Home
ಮೊಬೈಲ್

ZTE ನ ಫೈರ್‌ಫಾಕ್ಸ್ ಫೋನ್‌ಗಳು ಇದೀಗ ಭಾರತದಲ್ಲೂ

By Shwetha

ಫೈರ್‌ಫಾಕ್ಸ್ ಚಾಲಿತ ಯಾವುದೇ ಫೋನ್‌ಗಳನ್ನು ನೀವು ಕಾಣುವುದು ಈಗ ವಿರಳವೇ. ಆದರೆ ZTE ಕಂಪೆನಿಯು ಪ್ರಥಮ ಬಾರಿಗೆ ಫೈರ್‌ಫಾಕ್ಸ್ ಡಿವೈಸ್ ಅನ್ನು ಲಾಂಚ್ ಮಾಡುತ್ತಿದೆ. ಇದನ್ನು ಓಪನ್ ಸಿ ಎಂದು ಕರೆಯಲಾಗಿದೆ. ಅದಾಗ್ಯೂ ಫೈರ್‌ಫಾಕ್ಸ್ ಫೋನ್‌ಗಳು ಆಂಡ್ರಾಯ್ಡ್ ಫೋನ್‌ಗಳಿಗಿಂತ ಕಡಿಮೆ ದರದಲ್ಲಿ ದೊರೆಯುತ್ತಿದ್ದು, ಇದರ ಬೆಲೆ ಕೇವಲ ರೂ 9,999 ಆಗಿದೆ.

ಮೇ ತಿಂಗಳಿನಲ್ಲಿ ಮುಂಚಿತವಾಗಿ ಓಪನ್ ಸಿ ಘೋಷಿತವಾಗಿದ್ದು ಇದು ರೂ 6,000 ಗಳಲ್ಲಿ ದೊರೆಯಲಿದೆ ಎಂದಾಗಿತ್ತು. ಆದರೆ ನೀವು ಇದಕ್ಕಿಂತಲೂ ಕಡಿಮೆ ದರದ ಫೈರ್‌ಫಾಕ್ಸ್ ಫೋನ್‌ ಅನ್ನು ಎದುರು ನೋಡುತ್ತಿದ್ದೀರಿ ಎಂದಾದಲ್ಲಿ, ಇನ್ನು ಸ್ವಲ್ಪ ಸಮಯ ನೀವು ಕಾಯಬೇಕಾಗುತ್ತದೆ. ಭಾರತೀಯ OEM ಗಳಾದ ಇಂಟೆಕ್ಸ್ ಮತ್ತು ಸ್ಪೈಸ್ ಮೊಬೈಲ್‌ಗಳು ಕೂಡ ಮೊಝೈಲಾ ಮೊಬೈಲ್ ಓಎಸ್ ಆಧಾರಿತ ಫೋನ್‌ ಅನ್ನು ಲಾಂಚ್ ಮಾಡುವ ನಿಟ್ಟಿನಲ್ಲಿವೆ.

ZTE ನ ಫೈರ್‌ಫಾಕ್ಸ್ ಚಾಲಿತ ಫೋನ್‌ಗಳು ಇದೀಗ ಲಭ್ಯ!!!

ಇನ್ನು ಓಪನ್ ಸಿ ವಿಶೇಷತೆಗಳ ಕುರಿತು ನೋಡುವುದಾದರೆ ಇದು 4 ಇಂಚಿನ TFT ಸಾಮರ್ಥ್ಯವುಳ್ಳ ಟಚ್‌ಸ್ಕ್ರೀನ್ ಡಿಸ್‌ಪ್ಲೇ ಮೂಲಕ ಬಂದಿದ್ದು 800 x 480 ಪಿಕ್ಸೆಲ್‌ಗಳ ರೆಸಲ್ಯೂಶನ್ ಅನ್ನು ನೀಡುತ್ತಿದೆ. 1.2GHz ಡ್ಯುಯಲ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 200 ಪ್ರೊಸೆಸರ್ ಜೊತೆಗೆ 512MB RAM ಡಿವೈಸ್‌ನಲ್ಲಿದೆ. ಇದರ ಆಂತರಿಕ ಸಂಗ್ರಹಣಾ ಸಾಮರ್ಥ್ಯ 4 ಜಿಬಿಯಾಗಿದ್ದು ಫೈರ್‌ಫಾಕ್ಸ್ ಓಎಸ್ 1.3 ಮತ್ತು ಆಂಡ್ರಾಯ್ಡ್ ಕಿಟ್‌ಕ್ಯಾಟ್ ಓಎಸ್ ಇವೆರಡೂ ಈ ಡಿವೈಸ್‌ನಲ್ಲಿ ಚಾಲನೆಯಾಗುತ್ತದೆ.

ZTE ತನ್ನ ಫೋನ್‌ನಲ್ಲಿ ಮೈಕ್ರೋಎಸ್‌ಡಿ ಕಾರ್ಡ್ ಸ್ಲಾಟ್ ಅನ್ನು ಕೂಡ ಸೇರಿಸಿದ್ದು, ಇದನ್ನು ಸಂಗ್ರಹಣಾ ಮಟ್ಟವನ್ನು ನಿಮಗೆ 32 ಜಿಬಿವರೆಗೆ ಕೊಂಡೊಯ್ಯಬಹುದಾಗಿದೆ. ಹಿಂಭಾಗದಲ್ಲಿ 2 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಡಿವೈಸ್ ಹೊಂದಿದ್ದು ವೀಡಿಯೋಗಳನ್ನು ಇದರಲ್ಲಿ ದಾಖಲಿಸಬಹುದಾಗಿದೆ. ಇನ್ನು ಡಿವೈಸ್‌ನ ಸಂಪರ್ಕ ವಿಶೇಷತೆಗಳೆಂದರೆ ವೈ-ಫೈ, ಬ್ಲ್ಯೂಟೂತ್, GPS ನೊಂದಿಗೆ A-GPS ಮತ್ತು FM Radio ಆಗಿದೆ

1400 mAh ರಿಮೂವೇಬಲ್ ಬ್ಯಾಟರಿಯನ್ನು ಹ್ಯಾಂಡ್‌ಸೆಟ್ ಹೊಂದಿದ್ದು 150 ಗಂಟೆಗಳ ಸ್ಟ್ಯಾಂಡ್‌ಬೈ ಮತ್ತು 6 ಗಂಟೆಗಳ ಟಾಕ್ ಟೈಮ್ ಅನ್ನು ಇದು ನೀಡುತ್ತಿದೆ. ನೀವು ZTE ಓಪನ್ ಸಿ ಫೋನ್ ಅನ್ನು ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.4 ಪ್ಲಾಟ್‌ಫಾರ್ಮ್‌ನಲ್ಲಿ ಬಳಸಬೇಕೆಂದು ನಿರ್ಧರಿಸಿದರೆ, ಇದನ್ನು ರೀಫ್ಲ್ಯಾಶ್ ಮಾಡಬೇಕಾದ್ದು ಅತ್ಯವಶ್ಯಕವಾಗಿದೆ.

Best Mobiles in India

English summary
This article tells about ZTE Open C With Firefox OS Now Available in India for Rs 9,999.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+