ಝೋಲೋದಿಂದ 4000 mAh ಬ್ಯಾಟರಿ ಫ್ಯಾಬ್ಲೆಟ್ ಬಿಡುಗಡೆ
ದೇಶೀಯ ಕಂಪೆನಿ ಝೋಲೋ ದೊಡ್ಡ ಸ್ಕ್ರೀನ್ ಹೊಂದಿರುವ, ಶಕ್ತಿಶಾಲಿ 4000 mAh ಬ್ಯಾಟರಿ ಫ್ಯಾಬ್ಲೆಟ್‌ನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 5.7 ಇಂಚಿನ ಐಪಿಎಸ್ ಟಚ್‌ಸ್ಕ್ರೀನ್ ಹೊಂದಿರುವ ಕ್ಯೂ 3000 ಹೆಸರಿನ ಫ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿದ್ದು20,999 ರೂಪಾಯಿ ಬೆಲೆಯನ್ನು ನಿಗದಿ ಮಾಡಿದೆ.
81.6x164.8x8.9 ಮಿ.ಮೀಟರ್ ಗಾತ್ರದ ಫ್ಯಾಬ್ಲೆಟ್ ಬಿಎಸ್‌ಐ 2 ,ಎಲ್‌ಇಡಿ ಫ್ಲ್ಯಾಶ್ ಹೊಂದಿರುವ 13 ಎಂಪಿ ಹಿಂದುಗಡೆ ಕ್ಯಾಮೆರಾ ಮತ್ತು ಮುಂದುಗಡೆ 5 ಎಂಪಿ ಕ್ಯಾಮೆರಾವನ್ನು ಹೊಂದಿದೆ.ಫ್ಯಾಬ್ಲೆಟ್ ಗೈರೋ ಸ್ಕೋಪ್,ಲೈಟ್ ಸೆನ್ಸರ್,ಮ್ಯಾಗ್ನಟೊಮೀಟರ್,ಎಕ್ಸಲರೋ ಮೀಟರ್,ಪ್ರಾಕ್ಸಿಮಿಟಿ ಸೆನ್ಸರ್‌ಗಳನ್ನು ಒಳಗೊಂಡಿದೆ.
ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗೆ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

ಝೋಲೋ ಕ್ಯೂ 3000
ವಿಶೇಷತೆ:
5.7 ಇಂಚಿನ ಐಪಿಎಸ್ ಟಚ್‌ಸ್ಕ್ರೀನ್(1920 x 1080 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.5 GHz ಕ್ವಾಡ್ ಕೋರ್ ಪ್ರೊಸೆಸರ್
2 ಜಿಬಿ ರ್‍ಯಾಮ್
16 ಜಿಬಿ ಆಂತರಿಕ ಮೆಮೊರಿ
13 ಎಂಪಿ ಹಿಂದುಗಡೆ ಕ್ಯಾಮೆರಾ
5 ಎಂಪಿ ಮುಂದುಗಡೆ ಕ್ಯಾಮೆರಾ
32 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್,ಜಿಪಿಎಸ್,ಎ-ಜಿಪಿಎಸ್
4000 mAh ಬ್ಯಾಟರಿ
ಇದನ್ನೂ ಓದಿ: ಹೊಸ ವರ್ಷ ಆಫರ್- ಬೆಲೆ ಇಳಿಕೆಯಾಗಿರುವ ಸ್ಮಾರ್ಟ್‌ಫೋನ್‌ಗಳು


Click it and Unblock the Notifications








