Just In
Don't Miss
- Movies
ತಮನ್ನಾ ಮತ್ತು ವಿರಾಟ್ ಕೊಹ್ಲಿಗೆ ಕೇರಳ ಹೈಕೋರ್ಟ್ ನೋಟಿಸ್
- News
ಸಿಂದಗಿ ಕ್ಷೇತ್ರದ ಜೆಡಿಎಸ್ ಶಾಸಕ ಎಂಸಿ ಮನಗೂಳಿ ವಿಧಿವಶ
- Lifestyle
ಗುರುವಾರದ ಭವಿಷ್ಯ : ಮೇಷದವರಿಗೆ ಆರ್ಥಿಕ ಬಲ, ಉಳಿದ ರಾಶಿಫಲ ಹೇಗಿದೆ?
- Sports
ಐಎಸ್ಎಲ್: ಸಮಬಲ ಸಾಧಿಸಿದ ಕೇರಳ ಬ್ಲಾಸ್ಟರ್ಸ್, ಜೆಮ್ಷೆಡ್ಪುರ
- Education
BEL Recruitment 2021: 22 ಸರಂಕ್ಷಣೆ ಅಧಿಕಾರಿ, ಕಿರಿಯ ಮೇಲ್ವಿಚಾರಕರು ಮತ್ತು ಹವಿಲ್ದಾರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಅನಾವರಣವಾಯ್ತು 2021ರ ಹ್ಯುಂಡೈ ಟ್ಯುಸಾನ್ ಎನ್ ಲೈನ್ ಎಸ್ಯುವಿ
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 27ರ ದರ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪ್ರತಿದಿನ ಮಾರಾಟವಾದ 'ರೆಡ್‌ಮಿ ನೋಟ್ 8' ಫೋನ್‌ಗಳ ಸಂಖ್ಯೆ ತಲೆತಿರುಗಿಸುತ್ತಿದೆ!
ಭಾರತದ ನಂ 1 ಮೊಬೈಲ್ ಕಂಪೆನಿಯಾಗಿರುವ ಶಿಯೋಮಿಯ ಮೊದಲ ಸ್ಥಾನ ಶೀಘ್ರದಲ್ಲೇ ಬದಲಾಗುವುದಿಲ್ಲ ಎನ್ನಬಹುದು. ಏಕೆಂದರೆ, ಕಂಪೆನಿಯ ಇತ್ತೀಚಿನ ಸ್ಟೇಟಸ್ ಅಪ್‌ಡೇಟ್‌ನ ಪ್ರಕಾರ, ಶಿಯೋಮಿಯ ಬ್ರ್ಯಾಂಡ್ ರೆಡ್‌ಮಿ ನೋಟ್ 8 ಸರಣಿ ಸ್ಮಾರ್ಟ್‌ಫೋನ್‌ಗಳು ಕೇವಲ 30 ದಿನಗಳಲ್ಲಿ 1 ಮಿಲಿಯನ್ (10 ದಶಲಕ್ಷ) ಮಾರಾಟವಾಗಿವೆ.! ಕ್ರಮವಾಗಿ 48 ಎಂಪಿ ಮತ್ತು 64 ಎಂಪಿ ಪ್ರಾಥಮಿಕ ಕ್ಯಾಮೆರಾಗಳನ್ನು ಹೊಂದಿರುವ ರೆಡ್‌ಮಿ ನೋಟ್ 8 ಮತ್ತು ರೆಡ್‌ಮಿ ನೋಟ್ 8 ಪ್ರೊ ಎರಡೂ ಸ್ಮಾರ್ಟ್‌ಫೋನ್‌ಗಳು ದಾಖಲೆ ನಿರ್ಮಿಸುವಲ್ಲಿ ಯಶಸ್ವಿಯಾಗಿವೆ.

ಹೌದು, ಪ್ರತಿದಿನ 33,333 ಸಾವಿರದಷ್ಟು (30 ದಿನಗಳಲ್ಲಿ 1 ಮಿಲಿಯನ್) ಶಿಯೋಮಿ ರೆಡ್ಮಿ ನೋಟ್ 8 ಮತ್ತು ರೆಡ್‌ಮಿ ನೋಟ್ 8 ಪ್ರೊ ಸ್ಮಾರ್ಟ್‌ಫೋನ್‌ಗಳು ಮಾರಾಟವಾಗಿರುವ ಬಗ್ಗೆ ಶಿಯೋಮಿ ಮಾಹಿತಿ ನೀಡಿದ್ದು, ದೇಶದಲ್ಲಿ ಇದೇ ಮೊದಲ ಬಾರಿಗೆ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಒಂದು ಈ ಪರಿ ಮಾರಾಟವಾಗಿದೆ ಎಂದು ಹೇಳಲಾಗಿದೆ. ಕೇವಲ 10,000 ರೂಪಾಯಿಗಳಿಂದ ಶುರುವಾಗಿ ಗ್ರಾಹಕರ ನಿದ್ದೆಗೆಡಿಸಿದ್ದ ಶಿಯೋಮಿ ರೆಡ್ಮಿ ನೋಟ್ 8 ಮತ್ತು ರೆಡ್‌ಮಿ ನೋಟ್ 8 ಪ್ರೊ ಎರಡೂ ಸ್ಮಾರ್ಟ್‌ಫೋನ್‌ಗಳಿಗೆ ಭಾರತೀಯರು ಮನಸೋತಿರುವುದು ಖಚಿತವಾಗಿದೆ.

4 ಜಿಬಿ RAM + 64 ಜಿಬಿ ಸಂಗ್ರಹ ಮಾದರಿಯ ರೆಡ್ಮಿ ನೋಟ್ 8 ಬೆಲೆ 9,999 ರೂ.ಗಳಾದರೆ, 6 ಜಿಬಿ RAM + 128 ಜಿಬಿ ಮಾದರಿಯ ರೆಡ್ಮಿ ನೋಟ್ 8 ಬೆಲೆ ಕೇವಲ 12,999 ರೂ.ಗಳಾಗಿವೆ. ಹಾಗೆಯೇ, 6 ಜಿಬಿ RAM + 64 ಜಿಬಿ ಮೆಮೊರಿ ಮಾದರಿಯ ರೆಡ್ಮಿ ನೋಟ್ 8 ಪ್ರೊ 14,999 ರೂ., 6 ಜಿಬಿ RAM + 128 ಜಿಬಿ ಮಾದರಿಯ ಬೆಲೆ 15,999 ರೂ. ಮತ್ತು 8 ಜಿಬಿ RAM+ 128 ಜಿಬಿ ಸಂಗ್ರಹ ಮಾದರಿದ ಹೈ ಎಂಡ್ ಫೋನಿನ ಬೆಲೆ ಕೇವಲ 17,999 ರೂ.ಗಳಾಗಿವೆ. ಇನ್ನು ಕಳೆದ ಅಕ್ಟೋಬರ್ 21 ರಿಂದಲೇ ದೇಶದಲ್ಲಿ ಎಲ್ಲಾ ಮಾದರಿ ಫೋನ್‌ಗಳು ಮಾರಾಟಕ್ಕೆ ಬಂದಿವೆ.

ರೆಡ್‌ಮಿ ನೋಟ್ 8 ಮತ್ತು ರೆಡ್‌ಮಿ ನೋಟ್ 8 ಪ್ರೊ ಎರಡೂ ಫೋನ್‌ಗಳು ಶಕ್ತಿಯುತವಾದ ಪ್ರೊಸೆಸರ್, ನಾಲ್ಕು ಹಿಂಬದಿಯ ಕ್ಯಾಮೆರಾಗಳು ಸೇರಿದಂತೆ ಹಲವು ವಿಶೇಷ ಫೀಚರ್ಸ್ ಹೊತ್ತು ಮೊಬೈಲ್ ಮಾರುಕಟ್ಟೆಗೆ ಕಾಲಿಟ್ಟಿವೆ. ರೆಡ್‌ಮಿ ನೋಟ್ 8 ಪ್ರೊ 64 ಎಂಪಿ ಕ್ವಾಡ್-ಕ್ಯಾಮೆರಾ ಸೆಟಪ್‌ನೊಂದಿಗೆ ಬಂದಿರುವ ವಿಶ್ವದ ಮೊದಲ ಫೋನ್ ಎಂಬ ಹೆಗ್ಗಳಿಕೆಯನ್ನು ಸಹ ಪಡೆದಿದೆ. ಹಾಗಾಗಿ, ನೀವು ಕೂಡ ಕಡಿಮೆ ಬೆಲೆಯಲ್ಲಿ ಹೆಚ್ಚು ಫೀಚರ್ಸ್ ಹೊಂದಿರುವ ಸ್ಮಾರ್ಟ್‌ಫೋನ್ ಖರೀದಿಸಬೇಕು ಎಂದರೆ ಈ ಎರಡೂ ಫೋನ್‌ಗಳು ನಿಮ್ಮ ಮೊದಲ ಆಯ್ಕೆಯಾಗಬಹುದು.

ದೊಡ್ಡ ಆವೃತ್ತಿಯೊಂದಿಗೆ ಪ್ರಾರಂಭವಾಗುವ ನೋಟ್ 8 ಪ್ರೊ ಸ್ಮಾರ್ಟ್‌ಫೋನ್ 6.53-ಇಂಚಿನ ಪೂರ್ಣ-ಎಚ್‌ಡಿ + (1080x2340 ಪಿಕ್ಸೆಲ್‌ಗಳು) ಪರದೆಯನ್ನು ಹೊಂದಿದೆ. 19.5: 9 ಆಕಾರ ಅನುಪಾತ, ವಾಟರ್‌ಡ್ರಾ -ಶೈಲಿಯ ನಾಚ್ ಮತ್ತು ಗೊರಿಲ್ಲಾ ಗ್ಲಾಸ್ 5 ಅನ್ನು ಮುಂಭಾಗ ಮತ್ತು ಹಿಂಭಾಗದಲ್ಲಿ ಪ್ಯಾಕ್ ಮಾಡುತ್ತದೆ. ಶಿಯೋಮಿ ರೆಡ್ಮಿ ನೋಟ್ 8 6.39-ಇಂಚಿನ ಪೂರ್ಣ-ಎಚ್‌ಡಿ + (1080x2340 ಪಿಕ್ಸೆಲ್‌ಗಳು) ಪರದೆ ಹೊಂದಿದೆ, 90 ಪ್ರತಿಶತದಷ್ಟು ಸ್ಕ್ರೀನ್-ಟು -ಬಾಡಿ ಅನುಪಾತ ಮತ್ತು ವಾಟರ್ ಡ್ರಾಪ್ ಶೈಲಿಯ ನಾಚ್ ಅಪ್ ಫ್ರಂಟ್ ಲುಕ್ ಹೊಂದಿದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190