ಕೇವಲ 6,999 ಕ್ಕೆ ಬೇಜೆಲ್ ಲೆಸ್ ಡಿಸ್‌ಪ್ಲೇ, ಫಿಂಗರ್‌ಪ್ರಿಂಟ್ ಸ್ಮಾರ್ಟ್‌ಫೋನ್!!
ಅತ್ಯಂತ ಕಡಿಮೆ ಬೆಲೆಯಲ್ಲಿ ಬೇಜೆಲ್ ಲೆಸ್ ಡಿಸ್‌ಪ್ಲೇ ಫೋನ್ ನೀಡಿದ ಮೊಬೈಲ್ ಕಂಪೆನಿ ಎಂಬ ಹೆಸರಿಗೆ ಪಾತ್ರವಾಗಿದೆ.!!
ಕಡಿಮೆ ಬೆಲೆಯಲ್ಲಿ ಉತ್ತಮ ಮೊಬೈಲ್‌ಗಳನ್ನು ಬಿಡುಗಡೆ ಮಾಡುವ ಕಂಪೆನಿಗಳಲ್ಲಿ ಚೀನಾ ಮೊಬೈಲ್ ಕಂಪೆನಿ ಝೊಪೊ ಇದೇ ಮೊದಲ ಭಾರಿಗೆ ಕಡಿಮೆಬೆಲೆಯಲ್ಲಿ ಬೇಜೆಲ್ ಲೆಸ್ ಡಿಸ್‌ಪ್ಲೇ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ.!! ಈ ಮೂಲಕ ಅತ್ಯಂತ ಕಡಿಮೆ ಬೆಲೆಯಲ್ಲಿ ಬೇಜೆಲ್ ಲೆಸ್ ಡಿಸ್‌ಪ್ಲೇ ಫೋನ್ ನೀಡಿದ ಮೊಬೈಲ್ ಕಂಪೆನಿ ಎಂಬ ಹೆಸರಿಗೆ ಪಾತ್ರವಾಗಿದೆ.!!
ಭಾರತವನ್ನು ಟಾರ್ಗೆಟ್ ಮಾಡಿ ಝೊಪೊ ಕಂಪೆನಿ ಝೊಪೊ ಫ್ಲಾಶ್ ಎಕ್ಸ್ 1 (Zopo Flash X1) ಮತ್ತು ಝೊಪೊ ಫ್ಲಾಶ್ ಎಕ್ಸ್2 (Zopo Flash X2) ಬೇಜೆಲ್ ಲೆಸ್ ಡಿಸ್‌ಪ್ಲೇ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದ್ದು, ಈ ಬಜೆಟ್ ಫೋನ್‌ಗಳು 18: 9 ಅನುಪಾತದಲ್ಲಿ 83% ಸ್ಕ್ರೀನ್ ಅನ್ನು ಹೊಂದಿವೆ.!!
ಈ ಎರಡು ಸ್ಮಾರ್ಟ್‌ಫೋನ್‌ಗಳನ್ನು ಇದೇ ಬುಧವಾರ ಬಿಡುಗಡೆಯಾಗಲಿದ್ದು, ಅಕ್ಟೋಬರ್ ತಿಂಗಳಿನಿಂದ ಮಾರಾಟಕ್ಕೆ ಬರುತ್ತಿವೆ. ಹಾಗಾದರೆ, ಝೊಪೊವಿನ ನೂತನ ಎರಡು ಸ್ಮಾರ್ಟ್‌ಫೋನ್‌ಗಳು ಹೇಗಿವೆ? ಅವುಗಳ ವಿಶೇಷತೆ ಏನು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಡಿಸ್‌ಪ್ಲೇ ಮತ್ತು ವಿನ್ಯಾಸ!
ಝೊಪೊ ಫ್ಲ್ಯಾಶ್ ಎಕ್ಸ್ 1 ಫೋನ್ 5.5-ಇಂಚಿನ ಡಿಸ್ಪ್ಲೇ (640x1280) ಹೊಂದಿದ್ದರೆ, ಫ್ಲ್ಯಾಶ್ ಎಕ್ಸ್ 2 5.99-ಇಂಚ್ 720x1440 ಡಿಸ್‌ಪ್ಲೇ ಹೊಂದಿದೆ.!! ಎರಡು ಫೋನ್‌ಗಳು 5.5 ಇಂಚ್‌ಗಿಂತ ಹೆಚ್ಚು ಡಿಸ್‌ಪ್ಲೇ ಹೊಂದಿದ್ದು, ಹಿಂಬಾಗದಲ್ಲಿ ಫಿಂಗರ್‌ಪ್ರಿಂಟ್ ಫೀಚರ್ ಹೊತ್ತು ಸ್ಮಾರ್ಟ್‌ಫೋನ್‌ಗಳು ಹೊರಬರುತ್ತಿವೆ.!!

