Home
ಮೊಬೈಲ್

ಬಿಡುಗಡೆ ಆಯ್ತು ಬೆಸ್ಟ್‌ ಭಾರತೀಯ ಸ್ಮಾರ್ಟ್‌ಫೋನ್‌..! ಚೀನಾ ಫೋನ್ ಬ್ಯಾನ್ ಖಂಡಿತ..!

By Srinidhi

ಚೀನಾ ಸ್ಮಾರ್ಟ್‌ಫೋನ್‌ಗಳ ಆರ್ಭಟದಲ್ಲಿ ಮರೆಯಾಗಿದ್ದ ಭಾರತೀಯ ಮೂಲದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಮೈಕ್ರೋಮಾಕ್ಸ್ ಹೊಸದೊಂದು ಸ್ಮಾರ್ಟ್‌ಫೋನ್‌ ಅನ್ನು ಲಾಂಚ್ ಮಾಡಿದ್ದು, ಈ ಮೂಲಕ ಮತ್ತೆ ಮಾರುಕಟ್ಟೆಯಲ್ಲಿ ಜಿಗುರಿಕೊಳ್ಳುವ ಭರವಸೆಯನ್ನು ಮೂಡಿಸಿದೆ, ಚೀನಾ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಕಾಣಲಾಗದ ಮಾದರಿಯ ಆಯ್ಕೆಗಳನ್ನು ಮೈಕ್ರೋಮಾಕ್ಸ್ Yu Ace ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದೆ. ಮಾರುಕಟ್ಟೆಯಲ್ಲಿ ಹೊಸ ಸಾಧ್ಯತೆಯನ್ನು ಇದು ತೋರಿಸಿಕೊಡಲಿದೆ.

ಬಿಡುಗಡೆ ಆಯ್ತು ಬೆಸ್ಟ್‌ ಭಾರತೀಯ ಸ್ಮಾರ್ಟ್‌ಫೋನ್‌..! ಚೀನಾ ಫೋನ್ ಬ್ಯಾನ್ ಖಂಡಿತ

ಸದ್ಯ ಮಾರುಕಟ್ಟೆಯಲ್ಲಿ ಟ್ರೆಂಡ್ ಆಗಿರುವ ವಿಶೇಷತೆಗಳನ್ನು ಈ ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದೆ. ಆಂಡ್ರಾಯ್ಡ್ ಒರಿಯೋ, 18:9 ಡಿಸ್‌ಪ್ಲೇ, 4000mAh ಬ್ಯಾಟರಿ ಸೇರಿದಂತೆ ಸಾಕಷ್ಟು ದೊಡ್ಡ ಮಟ್ಟದ ಆಯ್ಕೆಗಳನ್ನು ಮೈಕ್ರೋಮಾಕ್ಸ್ Yu Ace ಸ್ಮಾರ್ಟ್‌ಫೋನಿನಲ್ಲಿ ಅಳವಡಿಸಲಾಗಿದೆ. ಚೀನಾ ಸ್ಮಾರ್ಟ್‌ಫೋನ್ ಬೇಡ ಎಂದು ಕೂಗಿಕೊಳ್ಳುವವರಿಗೆ ಒಂದು ಒಳ್ಳೆಯ ಆಯ್ಕೆಯಾಗಲಿದೆ ಎನ್ನಲಾಗಿದೆ. ಕೊಡುವೆ ಬೆಲೆಗೆ ದೊಡ್ಡ ಸ್ಮಾರ್ಟ್‌ಫೋನ್‌ ಎನ್ನಬಹುದು.

ಮೈಕ್ರೋಮಾಕ್ಸ್ Yu Ace:

ಮೈಕ್ರೋಮಾಕ್ಸ್ Yu Ace:

ಮೈಕ್ರೋಮಾಕ್ಸ್ Yu Ace ಸ್ಮಾರ್ಟ್‌ಫೋನಿನಲ್ಲಿ 5.45 ಇಂಚಿನ ಡಿಸ್‌ಪ್ಲೇಯನ್ನು ಕಾಣಬಹುದಾಗಿದ್ದು, ಇದು 18:9 ಅನುಪಾತದಿಂದ ಕೂಡಿದೆ. ಇದರೊಂದಿಗೆ ವೇಗದ ಕಾರ್ಯಚರಣೆಗಾಗಿ ಕ್ವಾಡ್ ಕೋರ್ ಮಿಡಿಯಾ ಟೆಕ್ MT6739 ಪ್ರೋಸೆಸರ್ ಅನ್ನು ಅಳವಡಿಸಲಾಗಿದೆ. ಜೊತೆಗೆ 2 GB RAM ಮತ್ತು 16 GB ಇಂಟರ್ನಲ್ ಮೆಮೊರಿಯೊಂದಿಗೆ ಮಾರಾಟವಾಗಿದೆ.

