Home
ಮೊಬೈಲ್

ನಿಮ್ಮ ಹಳೆಯ ಫೋನ್ ಚೆನ್ನಾಗಿಯೇ ಕೆಲಸ ಮಾಡುತ್ತಿದೆಯೇ?..ಅದೇ ಗಂಭೀರ ಸಮಸ್ಯೆ!

ನಿಮ್ಮ ಆಂಡ್ರಾಯ್ಡ್ ಫೋನ್ ಇನ್ನೂ ಆಗಿ ಕಾರ್ಯನಿರ್ವಹಿಸುತ್ತಿದ್ದರೆ, ಅದರ ಭದ್ರತೆ ಬಗ್ಗೆ ನೀವು ಯೋಚಿಸದೇ ಇರಬಹುದು. ಆದರೆ ತಂತ್ರಜ್ಞಾನ ತಜ್ಞರ ಎಚ್ಚರಿಕೆ ಪ್ರಕಾರ, ಇದೇ ಅತಿ ದೊಡ್ಡ ಅಪಾಯ. ಗೂಗಲ್ ಅಧಿಕೃತವಾಗಿ ದೃಢಪಡಿಸಿದಂತೆ, ಪ್ರಸ್ತುತ ಬಳಕೆಯಲ್ಲಿರುವ ಆಂಡ್ರಾಯ್ಡ್ ಫೋನ್‌ಗಳಲ್ಲಿನ 40% ಕ್ಕೂ ಹೆಚ್ಚು ಸಾಧನಗಳಿಗೆ ಅಗತ್ಯವಿರುವ ಸಿಸ್ಟಮ್ ಮಟ್ಟದ ಭದ್ರತಾ ಅಪ್‌ಡೇಟ್‌ಗಳು ಈಗ ಸಿಗುತ್ತಿಲ್ಲ. ಇದರಿಂದ ಒಂದು ಬಿಲಿಯನ್‌ಗಿಂತ ಹೆಚ್ಚು ಬಳಕೆದಾರರು ಹಳೆಯ ಸಾಫ್ಟ್‌ವೇರ್ ಮೇಲೆಯೇ ಅವಲಂಬಿತರಾಗಿದ್ದಾರೆ ಮತ್ತು ಅಪಾಯಕ್ಕೆ ಆಹ್ವಾನ ಹೊಂದಿದ್ದಾರೆ.!

ಸಮಸ್ಯೆ ಅಚಾನಕ್ ಆಗಿ ಬಂದದ್ದಲ್ಲ
ಈ ಭದ್ರತಾ ಗೊಂದಲ ಯಾವುದೇ ಹೊಸ ದೋಷದಿಂದ ಉಂಟಾಗಿಲ್ಲ. ವರ್ಷಗಳು ಕಳೆದಂತೆ ಫೋನ್‌ಗಳು ತಮ್ಮ ಅಪ್‌ಡೇಟ್ ಅವಧಿಯನ್ನು ದಾಟುತ್ತವೆ. ಆದರೆ ಅವು ದಿನನಿತ್ಯದ ಬಳಕೆಗೆ ಸರಿಯಾಗಿ ಕೆಲಸ ಮಾಡುವುದರಿಂದ, ಬಳಕೆದಾರರಿಗೆ ಹೊಸ ಫೋನ್‌ಗೆ ಬದಲಾಯಿಸಬೇಕೆಂಬ ತುರ್ತು ಭಾವನೆ ಬರೋದಿಲ್ಲ. ಇದೇ ನಿಧಾನವಾಗಿ ದೊಡ್ಡ ಸಮಸ್ಯೆಯಾಗಿ ಬೆಳೆಯುತ್ತಿದೆ.

ಈಗ ಗೂಗಲ್ ಸ್ಪಷ್ಟವಾಗಿ ಗಡಿ ಎಳೆದಿರುವ ಆವೃತ್ತಿ ಎಂದರೆ Android 12. Android 12 ಅಥವಾ ಅದಕ್ಕಿಂತ ಹಳೆಯ ಆವೃತ್ತಿಯಲ್ಲಿ ಕಾರ್ಯನಿರ್ವಹಿಸುವ ಫೋನ್‌ಗಳು ಗೂಗಲ್‌ನ ಪ್ರಮುಖ ಸಿಸ್ಟಮ್ ಭದ್ರತಾ ಅಪ್‌ಡೇಟ್ ವ್ಯವಸ್ಥೆಯ ಹೊರಗಿವೆ. ಇದರಿಂದ ಫೋನ್ ತಕ್ಷಣ ಅಪಾಯಕಾರಿ ಆಗುತ್ತದೆ ಎಂದಲ್ಲ, ಆದರೆ ಮುಂದಿನ ದಿನಗಳಲ್ಲಿ ಪತ್ತೆಯಾಗುವ ಗಂಭೀರ ದೋಷಗಳಿಗೆ ಪ್ಯಾಚ್ ಸಿಗದೇ ಹೋಗುವ ಸಾಧ್ಯತೆ ಹೆಚ್ಚಾಗುತ್ತದೆ.