ಪ್ರೊಸೆಸರ್ ಮತ್ತು ಒಎಸ್!!
ಫ್ಲ್ಯಾಶ್ ಎಕ್ಸ್ 1 ಮತ್ತು ಫ್ಲ್ಯಾಶ್ ಎಕ್ಸ್ 2 ಸ್ಮಾರ್ಟ್‌ಫೋನ್‌ಗಳು ಕ್ವಾಡ್-ಕೋರ್ MT6737 ಪ್ರೊಸೆಸರ್ ಹೊಂದಿವೆ. ಎರಡೂ ಫೋನ್‌ಗಳೂ ಆಂಡ್ರಾಯ್ಡ್ 7.0 ನ್ಯೂಗಾದಲ್ಲಿ ಕಾರ್ಯನಿರ್ವಹಣೆ ನೀಡಲಿದ್ದು, ನಾವು ನೀಡುವ ಹಣಕ್ಕೆ ಬೆಸ್ಟ್ ಫೀಚರ್ಸ್ ಎನ್ನಬಹುದು.!!

RAM ಮತ್ತು ಆಂತರಿಕ ಮೆಮೊರಿ.!!
2GB RAM ಮತ್ತು 16GB ಮೆಮೊರಿ ಝೊಪೊ ಫ್ಲ್ಯಾಶ್ ಎಕ್ಸ್ 1 ಮತ್ತು ಫ್ಲ್ಯಾಶ್ ಎಕ್ಸ್ 2 ಎರಡು ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಿದೆ. ಎರಡು ಸ್ಮಾರ್ಟ್‌ಫೋನ್‌ಗಳು ಸಹ ಒಂದೆ RAM ಮತ್ತು ಆಂತರಿಕ ಮೆಮೊರಿಯನ್ನು ಹೊಂದಿದ್ದು, ಎಸ್‌ಡಿ ಕಾರ್ಡ್ ಮೂಲಕ 64GB ವರೆಗೆ ಮೆಮೊರಿ ವಿಸ್ತರಿಸಬಹುದಾಗಿದೆ.!!

ಕ್ಯಾಮೆರಾ ಮತ್ತು ಕನೆಕ್ಟಿವಿಟಿ?
ಎರಡು ಫೋನ್‌ಗಳು ಸೋನಿ IMX219 ಸಂವೇದಕದೊಂದಿಗೆ 8-ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾ ಹಾಗೂ ಎಫ್ / 2.2 ಅಪರ್ಚರ್‌ನೊಂದಿಗೆ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿವೆ. 4ಜಿ ಎಲ್‌ಟಿಇ , ಬ್ಲೂಟೂತ್ 4.0 ಅಂತಹ ಕನೆಕ್ಟಿವಿಟಿ ಫೀಚರ್ಸ್ ಹೊಂದಿವೆ.!!

ಬ್ಯಾಟರಿ, ಬಣ್ಣ ಮತ್ತು ಬೆಲೆ!!
ಝೊಪೊ ಎಕ್ಸ್ 1 3380 mAh ಬ್ಯಾಟರಿ ಹೊಂದಿದ್ದರೆ, ಝೊಪೊ ಎಕ್ಸ್ 2 2500 mAh ಬ್ಯಾಟರಿ ಹೊಂದಿದೆ. ಕೋರಲ್ ಬ್ಲೂ, ಏಲಿಯನ್ ಬ್ಲಾಕ್, ಮತ್ತು ಸಿಟ್ರೀನ್ ಗೋಲ್ಡ್ ಬಣ್ಣದಲ್ಲಿ ಹೊರಬರುತ್ತಿರುವ ಫೋನ್‌ಗಳ ಬೆಲೆ ಕ್ರಮವಾಗಿ 6,999 ಮತ್ತು Rs 8,999 ರೂಪಾಯಿಗಳಾಗಿವೆ.!!


Click it and Unblock the Notifications