ಮಾರುಕಟ್ಟೆಯಲ್ಲಿ ಟಾರ್ಚ್‌ಲೈಟ್ ಬದಲು ಟ್ಯೂಬ್‌ಲೈಟ್ ಹೊಂದಿರುವ ಫೀಚರ್ ಫೋನ್‌..!

|

ದೇಶದಲ್ಲಿ ಫೀಚರ್ ಫೋನ್ ಬಳಕೆ ಮಾಡುತ್ತಿರುವವರ ಸಂಖ್ಯೆಯೂ ಅಧಿಕವಾಗಿದ್ದು, ಈ ಹಿನ್ನಲೆಯಲ್ಲಿ ಮತ್ತೊಂದು ವಿಭಿನ್ನವಾದ ಫೀಚರ್ ಫೋನ್ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದ್ದು, ಟ್ಯೂಬ್ ಲೈಟ್ ಹೊಂದಿರುವ ಮೊದಲ ಫೀಚರ್ ಫೋನ್ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿದೆ.

ಮಾರುಕಟ್ಟೆಯಲ್ಲಿ ಟಾರ್ಚ್‌ಲೈಟ್ ಬದಲು ಟ್ಯೂಬ್‌ಲೈಟ್ ಹೊಂದಿರುವ ಫೀಚರ್ ಫೋನ್‌..!

ಝಿಯೋಕ್ಸ್ ಮೊಬೈಲ್ ಲಾಂಚ್ ಮಾಡಿರುವ ಟ್ಯೂಬ್‌ ಲೈಟ್ ಫೀಚರ್ ಫೋನಿನಲ್ಲಿ ಒಟ್ಟು ಎಂಟು LED ಲೈಟ್ ಗಳನ್ನು ಹೊಂದಿರುವ ಟಾರ್ಚ್ ಲೈಟ್ ಅನ್ನು ಕಾಣಬಹುದಾಗಿದ್ದು, ಟ್ಯೂಬ್‌ಲೈಟ್ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಇಷ್ಟು ದಿನ ಟಾರ್ಚ್ ಲೈಟ್‌ನೊಂದಿಗೆ ಬರುತ್ತಿರುವ ಫೀಚರ್ ಫೋನ್‌ಗಳ ಸಾಲಿನಲ್ಲಿ ಇದು ವಿಭಿನ್ನವಾಗಿ ನಿಲ್ಲಲಿದೆ.

ಟ್ಯೂಬ್‌ಲೈಟ್‌ ಫೀಚರ್‌ ಫೋನ್:

ಟ್ಯೂಬ್‌ಲೈಟ್‌ ಫೀಚರ್‌ ಫೋನ್:

ಒಟ್ಟು ಎಂಟು LED ಲೈಟ್‌ಗಳನ್ನು ಹೊಂದಿರುವ ಈ ಫೀಚರ್ ಫೋನಿನಲ್ಲಿ 2.4 ಇಂಚಿನ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ನೋಡಲು ಉತ್ತಮ ವಿನ್ಯಾಸವನ್ನು ಹೊಂದಿದೆ.

ಆಟೋ ಕಾಲ್ ರೆಕಾರ್ಡಿಂಗ್:

ಆಟೋ ಕಾಲ್ ರೆಕಾರ್ಡಿಂಗ್:

ಈ ಟ್ಯೂಬ್‌ಲೈಟ್ ಫೀಚರ್ ಫೋನಿನಲ್ಲಿ ಆಟೋ ಕಾಲ್ ರೆಕಾರ್ಡಿಂಗ್ ಸೇವೆಯನ್ನು ನೀಡಲಾಗಿದ್ದು, ಇದರಲ್ಲಿ ಎಲ್ಲಾ ಕಾಲ್‌ಗಳನ್ನು ನೀವು ರೆಕಾರ್ಡ್ ಮಾಡಿಕೊಳ್ಳಬಹುದಾಗಿದೆ.

ಹಿಂಭಾಗದಲ್ಲಿ ಕ್ಯಾಮೆರಾ:

ಹಿಂಭಾಗದಲ್ಲಿ ಕ್ಯಾಮೆರಾ:

ಟ್ಯೂಬ್‌ಲೈಟ್ ಫೀಚರ್ ಫೋನಿನ ಹಿಂಭಾಗದಲ್ಲಿ ಕ್ಯಾಮೆರಾವನ್ನು ಕಾಣಬಹುದಾಗಿದ್ದು, ಇದರೊಂದಿಗೆ ಮೆಮೊರಿಯನ್ನು ವಿಸ್ತರಿಸಿಕೊಳ್ಳಲು ಎಸ್‌ಡಿ ಕಾರ್ಡ್ ಹಾಕಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ.

1800mAh ಬ್ಯಾಟರಿ:

1800mAh ಬ್ಯಾಟರಿ:

ಟ್ಯೂಬ್‌ಲೈಟ್ ಫೀಚರ್ ಫೋನಿನ 1800mAh ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಇದು ಹೆಚ್ಚಿನ ಬ್ಯಾಟರಿ ಬ್ಯಾಕಪ್ ನೀಡಲಿದೆ. ಅಲ್ಲದೇ ವೈರ್‌ಲೈಸ್ FM ಕೇಳುವ ಅವಕಾಶವನ್ನು ಮಾಡಿಕೊಡಲಾಗಿದೆ. ಬ್ಲೂಟೂತ್ ಸಹ ಸಪೋರ್ಟ್ ಮಾಡಲಿದೆ.

How to Check Your Voter ID Card Status (KANNADA)
ಬೆಲೆ:

ಬೆಲೆ:

ಟ್ಯೂಬ್‌ಲೈಟ್ ಫೀಚರ್ ಫೋನ್‌ ರೂ.915ಕ್ಕೆ ಮಾರಾಟವಾಗಲಿದ್ದು, ಬ್ಲಾಕ್ ಮತ್ತು ವೈಟ್ ಬಣ್ಣದಲ್ಲಿ ದೊರೆಯಲಿದ್ದು, ಭಾರತದ ಎಲ್ಲಾ ಮೊಬೈಲ್ ಅಂಗಡಿಗಳಲ್ಲಿಯೂ ದೊರೆಯಲಿದೆ ಎನ್ನಲಾಗಿದೆ.

Best Mobiles in India

English summary
Ziox Tubelight feature phone with 8-LED torch launched for Rs. 915. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X