Subscribe to Gizbot

ಶಿಯೋಮಿ ಗಿಮಿಕ್! ಮೊಬೈಲ್ ಮಾರುಕಟ್ಟೆಯಲ್ಲಿ ಭಾರೀ ಸಂಚಲನ..ಗ್ರಾಹಕರು ಫುಲ್ ಖುಷ್!!

Written By:

ಆಪಲ್ 10, ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್‌9 ಸ್ಮಾರ್ಟ್‌ಫೋನುಗಳಿಗೆ ಟಾಂಗ್ ನೀಡಲು ಶಿಯೋಮಿ ಕಂಪೆನಿ 'ಶಿಯೋಮಿ ಮೈ ಮಿಕ್ಸ್ 2ಎಸ್' ಸ್ಮಾರ್ಟ್‌ಫೋನ್ ಬಿಡುಗಡೆಯ ದಿನಾಂಕವನ್ನು ಈಗಾಗಲೇ ಪ್ರಕಟಿಸಿರುವುದು ನಿಮಗೆಲ್ಲಾ ಗೊತ್ತಿದೆ. ಆದರೆ ಅದಕ್ಕಿಂತಲೂ ಪ್ರಮುಖ ವಿಷಯವೆಂದರೆ ಇಂದು ಸ್ಮಾರ್ಟ್‌ಫೋನಿನ ಎಲ್ಲಾ ಫೀಚರ್‌ಗಳ ಮಾಹಿತಿ ಬಿಡುಗಡೆಯಾಗಿದೆ.!!

ಹೌದು, ಇದೇ ಮಾರ್ಚ್ ತಿಂಗಳು 27ನೇ ತಾರೀಖು ಬಿಡುಗಡೆಯಾಗುತ್ತಿರುವ 'ಶಿಯೋಮಿ ಮೈ ಮಿಕ್ಸ್ 2ಎಸ್' ಅಧಿಕೃತ ಮಾಹಿತಿಗಳೆಲ್ಲವನ್ನು ಶಿಯೋಮಿ ಮೂಲಗಳೇ ಹರಿಬಿಟ್ಟಿವೆ ಎಂದು ವರದಿಯಾಗಿದೆ.! ಮೊಬೈಲ್ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲು ಶಿಯೋಮಿ ಕಂಪೆನಿ ಸ್ಮಾರ್ಟ್‌ಫೋನ್ ಫೀಚರ್‌ಗಳನ್ನು ಲೀಕ್ ಮಾಡಿದೆ ಎಂದು ಹೇಳಲಾಗಿದೆ.!!

ಶಿಯೋಮಿ ಗಿಮಿಕ್! ಮೊಬೈಲ್ ಮಾರುಕಟ್ಟೆಯಲ್ಲಿ ಭಾರೀ ಸಂಚಲನ!!

ಹಾಗಾಗಿ, 'ಶಿಯೋಮಿ ಮೈ ಮಿಕ್ಸ್ 2ಎಸ್' ಸ್ಮಾರ್ಟ್‌ಫೋನ್ ಫೀಚರ್‌ಗಳ ಬಗ್ಗೆ ಇಲ್ಲಿಯವರೆಗೂ ಇದ್ದ ಊಹಾಪೋಹಕ್ಕೆ ಇದೀಗ ತೆರೆದಿದ್ದಿದೆ, ಹಾಗಾದರೆ, 'ಶಿಯೋಮಿ ಮೈ ಮಿಕ್ಸ್ 2ಎಸ್' ಸ್ಮಾರ್ಟ್‌ಫೋನ್‌ ಹೊಂದಿರುವ ಫೀಚರ್‌ಗಳು ಯಾವುವು? ಸ್ಮಾರ್ಟ್‌ಫೋನ್ ವಿಶೇಷತೆಗಳೇನು? ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
403PPi ಡೆನ್‌ಸಿಟಿ ಡಿಸ್‌ಪ್ಲೇ !!

403PPi ಡೆನ್‌ಸಿಟಿ ಡಿಸ್‌ಪ್ಲೇ !!

6-ಇಂಚಿನ ಬೆಜೆಲ್ ಡಿಸ್‌ಪ್ಲೇ 1080x2160 ಪಿಕ್ಸೆಲ್‌ ಮೂಲಕ ಶಿಯೋಮಿ ಮೈ ಮಿಕ್ಸ್ 2ಎಸ್ ಸ್ಮಾರ್ಟ್‌ಫೋನ್ ಹೊರಬರಲಿದೆ, 403PPi ಡೆನ್‌ಸಿಟಿ ವೈಶಿಷ್ಟ್ಯ ಹೊಂದಿರುವವ 151.8x75.5x7.7 ಮಿಮೀ ಅಳತೆ, ಮತ್ತು 185 ಗ್ರಾಂ ತೂಕವಿರುವ ಮೈ ಮಿಕ್ಸ್ 2ಎಸ್ ಸ್ಮಾರ್ಟ್‌ಫೋನ್ ಸೆರಾಮಿಕ್ ಡಿಸೈನ್‌ನಿಂದ ಕಂಗೊಳಿಸುತ್ತಿದೆ..!!

ಕ್ಯಾಮೆರಾ ಹೇಗಿದೆ?

ಕ್ಯಾಮೆರಾ ಹೇಗಿದೆ?

ಸೋನಿ IMX386 ಸೆನ್ಸಾರ್, 1.25-ಮೈಕ್ರಾನ್ ಪಿಕ್ಸೆಲ್ ಹಾಗೂ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್, 5-ಪೀಸ್ ಲೆನ್ಸ್ ಮತ್ತು ಎಫ್ / 2.0 ಅಪರ್ಚರ್‌ನೊಂದಿದಗೆ 18k ಚಿನ್ನ ಲೇಪಿತ ಕ್ಯಾಮೆರಾ ರಿಂಗ್ ಮೂಲಕ ಶಿಯೋಮಿ ಮೈ ಮಿಕ್ಸ್ 2 ಎಸ್ ರಿಯರ್ ಕ್ಯಾಮೆರಾ ಹೊರಬಂದಿದೆ.! 16 ಮೆಗಾಪಿಕ್ಸೆಲ್‌ನ ಎರಡು ರಿಯರ್ ಕ್ಯಾಮೆರಾ ಸಾಮರ್ಥ್ಯ ಹೊಂದಿದ್ದರೆ, ಸೆಲ್ಫಿ ಕ್ಯಾಮೆರಾದ ಫೀಚರ್ ಬಗ್ಗೆ ತಿಳಿದುಬಂದಿಲ್ಲ.!!

ಪ್ರೊಸೆಸರ್ ಮತ್ತು ಕನೆಕ್ಟಿವಿಟಿ!!

ಪ್ರೊಸೆಸರ್ ಮತ್ತು ಕನೆಕ್ಟಿವಿಟಿ!!

ಶಿಯೋಮಿ ಮೈ ಮಿಕ್ಸ್ 2ಎಸ್ ಸ್ಮಾರ್ಟ್‌ಫೋನ್ ಕ್ವಾಲ್ಕಮ್‌ನ ಸ್ನ್ಯಾಪ್‌ಡ್ರಾಗನ್ 845 SoC ಪ್ರೊಸೆಸರ್ ಹಾಗೂ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್‌ ಮೂಲಕ ಕಾರ್ಯನಿರ್ವಹಿಸಲಿದೆ. ಜೊತೆಗೆ 4ಜಿ ಎಲ್‌ಟಿಇ, ಡ್ಯೂಯಲ್-ಬ್ಯಾಂಡ್ (2.4GHz ಮತ್ತು 5GHz), Wi-Fi, ಜಿಪಿಎಸ್ / ಎ-ಜಿಪಿಎಸ್, ಬ್ಲೂಟೂತ್ ವಿ 5.0, ಮತ್ತು ಟೈಪ್ ಸಿ ಯುಎಸ್‌ಬಿ ಎಲ್ಲವಕ್ಕೂ ಕನೆಕ್ಟಿವಿಟಿ ಹೊಂದಿದೆ.!!

RAM ಮತ್ತು ಮೆಮೊರಿ!!

RAM ಮತ್ತು ಮೆಮೊರಿ!!

ಕ್ವಾಲ್ಕಮ್‌ನ ಸ್ನ್ಯಾಪ್‌ಡ್ರಾಗನ್ 835 SoC ಪ್ರೊಸೆಸರ್ ಹೊಂದಿರುವ ಶಿಯೋಮಿ ಮೈ ಮಿಕ್ಸ್ 2 ಎಸ್ ಸ್ಮಾರ್ಟ್‌ಫೋನ್ 8GB RAM ಹಾಗೂ 256GB ಆಂತರಿಕ ಮೆಮೊರಿಯನ್ನು ಹೊಂದಿರಲಿದೆ ಎನ್ನಲಾಗಿದೆ. ಆದರೆ, ಮೈಕ್ರೋ ಎಸ್‌ಡಿಕಾರ್ಡ್ ಮೂಲಕ ಸ್ಮಾರ್ಟ್‌ಪೋನ್‌ಗೆ ಮೆಮೊರಿ ಆಯ್ಕೆಯ ಬಗ್ಗೆ ಮಾಹಿತಿ ಹೊರಬಿದ್ದಿಲ್ಲ.!!

ಇತರೆ ಏನೆಲ್ಲಾ ಫೀಚರ್ಸ್?

ಇತರೆ ಏನೆಲ್ಲಾ ಫೀಚರ್ಸ್?

ವಿಶ್ವದ ಟಾಪ್‌ ಕಂಪೆನಿಗಳಿಗೂ ಸೆಡ್ಡು ಹೊಡೆಯುವಂತಹ ಸಂವೇದಕಗಳಿಂದ ಮೈ ಮಿಕ್ಸ್ 2 ಹೊರಬಂದಿದೆ.! ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಬಾರೋಮೀಟರ್, ಡಿಜಿಟಲ್ ದಿಕ್ಸೂಚಿ, ಜ್ಯೋರೋಸ್ಕೋಪ್ ಮತ್ತು ಅಲ್ಟ್ರಾಸಾನಿಕ್ ಪೀಚರ್ಸ್‌ಗಳು ಸ್ಮಾರ್ಟ್‌ಫೋನ್‌ನಲ್ಲಿವೆ ಎಲ್ಲದಕ್ಕಿಂತ ಹೆಚ್ಚಾಗಿ 4000mAh ಬ್ಯಾಟರಿ ಶಕ್ತಿಯನ್ನು ಹೊಂದಿದೆ.!!

Xiaomi Redmi Note 5 Pro ಮಾರಾಟದ ದಿನಾಂಕ ಫಿಕ್ಸ್!! ಫುಲ್ ಡೀಟೆಲ್ಸ್!!
ಶಿಯೋಮಿ ಮೈ ಮಿಕ್ಸ್ 2 ಎಸ್ ಬೆಲೆ.!

ಶಿಯೋಮಿ ಮೈ ಮಿಕ್ಸ್ 2 ಎಸ್ ಬೆಲೆ.!

ಆಪಲ್ ಎಕ್ಸ್ ಮತ್ತು ಗ್ಯಾಲಾಕ್ಸಿ ಎಸ್‌ 9 ಸೀರೀಸ್‌ಗಳಿಗೆ ಸೆಡ್ಡುಹೊಡೆಯಲಿದೆ ಎನ್ನಲಾಗಿರುವ 8GB RAM ಹಾಗೂ 256GB ವೆರಿಯಂಟ್ ಸ್ಮಾರ್ಟ್‌ಫೋನ್ ಶಿಯೋಮಿ ಮೈ ಮಿಕ್ಸ್ 2ಎಸ್ ಸ್ಮಾರ್ಟ್‌ಫೊನ್ ಬೆಲೆ 550ರಿಂದ 600 ಡಾಲರ್‌ಗಳಿರಬಹುದು ಎಂದು ಅಂದಾಜಿಸಲಾಗಿದೆ. ಅಂದರೆ ಭಾರತದ ರೂಪಾಯಿಗಳ ಲೆಕ್ಕದಲ್ಲಿ 35,000 ರೂಪಾಯಿಗಳಾಗಬಹುದು.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
We all know very well that the well-known Chinese smartphone manufacturer Xiaomi’s Mi Mix 2 is one of the best Xiaomi mobiles.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot