Subscribe to Gizbot

ಇನ್ನು ಕ್ಸೋಲೋದಲ್ಲೂ ಬರಲಿದೆ ಕಿಟ್‌ಕ್ಯಾಟ್ 4.4 ಆವೃತ್ತಿ

Written By:

ಆಂಡ್ರಾಯ್ಡ್ ಕಿಟ್‌ಕ್ಯಾಟ್ ಆವೃತ್ತಿ ಈಗ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ತಮ್ಮ ನೈಪುಣ್ಯವನ್ನು ಬೀರುತ್ತಿದೆ. ಈಗ ಲವಾದ ಕ್ಸೋಲೋ ಕೂಡ ತನ್ನ ಹೆಚ್ಚಿನ ಸೆಟ್‌ಗಳಲ್ಲಿ ಈ ಒಎಸ್ ಅನ್ನು ಹೊರತರುವ ಕಾರ್ಯವನ್ನು ಮಾಡುತ್ತಿದೆ.

ಜೂನ್ 2014 ಕ್ಕೆ ಬಿಡುಗಡೆ ಮಾಡುವ ತನ್ನ ಎಲ್ಲಾ ಸೆಟ್‌ಗಳಲ್ಲಿ ಕ್ಸೋಲೋ ಈ ಆವೃತ್ತಿಯನ್ನು ಹೊರತರಲಿದ್ದು ಹೆಚ್ಚಿನ ಸಂಖ್ಯೆಯ ಫೋನ್‌ಗಳನ್ನು ಈ ದಿಸೆಯಲ್ಲಿ ಕಂಪೆನಿ ಉತ್ಪಾದಿಸಲಿದೆ. ಆಂಡ್ರಾಯ್ಡ್ 4.4.2 (ಕಿಟ್‌ಕ್ಯಾಟ್) ಆವೃತ್ತಿಯನ್ನು ತನ್ನ Q1000 ಓಪಸ್‌ನಲ್ಲಿ ತಂದಿರುವ ಕಂಪೆನಿ, Q700S, Q1010i, Q1010 ಮತ್ತು Q3000 ಅನ್ನು ಒಳಗೊಂಡಿರುವ ಇತರ ಡಿವೈಸ್‌ಗಳಲ್ಲಿ ಈ ಆವೃತ್ತಿಯನ್ನು ನವೀಕರಿಸುತ್ತಿದೆ.

ಇನ್ನು ಕ್ಸೋಲೋದಲ್ಲೂ ಬರಲಿದೆ ಕಿಟ್‌ಕ್ಯಾಟ್ 4.4 ಆವೃತ್ತಿ

ಆಂಡ್ರಾಯ್ಡ್ ಕಿಟ್‌ಕ್ಯಾಟ್ ಚಾಲನೆಯುಳ್ಳ ಹ್ಯಾಂಡ್‌ಸೆಟ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರವೇ ಹೊರತರಲಿರುವ ಕಂಪೆನಿ ಇದರಲ್ಲಿ ಏನೆಲ್ಲಾ ವೈಶಿಷ್ಟ್ಯಗಳಿವೆ ಎಂಬುದನ್ನು ನವೀಕರಣದ ನಂತರವೇ ನೋಡಬಹುದಾಗಿದೆ. ನೀವು ಈ ಹ್ಯಾಂಡ್‌ಸೆಟ್‌ನಲ್ಲಿ ಬಹು ಕಾರ್ಯಗಳನ್ನು ಮಾಡಬಹುದಾಗಿದ್ದು ನಿಮಗೆ ಬಳಸಲು ಸುಲಭವಾಗಿರುತ್ತದೆ. ಹಾಗೂ ಉತ್ತಮ ಮೆಮೊರಿ ನಿರ್ವಹಣೆ ವೈಶಿಷ್ಟ್ಯಗಳನ್ನು ಇದು ಹೊಂದಿದೆ.

ಗೂಗಲ್‌ನ ಹ್ಯಾಂಗ್‌ಔಟ್ ಎಸ್‌ಎಮ್‌ಎಸ್ ಹಾಗೂ ಎಂಎಂಎಸ್‌ನೊಂದಿಗೆ ಇಂಟಿಗ್ರೇಶನ್‌ನೊಂದಿಗೆ ನವೀಕರಣವಾಗಿದ್ದು ಸಕ್ರಿಯಗೊಂಡಿರಬಹುದಾದ ಬಳಸಿದ ಅಪ್ಲಿಕೇಶನ್‌ಗಳನ್ನು ಹೊರತುಪಡಿಸಿ ಪ್ರತಿಯೊಂದನ್ನು ಇದು ಮರೆಮಾಚುತ್ತದೆ. ಇದರಲ್ಲಿ ಗೂಗಲ್ ನಕ್ಷೆಗಳ ಡೇಟಾವಿದ್ದು ಇಮೇಲ್ ಅಪ್ಲಿಕೇಶನ್‌ಗಳು ಸಂಪರ್ಕ ಫೋಟೋಗಳು ಹಾಗೂ ಉತ್ತಮ ನ್ಯಾವಿಗೇಶನ್ ಮತ್ತು ಗೂಗಲ್ ಡ್ರೈವ್‌ನೊಂದಿಗೆ ಉತ್ತಮ ಇಂಟಿಗ್ರೇಶನ್ ಅನ್ನು ನೀವು ಹೊಂದಬಹುದಾಗಿದೆ.

ಈ ನವೀಕರಣಗಳನ್ನು ಕ್ಸೋಲೋ ವೆಬ್‌ಸೈಟ್‌ಗಳಲ್ಲಿ ಅಥವಾ ಆನ್‌ಲೈನ್‌ನಲ್ಲಿ ನಿಮಗೆ ಪಡೆಯಬಹುದಾಗಿದೆ.

Read more about:
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot