ಚೀನಾದಲ್ಲಿ ಹವಾ ಎಬ್ಬಿಸಿರುವ 'ನುಬಿಯಾ' ಫೋನ್ ಭಾರತದಲ್ಲಿ ಬಿಡುಗಡೆ!! ಏನಂತಹ ವಿಶೇಷ??
ಮೊದಲೆಲ್ಲಾ ಸ್ಮಾರ್ಟ್‌ಫೋನ್ ಖರೀದಿಸುವಾಗ ಮೊಬೈಲ್ ಕಂಪೆನಿ ಯಾವುದು ಎಂದು ನೋಡುತ್ತಿದ್ದೆವೆ. ಆದರೆ, ಈಗ ಎಲ್ಲಾ ಕಂಪೆನಿಗಳು ಉತ್ತಮವಾಗಿಯೇ ಇವೆ.!
ಸ್ಮಾರ್ಟ್‌ಫೋನ್ ಪ್ರಪಂಚ ಯಾವಾಗಲೂ ಅಪ್‌ಡೇಟ್ ಆಗುತ್ತಲೇ ಇರುತ್ತದೆ. ಕೆಲವೇ ತಿಂಗಳಿನಲ್ಲಿ 1GB RAM ಹೊಂದಿದ್ದ ಸ್ಮಾರ್ಟ್‌ಫೋನ್‌ಗಳೇ ಎಲ್ಲರನ್ನು ನಿಬ್ಬೆರಗಾಗುಸುತ್ತಿದ್ದವು. ಆದರೆ, ಇಂದು 8 GB RAM ಹೊಂದಿರುವ ಸ್ಮಾರ್ಟ್‌ಫೋನ್‌ಗಳೇ ಮಾಮೂಲಿ ಎನ್ನುವಂತಿವೆ.!!
ಮೊದಲೆಲ್ಲಾ ಸ್ಮಾರ್ಟ್‌ಫೋನ್ ಖರೀದಿಸುವಾಗ ಮೊಬೈಲ್ ಕಂಪೆನಿ ಯಾವುದು ಎಂದು ನೋಡುತ್ತಿದ್ದೆವೆ. ಆದರೆ, ಈಗ ಎಲ್ಲಾ ಕಂಪೆನಿಗಳು ಉತ್ತಮವಾಗಿಯೇ ಇವೆ.! ಕಡಿಮೆ ಬೆಲೆಯಲ್ಲಿ 8 GB RAM ಹೊಂದಿರುವ ಉತ್ತಮ ಮೊಬೈಲ್ ಒಂದನ್ನು ನಿಮಗೆ ಪರಿಚಯಿಸುತ್ತಿದ್ದೇವೆ. ಯಾವುದು ಆ ಮೊಬೈಲ್ ಅದರ ಫೀಚರ್ಸ್ ಏನು ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಜೆಡ್‌ಟಿಇ ನುಬಿಯಾ (ZTE nubia Z17)
ಈಗಾಗಲೇ ಚೀನಾದ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿರುವ 8 GB RAM ಹೊಂದಿರುವ 'ಜೆಡ್‌ಟಿಇ ನುಬಿಯಾ' ಫೋನ್ ಹೆಚ್ಚು ಬೆಡಿಕೆಯನ್ನು ಸೃಷ್ಟಿಸಿಕೊಳ್ಳುತ್ತಿದೆ. ಭಾರತಕ್ಕೆ ಈಗ ಕಾಲಿಟ್ಟಿರುವ ನುಬಿಯಾ ಕಂಪೆನಿ ಬಗ್ಗೆ ಜನರಿಗೆ ಅಷ್ಟಾಗಿ ತಿಳಿದಿಲ್ಲ. ಆದರೆ, ಕಡಿಮೆ ಬೆಲೆಯಲ್ಲಿ 'ಜೆಡ್‌ಟಿಇ ನುಬಿಯಾ' ಫೋನ್ ಹೆಚ್ಚು ಫೀಚರ್ಸ್ ಹೊಂದಿದ್ದು, ಅವು ಕೆಳಕಂಡಂತಿವೆ.!!

ಸ್ನ್ಯಾಪ್‌ಡ್ರಾಗನ್ 835 ಚಿಪ್‌ಸೆಟ್.!!
'ಜೆಡ್‌ಟಿಇ ನುಬಿಯಾ' ಫೋನ್ ಪ್ರಸ್ತುತ ಕ್ವಾಲ್ಕಾಮ್‌ನ ಅತ್ಯುತ್ತಮ ಪ್ರೊಸೆಸರ್ ಹೊಂದಿದ್ದು, ಕೇವಲ ಹೈ ಎಂಡ್ ಸ್ಮಾರ್ಟ್‌ಫೋನ್‌ಗಳು ಈಗ ಈ ಚಿಪ್‌ಸೆಟ್ ಅಳವಡಿಸಿಕೊಳ್ಳುತ್ತಿವೆ. ಈ ಪ್ರೊಸೆಸರ್ ಪ್ರಪಂಚದ ಬೆಸ್ಟ್ ಕಾರ್ಯನಿರ್ವಹಣೆ ನೀಡುವ ಚಿಪ್‌ಸೆಟ್ ಆಗಿದೆ.!!

ಬೇಜೆಲ್ ಲೆಸ್ ಡಿಸ್‌ಪ್ಲೇ!!
'ಜೆಡ್‌ಟಿಇ ನುಬಿಯಾ' ಫೋನ್ 5.5 ಇಂಚ್ LCD IPS ಡಿಸ್‌ಪ್ಲೇ ಹೊಂದಿದ್ದು, ಎರಡೂ ಬದಿಯಲ್ಲಿ ಬೇಜಲ್ ಲೆಸ್ ಎಂಡ್ ಹೊಂದಿದೆ. 1920*1080 ಪಿಕ್ಸೆಲ್ ಹೊಂದಿದ್ದು, ಡಿಸ್‌ಪ್ಲೇ ಮಲ್ಟಿಮೀಡಿಯಾ ವೀಕ್ಷಣಾ ಗುಣಮಟ್ಟ ಹೆಚ್ಚು ಉತ್ತಮವಾಗಿದೆ.!!

ಕ್ಯಾಮೆರಾ ಮತ್ತು ಬೆಲೆ.
12MP ಸೆಲ್ಫಿ ಕ್ಯಾಮೆರಾ ಮತ್ತು 23MP ರಿಯರ್ ಕ್ಯಾಮೆರಾ ಹೊಂದಿರುವ 'ಜೆಡ್‌ಟಿಇ ನುಬಿಯಾ' ಫೋನ್ ಅತ್ಯುತ್ತಮ ಫೋಟೊಗಳನ್ನು ಸೆರೆಹಿಡಿಯಬಲ್ಲದು. ಇನ್ನು ಹೈ ಎಂಡ್ ಸ್ಮಾರ್ಟ್‌ಫೋನ್ ಆಗಿರುವ 'ಜೆಡ್‌ಟಿಇ ನುಬಿಯಾ' ಫೋನ್ ಬೆಲೆ ಚೀನಾದಲ್ಲಿ 35,000 ರೂಪಾಯಿಗಳಾಗಿವೆ. ಮುಂದಿನ ತಿಂಗಳು ಭಾರತದಲ್ಲಿ ಬಿಡುಗಡೆಯಾಗಲಿದೆ.!!


Click it and Unblock the Notifications