WD ಟಿವಿ ಮೀಡಿಯಾ ಪ್ಲೇಯರ್ ಯಾವಾಗ ತೊಗೋತೀರಾ?

WD ಟಿವಿ ಲೈವ್ ಸ್ಟ್ರೀಮಿಂಗ್ ಮೀಡಿಯಾ ಪ್ಲೇಯರ್ ನಲ್ಲಿರುವ NetFix ಎಂಬ ನೂತನ ತಂತ್ರಜ್ಞಾನ ಇಂಟರ್ ನೆಟ್ ಜೊತೆ ಸಂಪರ್ಕ ನೀಡುವುದಲ್ಲದೆ ಟಿವಿ ಮೂಲಕ ನಿಮಗೆ ಬೇಕಾದ ವಿಡಿಯೋ ವೀಕ್ಷಿಸುವ ಅವಕಾಶವನ್ನೂ ನೀಡಿದೆ.
ಇದರ ಹೈಡೆಫಿನಿಶನ್ ವಿಡಿಯೋ ಸ್ಟಷ್ಟತೆ ಮತ್ತು ಆಕರ್ಷಿತ ಔಟ್ ಲುಕ್ ನಿಮ್ಮನ್ನು ಮರುಳು ಮಾಡುವುದರಲ್ಲಿ ಸಂಶಯವೇ ಇಲ್ಲ. ಇದರಲ್ಲಿರುವ ಎರಡು USB ಪೋರ್ಟ್ ಇನ್ ಪುಟ್ ಸಾಧನಗಳ ಸಂಪರ್ಕ ಒದಗಿಸುತ್ತದೆ. ಇದರ ನಿರ್ವಹಣೆಯೂ ತುಂಬಾ ಸುಲಭ. ಮೊದಲು ಅಡಾಪ್ಟರ್ ಸಂಪರ್ಕ ನೀಡಿ ನಂತರ HDMI ಕೇಬಲ್ ಕನೆಕ್ಟ್ ಮಾಡಿದರೆ ಸಾಕು. ನಂತರ ವೈ-ಫೈ ಕನೆಕ್ಟ್ ಮಾಡಿದರೆ ನಿಮ್ಮ ಮೆಚ್ಚುಗೆಯ ವಿಡಿಯೋ ಮತ್ತು ಆನ್ ಲೈನ್ ಗೇಮ್ ಗಳನ್ನೂ ಟಿವಿಯಲ್ಲಿ ಆಡಬಹುದು.
ಈ ಮೀಡಿಯಾ ಪ್ಲೇಯರ್ ನಲ್ಲಿ ಇನ್ನಿತರ ಮಾಹಿತಿಗಳನ್ನು ಸಂಗ್ರಹಿಸಲೂ ಅವಕಾಶವಿದೆ. ಇದರ ಹೊರತಾಗಿ, ಬಳಕೆದಾರರು ಸಿನಿಮಾ ನೌ, ಯೂಟ್ಯೂಬ್, ಫ್ಲಿಕ್ಕರ್ ಗಳ ಉಪಯೋಗವನ್ನು ಇದರಲ್ಲಿ ಪಡೆಯಬಹುದು.
ಅಮೆಜಾನ್ ಇನ್ ಸ್ಟೆಂಟ್ ವಿಡಿಯೋ ಮೂಲಕ ಬಳಕೆದಾರರು ಯಾವುದೇ ಸಮಯದಲ್ಲೂ ವಿಡಿಯೋ ಪಡೆಯುವ ಸೌಲಭ್ಯವನ್ನೂ ಕಂಪನಿ ಒದಗಿಸಿದೆ. ಇಷ್ಟೆಲ್ಲಾ ಸೌಲಭ್ಯ ಮತ್ತು ಅವಕಾಶವನ್ನು ಒಳಗೊಂಡಿರುವ ಈ ಮೀಡಿಯಾ ಪ್ಲೇಯರ್ ಬೆಲೆ ಅಷ್ಟೇನೂ ಹೆಚ್ಚಿಲ್ಲ. ಇದರ ಬೆಲೆ 4,999 ರೂ ಎಂದು ಕಂಪನಿ ತಿಳಿಸಿದೆ.


Click it and Unblock the Notifications








