ಆಂಡ್ರಾಯ್ಡ್ ಕಿಟ್‌ಕ್ಯಾಟ್ ಓಎಸ್‌ನೊಂದಿಗೆ ಕ್ಸೋಲೋ Q600s

Posted By:

ಮೋಟೋ ಇ ಸ್ಮಾರ್ಟ್‌ಫೋನ್‌ಗಳು ಸ್ಥಳೀಯ ಮಾರುಕಟ್ಟೆಯಲ್ಲಿ ಉತ್ತಮವಾಗಿ ಪ್ರವರ್ಧಮಾನಕ್ಕೆ ಬರುತ್ತಿರುವಂತೆ, ಇತರ ಕಂಪೆನಿಗಳೂ ಕೂಡ ಇದೇ ಜಾದೂವನ್ನು ಅನುಸರಿಸಿ ಮಾರುಕಟ್ಟೆ ಮೌಲ್ಯವನ್ನು ಏರಿಸುವ ಛಾತಿಯಲ್ಲಿವೆ.

ಕೇವಲ ರೂ. 7,000 ರೂಪಾಯಿಗಳಲ್ಲೇ ಅತ್ಯಾಧುನಿಕ ಓಎಸ್ ಆದ ಆಂಡ್ರಾಯ್ಡ್ ಕಿಟ್‌ಕ್ಯಾಟ್ ಅನ್ನು ಮೊದಲು ತನ್ನ ಫೋನ್‌ಗಳಲ್ಲಿ ಪ್ರಸ್ತುತಪಡಿಸಿದ ಮೋಟೋರೋಲಾ ಬಿಗ್ ಹಿಟ್ ಶ್ರೇಣಿಗೆ ಸೇರಿಕೊಂಡಿದೆ. ಇದರಿಂದ ವ್ಯಾಪಕವಾಗಿ ಪ್ರಭಾವಿತಗೊಂಡಿರುವ ಇತರ ಸ್ಮಾರ್ಟ್‌ಫೋನ್ ತಯಾರಿಕಾ ಕಂಪೆನಿಗಳು ಕೂಡ ಬಜೆಟ್ ಫ್ರೆಂಡ್ಲಿ ಡಿವೈಸ್ ಅನ್ನು ಗ್ರಾಹಕರಿಗೆ ಒದಗಿಸುವ ನಿಟ್ಟಿನಲ್ಲಿವೆ.

ಆಂಡ್ರಾಯ್ಡ್ ಕಿಟ್‌ಕ್ಯಾಟ್ ಓಎಸ್‌ನೊಂದಿಗೆ ಕ್ಸೋಲೋ Q600s

ಇಂದಿನ ಲೇಖನದಲ್ಲಿ ಮಿಡ್ ರೇಂಜ್ ಮೌಲ್ಯದಲ್ಲಿ ಬರುತ್ತಿರುವ ಒಂದು ಫೋನ್ ಬಗ್ಗೆ ಹೇಳಲು ನಾವು ಉತ್ಸುಕರಾಗಿದ್ದು ಇದೂ ಕೂಡ ಮಾರುಕಟ್ಟೆಯಲ್ಲಿ ನಿಧಾನವಾಗಿ ಸದ್ದು ಮಾಡುತ್ತಿದೆ. ಕ್ಸೋಲೋ Q600s ಸ್ಮಾರ್ಟ್‌ಫೋನ್‌ಗಳು ಈಗ ಆಂಡ್ರಾಯ್ಡ್ ಕಿಟ್‌ಕ್ಯಾಟ್ ಆವೃತ್ತಿ 4.4.2 ನಲ್ಲಿ ಚಾಲನೆಯಾಗುತ್ತಿದ್ದು ನಿಮಗೆ ಆಕರ್ಷಕ ದರ ರೂ. 8,499 ರಲ್ಲಿ ದೊರೆಯಲಿದೆ. ಬಿಳಿ ಮತ್ತು ಕಪ್ಪು ಬಣ್ಣಗಳಲ್ಲಿ ದೊರೆಯುವ ಈ ಹ್ಯಾಂಡ್‌ಸೆಟ್ ಸ್ನ್ಯಾಪ್‌ಡೀಲ್‌ನಲ್ಲಿ ರೂ 7,499 ಕ್ಕೆ ಲಭ್ಯವಾಗುತ್ತಿದೆ.

ಕ್ಸೋಲೋ ಮಾತ್ರವಲ್ಲದೆ ಕೆಲವು ವಾರಗಳ ಹಿಂದೆ ಮೈಕ್ರೋಮ್ಯಾಕ್ಸ್ ಕೂಡ ಕ್ಯಾನ್‌ವಾಸ್ ಎಂಗೇಜ್ ಹಾಗೂ ಯುನೈಟ್ 2 ನಲ್ಲಿ ಕಿಟ್‌ಕ್ಯಾಟ್ ಅನ್ನು ಸಾದರಪಡಿಸಿತ್ತು. ಅದೆ ರೀತಿ ಮೋಟೋ ಇ ಯನ್ನು ಕೆಳಗಿಳಿಸುವ ಧಾವಂತದಲ್ಲಿರುವ ಇನ್ನೊಂದು ಸ್ಮಾರ್ಟ್‌ಫೋನ್ ಕಂಪೆನಿ ಲಾವಾ ಐರಿಸ್ X1 ಕೂಡ ಕಿಟ್‌ಕ್ಯಾಟ್ ಇರುವ ಡಿವೈಸ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ನಿಟ್ಟಿನಲ್ಲಿದೆ.

ಕ್ಸೋಲೋ Q600s 4.5- ಇಂಚಿನ (960×540 pixels) qHD IPS ಡಿಸ್‌ಪ್ಲೇಯೊಂದಿಗೆ ಬಂದಿದ್ದು ಪೂರ್ಣ ಲ್ಯಾಮಿನೇಶನ್ ಅನ್ನು ಹೊಂದಿದೆ. ಇದರಲ್ಲಿ 1.2 GHz ಕ್ವಾಡ್ ಕೋರ್ ಪ್ರೊಸೆಸರ್ ಇದ್ದು ವೀಡಿಯೋ ಕೋರ್ IV GPU 1ಜಿಬಿ ರ್‌ಯಾಮ್‌ನೊಂದಿಗೆ ಬಂದಿದೆ. ಆಂಡ್ರಾಯ್ಡ್ 4.4 (ಕಿಟ್‌ಕ್ಯಾಟ್) ಆವೃತ್ತಿ ಪೋನ್‌ನಲ್ಲಿ ಚಾಲನೆಗೊಳ್ಳುತ್ತದೆ. ಇದು 4ಜಿಬಿ ಆಂತರಿಕ ಮೆಮೊರಿಯನ್ನು ಹೊಂದಿದ್ದು ಇದನ್ನು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 64ಜಿಬಿಗೆ ವಿಸ್ತರಿಸಬಹುದು.

ಫೋನ್‌ನಲ್ಲಿ 3ಜಿ, ವೈ-ಫೈ 802.11 b/g/n, ಬ್ಲೂಟೂತ್ ಮತ್ತು GPS ಸಂಪರ್ಕಗಳು ಫೋನ್‌ನಲ್ಲಿದೆ. ಕ್ಸೋಲೋ Q600 2000 mAh ಬ್ಯಾಟರಿ ಇದ್ದು ಹನ್ನೊಂದು ಗಂಟೆಗಳ ಟಾಕ್ ಟೈಮ್ ಕೊಡುಗೆಯನ್ನು ನಿಮಗೆ ಒದಗಿಸಲಿದೆ. ಸದ್ಯಕ್ಕೆ ಕ್ಸೋಲೋ Q600s ಮಾರುಕಟ್ಟೆಯಲ್ಲಿ ಪ್ರಸ್ತುತ ಧಾರಣೆಯಲ್ಲಿರುವ ಮೈಕ್ರೋಮ್ಯಾಕ್ಸ್ ಯುನೈಟ್ 2, ಕ್ಯಾನ್‌ವಾಸ್ ಎಂಗೇಜ್ ಮತ್ತು ಮೋಟೋ ಇ ಗೆ ಭರ್ಜರಿ ಪೈಪೋಟಿ ನೀಡುವ ನಿಟ್ಟಿನಲ್ಲಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot