Year Ender 2024: 2024ರಲ್ಲಿ ಬಿಡುಗಡೆಯಾದ ಟಾಪ್ 5 ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಿವು! ಬೆಲೆ, ವಿಶೇಷತೆಗಳೇನು?
Year Ender 2024: 2024 ಮುಗಿಯಲು ಕೆಲವೇ ದಿನಗಳು ಬಾಕಿ ಉಳಿದಿದೆ. ಪ್ರತಿವರ್ಷದಂತೆ ಈ ವರ್ಷವೂ ಪ್ರಸಿದ್ಧ ಟೆಕ್ ಕಂಪನಿಗಳು ಹಲವು ಫೋನ್‌ಗಳನ್ನು ಬಿಡುಗಡೆ ಮಾಡಿವೆ. ಬಜೆಟ್ ಬೆಲೆಯಿಂದ ಪ್ರೀಮಿಯಂ ಶ್ರೇಣಿಯವರೆಗಿನ ವಿವಿಧ ರೀತಿಯ ಫೋನ್‌ಗಳು ಈ ವರ್ಷ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. 2024 ವರ್ಷವು ಮೊಬೈಲ್ ಪ್ರಿಯರಿಗೆ ಹಬ್ಬವೇ ಸರಿ ಎಂದು ಹೇಳಬಹುದು. ಈ ಲೇಖನದಲ್ಲಿ ಈ ವರ್ಷ ಬಿಡುಗಡೆಯಾಗಿರುವ ಫೋನ್‌ಗಳ ಬಗ್ಗೆ ತಿಳಿಸಲಾಗಿದೆ. ಬನ್ನಿ, ಈ ಪಟ್ಟಿಯಲ್ಲಿ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳಿವೆ ನೋಡೋಣ.
ಹೌದು, ಸಾಮಾನ್ಯವಾಗಿ ಸ್ಮಾರ್ಟ್‌ಫೋನ್ ಪ್ರಿಯರಿಗೆ ಈ ವರ್ಷ ಯಾವೆಲ್ಲಾ ಫೋನ್‌ಗಳು ಬಿಡುಗಡೆಯಾಗಿವೆ ಎನ್ನುವುದನ್ನು ತಿಳಿಯುವ ಕುತೂಹಲ ಇರುತ್ತದೆ. ನಿಮ್ಮಲ್ಲೂ ಆ ಕುತೂಹಲ ಇದ್ದರೆ, ಈ ಲೇಖನದಲ್ಲಿ 2024ರಲ್ಲಿ ಬಿಡುಗಡೆಯಾಗಿರುವ ಟಾಪ್ 5 ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಬಗ್ಗೆ ತಿಳಿಯಬಹುದು. ಈ ವರ್ಷ ಆಪಲ್, ಸ್ಯಾಮ್‌ಸಂಗ್, ವಿವೋ, ಐಕ್ಯೂ, ಗೂಗಲ್ ಪಿಕ್ಸೆಲ್ ನಿಂದಿಡಿದು ದೈತ್ಯ ಕಂಪನಿಗಳು ಹೊಸ ಫೋನ್‌ಗಳನ್ನು ಪರಿಚಯಿಸಿವೆ. ಈ ಕುರಿತ ಮಾಹಿತಿ ಇಲ್ಲಿದೆ.

2024ರಲ್ಲಿ ಬಿಡುಗಡೆಯಾದ ಟಾಪ್ 5 ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಿವು
ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಅಲ್ಟ್ರಾ
ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಅಲ್ಟ್ರಾ (Samsung Galaxy S24 Ultra) ಮೊಬೈಲ್ 6.80 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್ ಹೊಂದಿದೆ. ಈ ಫೋನಿನಲ್ಲಿ 200 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಇದೆ. ಜೊತೆಗೆ 12 ಮೆಗಾಪಿಕ್ಸೆಲ್ ಕ್ಯಾಮೆರಾ, 50 ಮೆಗಾಪಿಕ್ಸೆಲ್ ಮತ್ತು 10 ಮೆಗಾಪಿಕ್ಸೆಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಸೆಲ್ಫಿಗಾಗಿ, ಇದು 12 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ. ಈ ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಫೋನಿನ ಬೆಲೆ 1,29,999 ರೂ. ಆಗಿದೆ.
ಗೂಗಲ್ ಪಿಕ್ಸೆಲ್ 9 ಪ್ರೊ XL
ಗೂಗಲ್ ಪಿಕ್ಸೆಲ್ 9 ಪ್ರೊ XL (Google Pixel 9 Pro XL) ಮೊಬೈಲ್ ಗೂಗಲ್ ಪಿಕ್ಸೆಲ್ 9 ಸರಣಿಯ ಪ್ರೀಮಿಯಂ ಫೋನ್‌ಗಳಲ್ಲಿ ಒಂದಾಗಿದೆ. ಇದು 6.80 ಇಂಚಿನ ಡಿಸ್ಪ್ಲೇ ಹೊಂದಿದೆ. ಈ ಫೋನ್ ಗೂಗಲ್ ಟೆನ್ಸರ್ G4 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಈ ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 48 ಮೆಗಾಪಿಕ್ಸೆಲ್ ದ್ವಿತೀಯ ಮತ್ತು 48 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಲಭ್ಯವಿದೆ. ಇದು 42 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಈ ಫೋನ್ 5060mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ. ನೀವು ಈ ಫೋನನ್ನು 1,24,999 ರೂ.ಗೆ ಖರೀದಿಸಬಹುದು.
ಐಫೋನ್ 16 ಪ್ರೊ ಮ್ಯಾಕ್ಸ್
ಐಫೋನ್ 16 ಪ್ರೊ ಮ್ಯಾಕ್ಸ್ (iPhone 16 Pro Max) ಹೊಸ ಐಫೋನ್ ಸರಣಿಯ ಪ್ರೀಮಿಯಂ ಸ್ಮಾರ್ಟ್‌ಫೋನ್ ಆಗಿದೆ. ಇದು 6.90 ಇಂಚಿನ ಡಿಸ್ಪ್ಲೇ ಹೊಂದಿದೆ. ಫೋನಿನಲ್ಲಿ Apple A18 Pro ಪ್ರೊಸೆಸರ್ ಇದೆ. ಈ ಫೋನ್ 48 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 12 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 48 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಹೊಂದಿದೆ. ಇದರಲ್ಲಿ 12 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಈ ಫೋನಿನ 256GB ಸ್ಟೋರೇಜ್ ವೇರಿಯಂಟ್ ಬೆಲೆ 1,44,900 ರೂ. ಆಗಿದೆ.
ವಿವೋ X200 ಪ್ರೊ
ವಿವೋ X200 ಪ್ರೊ (Vivo X200 Pro) ಇತ್ತೀಚೆಗೆ ಬಿಡುಗಡೆಯಾದ ಫೋನ್ ಆಗಿದೆ. ಇದು 6.78 ಇಂಚಿನ ಡಿಸ್ಪ್ಲೇ ಹೊಂದಿದೆ. ಈ ಫೋನಿನಲ್ಲಿ ಪ್ರೊಸೆಸರ್ ಮೀಡಿಯಾಟೆಕ್ ಡೈಮೆನ್ಸಿಟಿ 9400 ಪ್ರೊಸೆಸರ್ ಲಭ್ಯವಿದೆ. ಇದು ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಫೋನಿನಲ್ಲಿ ಮೂರು 50 ಮೆಗಾಪಿಕ್ಸೆಲ್ ಕ್ಯಾಮೆರಾಗಳು ಲಭ್ಯವಿದೆ. ಇದು 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಈ ಫೋನ್ 6000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ. ನೀವು, ಈ ಫೋನನ್ನು 94,999 ರೂ.ಗೆ ಖರೀದಿಸಬಹುದು.
ಐಕ್ಯೂ 13 5G
ಐಕ್ಯೂ 13 5G (iQOO 13 5G) ಮೊಬೈಲ್ 6.82 ಇಂಚಿನ ಪಂಚ್ ಹೋಲ್ ಡಿಸ್ಪ್ಲೇ ಹೊಂದಿದೆ. ಇದು ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಈ ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ 50 ಮೆಗಾಪಿಕ್ಸೆಲ್ + 50 ಮೆಗಾಪಿಕ್ಸೆಲ್ + 50 ಮೆಗಾಪಿಕ್ಸೆಲ್ ಮೂರು ಕ್ಯಾಮೆರಾಗಳಿವೆ. ಇದು ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ. ಈ ಫೋನ್ 6000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ. ಈ ಫೋನಿನ 12GB + 256GB ಸ್ಟೋರೇಜ್ ಬೆಲೆ 54,999 ರೂ. ಮತ್ತು 16GB + 512GB ಸ್ಟೋರೇಜ್ ಬೆಲೆ 59,999 ರೂ.ಗೆ ಲಭ್ಯವಿದೆ.


Click it and Unblock the Notifications