ಅಂಕಿಅಂಶಗಳು ಹೇಳುವ ಕಠಿಣ ಸತ್ಯ
ಜಗತ್ತಿನಾದ್ಯಂತ ಕೇವಲ ಸುಮಾರು 58% ಆಂಡ್ರಾಯ್ಡ್ ಫೋನ್‌ಗಳು ಮಾತ್ರ Android 13 ಅಥವಾ ಅದಕ್ಕಿಂತ ಹೊಸ ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಉಳಿದ ದೊಡ್ಡ ಪ್ರಮಾಣದ ಸಾಧನಗಳು ಈಗಾಗಲೇ ಪೂರ್ಣ ಸಿಸ್ಟಮ್ ಮಟ್ಟದ ರಕ್ಷಣೆಯಿಂದ ಹೊರಬಿದ್ದಿವೆ. ಇದು ಬಳಸದ ಹಳೆಯ ಫೋನ್‌ಗಳ ವಿಷಯವಲ್ಲ. ಪ್ರತಿದಿನ ಜನರು ಬ್ಯಾಂಕಿಂಗ್, ಪಾವತಿ ಮತ್ತು ವೈಯಕ್ತಿಕ ಮಾಹಿತಿಗೆ ಬಳಸುವ ಫೋನ್‌ಗಳ ಸಮಸ್ಯೆ.

Google Play Protect ಸಾಕಾಗುವುದಿಲ್ಲ ಏಕೆ?
ಗೂಗಲ್ ಪ್ರಕಾರ, ಹಳೆಯ ಆಂಡ್ರಾಯ್ಡ್ ಫೋನ್‌ಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿಲ್ಲ. Android 7 ಮತ್ತು ಅದರ ಮೇಲಿನ ಆವೃತ್ತಿಗಳಲ್ಲಿ Google Play Protect ಮೂಲಕ ಅಪಾಯಕಾರಿ ಆಪ್‌ಗಳನ್ನು ಪತ್ತೆಹಚ್ಚಲಾಗುತ್ತಿದೆ. ಇದು ಮೂಲಭೂತ ರಕ್ಷಣೆಗೆ ಸಹಾಯಕವಾದರೂ, ಇದಕ್ಕೆ ತನ್ನದೇ ಆದ ಮಿತಿ ಇದೆ.ಸಿಸ್ಟಮ್ ಮಟ್ಟದ ಭದ್ರತಾ ಅಪ್‌ಡೇಟ್‌ಗಳು ಆಪರೇಟಿಂಗ್ ಸಿಸ್ಟಮ್‌ನ ಆಳವಾದ ದೋಷಗಳನ್ನು ಸರಿಪಡಿಸುತ್ತವೆ. ಅವು ಇಲ್ಲದಿದ್ದರೆ, ಆಪ್ ಪರಿಶೀಲನೆಯಿಂದ ಮಾತ್ರ ಅತ್ಯಾಧುನಿಕ ಸೈಬರ್ ದಾಳಿಗಳನ್ನು ತಡೆಯಲು ಸಾಧ್ಯವಿಲ್ಲ. ಬಾಗಿಲಿಗೆ ಬೀಗ ಹಾಕಿದರೂ ಮನೆಯ ಅಡಿಪಾಯವೇ ದುರ್ಬಲವಾಗಿದ್ದರೆ ಅಪಾಯ ತಪ್ಪುವುದಿಲ್ಲ.

Play System Update ಗೊಂದಲಕ್ಕೆ ಸ್ಪಷ್ಟನೆ
ಇತ್ತೀಚೆಗೆ ಕೆಲ ಫೋನ್‌ಗಳಲ್ಲಿ Google Play ಸಿಸ್ಟಮ್ ಅಪ್‌ಡೇಟ್ ದಿನಾಂಕ ಹಿಂದಕ್ಕೆ ಹೋಗಿದಂತೆ ತೋರಿದ ಘಟನೆ ಬಳಕೆದಾರರಲ್ಲಿ ಆತಂಕ ಮೂಡಿಸಿತ್ತು. ಆದರೆ ಗೂಗಲ್ ಇದನ್ನು ಕೇವಲ ದೃಶ್ಯ ದೋಷ ಎಂದು ಸ್ಪಷ್ಟಪಡಿಸಿದೆ. ದಿನಾಂಕ ತಪ್ಪಾಗಿ ತೋರಿದರೂ, ಭದ್ರತಾ ರಕ್ಷಣೆಯಲ್ಲಿ ಯಾವುದೇ ಕಡಿತವಾಗಿಲ್ಲ ಎಂದು ಕಂಪನಿ ತಿಳಿಸಿದೆ.

ನಿಮ್ಮ ಹಳೆಯ ಫೋನ್ ಚೆನ್ನಾಗಿಯೇ ಕೆಲಸ ಮಾಡುತ್ತಿದೆಯೇ?..ಅದೇ ಗಂಭೀರ ಸಮಸ್ಯೆ!

