್ಲುಟೂತ್ v4.2, GPS/ A-GPS, 3.5mm ಹೆಡ್ ಪೋನ್ ಜಾಕ್, ಮೈಕ್ರೋ USB ಪೋರ್ಟ್ ಮತ್ತು 3080mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ.

Best Mobiles in India

English summary
Xiaomi Redmi Y2 With AI-Based Selfie Camera, Face Unlock Launched in India. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X