ZTE ಇಂದ ಅವಳಿ ಮೊಬೈಲ್ ಬರಲಿದೆ

By Super
|
ZTE ಇಂದ ಅವಳಿ ಮೊಬೈಲ್ ಬರಲಿದೆ

ವಿವಿಧ ಕಂಪನಿಯ ಸ್ಮಾರ್ಟ್ ಫೋನ್ ಗಳ ನಡುವೆ ದಿನೇ ದಿನೇ ಪೈಪೋಟಿ ಹೆಚ್ಚುತ್ತಿದೆ. ಮಾರುಕಟ್ಟೆಗೆ ಪೈಪೋಟಿ ಒಡ್ಡಲೆಂದೇ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಗಳ ತಯಾರಿಕೆಯೂ ಹೆಚ್ಚಾಗುತ್ತಿದೆ. ಇದೀಗ ಕಡಿಮೆ ಬೆಲೆಯ ಸ್ಮಾರ್ಟ್ ಫೋನನ್ನು ತರುವಲ್ಲಿ ಮುಂದಿದೆ ZTE ಕಂಪನಿ.

ಚೈನಾ ಮೊಬೈಲ್ ತಯಾರಕರಾದ ZTE ಕಂಪನಿ ಇದೀಗ ZTE ಚೇಸರ್ ಮತ್ತು ZTE ವೆಂಚ್ಯೂರ್ ಎಂಬ ಎರಡು ಹೊಸ ಫೋನ್ ಗಳನ್ನು ಹೊರತರುವತ್ತ ಚಿಂತಿಸುತ್ತಿದೆ. ಆಂಡ್ರಾಯ್ಡ್ ಬೆಂಬಲಿತ ಈ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಯಲ್ಲಿ ಭಾರಿ ಮಾರಾಟವಾಗುವ ನಿರೀಕ್ಷೆ ಹೊತ್ತಿದೆ.

ZTE ಚೇಸರ್ ಕ್ಯಾಂಡಿಬಾರ್ ವಿನ್ಯಾಸದಲ್ಲಿದ್ದು, 600MHz ಪ್ರೊಸೆಸರ್ ಪಡೆದುಕೊಂಡಿದೆ. 3.5 ಇಂಚಿನ ಡಿಸ್ಪ್ಲೇ ಹೊಂದಿರುವ ಚೇಸರ್ ಮೊಬೈಲ್ ನಲ್ಲಿ 3.2 ಮೆಗಾ ಪಿಕ್ಸಲ್ ಕ್ಯಾಮೆರಾ ಅಳವಡಿಸಲಾಗಿದೆ. ZTE ವೆಂಚ್ಯೂರ್ ಬ್ಲ್ಯಾಕ್ ಬೆರಿ ಫೋನ್ ಮಾದರಿಯಲ್ಲಿದ್ದು, ಕ್ವೆರ್ಟಿ ಕೀಪ್ಯಾಡ್ ಪಡೆದುಕೊಂಡಿದೆ. 2.8 ಇಂಚಿನ ವೆಂಚ್ಯೂರ್ ಮೊಬೈಲ್ 512 ಎಂಬಿ RAM ಮತ್ತು 600 MHz ಪ್ರೊಸೆಸರ್ ಪಡೆದುಕೊಂಡಿದೆ. ಮೆಮೊರಿಗೆಂದು ZTE ವೆಂಚ್ಯೂರ್ ನಲ್ಲಿ 2ಜಿಬಿ ಮೆಮೊರಿ ಕಾರ್ಡ್ ನೀಡಲಾಗಿದ್ದು, 32ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಮೈಕ್ರೊ SD ಮೆಮೊರಿ ಕಾರ್ಡ್ ಸ್ಲಾಟ್ ಇದೆ.

ಚೇಸರ್ ಮತ್ತು ವೆಂಚ್ಯೂರ್ ಎರಡೂ ಸ್ಮಾರ್ಟ್ ಫೋನ್ ಗಳು ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ಆಪರೇಟಿಂಗ್ ಸಿಸ್ಟಮ್ ಪಡೆದುಕೊಂಡಿದೆ. ನೀವು ಒಳ್ಳೆ ಲುಕ್ ಹೊಂದಿರುವ, ಆಂಡ್ರಾಯ್ಡ್ ಬೆಂಬಲಿತ ಮತ್ತು ಹಲವು ಅಪ್ಲಿಕೆಶನ್ ಹೊಂದಿರುವ ಸ್ಮಾರ್ಟ್ ಫೋನ್ ಬಯಸುವುದಾದರೆ ZTE ಚೇಸರ್ ಅಥವಾ ZTE ವೆಂಚ್ಯೂರ್ ಉತ್ತಮ ಆಯ್ಕೆಯಾಗಲಿದೆ.

ಈ ಮೊಬೈಲ್ ಗಳು ಭಾರತದಲ್ಲಿ ಬಿಡುಗಡೆಯಾಗುವ ಕುರಿತು ಮತ್ತು ಬೆಲೆಯ ಬಗ್ಗೆ ಇನ್ನೂ ಕಂಪನಿ ಮಾಹಿತಿ ಘೋಷಿಸಿಲ್ಲ. ಆದರೆ ಮೊಬೈಲ್ ಗಳ ನಡುವೆ ಸ್ಪರ್ಧೆ ಹೆಚ್ಚಿರುವುದರಿಂದ ಈ ZTE ಚೇಸರ್ ಮತ್ತು ZTE ವೆಂಚ್ಯೂರ್ ಕಡಿಮೆ ದರದಲ್ಲಿ ದೊರೆಯುವ ಅಂದಾಜಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X