Home
ಮೊಬೈಲ್

Xiaomi; ಭಾರತದಲ್ಲಿ ಇಂದು ಶಿಯೋಮಿ Civi ಸರಣಿಯ ಮೊದಲ ಸ್ಮಾರ್ಟ್‌ಫೋನ್ ಲಾಂಚ್ ! ಫೀಚರ್ಸ್‌ ತಿಳಿಯಿರಿ

ಭಾರತೀಯ ಮೊಬೈಲ್‌ ಮಾರುಕಟ್ಟೆಯಲ್ಲಿ ತನ್ನದೇ ಗ್ರಾಹಕರನ್ನು ಹೊಂದಿರುವ ಶಿಯೋಮಿ (Xiaomi) ಮೊಬೈಲ್‌ ಗಳು, ಕಡಿಮೆ ಬೆಲೆಯಲ್ಲಿ ಉತ್ತಮ ಫೀಚರ್ಸ್‌ ಒದಗಿಸುವ ಮೂಲಕ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದೀಗ ಶಿಯೋಮಿ ಭಾರತದಲ್ಲಿ ತನ್ನ ಮೊದಲ Civi ಸರಣಿಯ ಸ್ಮಾರ್ಟ್‌ಫೋನ್‌ ಆಗಿರುವ Xiaomi 14 Civi ಯನ್ನು ಪ್ರಾರಂಭಿಸಲು ಈವೆಂಟ್ ಆಯೋಜಿಸಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಈ ಸ್ಮಾರ್ಟ್‌ಫೋನ್‌ಗಾಗಿ ಮೈಕ್ರೋಸೈಟ್ ಮತ್ತು ಅಧಿಕೃತ ವೆಬ್‌ಸೈಟ್‌ ಅನ್ನು ನೀಡಲಾಗಿದೆ. ಈ ಲೇಖನದಲ್ಲಿ ನಾವು Xiaomi 14 Civiಯ ಭಾರತೀಯದಲ್ಲಿ ಬಿಡುಗಡೆಯ ಸಮಯ, ಬಿಡುಗಡೆ ಕಾರ್ಯಕ್ರಮವನ್ನು ಹೇಗೆ ವೀಕ್ಷಿಸುವುದು, ನಿರೀಕ್ಷಿತ ಬೆಲೆ, ವಿಶೇಷತೆಗಳೇನು ಎಂಬುದು ಸೇರಿದಂತೆ ಅನೇಕ ಮಾಹಿತಿಯನ್ನು ನೋಡೋಣ.

ಹೈಲೈಟ್ಸ್‌:
* ಶಿಯೋಮಿ 14 Civi ಇಂದು ಮಧ್ಯಾಹ್ನ 12 ಗಂಟೆಗೆ ಭಾರತದಲ್ಲಿ ಬಿಡುಗಡೆಯಾಗಲಿದೆ.

* ಶಿಯೋಮಿಯು ಈ ಬಿಡುಗಡೆ ಕಾರ್ಯಕ್ರಮವನ್ನು ತನ್ನ ಅಧಿಕೃತ ಯೂಟ್ಯೂಬ್ ಚಾನಲ್‌ನಲ್ಲಿ ನೇರ ಪ್ರಸಾರ ಮಾಡಲಿದೆ.

*ಶಿಯೋಮಿ 14 Civi ಇದು Qualcomm Snapdragon 8 Gen 3 SoC, 5,700mAh ಬ್ಯಾಟರಿ ಮತ್ತು 50MP ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿರಲಿದೆ.

ಭಾರತದಲ್ಲಿ ಇಂದು ಶಿಯೋಮಿ Civi ಸರಣಿಯ ಮೊದಲ ಸ್ಮಾರ್ಟ್‌ಫೋನ್ ಲಾಂಚ್

Xiaomi 14 Civi ಇಂಡಿಯಾ ಲಾಂಚ್ ಈವೆಂಟ್ ಲೈವ್ ಸ್ಟ್ರೀಮಿಂಗ್: ನೀವು ಈ ಸ್ಮಾರ್ಟ್‌ಫೋನ್‌ ಬಿಡುಗಡೆ ಕಾರ್ಯಕ್ರಮವನ್ನು ಇಂದು ಮಧ್ಯಾಹ್ನ 12 ಗಂಟೆಗೆ ವೀಕ್ಷಿಸಬಹುದು. ಕಂಪನಿಯು ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರ ಮಾಡುತ್ತದೆ.

Xiaomi 14 Civi ಭಾರತದಲ್ಲಿ ಬೆಲೆ, ಲಭ್ಯತೆ: ವದಂತಿಗಳ ಆಧಾರದಲ್ಲಿ ನೋಡುವುದಾದರೆ ಶಿಯೋಮಿ 14 Civiಯ ಮೂಲ ವೇರಯಂಟ್‌ ಆಗಿರುವ 8GB RAM ಮತ್ತು 128GB ಸ್ಟೋರೇಜ್ ಮಾದರಿಯ ಬೆಲೆ ಸುಮಾರು 43,000 ರೂ. ಗಳು ಇರಬಹುದು ಎಂದು ಊಹಿಸಲಾಗಿದೆ ಹಾಗೂ ಇದು ಕ್ರೂಸ್ ಬ್ಲೂ, ಮ್ಯಾಟ್ ಗ್ರೀನ್ ಮತ್ತು ಶಾಡೋ ಬ್ಲ್ಯಾಕ್ ಈ ಮೂರು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರಲಿದೆ.

ಇದಲ್ಲದೇ, ಸ್ಟೋರ್‌ ಒಂದರ ಹೊರಗೆ ಕಂಡು ಬಂದಿರುವ ಪ್ರಚಾರದ ಬ್ಯಾನರ್‌ನಲ್ಲಿ Xiaomi 14 Civi ಅಂದಾಜು ರೂ 45,000 ಕ್ಕೆ ಲಭ್ಯವಿರಲಿದೆ ಎಂದು ಸೂಚಿಸುತ್ತದೆ. ಹೆಚ್ಚುವರಿಯಾಗಿ ಈ ಸ್ಮಾರ್ಟ್‌ಫೋನ್‌ ಮೇಲೆ ರೂ 3,000 ವಿನಿಮಯ ಬೋನಸ್‌ ಮತ್ತು ತ್ವರಿತ ರೂ 3,000 ಬ್ಯಾಂಕ್ ರಿಯಾಯಿತಿಯನ್ನು ಉಲ್ಲೇಖಿಸಿದೆ. ಜೊತೆಗೆ EMI ಗಾಗಿ ಶಿಯೋಮಿಯಲ್ಲಿ ಈಸಿ ಫೈನಾನ್ಸಿಂಗ್ ಆಯ್ಕೆ ಇರಲಿದೆ. ಹಾಗೂ ಇದರ ಪ್ರಾರಂಭಿಕ ಮಾಸಿಕ ಪಾವತಿ 2,389 ರೂ. ಗಳು ಇರಲಿದೆ ಎಂದು ಹೇಳಿದೆ.

Xiaomi 14 Civi ಯ ನಿರೀಕ್ಷಿತ ಫೀಚರ್ಸ್‌:

ಡಿಸ್‌ಪ್ಲೇ: ಈ ಸ್ಮಾರ್ಟ್‌ಫೊನ್ ರಿಫ್ರೆಶ್ ರೇಟ್, ಡಾಲ್ಬಿ ವಿಷನ್, HDR10+ ಮತ್ತು ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆಯನ್ನು ಬೆಂಬಲಿಸುವ ಕ್ವಾಡ್ ಕರ್ವ್ಡ್ 1.5K ಅಮೋಲ್ಡ್‌ ಪ್ಯಾನೆಲ್ ಅನ್ನು ಹೊಂದಿರುತ್ತದೆ. ಪ್ರೊಸೆಸರ್: ಇದು Qualcomm Snapdragon 8s Gen 3 SoC ನಿಂದ ಪವರ್ ಪಡೆಯುತ್ತದೆ. ಇದು 12GB RAM ಮತ್ತು 512GB ಸ್ಟೋರೇಜ್ ನಿಂದ ಬರುತ್ತದೆ.

ಬ್ಯಾಟರಿ: ಇದು ಚಾರ್ಜಿಂಗ್‌ಗಾಗಿ 67W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 4,700mAh ಬ್ಯಾಟರಿಯನ್ನು ಹೊಂದಿರಲಿದೆ. ಕ್ಯಾಮೆರಾ: ಇದು ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಲಿದೆ, 50MP ಲೈಕಾ ಸಮ್ಮಿಲಕ್ಸ್ ಪ್ರೈಮರಿ ಸ್ನ್ಯಾಪರ್, 50MP ಲೈಕಾ 50mm ಪೋರ್ಟ್ರೇಟ್ ಟೆಲಿಫೋಟೋ ಶೂಟರ್ ಮತ್ತು 12MP ಲೈಕಾ 15mm ಅಲ್ಟ್ರಾವೈಡ್ ಲೆನ್ಸ್ ಅನ್ನು ಒಳಗೊಂಡಿರುತ್ತದೆ. ಸೆಲ್ಫಿ ಮತ್ತು ವೀಡಿಯೊ ಚಾಟ್‌ಗಳಿಗಾಗಿ ಮುಂಭಾಗದಲ್ಲಿ 32MP ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುತ್ತದೆ.

Xiaomi 14 Civi ಆಂಡ್ರಾಯ್ಡ್ ಔಟ್ ಆಫ್ ದಿ ಬಾಕ್ಸ್ ಆಧಾರಿತ HyperOS ಕಸ್ಟಮ್ ಸ್ಕಿನ್‌ನಲ್ಲಿ ರನ್ ಆಗಲಿದೆ. ಇದರ ಜೊತೆಗೆ Dolby Atmos ಗೆ ಬೆಂಬಲವನ್ನು ನೀಡಲಿದ್ದು, ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ಅನ್ನು ಹೊಂದಿದೆ .

Best Mobiles in India

English summary
Xiaomi has organized an event to launch the Xiaomi 14 Civi, its first Civi series smartphone in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+