ಸಂಗೀತ ಪ್ರಿಯರಿಗೆ ZTE ಕೋರಸ್ ಮೊಬೈಲ್ ಫೋನ್

ಸಂಗೀತ ಪ್ರಿಯರಿಗೆಂದೇ ಹೊಸ ಮೊಬೈಲೊಂದು ಬರುತ್ತಿದೆ. ಸಂಗೀತದಲ್ಲಿ ಹೆಚ್ಚು ಆಯ್ಕೆಗಳನ್ನೊಳಗೊಂಡಿರುವ ಮೊಬೈಲ್ ಗೆ ಬೇಡಿಕೆ ಕೂಡ ದಿನೇ ದಿನೇ ಹೆಚ್ಚುತ್ತಿದೆ. ಅಂತಹವರಿಗೆಂದೇ ಚೈನಾ ಮೂಲದ ZTE ಕಂಪನಿ ZTE ಕೋರಸ್ ಮೊಬೈಲನ್ನು ಹೊರತಂದಿದೆ.
ಸಂಗೀತ ಪ್ರಧಾನವಾಗಿರುವ ZTE ಕೋರಸ್ ಮೊಬೈಲ್ ಸಂಗೀತ ಪ್ರಿಯರಿಗೆ ಅವಶ್ಯಕವಾದ ಎಲ್ಲಾ ಅಂಶಗಳನ್ನು ನೀಡಲಾಗಿದೆ.. ಆಡಿಯೋ ಪ್ಲೇಬ್ಯಾಕ್ ಜೊತೆ ಸಂಗೀತ ಸ್ಪಷ್ಟತೆಯನ್ನೂ ನೀಡಲಿದೆ. ಇದರಲ್ಲಿ HD SRS WOW ತಂತ್ರಜ್ಞಾನ ಅಳವಡಿಸಿರುವುದು ವಿಶೇಷವೆನಿಸಿದೆ. ನಿಮ್ಮ ಅಭಿರುಚಿಗೆ ತಕ್ಕಂತೆ ಪಾಪ್, ರಾಕ್, ಹಿಪ್ ಹಾಪ್ ಮುಂತಾದ ಆಯ್ಕೆಗಳನ್ನೂ ನೀಡಲಾಗಿದೆ. ಇದರಲ್ಲಿನ 600 MHz ಪ್ರೊಸೆಸರ್ 3G ವೆಬ್ ಬ್ರೌಸಿಂಗ್ ವೇಗವನ್ನು ನೀಡುತ್ತದೆ.
ಇದೀಗ ಈ ಮೊಬೈಲಿನಲ್ಲಿರುವ ಇನ್ನಿತರ ವಿಶೇಷತೆಗಳೇನೆಂದು ತಿಳಿದುಕೊಳ್ಳೋಣ.
ZTE ಕೋರಸ್ ಮೊಬೈಲ್ ವಿಶೇಷತೆ:
* 105 ಗ್ರಾಂ ತೂಕ
* 4.35 x 2.23 x 0.58 ಎಂಎಂ ಸುತ್ತಳತೆ
* 3.2 ಇಂಚಿನ ಸ್ಕ್ರೀನ್
* ಟಚ್ ಅಂಡ್ ಟೈಪ್
* WQVGA TFT ಟಚ್ ಸ್ಕ್ರೀನ್ ಡಿಸ್ಪ್ಲೇ
2.0 ಮೆಗಾ ಪಿಕ್ಸಲ್ ಕ್ಯಾಮೆರಾ ಕಮ್ ಕ್ಯಾಮ್ ಕಾರ್ಡರ್
ವಿಡಿಯೋ ಮತ್ತು ಮ್ಯುಸಿಕ್ ಪ್ಲೇಯರ್ ಜೊತೆ ಸ್ಪೀಚ್ ರೆಕಾಗ್ನಿಶನ್ ವಿಶೇಷ ಆಯ್ಕೆಯನ್ನೂ ನೀಡಲಾಗಿದೆ. 1000mAh Li-ion ಬ್ಯಾಟರಿ ಹೊಂದಿರುವ ಈ ಮೊಬೈಲ್ 220 ಗಂಟೆ ಸ್ಟ್ಯಾಂಡ್ ಬೈ ಟೈಂ ಮತ್ತು 4.2 ಗಂಟೆ ಟಾಕ್ ಟೈಂ ನೀಡುತ್ತದೆ. ಆದರೆ ಭಾರತದಲ್ಲಿ ಈ ಮೊಬೈಲಿನ ನಿಖರ ಬೆಲೆ ಕುರಿತು ಮಾಹಿತಿ ಇನ್ನೂ ತಿಳಿದುಬಂದಿಲ್ಲ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications
