Subscribe to Gizbot

ವಿಶ್ವದ ಅತ್ಯಂತ ಸ್ಲಿಮ್ ಸ್ಮಾರ್ಟ್ ಫೋನ್ ತಂದ ZTE

Posted By: Varun
ವಿಶ್ವದ ಅತ್ಯಂತ ಸ್ಲಿಮ್ ಸ್ಮಾರ್ಟ್ ಫೋನ್ ತಂದ ZTE

ಇತ್ತೀಚೆಗೆ ಸ್ಲಿಮ್ ಆಗಿರೋದು ತುಂಬಾನೇ ಫ್ಯಾಶನ್ ಆಗ್ಬಿಟ್ಟಿದೆ. ಮಾಡಲ್ ಗಳಿಗೆ ಸೀಮಿತವಾಗಿದ್ದ ಈ ಹುಚ್ಚು ಕ್ರಮೇಣ ಬಾಲಿವುಡ್ ನಟಿಯರಿಗೂ ಅಂಟಿಕೊಂಡಿದೆ. ಕರೀನಾ ಕಪೂರ್ ನಿಂದ ಹಿಡಿದು ದೀಪಿಕಾವರೆಗೂ ಪಡುಕೋಣೆ, ಶಿಲ್ಪಾ ಶೆಟ್ಟಿವರೆಗೂ ಎಲ್ಲಾ ಸ್ಲಿಮ್ ಇರೋರೆ.

ಈಗಈ ಹುಚ್ಚು ಮೊಬೈಲ್ ಜಗತ್ತಿಗೂ ವ್ಯಾಪಿಸಿಕೊಂಡಿದ್ದು, ಕಳೆದ ವಾರ ಚೀನಾದ Oppo ಎಂಬ ಕಂಪನಿಯೊಂದು ಕೇವಲ 6.5 ಮಿಲಿಮೀಟರ್ ನಷ್ಟು ದಪ್ಪದಾದ ಸ್ಮಾರ್ಟ್ ಫೋನ್ ಒಂದನ್ನು ಹೊರತಂದಿತ್ತು. ಇದಕ್ಕೆ ಸವಾಲೇಸೆಯುವಂತೆ ಚೀನಾದ ಬಹು ಪ್ರಖ್ಯಾತ ಕಂಪನಿ ZTE ಈಗ 6.2 ಮಿಲಿ ಮೀಟರ್ ನ "ZTE ಅಥೆನಾ" ಹೆಸರಿನ ಸ್ಮಾರ್ಟ್ ಫೋನ್ ಉತ್ಪಾದನೆ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದೆ.

ಆಂಡ್ರಾಯ್ಡ್ 4.0 ತಂತ್ರಾಂಶ ಹೊಂದಿರುವ ವಿಶ್ವದ ಅತ್ಯಂತ ಸ್ಲಿಮ್ ಸ್ಮಾರ್ಟ್ ಫೋನ್ ಎಂಬ ಕೀರ್ತಿಗೆ ಪಾತ್ರವಾಗಿರುವ ಈ "ZTE ಅಥೆನಾ" ದ ಪ್ರಮುಖ ಫೀಚರುಗಳು ಈ ರೀತಿ ಇವೆ:

  • ಮಲ್ಟಿ- ಕೋರ್ ಕಾರ್ಟೆಕ್ಸ್ A15 ಮೊಬೈಲ್ ಪ್ರೋಸೆಸರ್

  • 720p HD ರೆಸಲ್ಯೂಶನ್, IPS ಡಿಸ್ಪ್ಲೇ

  • ಆಂಡ್ರಾಯ್ಡ್ 4.0 ಐಸ್ ಕ್ರೀಮ್ ಸ್ಯಾಂಡ್ವಿಚ್ ತಂತ್ರಾಂಶ

  • 64 GB ಆಂತರಿಕ ಮೆಮೊರಿ.
 

ಸದ್ಯಕ್ಕೆ ಮಾರುಕಟ್ಟೆಯಲ್ಲಿ ಇರುವ ಸ್ಮಾರ್ಟ್ ಫೋನುಗಳಲ್ಲಿ ಮೋಟೊರೋಲದ ಡ್ರಾಯ್ದ್ ರೇಜರ್ 7.1 mm ಇದ್ದು, ಸ್ಯಾಮ್ಸಂಗ್ ಗ್ಯಾಲಕ್ಸಿ S2 8.45 mm ನಷ್ಟು ತೆಳ್ಳಗಿದೆ. ಅದೇ ಆಪಲ್ ನ ಐಫೋನ್ 9.3 mm ಇದೆ.

ಸದ್ಯಕ್ಕೆ ಈ ಫೋನ್ ಇನ್ನೂ ಮಾರುಕಟ್ಟೆಗೆ ಬಂದಿಲ್ಲ ಹಾಗು ಬೆಲೆಯನ್ನು ZTE ಇದರ ಬೆಲೆಯನ್ನು ನಿಗದಿಪಡಿಸಿಲ್ಲವಾದ್ದರಿಂದ ನಿಮಗೇನಾದರೂ ಈ ಸ್ಲಿಮ್ ಫೋನು ಇಷ್ಟವಾಗಿದ್ದರೆ ಸ್ಮಲ್ಪ ದಿನ ಕಾಯಲೇಬೇಕು.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot