Subscribe to Gizbot

ZTE ತರಲಿದೆ ಹೊಸ ಕೋರಸ್ ಮೊಬೈಲ್

Posted By: Super
ZTE ತರಲಿದೆ ಹೊಸ ಕೋರಸ್ ಮೊಬೈಲ್

ಉತ್ತಮ ಗುಣಮಟ್ಟದ ಸಾಧನವನ್ನು ನೀಡುತ್ತಾ ಬಂದಿರುವ ZTE ಕಂಪನಿ ಇದೀಗ ZTE ಕೋರಸ್ ಎಂಬ ಆಂಡ್ರಾಯ್ಡ್ ಫೋನ್ ಪರಿಚಯಿಸಿದೆ. ಈ ನೂತನ ZTE ಕೋರಸ್ ನಲ್ಲಿ ಸಂಗೀತಕ್ಕೆಂದು ಕ್ರಿಕೆಟ್ ಮ್ಯೂವ್ ಮ್ಯೂಸಿಕ್ ಸರ್ವೀಸ್ ಅನ್ನು ವಿಶೇಷವಾಗಿ ಅಳವಡಿಸಲಾಗಿದೆ. ಪ್ಲಾಸ್ಟಿಕ್ ಕಾಸ್ಟಿಂಗ್ ಹೊಂದಿರುವ ಈ ಮೊಬೈಲ್ ಬೋಲ್ಡ್ ಲುಕ್ ನೀಡುತ್ತದೆ.

ಇದರ ಇನ್ನಿತರ ವಿಶೇಷೆಗಳೇನೆಂದು ಇಲ್ಲಿ ತಿಳಿಯಿರಿ:

ZTE ಕೋರಸ್ ವಿಶೇಷತೆ:

* 111 x 57 x14.8 ಎಂಎಂ ಸುತ್ತಳತೆ

* 105 ಗ್ರಾಂ ತೂಕ

* ಟಚ್ ಸ್ಕ್ರೀನ್ ಅಮೊಲೆಡ್ ಡಿಸ್ಪ್ಲೇ

* 3.2 ಇಂಚಿನ QVGA ಕಲರ್ ಡಿಸ್ಪ್ಲೇ, 240 x 400 ಪಿಕ್ಸಲ್ ರೆಸೊಲ್ಯೂಷನ್

* 2.0 ಮೆಗಾ ಪಿಕ್ಸಲ್ ಕ್ಯಾಮೆರಾ

* 3.5 ಎಂಎಂ ಹೆಡ್ ಫೋನ್ ಜ್ಯಾಕ್

* 256 ಎಂಬಿ RAM

* 32 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಮೈಕ್ರೊ SD (TransFlash) ಮೆಮೊರಿ ಕಾರ್ಡ್

* HTML ವೆಬ್ ಬ್ರೌಸರ್

ಇದರಲ್ಲಿ ಲಭ್ಯವಿರುವ Muve ಮ್ಯೂಸಿಕ್ ನಿಂದ ನಿಮ್ಮ ಇಚ್ಛೆಯ ಹಾಡುಗಳನ್ನು ಎಲ್ಲಿಂದಲಾದರೂ ಕಡಿಮೆ ಬೆಲೆಗೆ ಡೌನ್ ಲೋಡ್ ಮಾಡಿಕೊಳ್ಳಬಹುದು. ಆದರೆ ಭಾರತದಲ್ಲಿ ಈ ZTE ಕೋರಸ್ ಮೊಬೈಲ್ ಬೆಲೆಯ ಕುರಿತು ಮಾಹಿತಿ ತಿಳಿದುಬಂದಿಲ್ಲ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot