ಡಿಸೆಂಬರ್ ನಲ್ಲಿ ತೆರೆಗೆ ZTE ಮಲ್ಟಿ ಮೀಡಿಯಾ ಟಚ್ ಫೋನ್

By Super
|
ಡಿಸೆಂಬರ್ ನಲ್ಲಿ ತೆರೆಗೆ ZTE ಮಲ್ಟಿ ಮೀಡಿಯಾ ಟಚ್ ಫೋನ್

ZTE ಕಂಪನಿ ಈ ಡಿಸೆಂಬರ್ ನಲ್ಲಿ ಮೊಬೈಲೊಂದನ್ನು ಹೊರತರಲಿದೆ. ಬಹು ನಿರೀಕ್ಷಿತ ZTE V881 ಸ್ಮಾರ್ಟ್ ಫೋನ್ ಹಲವು ಆಧುನಿಕ ಆಯ್ಕೆಗಳನ್ನು ಹೊರತರಲಿರುವುದಾಗಿ ತಿಳಿದುಬಂದಿದೆ. ಈ ಸ್ಮಾರ್ಟ್ ಫೋನನ್ನು ZTE ಅಗ್ಲೇಯ ಎಂದೂ ಕರೆಯಲಾಗಿದೆ.

ZTE ಬ್ಲೇಡ್ ಮೊಬೈಲ್ ನಂತರ ZTE ಇಂದ ಬಿಡುಗಡೆಗೊಳ್ಳುತ್ತಿರುವ ಈ ಮೊಬೈಲ್ ಕೂಡ ಯಶಸ್ವಿಯಾಗುವ ನಿರೀಕ್ಷೆಯಿದೆ. ಗೂಗಲ್ ಆಂಡ್ರಾಯ್ಡ್ 2.3.5 ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿರುವ ಈ ಮೊಬೈಲ್ ನಲ್ಲಿ ಲೈನಕ್ಸ್ 2.6.35 ಆಪರೇಟಿಂಗ್ ಸಿಸ್ಟಮ್ ಕರ್ನಲ್ ಕೂಡ ಇದೆ. ಕ್ವಾಲ್ಕಂ ಸ್ನಾಪ್ ಡ್ರಾಗನ್ MSM8255 ಸಿಪಿಯು ಪ್ರೊಸೆಸರ್ ಇರುವ ಈ ಮೊಬೈಲ್ ನಲ್ಲಿ 512 ಎಂಬಿ LPDDR2 SDRAM ಇದೆ.

ಗ್ರಾಫಿಕ್ ಗೆಂದು ಕ್ವಾಲ್ಕಂ ಅಡೆರ್ನೊ 205 ಗ್ರಾಫಿಕ್ ಕಂಟ್ರೋಲರ್ ಕೂಡ ಒದಗಿಸಲಾಗಿದೆ. ಮೊಬೈಲ್ GSM 900/ 1800 MHz ಸೆಲ್ಲುಲ್ಯಾರ್ ನೆಟ್ ವರ್ಕ್ ಬೆಂಬಲಿತವಾಗಿದೆ. ಇನ್ನೂ ಹಲವು ಆಧುನಿಕ ಆಯ್ಕೆಗಳು ಮೊಬೈಲ್ ನಲ್ಲಿವೆ ಅದೇನೆಂದು ಇಲ್ಲಿ ತಿಳಿದುಕೊಳ್ಳಿ.

ZTE ಅಗ್ಲೇಯ ಮೊಬೈಲ್ ವಿಶೇಷತೆ:

* 3.8 ಇಂಚಿನ ಡಿಸ್ಪ್ಲೇ, 480 x 800 ಪಿಕ್ಸಲ್ ರೆಸೊಲ್ಯೂಷನ್

* ಮಲ್ಟಿ ಟಚ್ ಸ್ಕ್ರೀನ್ ತಂತ್ರಜ್ಞಾನ

* 5 ಮೆಗಾ ಪಿಕ್ಸಲ್ ಕ್ಯಾಮೆರಾ, 2560 x 1920 ಪಿಕ್ಸಲ್ ರೆಸೊಲ್ಯೂಷನ್

* 32 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಮೈಕ್ರೊ SD ಕಾರ್ಡ್ ಸ್ಲಾಟ್

* ಬ್ಲೂಟೂಥ್, USB, 802.11 b/ g/n ವೈ-ಫೈ

* 3.5 ಎಂಎಂ ಆಡಿಯೋ ಜ್ಯಾಕ್

* A-GPS, GPRS, EDGE ಸಂಪರ್ಕ

* HTML ವೆಬ್ ಬ್ರೌಸರ್

ಲೀಥಿಯಂ ಐಯಾನ್ ಬ್ಯಾಟರಿ ಹೊಂದಿರುವ ಈ ಮೊಬೈಲ್ ಉತ್ತಮ ಟಾಕ್ ಟೈಂ ಮತ್ತು ಸ್ಟ್ಯಾಂಡ್ ಬೈ ಟೈಂ ನೀಡುತ್ತದೆ. ಮನರಂಜನೆಗೆಂದು ಎಫ್ ಎಂ ರೇಡಿಯೋ ಮತ್ತು MP3, MPEG4 ಮತ್ತು AAC+ ಫಾರ್ಮೆಟ್ ಗಳನ್ನು ಬೆಂಬಲಿಸುವ ಆಡಿಯೋ, ವಿಡಿಯೋ ಕೂಡ ಇದೆ. HDMI ಇನ್ ಪುಟ್ ಪೋರ್ಟ್ ಕೂಡ ಮೊಬೈಲಿನೊಂದಿಗಿದೆ.

ಫೇಸ್ ಬುಕ್ ಮತ್ತು ಟ್ವಿಟರ್ ಸಾಮಾಜಿಕ ತಾಣಗಳ ಆಯ್ಕೆಯೂ ಇದೆ. ಈ ZTE V881 ಮೊಬೈಲಿನ ಬಿಡುಗಡೆ ದಿನಾಂಕ ಮತ್ತು ಬೆಲೆಯನ್ನು ಕಂಪನಿ ಇನ್ನೂ ಅಧೀಕೃತವಾಗಿ ಘೋಷಿಸಿಲ್ಲ. ಆದರೆ ಮೊಬೈಲ್ ಕೈಗೆಟುಕುವ ದರದಲ್ಲಿ ಲಭ್ಯವಾಗಲಿರುವುದಾಗಿ ಕೆಲವು ಮೂಲಗಳು ತಿಳಿಸಿವೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X