ಫೋನ್ ತಯಾರಕರ ನಿರ್ಧಾರವೂ ದೊಡ್ಡ ಪಾತ್ರ
ಆಂಡ್ರಾಯ್ಡ್ ಭದ್ರತೆಯಲ್ಲಿ ಫೋನ್ ತಯಾರಕರ ಪಾತ್ರವೂ ಅತ್ಯಂತ ಮಹತ್ವದ್ದಾಗಿದೆ. ಯಾವ ಮಾದರಿಗೆ ಎಷ್ಟು ವರ್ಷ ಅಪ್‌ಡೇಟ್ ನೀಡಬೇಕು ಎಂಬುದನ್ನು ತಯಾರಕರೇ ನಿರ್ಧರಿಸುತ್ತಾರೆ. ಕೆಲವು ಹಳೆಯ ಫ್ಲಾಗ್‌ಶಿಪ್ ಮಾದರಿಗಳಿಗೆ ಈಗ Android ಮತ್ತು ಭದ್ರತಾ ಅಪ್‌ಡೇಟ್‌ಗಳು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಇನ್ನೂ ಕೆಲವು ಫೋನ್‌ಗಳಿಗೆ ಅಪ್‌ಡೇಟ್ ಬರುತ್ತಿದರೂ, ಅವುಗಳ ಆವರ್ತನೆ ಕಡಿಮೆಯಾಗುತ್ತಿದೆ.

ಹಳೆಯ ಫ್ಲಾಗ್‌ಶಿಪ್‌ಗಿಂತ ಹೊಸ ಮಿಡ್‌ರೇಂಜ್ ಹೆಚ್ಚು ಸುರಕ್ಷಿತ?
ಇದರಿಂದ ಒಂದು ಅಸಹಜ ಆದರೆ ಮಹತ್ವದ ಸತ್ಯ ಹೊರಬರುತ್ತದೆ. ದುಬಾರಿ ಹಳೆಯ ಫ್ಲಾಗ್‌ಶಿಪ್ ಫೋನ್‌ಗಿಂತ, ಹೊಸ ಮಿಡ್‌ರೇಂಜ್ ಫೋನ್ ಹೆಚ್ಚು ಸುರಕ್ಷಿತವಾಗಿರಬಹುದು. ಇಂದಿನ ದಿನಗಳಲ್ಲಿ ಕ್ಯಾಮೆರಾ ಅಥವಾ ಪ್ರೊಸೆಸರ್‌ಗಿಂತ, ನಿರಂತರ ಭದ್ರತಾ ಅಪ್‌ಡೇಟ್‌ಗಳೇ ಹೆಚ್ಚು ಮುಖ್ಯ.

ನಿಮ್ಮ ಫೋನ್ ಸುರಕ್ಷಿತವೋ ಇಲ್ಲವೋ ಹೇಗೆ ತಿಳಿಯುವುದು?
ನಿಮ್ಮ ಫೋನ್ ಸ್ಥಿತಿಯನ್ನು ಪರಿಶೀಲಿಸುವುದು ತುಂಬಾ ಸುಲಭ. Settings ತೆರಳಿ, About phone ವಿಭಾಗಕ್ಕೆ ಹೋಗಿ, ನಿಮ್ಮ Android version ಪರಿಶೀಲಿಸಿ. ನಿಮ್ಮ ಸಾಧನ Android 12 ಅಥವಾ ಅದಕ್ಕಿಂತ ಹಳೆಯ ಆವೃತ್ತಿಯಲ್ಲಿ ಇದ್ದು, ಮುಂದಿನ ಅಪ್‌ಗ್ರೇಡ್ ಸಾಧ್ಯತೆ ಇಲ್ಲದಿದ್ದರೆ, ಅದು ಈಗ ಪ್ರಮುಖ ಸಿಸ್ಟಮ್ ಮಟ್ಟದ ಭದ್ರತಾ ರಕ್ಷಣೆಯಿಂದ ಹೊರಗಿದೆ.

ಈ ಸತ್ಯ ಕೇಳಲು ಸುಲಭವಲ್ಲ. ಆದರೆ ಆಂಡ್ರಾಯ್ಡ್ ಭದ್ರತೆ ಇಂದು ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬ ವಾಸ್ತವವನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ. ಡಿಜಿಟಲ್ ಸುರಕ್ಷತೆಯನ್ನು ಗಂಭೀರವಾಗಿ ತೆಗೆದುಕೊಳ್ಳುವ ಬಳಕೆದಾರರಿಗೆ, ಕೆಲವೊಮ್ಮೆ ಫೋನ್ ಬದಲಾವಣೆ ಕೂಡ ಅಗತ್ಯ ನಿರ್ಧಾರವಾಗುತ್ತದೆ.

Best Mobiles in India

English summary
Many older Android phones still work smoothly, but that’s where the danger lies. Google has confirmed that over 40% of active Android devices no longer receive critical system-level security updates. Phones running Android 12 or older are now outside Google’s core security update support, leaving more than a billion users potentially exposed to future security vulnerabilities—even if their devices seem perfectly fine today.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+