Subscribe to Gizbot

ಶಿಯೋಮಿ ಮಾಸ್ಟರ್‌ ಪ್ಲಾನ್: ಮೊಬೈಲ್‌ ಮಾರುಕಟ್ಟೆಯಲ್ಲಿ ಹಿಂದೆಂದೂ ಕಾಣದ ಆಫರ್.!

Written By:

ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ತನ್ನದೇ ಭದ್ರ ಸಾಮ್ರಾಜ್ಯವನ್ನು ನಿರ್ಮಿಸುವ ಯೋಜನೆಯನ್ನು ರೂಪಿಸಿರುವ ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಕ ಶಿಯೋಮಿ, ಮಾರುಕಟ್ಟೆಗೆ ದಿನಕ್ಕೊಂದು ಸ್ಮಾರ್ಟ್‌ಫೋನ್ ಲಾಂಚ್ ಮಾಡುವುದಲ್ಲದೇ, ಅವುಗಳ ಖರೀದಿಯ ಮೇಲೆ ಆಫರ್ ಗಳನ್ನು ಇತರೆ ಕಂಪನಿಗಳೊಡನೆ ಒಪ್ಪಂದ ಮಾಡಿಕೊಂಡು ನೀಡುತ್ತಿದೆ.

ಶಿಯೋಮಿ ಮಾಸ್ಟರ್‌ ಪ್ಲಾನ್: ಮೊಬೈಲ್‌ ಮಾರುಕಟ್ಟೆಯಲ್ಲಿ ಹಿಂದೆಂದೂ ಕಾಣದ ಆಫರ್.!

ಈಗಾಗಲೇ ಶಿಯೋಮಿ ಹಳೇಯ ಫೋನ್‌ಗಳನ್ನು ಹೊಂದಿರುವವರು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಕೊಂಡುಕೊಳ್ಳಲು ಶಿಯೋಮಿ ಎಕ್ಸ್‌ಚೇಂಜ್ ಆಫರ್ ವೊಂದನ್ನು ನೀಡಲು ಮುಂದಾಗಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ತನ್ನದೇ ಹವಾ ಇರುವಂತೆ ಮಾಡಿಕೊಳ್ಳಲು ಸದ್ದಿಲ್ಲದೇ ಸಿದ್ಧತೆ ನಡೆಸಿದೆ. ಹೊಸ ಸ್ಮಾರ್ಟ್‌ಫೋನ್ ಕೊಳ್ಳಬೇಕು ಎನ್ನುವವರು ಆನ್‌ಲೈನಿನಲ್ಲಿಯೇ ಎಕ್ಸ್‌ಚೇಂಜ್ ಆಫರ್ ಪಡೆಯಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕ್ಯಾಷಿಫೈ ನೊಂದಿಗೆ ಒಪ್ಪಂದ:

ಕ್ಯಾಷಿಫೈ ನೊಂದಿಗೆ ಒಪ್ಪಂದ:

ಆನ್‌ಲೈನ್‌ ಮಾರುಕಟ್ಟೆಯಲ್ಲಿ ಹಳೇಯ ಮೊಬೈಲ್‌ಗಳನ್ನು ಖರೀದಿಸುವ ಕ್ಯಾಷಿಫೈ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿರುವ ಶಿಯೋಮಿ, ತನ್ನ ಹಳೇಯ ಸ್ಮಾರ್ಟ್‌ಫೋನ್ ಹೊಂದಿರುವವರಿಗೆ ಹೊಸ ಸ್ಮಾರ್ಟ್‌ ಫೋನ್‌ ನೀಡಲು ಮುಂದಾಗಿದೆ.

Redmi Note 5 ಬಿಡುಗಡೆಗೆ..! ಬೆಸ್ಟ್, ಬಜೆಟ್, ಬೊಂಬಾಟ್
ಆನ್‌ಲೈನ್‌ನಲ್ಲಿ ಹೇಗೆ..?

ಆನ್‌ಲೈನ್‌ನಲ್ಲಿ ಹೇಗೆ..?

ಶಿಯೋಮಿ ತನ್ನ ವೆಬ್‌ಸೈಟಿನಲ್ಲಿ ಮೊಬೈಕ್ ಎಕ್ಸ್‌ಚೇಂಜ್‌ ಮಾಡಿಕೊಳ್ಳಲು ವ್ಯವಸ್ಥೆಯನ್ನು ಮಾಡಿದ್ದು, ಈಗಾಗಲೇ ಶಿಯೋಮಿ ಫೋನ್ ಹೊಂದಿವರು ಅಲ್ಲಿ ತಮ್ಮ ಮೊಬೈಲ್ IMEI ಸಂಖ್ಯೆಯನ್ನು ದಾಖಲಿಸಿ, ಮೊಬೈಲ್ ಬಗ್ಗೆ ಮಾಹಿತಿಯನ್ನು ನೀಡಬೇಕಾಗಿದೆ. ಈ ಸಂದರ್ಭದಲ್ಲಿ ಮೊಬೈಲ್ ಮೌಲ್ಯ ನಿರ್ಧರಿಸುವ ಕಂಪನಿ ಒಂದು ಕೂಪನ್ ನೀಡಲಿದೆ.

ಹೊಸ ಫೋನ್:

ಹೊಸ ಫೋನ್:

ಶಿಯೋಮಿ ಆನ್‌ಲೈನಿನಲ್ಲಿ ನೀಡುವ ಕೂಪನ್ ಪಡೆದುಕೊಂಡು, ಮಿ.ಕಾಮ್ ಇಲ್ಲವೇ ಮಿ.ಸ್ಟೋರ್‌ಗಳಲ್ಲಿ ನೀವು ಹೊಸ ಫೋನ್‌ ಕೊಳ್ಳಬಹುದಾಗಿದೆ. ಈ ಸಂದರ್ಭದಲ್ಲಿ ಕೂಪನ್ ನೀಡಿದರೆ ಅದರಲ್ಲಿರು ಮೌಲ್ಯದಷ್ಟು ಕಡಿಮೆಗೆ ಹೊಸ ಫೋನ್ ದೊರೆಯಲಿದೆ. ಈ ಸಂದರ್ಭದಲ್ಲಿ ಹಳೇಯ ಫೋನ್‌ ಅನ್ನು ಕಂಪನಿಗೆ ನೀಡಬೇಕಾಗಿದೆ.

ಹೇಗೆ..?

ಹೇಗೆ..?

ಎಕ್ಸ್‌ಚೇಂಜ್ ಮಾಡಿಕೊಳ್ಳಬೇಕಾದರೆ ಸ್ಮಾರ್ಟ್‌ಫೋನಿಗೆ ಯಾವುದೇ ಹಾನಿಯಾಗಿರಬಾರದು ಮತ್ತು ಫೋನ್ ಕಾರ್ಯನಿರ್ವಹಿಸುತ್ತಿರ ಬೇಕು. ಇಂತಹ ಸಂದರ್ಭದಲ್ಲಿ ಮಾತ್ರವೇ ಎಕ್ಸ್‌ಚೇಂಜ್ ಲಾಭ ಪಡೆದುಕೊಳ್ಳಲು ಸಾಧ್ಯ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Xiaomi Smartphone Exchange Offer Comes Online via Mi.com. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot