Home
ಮೊಬೈಲ್

ಶಿಯೋಮಿ ಹೊಸ ಫೋನ್, ಮಾರುಕಟ್ಟೆಯಲ್ಲಿ ಹೊಸ ಇತಿಹಾಸ..!

By Srinidhi

ಭಾರತೀಯ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಚೀನಾ ಮೂಲದ ಸ್ಮಾರ್ಟ್‌ಫೋನ್ ಕಂಪನಿ ಶಿಯೋಮಿ, ಹೊಸದೊಂದು ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲು ಮುಂದಾಗಿದೆ. ಈ ಹೊಸ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ಇತಿಹಾಸವನ್ನು ನಿರ್ಮಿಸಿಲಿದೆ ಎನ್ನಲಾಗಿದೆ. ಬಜೆಟ್ ಬೆಲೆಯಲ್ಲಿ ಲಾಂಚ್ ಆಗಲಿರುವ ಹೊಸದೊಂದು ಸ್ಮಾರ್ಟ್‌ಫೋನ್ ಬೇರೆ ಯಾವುದೇ ಸ್ಮಾರ್ಟ್‌ಫೋನ್‌ನಲ್ಲಿಯೂ ಕಾಣಿಸಿದ ಆಯ್ಕೆಗಳನ್ನು ಹೊಂದಿರಲಿದೆ.

ಶಿಯೋಮಿ ಹೊಸ ಫೋನ್, ಮಾರುಕಟ್ಟೆಯಲ್ಲಿ ಹೊಸ ಇತಿಹಾಸ..!

ಸೆಪ್ಟೆಂಬರ್ 5 ರಂದು ಹೊಸದಾಗಿ ರೆಡ್‌ಮಿ 6 ಸ್ಮಾರ್ಟ್‌ಫೋನ್‌ ಅನ್ನು ಲಾಂಚ್ ಮಾಡಲು ಶಿಯೋಮಿ ಮುಂದಾಗಿದೆ ಎನ್ನಲಾಗಿದೆ. ಒಟ್ಟು ಮೂರು ಮಾದರಿಯ ರೆಡ್‌ಮಿ 6 ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲು ಅಂತಿಮ ಹಂತದ ಸಿದ್ಧತೆಯೂ ನಡೆದಿದೆ. ಈ ಸ್ಮಾರ್ಟ್ಫೋನಿನಲ್ಲಿ ಹೊಸ ಮಾದರಿಯ ಆಯ್ಕೆಗಳನ್ನು ಶಿಯೋಮಿಯೂ ನೀಡಲಿದೆ ಎನ್ನಲಾಗಿದೆ.

ಡ್ಯುಯಲ್ VoLTE:

ಡ್ಯುಯಲ್ VoLTE:

ರೆಡ್‌ಮಿ 6 ಸ್ಮಾರ್ಟ್‌ಫೋನಿನಲ್ಲಿ ಶಿಯೋಮಿಯೂ ಹೊಸ ಮಾದರಿಯಲ್ಲಿ ಡ್ಯುಯಲ್ VoLTE ಆಯ್ಕೆಯನ್ನು ನೀಡಲಿದೆ ಎನ್ನಲಾಗಿದೆ. ಇದರಿಂದಾಗಿ ನೀವು ಒಮ್ಮೆಗೆ ಎರಡು 4G VoLTE ಸಪೋರ್ಟ್ ಮಾಡುವ ಸಿಮ್‌ ಹಾಕಿಕೊಳ್ಳಬಹುದಾಗಿದೆ. ಅಂದರೆ ಒಮ್ಮಗೆ ಜಿಯೋ ಮತ್ತು ಏರ್‌ಟೆಲ್ VoLTE ಸೇವೆಯನ್ನು ಪಡೆಕೊಳ್ಳಬಹುದಾಗಿದೆ. ಇದರಿಂದಾಗಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸಹಾಯವಾಗಲಿದೆ.

ಮೂರು ಸ್ಮಾರ್ಟ್‌ಫೋನ್‌ಗಳು:

ಮೂರು ಸ್ಮಾರ್ಟ್‌ಫೋನ್‌ಗಳು:

ಒಟ್ಟು ಮೂರು ಸ್ಮಾರ್ಟ್‌ಫೋನ್‌ಗಳು ರೆಡ್‌ಮಿ ಲಾಂಚ್ ಮಾಡಲಿದೆ ರೆಡ್‌ಮಿ 6, ರೆಡ್‌ಮಿ 6 ಪ್ರೋ ಮತ್ತು ರೆಡ್‌ಮಿ 6A ಸ್ಮಾರ್ಟ್‌ಫೋನ್‌ಗಳು ಒಮ್ಮೆಗೆ ಕಾಣಿಸಿಕೊಳ್ಳಲಿದೆ. ಈ ಬಾರಿ ಹೊಸದಾಗಿ ಪ್ರೋ ಆವೃತ್ತಿಯನ್ನು ಸೇರಿಸಲಾಗುತ್ತಿದೆ. ಬಜೆಟ್ ಬೆಲೆಯಲ್ಲಿ ದೊರೆಯಲಿದೆ. ಆದರೆ ವಿಶೇಷತೆಗಳು ಮಾತ್ರವೇ ಉತ್ತಮವಾಗಿಯೇ ಇರಲಿದೆ.

ಭಾರತೀಯರಿಗೆ, ಭಾರತದಲ್ಲಿ:

ಭಾರತೀಯರಿಗೆ, ಭಾರತದಲ್ಲಿ:

ಶಿಯೋಮಿಯ ಈ ಹೊಸ ಸ್ಮಾರ್ಟ್‌ಫೋನ್ ಭಾರತೀಯರಿಗೆ, ಭಾರತದಲ್ಲಿಯೇ ನಿರ್ಮಿಸಿದೆ. ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಆಗುವ ಈ ಸ್ಮಾರ್ಟ್‌ಫೋನ್ ಅನ್ನು ದೇಶ್ ಕಾ ನಯಾ ಸ್ಮಾರ್ಟ್‌ಫೋನ್ಸ್ ಎಂಬ ಹೆಸರಿನಲ್ಲಿ ಬಿಡುಗಡೆ ಮಾಡುತ್ತಿದೆ. ಬೆಜೆಟ್ ಬೆಲೆಯಲ್ಲಿ ಶಿಯೋಮಿ ಫೋನ್‌ಗಳು ಹೊಸ ಇತಿಹಾಸವನ್ನು ಮಾರುಕಟ್ಟೆಯಲ್ಲಿ ನಿರ್ಮಿಸಲಿವೆ.

ರೆಡ್‌ಮಿ 6 ಸ್ಮಾರ್ಟ್‌ಫೋನ್:

ರೆಡ್‌ಮಿ 6 ಸ್ಮಾರ್ಟ್‌ಫೋನ್:

ಡ್ಯುಯಲ್ ಸಿಮ್ ಹೊಂದಿರುವ ರೆಡ್‌ಮಿ 6 ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ಒರಿಯೋ ಜೊತೆಗೆ MIUI 9 ನಲ್ಲಿ ಕಾರ್ಯನಿರ್ವಹಿಸಲಿದೆ. 5.45 ಇಂಚಿನ HD+ ಗುಣಮಟ್ಟದ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಇದು 18:9 ಅನುಪಾತದಿಂದ ಕೂಡಿರಲಿದೆ. ಅಲ್ಲದೇ ಡ್ಯುಯಲ್ ಕ್ಯಾಮೆರಾವನ್ನು ಹಿಂಭಾಗದಲ್ಲಿ ಅಳವಡಿಸಲಾಗಿದ್ದು, ಇದರಲ್ಲಿ 12 MP + 5 MP ಕ್ಯಾಮೆರಾ ಇದಾಗಿದೆ. ಮುಂಭಾಗದಲ್ಲಿ 5 MP ಕ್ಯಾಮೆರಾವನ್ನು ಅಳವಡಿಸಲಾಗಿದೆ. 3000mAh ಬ್ಯಾಟರಿ ಇದರಲ್ಲಿದೆ.

ರೆಡ್‌ಮಿ 6A ಸ್ಮಾರ್ಟ್‌ಫೋನ್:

ರೆಡ್‌ಮಿ 6A ಸ್ಮಾರ್ಟ್‌ಫೋನ್:

ಡ್ಯುಯಲ್ ಸಿಮ್ ಹೊಂದಿರುವ ರೆಡ್‌ಮಿ 6A ಸ್ಮಾರ್ಟ್‌ಫೋನ್, ಆಂಡ್ರಾಯ್ಡ್ ಒರಿಯೋ ಜೊತೆಗೆ MIUI 9ನಲ್ಲಿ ಕಾರ್ಯನಿರ್ವಹಿಸಲಿದೆ. 5.45 ಇಂಚಿನ HD+ ಗುಣಮಟ್ಟದ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಅಲ್ಲದೇ ಇದು 18:9 ಅನುಪಾತದಿಂದ ಕೂಡಿರಲಿದೆ. ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ 13 MP ಕ್ಯಾಮೆರಾವನ್ನು ಕಾಣಬಹುದಾಗಿದೆ ಮುಂಭಾಗದಲ್ಲಿ 5 MP ಕ್ಯಾಮೆರಾವನ್ನು ಅಳವಡಿಸಲಾಗಿದೆ. 3000mAh ಬ್ಯಾಟರಿ ಇದರಲ್ಲಿದೆ.

ರೆಡ್‌ಮಿ 6 ಪ್ರೋ ಸ್ಮಾರ್ಟ್‌ಫೋನ್:

ರೆಡ್‌ಮಿ 6 ಪ್ರೋ ಸ್ಮಾರ್ಟ್‌ಫೋನ್:

ಡ್ಯುಯಲ್ ಸಿಮ್ ಹೊಂದಿರುವ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ಒರಿಯೋ ಜೊತೆಗೆ MIUI 9ನಲ್ಲಿ ರೆಡ್‌ಮಿ 6 ಪ್ರೋ ಕಾರ್ಯನಿರ್ವಹಿಸಲಿದೆ. 5.84 ಇಂಚಿನ FHD+ ಗುಣಮಟ್ಟದ ನೋಚ್ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಅಲ್ಲದೇ 18:9 ಅನುಪಾತದಿಂದ ಕೂಡಿರಲಿದೆ. ಸ್ನಾಪ್‌ಡ್ರಾಗನ್ 625 ಪ್ರೋಸೆಸರ್ ಅನ್ನು ಇದರಲ್ಲಿ ನೀಡಲಾಗಿದೆ. ಹಿಂಭಾಗದಲ್ಲಿ 12 MP + 5 MP ಡ್ಯುಯಲ್ ಕ್ಯಾಮೆರಾವನ್ನು ಕಾಣಬಹುದಾಗಿದೆ ಮುಂಭಾಗದಲ್ಲಿ 5 MP ಕ್ಯಾಮೆರಾವನ್ನು ಅಳವಡಿಸಲಾಗಿದೆ. 4000mAh ಬ್ಯಾಟರಿ ಇದರಲ್ಲಿದೆ.

Best Mobiles in India

English summary
Xiaomi Teases Dual VoLTE Feature on its Upcoming Redmi 6. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+