Home
ಸಂಗೀತ

ಫಿಲಿಪ್ಸ್ ಸಂಗೀತ ಸಾಧನ ಸ್ವರ್ಗಕ್ಕೆ ಸಮಾನ!

By Super
ಫಿಲಿಪ್ಸ್ ಸಂಗೀತ ಸಾಧನ ಸ್ವರ್ಗಕ್ಕೆ ಸಮಾನ!
ಸಂಗೀತ ಎಂದರೆ ಎಲ್ಲರಿಗೂ ಅಚ್ಚು-ಮೆಚ್ಚು. ಸಂಗೀತವನ್ನು ಮೊಬೈಲಿನಲ್ಲಿ ಆಲಿಸುವವರ ಸಂಖ್ಯೆಯೂ ಸಾಕಷ್ಟಿದೆ. ಈ ವಿಷಯ ಎಲ್ಲರಿಗೂ ತಿಳಿದಿದೆ. ಇದನ್ನೇ ಎನ್ ಕ್ಯಾಶ್ ಮಾಡಿಕೊಳ್ಳಲು ಯೋಜನೆ ರೂಪಿಸಿದೆ ಖ್ಯಾತ ಕಂಪೆನಿ ಫಿಲಿಪ್ಸ್.

"ಫಿಲ್ ದ ಮ್ಯೂಸಿಕ್" ಎಂಬ ಕಾರ್ಯಕ್ರಮ ಮುಂಬೈ ನಲ್ಲಿ ಆಯೋಜಿಸಿದ್ದ ಫಿಲಿಪ್ಸ್, ತನ್ನ ಸೌಂಡ್ ಸಿಸ್ಟಮ್ ನಿಂದ ನೆರೆದಿದ್ದ ಶ್ರೋತ್ರುಗಳಲ್ಲಿ ಪುಳಕ ಮೂಡಿಸಿದೆ. ಜನರ ಅಭೂತಪೂರ್ವ ಪ್ರತಿಕ್ರಿಯೆಯಿಂದಾಗಿ ಪ್ರಭಾವಿತವಾಗಿರುವ ಫಿಲಿಪ್ಸ್ ಮನರಂಜನೆಗೆ ಮೀಸಲಾಗಿರುವ ತನ್ನ ಉತ್ಪನ್ನಗಳಲ್ಲಿ ಈ ಯಶಸ್ಸನ್ನು ಬಳಸಿಕೊಳ್ಳಲು ಉದ್ದೇಶಿಸಿದೆ. ಕೂಲಾಗಿರುವ ಹೊಸ ಗಿಜ್ಮೋಸ್ ಫಿಲಿಪ್ಸ್ ಫಿಡಿಲಿಯೊ DS9000 ಎಂಬ ಹೆಸರಿನ ಹೊಸ ಡಾಕಿಂಗ್ ಸಿಸ್ಟಮ್ ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಹೊರಟಿದೆ.

ಈ ಸೌಂಡ್ ಸಿಸ್ಟಮ್ ಸಾಕಷ್ಟು ಸುಸ್ಪಷ್ಟ ಧ್ವನಿ ಹಾಗೂ ಕ್ವಾಲಿಟಿ ಹೊಂದಿದೆ. ಅದನ್ನು ವರ್ಣಿಸಲು ಸಾಧ್ಯವೇ ಇಲ್ಲ. ಮತ್ತೆ ಮತ್ತೆ ಕೇಳಬೇಕೆನಿಸುವ ಸಂಗೀತ ತೇಲಿಬರಲಿರುವ ಈ ಹೊಸ ಸಿಸ್ಟಮ್ ಗುಣಮಟ್ಟವನ್ನು ಹೇಳಲು ಕಿವಿಗೇ ಬಾಯಿ ಬಂದು ಮಾತನಾಡಬೇಕಷ್ಟೇ!

ಇನ್ನೊಂದು ಗಮನಿಸಲೇಬೇಕಾದ ಅಂಶವೆಂದರೆ ಈ ಸಿಸ್ಟಮ್ ಐಪೋಡ್ ಅಥವಾ ಐಫೋನಿಗೆ ಸರಿಯಾಗಿ ಹೊಂದಾಣಿಕೆಯಾಗುವಂತಿದೆ. ಆಡಿಯೋ ಉತ್ಪನ್ನಗಳನ್ನು ಹೆಚ್ಚು ಹೆಚ್ಚು ಜನರಿಗೆ ತಲುಪಿಸುವ ಉದ್ದೇಶ ಅವರದ್ದೆಂದು ಫಿಲಪ್ಸ್ ಕಂಪೆನಿ ತಿಳಿಸಿದೆ.

ಈ ಹೊಸ ಫಿಡಿಲಿಯೊ DS9000 ಡಾಕಿಂಗ್ ಸಿಸ್ಟಮ್ ಜೊತೆ ಸುಪ್ ಹೋಮ್ ಥಿಯೇಟರ್ ಕೂಡ ಬರಲಿದೆ. ಇದರ ಹೆಸರು HTS9520. ಇದು ಅತ್ಯಾಕರ್ಷಕ ಹಾಗೂ ಅತ್ಯಾಧುನಿಕವಾಗಿದ್ದು ಜನರನ್ನು ಸೀದಾ ಸಂಗೀತಸ್ವರ್ಗಕ್ಕೇ ಕರೆದೊಯ್ಯಲಿದೆ. ಇದರಲ್ಲಿ ಡಾಲ್ಬಿ ಟ್ರೂ HD ಮತ್ತು DTS HD ಸೌಲಭ್ಯವಿದೆ. ಫುಲ್ HD ಬ್ಲೂ ರೇ ವಿಡಿಯೋ ಪ್ಲೇ ಬ್ಯಾಕ್, 3D ಇದರಲ್ಲಿದೆ. ವೈ-ಫೈ ಸಹಕಾರ, USB ಪೋರ್ಟ್, DLNA ನೆಟ್ ವರ್ಕ್ ಎಲ್ಲಾ ಸೌಲಭ್ಯವಿದೆ.

ಈ ಎರಡು ಸಿಸ್ಟಮ್ ಗಳ ಬೆಲೆ ಈ ರೀತಿ ಇದೆ. ಫಿಡಿಲಿಯೊ ರು. 39,000 ಮತ್ತು HTS9520 ಬೆಲೆ ರು. 71,000. ಇದರಲ್ಲಿರುವ ಸೂಪರ್ ಕ್ವಾಲಿಟಿಗೆ ಹೋಲಿಸಿದರೆ ಬೆಲೆ ಕಡಿಮೆಯೇ ಎನ್ನಬಹುದು. ನೋಡದೆಯೂ ಖರೀದಿಸಬಹುದು, ಆದರೂ ಪರಾವಾಗಿಲ್ಲ ನೋಡಿಯೇ ಖರೀದಿಸಿ..!

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+