ಈ ಆಂಗ್ರಿ ಬರ್ಡ್ಸ್ ಸ್ಪೀಕರ್ಸ್ ಸಖತ್ತಾಗಿದೆ ನೋಡಿ!

ಈ ಆಂಗ್ರಿ ಬರ್ಡ್ಸ್ ಸ್ಪೀಕರುಗಳು ಟ್ಯಾಬ್ಲೆಟ್ ಗಳು ಹಾಗೂ ಕಂಪ್ಯೂಟರ್ ಡಿಸ್ ಪ್ಲೇ ಮೇಲೆ ಸದ್ಯದಲ್ಲೇ ಬರಲಿದ್ದು ಇವು ಇನ್ನಷ್ಟು ಜನಪ್ರಿಯತೆ ಪಡೆಯಲಿವೆ. ಗೇರ್ ಅಪ್ ಕಂಪನಿಯು ಐಪೋಡ್, ಐಪ್ಯಾಡ್, ಐಫೋನ್ ಡಾಕಿಂಗ್ ಸ್ಟೇಷನ್ ಗಳ ಜೊತೆ ಸ್ಪೀಕರ್ ಸಿಸ್ಟಮ್ ಇರುವ ಸಾಧನವನ್ನು ಕೂಡ ರೆಡಿ ಮಾಡಿದೆ.
ಈ ಹೊಸ ಸ್ಪೀಕರ್ ಗಳ ಹೆಸರು- ಆಂಗ್ರಿ ರೆಡ್ ಬರ್ಡ್ ಸ್ಪೀಕರ್, ಆಂಗ್ರಿ ಬ್ಲಾಕ್ ಬರ್ಡ್ ಸ್ಪೀಕರ್, ಇವಿಲ್ ಗ್ರೀನ್ ಹೆಲ್ಮೆಟ್ ಪಿಗ್ ಸ್ಪೀಕರ್.
ಆಂಗ್ರಿ ಬರ್ಡ್ಸ್ ಸ್ಪೀಕರ್ ಗಳನ್ನು ಸಾಕಷ್ಟು ಕಂಪೆನಿಗಳು ಅಭಿವೃದ್ಧಿಪಡಿಸಿದ್ದರೂ ಗೇರ್ 4 ಇದನ್ನು ಬಿಡುಗಡೆಮಾಡಲು ಒಪ್ಪಿ ಕಾರ್ಯರೂಪಕ್ಕೆ ತಂದಿದೆ. ಇದನ್ನು ಮೊದಲು ಮಾರುಕಟ್ಟೆಗೆ ಪರಿಚಯಿಸಿದ ಕೀರ್ತಿ iOS ಗೆ ಸಲ್ಲುತ್ತದೆ.
ಈ ಹೊಸ ಸಾಧನದಲ್ಲಿ ಆಪಲ್ ನ ಹೊರ ಮ್ಯೂಸಿಕ್ ಪ್ಲೇಯರ್ಸ್ ಹಾಗೂ ಔಟ್ ಪುಟ್ಸ್ ಹಾಗೂ ಸ್ಟ್ಯಾಂಡರ್ಡ್ ಸೈಜ್ 3.5 mm ಆಡಿಯೋ ಸಾಕೆಟ್ ಲಭ್ಯವಿದೆ. ಸಾಕಷ್ಟು ಕೂಲ್ ಲುಕಿಂಗ್ ಮತ್ತು ಸೌಂದರ್ಯ ಹೊಂದಿದೆ. ಈ ಸ್ಪೀಕರ್ ಜೊತೆ ಸ್ಟ್ಯಾಂಡ್ ಗಳು ಇರುವುದು ಸಾಕಷ್ಟು ಅನುಕೂಲ ಕಲ್ಪಿಸಲಿದೆ.
ಪ್ರತಿಯೊಂದು ಸ್ಪೀಕರಿನಲ್ಲಿ ಮಹತ್ವದ 2.1 ಸ್ಪೀಕರ್ ಗಳಿದ್ದು ಇದರಿಂದ ಗುಣಮಟ್ಟದ, ಪವರ್ ಅಡಾಪ್ಟರ್, 3.5 mm ಪೋರ್ಟ್ ಮತ್ತು ಲೈನ್ ಇನ್ ಕೇಬಲ್ಸ್ ಜೊತೆಯಾಗಲಿದೆ. ಇವೆಲ್ಲವುಗಳಿಂದ ಮನಮೆಚ್ಚುವ ಆಕರ್ಷಕ ಸಂಗೀತ ಸುಧೆ ಹರಿದು ಬರಲಿದೆ.
ಈ ಹೊಸ ಸ್ಪೀಕರ್ ಕೇವಲ 1400 ಗ್ರಾಮ್ ತೂಕ ಹೊಂದಿದ್ದು ಸಾಗಾಟಕ್ಕೂ ಅನುಕೂಲವಾಗಿದೆ. ಇವುಗಳ ಅಂದಾಜು ಬೆಲೆ ಹೀಗಿದೆ. ಆಂಗ್ರಿ ರೆಡ್ ಬರ್ಡ್ ಸ್ಪೀಕರ್ ಬೆಲೆ ಸುಮಾರು ರು. 4,300, ಆಂಗ್ರಿ ಬ್ಲಾಕ್ ಬರ್ಡ್ ಸ್ಪೀಕರ್ ಬೆಲೆ ರು. ಸುಮಾರು ರು. 6,300 ಹಾಗೂ ಗ್ರೀನ್ ಹೆಲ್ಮೆಟ್ ಪಿಗ್ ಸ್ಪೀಕರ್ ಬೆಲೆ ಸುಮಾರು ರು. 5,800.
ಸದ್ಯಕ್ಕೆ ಇವು ಯುರೋಪ್ ಹಾಗೂ ಅಮೇರಿಕಾದಲ್ಲಿ ಮಾತ್ರ ದೊರೆಯಲಿದ್ದು ಭಾರತೀಯ ಮಾರುಕಟ್ಟೆಗೆ ಇನ್ನು ಪ್ರವೇಶ ಪಡೆಯಬೇಕಾಗಿದೆ. ಹಾಗಾಗಿ ಮಾಹಿತಿಯನ್ನು ತಿಳಿದು ತಲೆಯಲ್ಲಿಟ್ಟುಕೊಂಡರೆ ಬಂದ ತಕ್ಷಣ ಮನೆಗೆ ತರುವುದೊಂದೇ ಉಳಿಯುವ ಕೆಲಸ. ಹಾಗಾಗಿ ಇದರ ಬರುವಿಕೆಗೆ ಪ್ರಾರ್ಥಿಸಿದರೂ ಆಶ್ಷರ್ಯವಿಲ್ಲ ಎನಿಸುತ್ತಿದೆ.


Click it and Unblock the Notifications