ಕ್ಯಾಮೆರಾ:

ಕ್ಯಾಮೆರಾ:

ಮೈಕ್ರೋಮಾಕ್ಸ್ Yu Ace ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ 13 MP ಕ್ಯಾಮೆರಾವನ್ನು ನೀಡಲಾಗಿದೆ. ಇದಲ್ಲದೇ ಮುಂಭಾಗದಲ್ಲಿ 5 MP ಕ್ಯಾಮೆರಾವನ್ನು ಸೆಲ್ಫಿ ತೆಗೆಯುವ ಸಲುವಾಗಿ ಅಳವಡಿಸಲಾಗಿದೆ. ಇದಲ್ಲದೇ ಈ ಸ್ಮಾರ್ಟ್ಫೋನಿನಲ್ಲಿ ಫೇಸ್‌ ಲಾಕ್ ಆಯ್ಕೆಯನ್ನು ಕಾಣಬಹುದಾಗಿದೆ.

4000mAh ಬ್ಯಾಟರಿ:

4000mAh ಬ್ಯಾಟರಿ:

ಇದಲ್ಲದೇ ಮೈಕ್ರೋಮಾಕ್ಸ್ Yu Ace ಸ್ಮಾರ್ಟ್‌ಫೋನಿನಲ್ಲಿ ದೊಡ್ಡದಾದ 4000mAh ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಬಳೆಕದಾರರಿಗೆ ಹೆಚ್ಚಿನ ಪ್ರಮಾಣದ ಬ್ಯಾಕಪ್ ಅನ್ನು ನೀಡಲಿದೆ. ಒಮ್ಮೆ ಚಾರ್ಜ್ ಮಾಡಿದರೆ ಒಂದು ವರೆ ದಿನಗಳ ಕಾಲ ಬಳಕೆ ಮಾಡಿಕೊಳ್ಳಬಹುದಾಗಿದೆ.

ಬೆಲೆ:

ಬೆಲೆ:

ಮೈಕ್ರೋಮಾಕ್ಸ್ Yu Ace ಸ್ಮಾರ್ಟ್‌ಫೋನ್ ರೂ.5999ಕ್ಕೆ ಮಾರಾಟವಾಗಲಿದ್ದು, ಬೆಲೆ ನೋಡಿದರೆ ಚೀನಾ ಸ್ಮಾರ್ಟ್‌ಫೋನ್‌ಗಳೀಗೆ ಸೆಡ್ಡು ಹೊಡೆಯಲಿದೆ ಎನ್ನಲಾಗಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟವಾಗಲಿರುವ ಈ ಸ್ಮಾರ್ಟ್‌ಫೋನ್ ಸೆಪ್ಟೆಂಬರ್ 13 ರಂದು ಫಸ್ಟ್ ಸೇಲ್‌ನಲ್ಲಿ ದೊರೆಯಲಿದೆ.

ಮತ್ತೊಂದು ಆವೃತ್ತಿ:

ಮತ್ತೊಂದು ಆವೃತ್ತಿ:

ಇದೇ ಮಾದರಿಯಲ್ಲಿ ಮತ್ತೊಂದು ಆವೃತ್ತಿಯೂ ಕಾಣಿಸಿಕೊಳ್ಳಿದೆ. ಸೆಪ್ಟೆಂಬರ್ ಕೊನೆಯ ವಾರದಲ್ಲಿ 3GB RAM ಮತ್ತು 32GB ಇಂಟರ್ನಲ್ ಮೆಮೊರಿಯೊಂದಿಗೆ ಲಭ್ಯವಾಗಲಿದೆ. ಆದರೆ ಈ ಕುರಿತು ಯಾವುದೇ ಹೆಚ್ಚಿನ ಮಾಹಿತಿಯೂ ಲಭ್ಯವಾಗಲಿದೆ.

Best Mobiles in India

English summary
Yu Ace With 18:9 Display, 4,000mAh Battery Launched in India. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+